MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಹುಟ್ಟಿದ ದಿನದ ಹಚ್ಚೆ ನೋಡಿ ಲವ್​ನಲ್ಲಿ ಮೋಸ ಹೋದೆ, ನೀವು ಕೇರ್​ಫುಲ್​ ಆಗಿರಿ ಎಂದ ಉರ್ಫಿ ಜಾವೇದ್​

ಹುಟ್ಟಿದ ದಿನದ ಹಚ್ಚೆ ನೋಡಿ ಲವ್​ನಲ್ಲಿ ಮೋಸ ಹೋದೆ, ನೀವು ಕೇರ್​ಫುಲ್​ ಆಗಿರಿ ಎಂದ ಉರ್ಫಿ ಜಾವೇದ್​

ವಿಚಿತ್ರ ಉಡುಗೆಗಳಿಂದ ಸದಾ ಸುದ್ದಿಯಲ್ಲಿರುವ ನಟಿ ಉರ್ಫಿ ಜಾವೇದ್, ಇದೀಗ ತಮ್ಮ ಮಾಜಿ ಪ್ರಿಯಕರನಿಂದಾದ ಮೋಸದ ಬಗ್ಗೆ ಮಾತನಾಡಿದ್ದಾರೆ. ತನ್ನ ಜನ್ಮದಿನದ ಟ್ಯಾಟೂ ಹಾಕಿಸಿಕೊಂಡು ಪ್ರೀತಿಯ ನಾಟಕವಾಡಿದ ನಟ ಪಾರಸ್ ಕಲ್ನಾವತ್ ಅವರ ವಂಚನೆಯನ್ನು ಬಯಲು ಮಾಡಿದ್ದಾರೆ.  

2 Min read
Author : Suchethana D
Published : Feb 21 2026, 11:09 PM IST
Share this Photo Gallery
  • FB
  • TW
  • Linkdin
  • Whatsapp
16
ಕಡಿಮೆಯಾಯ್ತು ಉರ್ಫಿ ಹವಾ
Image Credit : instagram- urf7i

ಕಡಿಮೆಯಾಯ್ತು ಉರ್ಫಿ ಹವಾ

ದಿನಕ್ಕೊದ್ದರಂತೆ ಚಿತ್ರ-ವಿಚಿತ್ರ ಡ್ರೆಸ್​ಗಳಿಂದ ಅದರಲ್ಲಿಯೂ ಕ್ರಿಯೇಟಿವ್​ ಬಟ್ಟೆಗಳಿಂದ ಎಲ್ಲರ ಮನಸ್ಸನ್ನು, ಎಲ್ಲರ ಗಮನವನ್ನು ಸೆಳೆಯುತ್ತಿರುವವರು ಎಂದರೆ ನಟಿ ಉರ್ಫಿ ಜಾವೇದ್​ (Uorfi Javed). ಕಳೆದ ಕೆಲವು ತಿಂಗಳುಗಳಿಂದ ಈಕೆಯ ಹವಾ ಸ್ವಲ್ಪ ಕಡಿಮೆಯಾಗುತ್ತಾ ಬಂದಿದ್ದರೂ, ಆಗಾಗ್ಗೆ ಶಾಕಿಂಗ್​ ಎನ್ನುವಂಥ ಬಟ್ಟೆ ಧರಿಸಿ ಬಂದು ಶಾಕ್​ ಮೇಲೆ ಶಾಕ್​ ಕೊಡುತ್ತಲೇ ಇರುತ್ತಾರೆ.

