ನಟಿ ರಮ್ಯಾ ಕೃಷ್ಣನ್ ಡಿವೋರ್ಸ್? ನಾನು ಹೈದರಾಬಾದ್, ಅವಳು ಚೆನ್ನೈ! ಗಂಡ ಕೃಷ್ಣ ವಂಶಿ ಹೇಳಿದಿಷ್ಟು
ನಟಿ ರಮ್ಯಾ ಕೃಷ್ಣನ್ ಮತ್ತು ನಿರ್ದೇಶಕ ಕೃಷ್ಣ ವಂಶಿ ಅವರ ವಿಚ್ಛೇದನದ ವದಂತಿ ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಮುನ್ನಲೆಗೆ ಬರುತ್ತಿರುತ್ತದೆ. ಇದೀಗ ಸಂದರ್ಶನದಲ್ಲಿ ಡಿವೋರ್ಸ್ ಬಗ್ಗೆ ರಮ್ಯಾಕೃಷ್ಣನ್ ಪತಿ ಮೊದಲ ಬಾರಿಗೆ ಮಾತನಾಡಿದ್ದಾರೆ.

ನಟಿ ರಮ್ಯಾ ಕೃಷ್ಣನ್
ಸೌಥ್ ಸಿನಿಮಾ ಅಂಗಳದ ನಟಿ ರಮ್ಯಾ ಕೃಷ್ಣನ್ ಕನ್ನಡ, ತಮಿಳು, ತೆಲಗು ಸೇರಿದಂತೆ 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಾಹುಬಲಿ ಸಿನಿಮಾ ಬಳಿಕ ರಾಜಮಾತೆ ಶಿವಗಾಮಿ ಅಂತಾನೇ ರಮ್ಯಾಕೃಷ್ಣನ್ ಅವರನ್ನು ಇಡೀ ಭಾರತ ಗುರುತಿಸುತ್ತದೆ. ಈ ಚಿತ್ರದ ಮೂಲಕ ರಮ್ಯಾಕೃಷ್ಣ ಅಪಾರ ಅಭಿಮಾನಿಗಳನ್ನು ಹೊಂದಿರುವ ಸ್ಟಾರ್ ನಟಿಯಾಗಿದ್ದಾರೆ. ಇದೀಗ ರಮ್ಯಾಕೃಷ್ಣನ್ ಅವರ ವೈಯಕ್ತಿಕ ಜೀವನ ಮುನ್ನಲೆಗೆ ಬಂದಿದೆ.
ನಿರ್ದೇಶಕನೊಂದಿಗೆ ಮದುವೆ
ನಿರ್ದೇಶಕ ಕೃಷ್ಣ ವಂಶಿ ಅವರನ್ನು ರಮ್ಯಾ ಪ್ರೀತಿಸಿ ಮದುವೆಯಾಗಿದ್ದು, ಸಿನಿ ಅಂಗಳದಲ್ಲಿ ಎಲ್ಲರನ್ನು ಅಚ್ಚರಿಗೊಳಿಸಿತ್ತು. ಕುಟುಂಬಸ್ಥರ ಒಪ್ಪಿಗೆ ಮೇರೆಗೆ ರಮ್ಯಾಕೃಷ್ಣ-ಕೃಷ್ಣವಂಶಿ ಮದುವೆ 2003ರಲ್ಲಿ ನಡೆದಿತ್ತು. ಮದುವೆ ಬಳಿಕವೂ ರಮ್ಯಾಕೃಷ್ಣ ವೃತ್ತಿಜೀವನದಲ್ಲಿ ಸಕ್ರಿಯರಾಗಿದ್ದಾರೆ.
ಮದುವೆ ನಂತರವೂ ಸಿನಿಮಾಗಳಲ್ಲಿ ನಟನೆ
ಮದುವೆ ನಂತರವೂ ರಮ್ಯಾಕೃಷ್ಣ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಮ್ಯಾಕೃಷ್ಣ-ಕೃಷ್ಣವಂಶಿ ದಂಪತಿಗೆ ರಿತ್ವಿಕ್ ಎಂಬ ಮಗನಿದ್ದು, ತಮ್ಮ ವೈಯಕ್ತಿಯ ಜೀವನದ ಬಗ್ಗೆ ಇಬ್ಬರು ಹೆಚ್ಚಾಗಿ ಮಾತನಾಡಿಕೊಳ್ಳಲ್ಲ. ವೈಯಕ್ತಿಕ ಜೀವನದ ವಿಷಯಗಳನ್ನು ಮಾಧ್ಯಮಗಳ ಮುಂದೆ ಇಬ್ಬರು ಹಂಚಿಕೊಳ್ಳಲು ಇಷ್ಟಪಡಲ್ಲ.
ರಮ್ಯಾಕೃಷ್ಣ-ಕೃಷ್ಣವಂಶಿ ವಿಚ್ಛೇದನ ವದಂತಿ
ಕಳೆದ ಐದು ವರ್ಷಗಳಿಂದ ರಮ್ಯಾಕೃಷ್ಣ-ಕೃಷ್ಣವಂಶಿ ಅವರ ವಿಚ್ಛೇದನದ ವದಂತಿ ಹಬ್ಬಿತ್ತು. ಇದೀಗ ಕೃಷ್ಣವಂಶಿ ಸಂದರ್ಶನದಲ್ಲಿ ವೈಯಕ್ತಿಕ ಜೀವನದ ಕುರಿತು ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ರಮ್ಯಾಕೃಷ್ಣ ಜೊತೆಗಿನ ವಿಚ್ಛೇದನದ ವದಂತಿ ಬಗ್ಗೆಯೂ ಕೃಷ್ಣವಂಶಿ ಸ್ಪಷ್ಟನೆ ನೀಡುವ ಕೆಲಸವನ್ನು ಮಾಡಿದ್ದಾರೆ.
ವೈವಾಹಿಕ ಜೀವನದಲ್ಲಿ ಯಾವುದೇ ಸಮಸ್ಯೆಗಳಿಲ್ಲ
ತಾವಿಬ್ಬರೂ ವಿಚ್ಛೇದನ ಪಡೆದಿಲ್ಲ ಎಂದು ಕೃಷ್ಣ ವಂಶಿ ಸ್ಪಷ್ಟಪಡಿಸಿದ್ದಾರೆ. ರಮ್ಯಾ ಚೆನ್ನೈನಲ್ಲಿ, ತಾನು ಹೈದರಾಬಾದ್‌ನಲ್ಲಿ ಇರುವುದರಿಂದ ಈ ವದಂತಿ ಹಬ್ಬಿದೆ. ತಮ್ಮ ನಡುವೆ ಪ್ರೀತಿ, ಗೌರವ ಹಾಗೆಯೇ ಇದೆ ಎಂದು ಕೃಷ್ಣ ವಂಶಿ ಹೇಳಿದ್ದಾರೆ. ಕೆಲಸದ ಕಾರಣಗಳಿಂದಾಗಿ ಬೇರೆ ಪ್ರದೇಶಗಳಲ್ಲಿದ್ದೇವೆ. ನಮ್ಮ ವೈವಾಹಿಕ ಜೀವನದಲ್ಲಿ ಯಾವುದೇ ಸಮಸ್ಯೆಗಳಿಲ್ಲ. ನಮ್ಮಿಬ್ಬರ ನಡುವೆ ಪ್ರೀತಿ ಮತ್ತು ಗೌರವವಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಮ್ಯಾ ಕೃಷ್ಣನ್ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ? ನಟಿ ಹೇಳಿದ್ದೇನು? ಪಕ್ಷ ಯಾವುದು?
ಮಗ ಏನು ಮಾಡ್ತಿದ್ದಾನೆ?
ಮಗ ಲಂಡನ್‌ನಲ್ಲಿ ಓದುತ್ತಿದ್ದು, ರಿತ್ವಿಕ್‌ಗೆ ಸಿನಿಮಾಗಳಲ್ಲಿ ಆಸಕ್ತಿ ಇಲ್ಲ ಎಂದು ತಿಳಿಸಿದ್ದಾರೆ. ತಮ್ಮ ನೆಚ್ಚಿನ ನಾಯಕಿ ರಮ್ಯಾ ಕೃಷ್ಣ. ಅವಕಾಶ ಸಿಕ್ಕಾಗಲೆಲ್ಲಾ ರಮ್ಯಾ ಕೃಷ್ಣ ಹೈದರಾಬಾದ್‌ಗೆ ಬರುತ್ತಾರೆ ಮತ್ತು ಅವರನ್ನು ನೋಡಲು ಬಯಸಿದರೆ ತಕ್ಷಣ ಚೆನ್ನೈಗೆ ಹೋಗುತ್ತೇನೆ. ಯಾವುದೇ ಚಲನಚಿತ್ರ ಪಾರ್ಟಿಗಳು ಅಥವಾ ಚಲನಚಿತ್ರ ಸಮಾರಂಭಗಳಲ್ಲಿ ಒಟ್ಟಿಗೆ ಭಾಗವಹಿಸುವುದಿಲ್ಲ. ಅದಕ್ಕಾಗಿ ನಾವು ಬೇರೆಯಾಗಿದ್ದೇವೆ ಎಂಬ ಸುದ್ದಿ ಹರಿದಾಡುತ್ತಿರುತ್ತದೆ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

