BBK 12: ಇಬ್ಬರ ಜಗಳದ ಬೆಂಕಿಯಲ್ಲಿ ಬಿಸಿ ಕಾಯಿಸಿಕೊಂಡ ಗಿಲ್ಲಿ ನಟ; ಸಾಥ್ ಕೊಟ್ಟ ರಘು
ಬಿಗ್‌ಬಾಸ್ ಮನೆಯಲ್ಲಿ ಸ್ನೇಹಿತರಾಗಿದ್ದ ಅಶ್ವಿನಿ ಗೌಡ ಮತ್ತು ಧ್ರುವಂತ್ ನಡುವೆ ಜಗಳ ನಡೆದಿದೆ. ಪೂಜೆಯ ಸಮಯದಲ್ಲಿ ಉಂಟಾದ ಈ ಅಸಮಾಧಾನಕ್ಕೆ ಗಿಲ್ಲಿ ನಟ ತುಪ್ಪ ಸುರಿದಿದ್ದು, ಇದೀಗ ಇಬ್ಬರೂ ಟಿಕೆಟ್ ಟು ಟಾಪ್ 6 ರೇಸ್‌ನಲ್ಲಿ ಎದುರಾಳಿಗಳಾಗಿದ್ದಾರೆ.

ಅಶ್ವಿನಿ ಗೌಡ ಮತ್ತು ಧ್ರುವಂತ್
ಬಿಗ್‌ಬಾಸ್ ಶೋನಲ್ಲಿರುವ ಸ್ಪರ್ಧಿಗಳು ದೀರ್ಘಕಾಲದವರೆಗೆ ಸ್ನೇಹಿತರು ಮತ್ತು ಶತ್ರುಗಳಾಗಿರಲು ಸಾಧ್ಯವಿಲ್ಲ ಅನ್ನೋದು ಹಲವು ಬಾರಿ ಸಾಬೀತು ಆಗಿದೆ. ಇದೀಗ ಅಶ್ವಿನಿ ಗೌಡ ಮತ್ತು ಧ್ರುವಂತ್ ನಡುವೆ ಜಗಳ ನಡೆದಿದ್ದು, ಈ ಕಿಡಿಯಲ್ಲಿ ಗಿಲ್ಲಿ ನಟ ಬಿಸಿ ಕಾಯಿಸಿಕೊಂಡಿದ್ದಾರೆ.
ಚಾಮುಂಡೇಶ್ವರಿ ತಾಯಿಯ ಪೂಜೆ
ಈ ವಾರದ ಆರಂಭದಿಂದಲೂ ಅಶ್ವಿನಿ ಗೌಡ ಮತ್ತು ಧ್ರುವಂತ್ ಜೊತೆಯಾಗಿ ಆಟವಾಡಿಕೊಂಡು ಬಂದಿದ್ದಾರೆ. ಟಾಸ್ಕ್‌ಗಳಲ್ಲಿ ಇಬ್ಬರು ಸಹ ಗೆಲುವು ಕಾಣುತ್ತಿದ್ದಾರೆ. ಬುಧವಾರದ ಸಂಚಿಕೆಯಲ್ಲಿಯೇ ಬೆಳಗ್ಗೆ ಚಾಮುಂಡೇಶ್ವರಿ ತಾಯಿಯ ಪೂಜೆಯನ್ನು ಜೊತೆಯಾಗಿ ಮಾಡೋಣ ಎಂದು ಧ್ರುವಂತ್‌ಗೆ ಅಶ್ವಿನಿ ಗೌಡ ಹೇಳಿದ್ದರು.