26
ಟ್ರೋಲ್​ ಎಂದ್ರೆ ಖುಷಿ
Image Credit : Urfi Javed/ Instagram

ಟ್ರೋಲ್​ ಎಂದ್ರೆ ಖುಷಿ

ತುಂಡು ಬಟ್ಟೆಯುಟ್ಟು ಪಡ್ಡೆ ಹುಡುಗರ ಬಿಸಿ ಏರಿಸ್ತಿರೋ ಈ ನಟಿ ಸೋಷಿಯಲ್ ಮೀಡಿಯಾದಲ್ಲಿ (Social media) ಸೆನ್ಸೇಷನ್ ಕ್ರಿಯೇಟ್​ ಮಾಡ್ತಿರೋದು ಹೊಸ ವಿಷಯವೇನಲ್ಲ. ಪ್ರತಿದಿನವೂ ಎಂಬಂತೆ ವಿಶಿಷ್ಟ ರೀತಿಯಲ್ಲಿ ಉಡುಗೆ ತೊಟ್ಟು ಅದರ ಫೋಟೋಶೂಟ್​ ಮಾಡಿಸಿಕೊಂಡು ಜಾಲತಾಣದಲ್ಲಿ ಪೋಸ್ಟ್​ ಮಾಡುವುದರಲ್ಲಿ ಉರ್ಫಿಯದ್ದು ಎತ್ತಿದ ಕೈ. ಕೆಲವೊಮ್ಮೆ ಬಟ್ಟೆಯೂ ಇಲ್ಲದೆ, ಕೈಗೆ ಸಿಕ್ಕ ವಸ್ತುಗಳಿಂದ ಖಾಸಗಿ ಅಂಗಗಳನ್ನು ಮುಚ್ಚಿಕೊಂಡು ಪೋಸ್​ ನೀಡಿರುವ ಫೋಟೋಗಳೂ ಕಮ್ಮಿಯೇನಲ್ಲ. ದಿನವೂ ಬಟ್ಟೆಗಳಿಂದಲೇ ಟ್ರೋಲ್​ (Troll) ಆಗುವುದು ಎಂದರೆ ಈಕೆಗೆ ತುಂಬಾ ಖುಷಿ. ಇತ್ತೀಚೆಗೆ ಈಕೆಯ ಡ್ರೆಸ್​ಗಾಗಿಯೇ ಮುಂಬೈನ ರೆಸ್ಟೋರೆಂಟ್​ನಲ್ಲಿ ಎಂಟ್ರಿ ಸಿಕ್ಕಿರಲಿಲ್ಲ. ಈ ಕುರಿತು, ಉರ್ಫಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ತಮ್ಮ ನೋವನ್ನು ವ್ಯಕ್ತಪಡಿಸಿದ್ದರು. ನಾವು ನಿಜವಾಗಿಯೂ 21 ನೇ ಶತಮಾನದಲ್ಲಿ ಬದುಕುತ್ತಿದ್ದೇವೆಯೇ ಎಂಬ ಪ್ರಶ್ನೆ ಕೇಳಿದ್ದರು.

Related Articles

Related image1
ಮೊದಲ ಬಾರಿಗೆ 2ನೇ ಮದುವೆ, ಸಂಗಾತಿ ಬಯಕೆ ಕುರಿತು ಓಪನ್ನಾಗಿ ಮನಸ್ಸಿನ ಮಾತು ತೆರೆದಿಟ್ಟ ನಟಿ Meghana Raj
Related image2
ಶಾರುಖ್ ಸೇರಿ ಈ ನಟರ ಜೊತೆ ಸಂಬಂಧ: ಗುಟ್ಟು ರಟ್ಟು ಮಾಡಿದ ಪ್ರಿಯಾಂಕಾ ಚೋಪ್ರಾ! ಬಾಲಿವುಡ್​ಗೆ ಗುಡ್​ಬೈ?
36
ಬಾಯ್​ಫ್ರೆಂಡ್​ ಮೋಸ
Image Credit : stockPhoto

