- Home
- Entertainment
- TV Talk
- BBK 12: ಬಿಗ್‌ಬಾಸ್ ಮಿಡ್‌ವೀಕ್ ಎಲಿಮಿನೇಷನ್ ಟ್ವಿಸ್ಟ್: ಆಟದಿಂದ ಹೊರಬಿದ್ದ ಪ್ರಬಲ ಸ್ಪರ್ಧಿ
BBK 12: ಬಿಗ್‌ಬಾಸ್ ಮಿಡ್‌ವೀಕ್ ಎಲಿಮಿನೇಷನ್ ಟ್ವಿಸ್ಟ್: ಆಟದಿಂದ ಹೊರಬಿದ್ದ ಪ್ರಬಲ ಸ್ಪರ್ಧಿ
ಬಿಗ್‌ಬಾಸ್ ಮನೆಯಲ್ಲಿ ಟಾಪ್ 6 ಸ್ಪರ್ಧೆ ತೀವ್ರಗೊಂಡಿದ್ದು, ಮಿಡ್‌ವೀಕ್ ಎಲಿಮಿಷೇನ್ ನಡೆದಿದೆ ಎನ್ನಲಾಗಿದೆ. ಈ ಅನಿರೀಕ್ಷಿತ ಎಲಿಮಿಷನ್‌ನಲ್ಲಿ ಸ್ಪರ್ಧಿಯೊಬ್ಬರು ಮನೆಯಿಂದ ಹೊರಬಂದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಮಿಡ್‌ವೀಕ್ ಎಲಿಮಿಷೇನ್?
ಟಾಪ್ 6ಕ್ಕೆ ಅರ್ಹತೆ ಪಡೆದುಕೊಳ್ಳಲು ಸ್ಪರ್ಧಿಗಳ ನಡುವೆ ರೋಚಕ ಹಣಾಹಣಿ ಶುರುವಾಗಿದೆ. ಈ ಸಂದರ್ಭದಲ್ಲಿಯೇ ಬಿಗ್‌ಬಾಸ್ ಮನೆಯಲ್ಲಿ ಮಿಡ್‌ವೀಕ್ ಎಲಿಮಿಷೇನ್ ನಡೆದಿದ್ದು, ಅಚ್ಚರಿಯ ಅಭ್ಯರ್ಥಿ ಹೊರಗಡೆ ಬಂದಿದ್ದಾರಂತೆ. ಈ ವಾರ ಧನುಷ್ ಹೊರತುಪಡಿಸಿ ಉಳಿದೆಲ್ಲಾ ಸ್ಪರ್ಧಿಗಳು ಮನೆಯಿಂದ ಹೊರಗೆ ಹೋಗಲು ನಾಮಿನೇಟ್ ಆಗಿದ್ದಾರೆ.
15ನೇ ವಾರದ ನಾಮಿನೇಷನ್
15ನೇ ವಾರದ ನಾಮಿನೇಷನ್ ಪ್ರಕ್ರಿಯೆ ತುಂಬಾ ಅಬ್ಬರದಿಂದ ನಡೆದಿದ್ದು, ಸ್ಪರ್ಧಿಗಳು ತೀರಾ ವೈಯಕ್ತಿಕವಾಗಿ ಕಿತ್ತಾಡಿಕೊಂಡಿದ್ದರು. ಧನುಷ್ ಕ್ಯಾಪ್ಟನ್ ಆಗಿರೋದರಿಂದ ಅವರನ್ನು ಯಾರು ನಾಮಿನೇಟ್ ಮಾಡುತ್ತಿರಲಿಲ್ಲ. ಇತ್ತ ಇಂದು ಟಾಸ್ಕ್ ಆಡುವ ಮೂಲಕ ಧನುಷ್ ಸೀಸನ್ 12ರ ಮೊದಲ ಫಿನಾಲೆ ಅಭ್ಯರ್ಥಿಯಾಗಿದ್ದಾರೆ. ಈ ನಡುವೆ ಮಿಡ್‌ವೀಕ್ ಎಲಿಮಿನೇಷನ್ ಸ್ಪರ್ಧಿಗಳಿಗೆ ಶಾಕ್ ನೀಡಿದೆ.
ಮನೆಯಿಂದ ಹೊರಗೆ ಹೋಗಿದ್ಯಾರು?