ಧ್ರುವಂತ್ ಬೇಸರ
ಇದೀಗ ಪೂಜೆ ಸಮಯದಲ್ಲಿಯೇ ಇಬ್ಬರ ನಡುವೆ ಅಸಮಾಧಾನ ಉಂಟಾಗಿದೆ. ಆದ್ರೆ ಯಾವ ಕಾರಣಕ್ಕೆ ಈ ಜಗಳ ನಡೆದಿದೆ ಅನ್ನೋದು ಪ್ರೋಮೋದಲ್ಲಿ ಸ್ಪಷ್ಟವಾಗಿಲ್ಲ. ಬಹುಶಃ ಈ ಜಗಳದ ಬಳಿಕ ಗಿಲ್ಲಿ ನಟ, ರಘು ಮುಂದೆ ತಮ್ಮ ಬೇಸರವನ್ನು ಧ್ರುವಂತ್ ವ್ಯಕ್ತಪಡಿಸಿದ್ದಾರೆ.
ಮನೆಮಂದಿಯೆಲ್ಲಾ ಶಾಕ್
ಅಶ್ವಿನಿ ಗೌಡ ಮತ್ತು ಧ್ರುವಂತ್ ಜಗಳವಾಡ್ತಿರೋ ವಿಷಯ ಕೇಳಿಯೇ ಮನೆಮಂದಿಯೆಲ್ಲಾ ಶಾಕ್ ಆಗಿದ್ದರು. ಧ್ರುವಂತ್ ಮಾತು ಕೇಳುತ್ತಿದ್ದಂತೆ ಈ ಜಗಳಕ್ಕೆ ತುಪ್ಪ ಸುರಿಯುವ ಕೆಲಸವನ್ನು ಮಾಡಿದಂತೆ ಕಾಣಿಸಿದೆ. ಅಶ್ವಿನಿ ಒಬ್ಬರೇ ಇದ್ದಾಗ ಧ್ರುವಂತ್ ಅವರೇ ಭಾವನಾತ್ಮಕವಾಗಿ ಬೆಂಬಲಕ್ಕೆ ನಿಂತಿದ್ದರು ಎಂದು ರಘು ಹೇಳುತ್ತಾರೆ. ನೀನೇ ನಿನ್ನ ವೀಕ್‌ನೆಸ್ ಬಿಟ್ಟುಕೊಟ್ಟಂತಿದೆ ಎಂದು ಗಿಲ್ಲಿ ಹೇಳುತ್ತಾರೆ.
ಇದನ್ನೂ ಓದಿ: BBK 12: ಗಿಲ್ಲಿ ಅಭಿಮಾನಿಗಳಿಂದ ಸೋಶಿಯಲ್ ಮೀಡಿಯಾದಲ್ಲಿ ವಿಶೇಷ ಅಭಿಯಾನ ಆರಂಭ
ಇಬ್ಬರು ಎದುರಾಳಿ
ಬುಧವಾರದ ಸಂಚಿಕೆಯಲ್ಲಿ ಅಶ್ವಿನಿ ಗೌಡ ಮತ್ತು ಧ್ರುವಂತ್ ವಿನ್ ಆಗಿದ್ದು, ಟಿಕೆಟ್ ಟು ಟಾಪ್ 6 ಓಟಕ್ಕೆ ಒಂದು ಹೆಜ್ಜೆ ಹಿಂದೆ ಇದ್ದಾರೆ. ಈಗ ಮುಂದಿನ ಆಟವನ್ನು ಇಬ್ಬರು ಎದುರಾಳಿಯಾಗಿ ಆಡಬೇಕಿದೆ. ಈ ಆಟದ ವೇಳೆ ಏನೆಲ್ಲಾ ನಡೆಯುತ್ತೆ ಎಂಬುದರ ಬಗ್ಗೆ ಕುತೂಹಲ ಮೂಡಿದೆ.
ಇದನ್ನೂ ಓದಿ: BBK 12: ಅಶ್ವಿನಿ ಗೌಡ ಮಾತು ಕೇಳಿಸಿಕೊಂಡು ಪರ ಪರ ಅಂತ ತಲೆ ಕೆರೆದುಕೊಂಡ ರಕ್ಷಿತಾ ಶೆಟ್ಟಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.