ಬಾಯ್​ಫ್ರೆಂಡ್​ ಮೋಸ

ಈಚೆಗೆ ನಟಿ ತಮ್ಮ ಬಾಯ್​ಫ್ರೆಂಡ್​ ಬಗ್ಗೆ ನೋವಿನ ದಿನಗಳನ್ನು ನಟಿ ಶೇರ್​ ಮಾಡಿಕೊಂಡಿದ್ದಾರೆ. ತಮ್ಮ ಮಾಜಿ ಬಾಯ್​ಫ್ರೆಂಡ್​ ಹೇಗೆ ತಮ್ಮನ್ನು ಮೋಸಗೊಳಿಸಿದ ಎನ್ನುವ ಬಗ್ಗೆ ಈಕೆ ಹೇಳಿದ್ದಾರೆ. ಒಂದಲ್ಲ, ಎರಡಲ್ಲ ಹಲವಾರು ಬಾರಿ ಹೇಗೆ ಮೋಸ ಮಾಡಿದ ಎನ್ನುವ ಬಗ್ಗೆ ನಟಿ ಹೇಳಿಕೊಂಡಿದ್ದಾರೆ. ಹಚ್ಚೆ (Tatoo) ಹಾಕಿಸಿಕೊಂಡು ಹೇಗೆ ಮರುಳು ಮಾಡಿದ್ದ ಎನ್ನುವ ಬಗ್ಗೆಯೂ ಈಕೆ ನೋವು ತೋಡಿಕೊಂಡಿದ್ದಾರೆ. ತಮ್ಮ ಮಾಜಿ ಬಾಯ್​ಫ್ರೆಂಡ್​ ಕಾರಣದಿಂದಾಗಿ ಅವರು ಇದೀಗ ಯಾರ ಜೊತೆಯೂ ಗಂಭೀರ ಸಂಬಂಧವನ್ನು ಹೊಂದಲು ಬಯಸುವುದಿಲ್ಲ ಎಂದಿದ್ದಾರೆ. ಹಚ್ಚೆ ಹಾಕಿಸಿಕೊಳ್ಳುವ ಮೂಲಕ ಬಾಯ್​ಫ್ರೆಂಡ್​ ಮಾಡಿರುವ ಮೋಸದ ಕುರಿತು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ತನನ್ನು ಮಾತ್ರವಲ್ಲದೇ ಹಲವರನ್ನೂ ಈತ ಹೇಗೆ ವಂಚಿಸಿದ್ದ ಎಂದು ಅವರು ಹೇಳಿದ್ದಾರೆ.

46
ಜನ್ಮ ದಿನದ ಟ್ಯಾಟೂ
Image Credit : @varindertchawla

ಜನ್ಮ ದಿನದ ಟ್ಯಾಟೂ

ನನ್ನ ಜನ್ಮದ ದಿನಾಂಕವನ್ನು ಆತ ಹಚ್ಚೆ ಹಾಕಿಸಿಕೊಂಡಿದ್ದ. ಅದನ್ನು ನೋಡಿ ಆತ ನನ್ನನ್ನು ತುಂಬಾ ಪ್ರೀತಿಸುತ್ತಾನೆ ಎಂದುಕೊಂಡಿದ್ದೆ. ಬಣ್ಣದ ಮಾತುಗಳಿಂದ ನನ್ನನ್ನು ಮರುಳು ಮಾಡಿದ. ಆದರೆ ಆತ ಹಾಕಿಸಿಕೊಂಡಿದ್ದು ನನ್ನ ಜನ್ಮ ದಿನಾಂಕ ಆಗಿರಲಿಲ್ಲ, ಬದಲಿಗೆ ಅದೇ ದಿನದಂತೆ ಆತನ ತಂದೆಯೂ ಹುಟ್ಟಿದ ದಿನ. ಬಹುಶಃ ಅವರ ಟ್ಯಾಟೂ ಅದಾಗಿತ್ತು. ಅದರೆ ನಾನು ನನ್ನ ಬರ್ತ್​ಡೇ ಎಂದು ಮೋಸ ಹೋದೆ ಎಂದಿದ್ದಾರೆ ಉರ್ಫಿ. ಆದರೆ ಅದನ್ನೇ ತೋರಿಸಿ ತೋರಿಸಿ ನನ್ನನ್ನು ಮೋಸ ಮಾಡುತ್ತಿದ್ದ, ನಾನು ಅದನ್ನು ನಂಬಿ ಮೋಸ ಹೋದೆ ಎಂದಿದ್ದಾರೆ. ಆಮೇಲೆ ಹಲವು ಹುಡುಗಿಯರಿಗೂ ಆತ ಮೋಸ ಮಾಡಿದ್ದ ಎನ್ನುವುದು ತಿಳಿಯಿತು ಎಂದಿದ್ದಾರೆ. ಜೊತೆಗೆ ನೀವೂ ಹೀಗೆ ಮೋಸ ಹೋಗಬೇಡಿ ಎಂದು ವಾರ್ನ್​ ಮಾಡಿದ್ದಾರೆ ನಟಿ.

