ಅಲ್ಲಿ ಕಾಮಿಡಿ, ಇಲ್ಲಿ ಫುಲ್ ಧಗ ಧಗ: ಅಮಿರ್ ಖಾನ್ ಚಿತ್ರದ ದೃಶ್ಯ ನೆನಪಿಸಿದ ಟಾಕ್ಸಿಕ್
ಯಶ್ ಅಭಿನಯದ 'ಟಾಕ್ಸಿಕ್' ಟೀಸರ್‌ನಲ್ಲಿನ 'ಡ್ಯಾನ್ಸಿಂಗ್ ಕಾರ್' ದೃಶ್ಯವು, ಆಮಿರ್ ಖಾನ್ ಅವರ ಸಿನಿಮಾದ ಇದೇ ರೀತಿಯ ದೃಶ್ಯವನ್ನು ನೆನಪಿಸುತ್ತದೆ. ಹಾಸ್ಯಮಯವಾಗಿದ್ದ ಈ ದೃಶ್ಯ, 'ಟಾಕ್ಸಿಕ್'ನಲ್ಲಿ ಬಾಂಬ್ ಸ್ಫೋಟಕ್ಕೆ ಕಾರಣವಾಗುವ ಮೂಲಕ ತದ್ವಿರುದ್ಧವಾದ ಅನುಭವ ನೀಡುತ್ತದೆ.

ಆಮಿರ್ ಖಾನ್ ಅಭಿನಯದ ಸಿನಿಮಾ ದೃಶ್ಯ
ಯಶ್ ಅಭಿನಯದ ಟಾಕ್ಸಿಕ್ ಟೀಸರ್‌ನಲ್ಲಿಯ ಒಂದು ದೃಶ್ಯ, ಬಾಲಿವುಡ್ ನಟ ಆಮಿರ್ ಖಾನ್ ಅಭಿನಯದ ಸಿನಿಮಾ ದೃಶ್ಯವೊಂದನ್ನು ನೆನಪಿಗೆ ತರುತ್ತಿದೆ. ಎರಡೂ ದೃಶ್ಯಗಳಿಗೆ ಸಾಕಷ್ಟು ಅಂತರವಿದ್ದು, ಆ ಸೀನ್‌ನಲ್ಲಿನ ಆಕರ್ಷಣೆಯ ಕೇಂದ್ರ ಬಿಂದು ಒಂದೇ ಆಗಿದೆ. 2014ರಲ್ಲಿ ಬಿಡುಗಡೆಯಾಗಿದ್ದ ಅಮಿರ್ ಖಾನ್ ಅವರ ಈ ಸಿನಿಮಾ ಬಾಕ್ಸ್ ಆಫಿಸ್‌ನಲ್ಲಿ 769 ಕೋಟಿ ರೂ. ಕಲೆಕ್ಷನ್ ಮಾಡಿತ್ತು.
ಕಪ್ಪು ಬಣ್ಣದ ವಿಂಟೇಜ್ ಕಾರ್
ಟಾಕ್ಸಿಕ್ ಟೀಸರ್‌ನಲ್ಲಿ ಅಂತ್ಯಕ್ರಿಯೆಯೊಂದು ನಡೆಯುತ್ತಿರುತ್ತದೆ. ಈ ವೇಳೆ ಅಲ್ಲಿಗೆ ಕಪ್ಪು ಬಣ್ಣದ ವಿಂಟೇಜ್ ಕಾರ್ ನುಗ್ಗಿ ಬಂದು ಮರಕ್ಕೆ ಡಿಕ್ಕಿಯಾಗಿ ನಿಂತುಕೊಳ್ಳುತ್ತದೆ. ಕಾರ್‌ನಿಂದ ಇಳಿಯುವ ಸೊಣಕಲು ದೇಹದ ಮುದುಕ ಕೈಯಲ್ಲೊಂದು ಎಣ್ಣೆ ಬಾಟೆಲ್ ಹಿಡಿದುಕೊಂಡಿರುತ್ತಾನೆ. ನಂತರ ವೈಯರ್ ತೆಗೆದು ಕಾರ್ ಡಿಕ್ಕಿಯೊಂದಿಗೆ ಸ್ಫೋಟಕ ವಸ್ತುವಿಗೆ ಜೋಡಿಸುತ್ತಾನೆ. ಇದಾದ ಬಳಿಕ ಕಾಲ್ ಅಲ್ಲಾಡಲು ಶುರು ಮಾಡುತ್ತದೆ.
ಪ್ಲೇ ಬಾಯ್ ಲುಕ್‌ನಲ್ಲಿ ರಾಜಾಹುಲಿ
ಕಾರ್ ಅಲ್ಲಾಡುತ್ತಿದ್ದಂತೆ ಒಳಗೆ ಏನು ನಡೆಯುತ್ತಿದೆ ಎಂಬುದನ್ನು ತೋರಿಸಲಾಗುತ್ತದೆ. ಮಾನಸ್ಟರ್ ಲುಕ್ ಜೊತೆಯಲ್ಲಿ ಯಶ್ ಪ್ಲೇಬಾಯ್ ಆಗಿಯೂ ಮಿಂಚಿದ್ದಾರೆ. ವಿದೇಶಿ ಚೆಲುವೆ ನಟಿ, ನತಾಲಿ ಬರ್ನ್ ಜೊತೆ ಯಶ್ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರ ರೊಮ್ಯಾನ್ಸ್ ಹೆಚ್ಚಾಗುತ್ತಿದ್ದಂತೆ ಕಾರ್ ಅಲ್ಲಾಡಲು ಶುರುವಾಗಿ ಹೊರಗಿನ ಸ್ಪೋಟಕದ ಬಟನ್ ಆನ್ ಆಗುತ್ತದೆ.
ಅಮಿರ್ ನಟನೆಯ 'ಪಿಕೆ' ಸಿನಿಮಾ
ಇಂತಹವುದೇ ಡ್ಯಾನ್ಸಿಂಗ್ ಕಾರ್ ದೃಶ್ಯವೊಂದನ್ನು ಅಮಿರ್ ಖಾನ್ ಅವರ 'ಪಿಕೆ' ಸಿನಿಮಾದಲ್ಲಿ ಬಳಸಿಕೊಳ್ಳಲಾಗಿತ್ತು. ಅನ್ಯಗ್ರಹದಿಂದ ಬರುವ ಪಿಕೆ ಸಂಪೂರ್ಣ ನಗ್ನನಾಗಿರುತ್ತಾನೆ. ಭೂಮಿಗೆ ಬರುತ್ತಿದ್ದಂತೆ ಇಲ್ಲಿಯ ಜನರು ಧರಿಸಿದ್ದ ಬಟ್ಟೆಯನ್ನು ನೋಡುತ್ತಾನೆ. ಆಗ ಪಿಕೆ ಬಟ್ಟೆ ಹುಡುಕಲು ಶುರು ಮಾಡುತ್ತಾನೆ.
ಡ್ಯಾನ್ಸಿಂಗ್ ಕಾರ್
ಬಟ್ಟೆಗಾಗಿ ಪಿಕೆ ಹುಡುಕಾಟ ನಡೆಸುತ್ತಿರುವಾಗ ಜೋಡಿಯೊಂದು ಕಾರ್‌ನೊಳಗೆ ಹುಟ್ಟುಡುಗೆಯಲ್ಲಿ ರೊಮ್ಯಾನ್ಸ್ ಮಾಡುತ್ತಿರುತ್ತದೆ. ಅಲ್ಲಿಗೆ ಬರುವ ಪಿಕೆ ಕಾರ್‌ನಿಂದ ಜೋಡಿಯ ಬಟ್ಟೆ ತೆಗದುಕೊಂಡು ಹೋಗುತ್ತಾನೆ. ಮುಂದೆ ತನಗೆ ಹಣ ಬೇಕೆನಿಸಿದಾಗಲೂ ಪಿಕೆ ಡ್ಯಾನ್ಸಿಂಗ್ ಕಾರ್ ಹುಡುಕುತ್ತಿರುತ್ತಾನೆ.
ಎರಡೂ ದೃಶ್ಯಗಳು ತದ್ವಿರುದ್ಧ
ಪಿಕೆ ಮತ್ತು ಟಾಕ್ಸಿಕ್ ಸಿನಿಮಾದಲ್ಲಿಯೂ ಡ್ಯಾನ್ಸಿಂಗ್ ಕಾರ್ ಬಳಕೆ ಮಾಡಿಕೊಳ್ಳಲಾಗಿದ್ದು, ಆದ್ರೆ ಎರಡೂ ದೃಶ್ಯಗಳು ತದ್ವಿರುದ್ಧವಾಗವೆ. ಪಿಕೆ ಸಿನಿಮಾದಲ್ಲಿ ಈ ದೃಶ್ಯವನ್ನು ತಮಾಷೆಯಾಗಿ ತೋರಿಲಾಗಿದೆ. ಟಾಕ್ಸಿಕ್‌ನಲ್ಲಿಯೂ ಈ ರೀತಿಯಾಗಿ ಬಾಂಬ್ ಸ್ಪೋಟಿಸಬಹುದು ಎಂದು ತೋರಿಸಲಾಗಿದೆ. ಟಾಕ್ಸಿಕ್ ಇದೇ ಮಾರ್ಚ್ 19ರಂದು ಬಿಡುಗಡೆಯಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

