- Home
- Entertainment
- TV Talk
- BBK 12: ಬದಲಾಯ್ತು ಕ್ಯಾಪ್ಟನ್ ಗಿಲ್ಲಿ ನಟನ ನಡವಳಿಕೆ, ಕನಿಕರವೇ ಇಲ್ವಾ? ಬಯಲಾಯ್ತು ಅಸಲಿ ಮುಖ!
BBK 12: ಬದಲಾಯ್ತು ಕ್ಯಾಪ್ಟನ್ ಗಿಲ್ಲಿ ನಟನ ನಡವಳಿಕೆ, ಕನಿಕರವೇ ಇಲ್ವಾ? ಬಯಲಾಯ್ತು ಅಸಲಿ ಮುಖ!
ಗಿಲ್ಲಿ ನಟ ಕ್ಯಾಪ್ಟನ್ ಆದ ಮೊದಲ ದಿನವೇ ಅಶ್ವಿನಿ ಗೌಡ ಅವರೊಂದಿಗೆ ಜಗಳವಾಡಿದ್ದಾರೆ. ರಾತ್ರಿ ಕೆಲಸ ಮಾಡುವಂತೆ ಗಿಲ್ಲಿ ಆದೇಶಿಸಿದ್ದು, ಇದನ್ನು ವಿರೋಧಿಸಿದ ಅಶ್ವಿನಿ ಜೊತೆ ಏಕವಚನದಲ್ಲಿ ಮಾತನಾಡಿ, ನಿದ್ದೆಗೆಡಿಸಲು ಪ್ರಯತ್ನಿಸಿದ್ದಾರೆ. ಈ ನಡವಳಿಕೆಗೆ ವೀಕ್ಷಕರಿಂದ ಟೀಕೆ ವ್ಯಕ್ತವಾಗಿದೆ.

ಕ್ಯಾಪ್ಟನ್ ಆಡಳಿತ
ಬಿಗ್‌ಬಾಸ್ ಸೀಸನ್ 12ರ ಗಿಲ್ಲಿ ನಟ ಅವರ ಕ್ಯಾಪ್ಟನ್ ಆಡಳಿತದ ಮೊದಲ ದಿನವೇ ಕಿರಿಕ್ ಶುರುವಾಗಿದೆ. ಶನಿವಾರ ಮತ್ತು ಭಾನುವಾರ ಬಿಗ್‌ಬಾಸ್ ಮನೆಗೆ ಸಾಲು ಸಾಲು ಅತಿಥಿಗಳು ಬಂದ ಹಿನ್ನೆಲೆ ಸ್ಪರ್ಧಿಗಳಿಗೆ ಮನೆಯ ಕೆಲಸದ ಬಗ್ಗೆ ಗಮನವಿರಲಿಲ್ಲ. ನಾಮಿನೇಷನ್ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಗಿಲ್ಲಿ ನಟ ಅಧಿಕಾರ ಚಲಾಯಿಸುತ್ತಿದ್ದಾರೆ.
ಸಾಕಾಯ್ತು
ಭಾನುವಾರದ ಸಂಚಿಕೆಯಲ್ಲಿ ಅತಿಥಿಗಳ ಆಗಮನದಿಂದ ಇಡೀ ಮನೆಯ ಸದಸ್ಯರು ಸುಸ್ತು ಆಗಿದ್ದರು. ಕ್ಯಾಪ್ಟನ್ ಗಿಲ್ಲಿಯೇ ಸಾಕಾಯ್ತು ಎಂದು ನಿಟ್ಟುಸಿರು ಬಿಟ್ಟಿದ್ದರು. ಗಿಲ್ಲಿ ಸೇರಿದಂತೆ ಎಲ್ಲಾ ಸ್ಪರ್ಧಿಗಳು ವೀಕೆಂಡ್ ಸಂಚಿಕೆಯಿಂದ ಬಳಲಿದ್ದರು. ಈ ಕಾರಣದಿಂದ ಅಶ್ವಿನಿ ಗೌಡ, ತಮ್ಮ ಕೆಲಸವನ್ನು ಬೆಳಗ್ಗೆ ಮಾಡೋದಾಗಿ ಹೇಳಿದ್ದಾರೆ.