56
ಯಾರೀ ಬಾಯ್​ಫ್ರೆಂಡ್​?
Image Credit : Social Media

ಯಾರೀ ಬಾಯ್​ಫ್ರೆಂಡ್​?

ಅಷ್ಟಕ್ಕೂ ಉರ್ಫಿಯ ಬಾಯ್​ಫ್ರೆಂಡ್​ ಆಗಿದ್ದವರ ಹೆಸರು ಪರಸ್ ಕಲ್ನಾವತ್ (Paras Kalnavath). ಹಿಂದಿಯ ಅನುಪಮಾ ಎನ್ನುವ ಧಾರಾವಾಹಿಯ ನಟ ಇವರು. ಅಮ್ಮನ ಮುದ್ದಿನ ಮಗನಾಗಿ, ತಾಯಿಯನ್ನು ಬಹಳ ಇಷ್ಟಪಡುವ ಅಮರ್ ಪಾತ್ರವನ್ನು ಇವರು ಮಾಡಿದ್ದರು. ಆದರೆ ಕೆಲ ಕಂತುಗಳ ಬಳಿಕ ಇವರನ್ನು ಅನುಪಮಾ ಧಾರಾವಾಹಿಯಿಂದ ಹೊರಕ್ಕೆ ಹಾಕಲಾಗಿತ್ತು. ಆಗ ಅವರು ಬಹಳ ಸುದ್ದಿಯಲ್ಲಿದ್ದರು. ಅಷ್ಟಕ್ಕೂ ಇವರನ್ನು ಹೊರಕ್ಕೆ ಹಾಕಿದ್ದ ಕಾರಣವೇನೆಂದರೆ, ಧಾರಾವಾಹಿ ಒಪ್ಪಂದವನ್ನು ಉಲ್ಲಂಘಿಸಿದ್ದಕ್ಕಾಗಿ ಎನ್ನಲಾಗಿತ್ತು.

66
ನಟಿ ಹೇಳಿದ್ದೇನು?
Image Credit : instagram

ನಟಿ ಹೇಳಿದ್ದೇನು?