ಮಿಡ್‌ವೀಕ್ ಎಲಿಮಿನೇಷನ್ ನಡೆದಿದೆ ಎಂದು ಹೇಳಲಾಗುತ್ತಿದ್ದು, ಕಾವ್ಯಾ ಶೈವ ಮನೆಯಿಂದ ಹೊರಗೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ಗಳು ವೈರಲ್ ಆಗುತ್ತಿವೆ. ಆದರೆ ವಾಹಿನಿಯಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.
ಇದನ್ನೂ ಓದಿ: BBK 12: ಇಬ್ಬರ ಜಗಳದ ಬೆಂಕಿಯಲ್ಲಿ ಬಿಸಿ ಕಾಯಿಸಿಕೊಂಡ ಗಿಲ್ಲಿ ನಟ; ಸಾಥ್ ಕೊಟ್ಟ ರಘು
ಈ ವಾರದ ಕಾವ್ಯಾ ಆಟ
ಈ ವಾರ ಬಿಗ್‌ಬಾಸ್ ಮನೆಯಲ್ಲಿ ಎರಡು ತಂಡಗಳ ರಚನೆಯಾಗಿದ್ದವು. ಧ್ರುವಂತ್ ಮತ್ತು ಅಶ್ವಿನಿ ಗೌಡ ಅವರೊಂದಿಗೆ ಆಟವಾಡುವ ಅನಿವಾರ್ಯತೆ ಕಾವ್ಯಾ ಅವರಿಗೆ ಎದುರಾಗಿತ್ತು. ತಮ್ಮ ತಂಡದೊಂದಿಗೆ ಆಡಲು ಕಾವ್ಯಾ ಅವರನ್ನು ರಘು ಆಯ್ಕೆ ಮಾಡಿಕೊಂಡಿದ್ದರು. ಹಾಗಾಗಿ ಕಾವ್ಯಾ ಇಷ್ಟವಿಲ್ಲದಿದ್ರೂ ಅಶ್ವಿನಿ ಗುಂಪು ಸೇರಿಕೊಂಡು ಟಾಸ್ಕ್‌ನಲ್ಲಿ ಟಾಪ್ 6 ಪ್ರವೇಶದ ಆಟವಾಡಲು ಅರ್ಹರಾಗಿದ್ದರು.
ಇದನ್ನೂ ಓದಿ: ಅಲ್ಲಿ ಕಾಮಿಡಿ, ಇಲ್ಲಿ ಫುಲ್ ಧಗ ಧಗ: ಅಮಿರ್ ಖಾನ್ ಚಿತ್ರದ ದೃಶ್ಯ ನೆನಪಿಸಿದ ಟಾಕ್ಸಿಕ್
ಗಿಲ್ಲಿ ಇನ್ಮುಂದೆ ಒಂಟಿ?
ಇದೀಗ ಬದಲಾದ ಆಟದಲ್ಲಿ ಕಾವ್ಯಾ ಶೈವ ಮನೆಯಿಂದ ಹೊರಗೆ ಬಂದಿರುವ ಬಗ್ಗೆ ಸುದ್ದಿಗಳು ಬರುತ್ತಿವೆ. ಒಂದು ವೇಳೆ ಕಾವ್ಯಾ ಮನೆಯಿಂದ ಹೊರಗೆ ಬಂದಿರೋದು ನಿಜವಾದ್ರೆ ಗಿಲ್ಲಿ ನಟ ಒಂಟಿಯಾಗಲಿದ್ದಾರೆ. ಕಾವು ಕಾವು ಎಂದು ಹೇಳಿಕೊಂಡು ಕಾವ್ಯಾ ಸುತ್ತವೇ ಗಿಲ್ಲಿ ನಟ ಗಿರಕಿ ಹೊಡೆಯುತ್ತಿದ್ದರು.
ಇದನ್ನೂ ಓದಿ: BBK 12: ಅಶ್ವಿನಿ ಗೌಡ ಮಾತು ಕೇಳಿಸಿಕೊಂಡು ಪರ ಪರ ಅಂತ ತಲೆ ಕೆರೆದುಕೊಂಡ ರಕ್ಷಿತಾ ಶೆಟ್ಟ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