ಕೆರಳಿ ಕೆಂಡವಾದ ರಾಜಮಾತೆ
ರಾತ್ರಿಯೇ ಎಲ್ಲಾ ಕೆಲಸ ಮುಗಿಸಬೇಕು ಎಂದು ಗಿಲ್ಲಿ ನಟ ಆದೇಶಿಸುತ್ತಿದ್ದಂತೆ ಅಶ್ವಿನಿ ಗೌಡ ನನ್ನಿಂದ ಆಗಲ್ಲ ಎಂದು ಹೇಳುತ್ತಾರೆ. ಈ ವೇಳೆ ಅಶ್ವಿನಿ ಗೌಡ ಅವರನ್ನು ಏಕವಚನದಿಂದ ಮಾತನಾಡಲು ಗಿಲ್ಲಿ ನಟ ಶುರು ಮಾಡುತ್ತಾರೆ. ಇದರಿಂದ ಕೆರಳಿ ಕೆಂಡವಾದ ರಾಜಮಾತೆ, ಕೆಲಸ ಮಾಡಲ್ಲ ಎಂದೇಳಿ ಮಲಗಲು ತೆರಳುತ್ತಾರೆ.
ಇದನ್ನೂ ಓದಿ: BBK 12: ಕ್ಯಾಪ್ಟನ್ ಗಿಲ್ಲಿ ನಟ ಹೇಳಿದ ಈ ರೂಲ್ಸ್ ಮನೆಯಲ್ಲಿ ಎಷ್ಟು ಜನ ಫಾಲೋ ಮಾಡ್ತಾರೆ?
ನಿದ್ದೆ ಮಾಡದಂತೆ ತಡೆಯುವ ಪ್ರಯತ್ನ
ಇಷ್ಟಕ್ಕೆ ಸುಮ್ಮನಾಗದ ಗಿಲ್ಲಿ ನಟ, ನೀವು ಹೇಗೆ ಮಲಗ್ತೀರಿ ಎಂದು ನೋಡುವೆ ಎಂದು ಅಶ್ವಿನಿ ಗೌಡ ಅವರಿಗೆ ಕಿರಿಕಿರಿಯನ್ನುಂಟು ಮಾಡಲು ಮುಂದಾಗುತ್ತಾರೆ. ಮಲಗಿದ್ದ ಅಶ್ವಿನಿ ಗೌಡ ಬಳಿ ತೆರಳಿ ಚಮಚದಿಂದ ತಟ್ಟೆ ಬಾರಿಸುವ ಮೂಲಕ ನಿದ್ದೆ ಮಾಡದಂತೆ ತಡೆಯುವ ಪ್ರಯತ್ನವನ್ನು ಗಿಲ್ಲಿ ನಟ ಮಾಡಿದ್ದಾರೆ.
ಇದನ್ನೂ ಓದಿ: Bigg Boss ಮನೆಯಿಂದ ಹೊರಕ್ಕೆ ಬರುತ್ತಿದ್ದಂತೆಯೇ ಕುತೂಹಲದ ಪೋಸ್ಟ್ ಹಾಕಿದ ಸೂರಜ್ ಸಿಂಗ್
ಗಿಲ್ಲಿ ನಡವಳಿಕೆಗೆ ಬಿಗ್‌ಬಾಸ್ ವೀಕ್ಷಕರು ಬೇಸರ
ಈ ಪ್ರೋಮೋ ನೋಡಿದ ನೆಟ್ಟಿಗರು, ಕ್ಯಾಪ್ಟನ್ ಆಗ್ತಿದ್ದಂತೆ ಗಿಲ್ಲಿ ಅವರಿಗೆ ಕೊಂಬು ಬಂದಿದೆಯಾ ಎಂದು ಪ್ರಶ್ನೆ ಮಾಡಿದ್ದಾರೆ. ಜಗಳದ ಸಂದರ್ಭದಲ್ಲಿಯೂ ಅಶ್ವಿನಿ ಗೌಡ ಅವರಿಗೆ ಕ್ಯಾಪ್ಟನ್ ಆಗಿ ತೋರಿಸಮ್ಮ ಎಂದು ವ್ಯಂಗ್ಯ ಮಾಡಿದ್ದಾರೆ. ಗಿಲ್ಲಿ ನಡವಳಿಕೆಗೆ ಬಿಗ್‌ಬಾಸ್ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: BBK 12: ವೀಕ್ಷಕರು, ಸ್ಪರ್ಧಿಗಳ ಊಹೆ ಸುಳ್ಳಾಗಿಸಿದ ಬಿಗ್‌ಬಾಸ್? ರಕ್ಷಿತಾ ಫ್ಯಾನ್ಸ್‌ಗೆ ಅತಿದೊಡ್ಡ ಆಘಾತ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