ಈ ಬಗ್ಗೆ ಮಾತನಾಡುವ ಸಮಯದಲ್ಲಿ ಉರ್ಫಿ ಜಾವೇದ್​ ತಮ್ಮ ಎಕ್ಸ್​ ಗರ್ಲ್​ಫ್ರೆಂಡ್​​ ಎಂದೂ ಪಾರಸ್​ ಹೇಳಿದ್ದರು. ಉರ್ಫಿಯ ಈ ಹೇಳಿಕೆಯ ಬಗ್ಗೆ ಮಾತನಾಡಿದ್ದ ಅವರು, 'ಸೇಡು ತೀರಿಸಿಕೊಳ್ಳಲು ನನ್ನಲ್ಲಿ ಕೆಲವು ರೀತಿಯ ಆಕ್ರಮಣಶೀಲತೆ ಇರಬೇಕು. ನಾನು ಯಾರ ಬಗ್ಗೆಯೂ ಯಾವುದೇ ಕೆಟ್ಟ ಭಾವನೆಗಳನ್ನು ಹೊಂದಿಲ್ಲ. ನನಗೆ ಯಾರೊಂದಿಗಾದರೂ ಸಮಸ್ಯೆ ಇದ್ದರೆ, ಅವರ ಬಗ್ಗೆ ಹಿಂದೆ ಮಾತನಾಡುವ ಬದಲು ನಾನು ಮುಂದೆ ಹೋಗಿ ಆ ವ್ಯಕ್ತಿಯ ಬಳಿ ಮಾತನಾಡುತ್ತೇನೆ. ಹೆಚ್ಚಾಗಿ ನನ್ನ ಬಗ್ಗೆ ಮಾತನಾಡುವವರನ್ನು ನೋಡಿದಾಗ ನಾನು ಅದನ್ನು ತುಂಬಾ ಶಾಂತವಾಗಿ ತೆಗೆದುಕೊಳ್ಳುತ್ತೇನೆ' ಎಂದಿದ್ದರು. ನನ್ನ ಬಗ್ಗೆ ಆಕೆ ಇಲ್ಲಸಲ್ಲದ್ದನ್ನು ಹೇಳುತ್ತಾಳೆ. ಅದರಿಂದ ಖುಷಿ ಅನುಭಿವಿಸದರೆ ಆ ಖುಷಿಯಲ್ಲಿಯೇ ನಾನೂ ಖುಷಿ ಪಡುತ್ತೇನೆಯೇ ವಿನಾ ಇದೆಲ್ಲವೂ ನನ್ನ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಉರ್ಫಿಗೆ ಟಾಂಗ್ ಕೊಟ್ಟಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಬಾಲಿವುಡ್
ಸಂಬಂಧಗಳು
ವಂಚನೆ
ಪ್ರೀತಿ
ಕ್ರೈಮ್ ನ್ಯೂಸ್
ಮನರಂಜನಾ ಸುದ್ದಿ

Latest Videos
Recommended Stories
Recommended image1
ಮುಂಬೈ ಬೀದಿಗಳಲ್ಲಿ 'ಟಾಕ್ಸಿಕ್' ನಟ ಯಶ್ ಹೆಂಡ್ತಿ ಹವಾ! ಕುತೂಹಲ ಮೂಡಿಸಿದ ರಾಧಿಕಾ ಪಂಡಿತ್ 'ಮುಂಬೈ ಡೈರೀಸ್' ಪೋಸ್ಟ್!
Recommended image2
Toxic: 'ರಾಯ'ನ ಜೊತೆ ಎಂಟ್ರಿ ಕೊಟ್ಟ 'ಟಿಕೆಟ್'! ಯಶ್ ಹಳೇ ವಿಡಿಯೋಗೂ ಸಿನಿಮಾಗೂ ಇದೆಯೇ ನಂಟು?
Recommended image3
'ದಿಲ್ ಲಗಾನಾ ಮನಾ ಥಾ' ಒಂದೇ ಒಂದು ಹಾಡು ಹೇಳಿ 70 ಲಕ್ಷದ ಮರ್ಸಿಡಿಸ್ ಕಾರು ಖರೀದಿಸಿದ ಬಾಲಕರು
Related Stories
Recommended image1
ಮೊದಲ ಬಾರಿಗೆ 2ನೇ ಮದುವೆ, ಸಂಗಾತಿ ಬಯಕೆ ಕುರಿತು ಓಪನ್ನಾಗಿ ಮನಸ್ಸಿನ ಮಾತು ತೆರೆದಿಟ್ಟ ನಟಿ Meghana Raj
Recommended image2
ಶಾರುಖ್ ಸೇರಿ ಈ ನಟರ ಜೊತೆ ಸಂಬಂಧ: ಗುಟ್ಟು ರಟ್ಟು ಮಾಡಿದ ಪ್ರಿಯಾಂಕಾ ಚೋಪ್ರಾ! ಬಾಲಿವುಡ್​ಗೆ ಗುಡ್​ಬೈ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved