- Home
- Entertainment
- TV Talk
- BBK 12: ಬಿಗ್‌ಬಾಸ್ ಕೊಟ್ಟ ಚೆಕ್‌ಮೆಟ್‌ಗೆ ಮಕ್ಕರ್ ಆದ ಗಿಲ್ಲಿ; ಚಮಕ್ ಕೊಟ್ಟ ರಕ್ಷಿತಾ, ಇತ್ತ ಕಾವ್ಯಾಗೆ ತಳಮಳ
BBK 12: ಬಿಗ್‌ಬಾಸ್ ಕೊಟ್ಟ ಚೆಕ್‌ಮೆಟ್‌ಗೆ ಮಕ್ಕರ್ ಆದ ಗಿಲ್ಲಿ; ಚಮಕ್ ಕೊಟ್ಟ ರಕ್ಷಿತಾ, ಇತ್ತ ಕಾವ್ಯಾಗೆ ತಳಮಳ
ಕ್ಯಾಪ್ಟನ್ ಗಿಲ್ಲಿ ನಟ, ಅಶ್ವಿನಿ ಗೌಡ ಅವರನ್ನು ಅಸಮರ್ಥರು ಎಂದಿದ್ದೇ ಮುಳುವಾಗಿದೆ. ಈ ಅನಿರೀಕ್ಷಿತ ತಿರುವಿನಿಂದ ಗಿಲ್ಲಿ ನಟ ಶಾಕ್ ಆಗಿದ್ದು, ಇತರೆ ಸ್ಪರ್ಧಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಚೆಕ್‌ಮೆಟ್‌ಗೆ ಗಿಲ್ಲಿ ನಟ ಫುಲ್ ಶಾಕ್
ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಯಾವಾಗ ಏನು ಆಗುತ್ತೆ ಅಂತ ಹೇಳಲು ಆಗಲ್ಲ. ಬಿಗ್‌ಬಾಸ್ ಆಟಕ್ಕೆ ನೀಡುವ ಅನಿರೀಕ್ಷಿತ ತಿರುವುಗಳು ಸ್ಪರ್ಧಿಗಳಲ್ಲಿ ಅಚ್ಚರಿಯನ್ನುಂಟು ಮಾಡುತ್ತವೆ. ಸ್ಪರ್ಧಿಗಳ ಪ್ರತಿಯೊಂದು ಮಾತು ಮತ್ತು ಚಲನವಲವನ್ನು ಬಿಗ್‌ಬಾಸ್ ಸೂಕ್ಷ್ಮವಾಗಿ ಗಮನಿಸುತ್ತಾರೆ. ಇದೀಗ ಬಿಗ್‌ಬಾಸ್ ನೀಡಿದ ಚೆಕ್‌ಮೆಟ್‌ಗೆ ಗಿಲ್ಲಿ ನಟ ಫುಲ್ ಶಾಕ್ ಆಗಿದ್ದಾರೆ. ಇದನ್ನು ನೋಡಿ ಧ್ರುವಂತ್, ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿ ಖುಷಿಯಾಗಿದ್ದಾರೆ.
ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆಯಾದ ಗಿಲ್ಲಿ ನಟ
ಕ್ಯಾಪ್ಟನ್ ಆಗಿರುವ ಗಿಲ್ಲಿ, ಓರ್ವ ಸದಸ್ಯರಿಂದ ನಾಮಿನೇಟ್ ಮಾಡುವ ಹಕ್ಕನ್ನು ಕಿತ್ತುಕೊಳ್ಳಬೇಕಿತ್ತು. ಈ ಸಂದರ್ಭದಲ್ಲಿ ಅಶ್ವಿನಿ ಗೌಡ ಹೆಸರು ಹೇಳಿದ್ದ ಗಿಲ್ಲಿ ನಟ, ಕೆಲವು ಕಾರಣಗಳನ್ನು ಸಹ ನೀಡಿದ್ದಾರೆ. ಅಶ್ವಿನಿ ಗೌಡ ಅಸಮರ್ಥರು, ಕ್ಯಾಪ್ಟನ್ಸಿ ಟಾಸ್ಕ್‌ಗೆ ಹೋದ್ರು ಗೆಲ್ಲೋಕೆ ಆಗಿಲ್ಲ, ಟಾಸ್ಕ್ ಆಡಲು ಬರಲ್ಲ ಎಂಬಿತ್ಯಾದಿ ಕಾರಣಗಳನ್ನು ನೀಡಿದ್ದರು. ಇದೀಗ ಇದೇ ಕಾರಣಗಳಿಂದಾಗಿ ಅಶ್ವಿನಿ ಗೌಡ ನೇರವಾಗಿ ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆಯಾಗುವಂತಾಗಿದೆ.
ಬಿಗ್‌ಬಾಸ್ ನೀಡಿದ ರೋಚಕ ಟ್ವಿಸ್ಟ್
15ನೇ ವಾರಕ್ಕೆ ಕ್ಯಾಪ್ಟನ್ ಆಗುವ ಸ್ಪರ್ಧಿ ನೇರವಾಗಿ ಬಿಗ್‌ಬಾಸ್ ಫಿನಾಲೆಗೆ ಆಯ್ಕಯಾಗುತ್ತಾರೆ. ಹಾಗಾಗಿ ಈ ಬಾರಿ ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆಯಾಗಿ ಗೆಲ್ಲೋದು ಎಲ್ಲಾ ಸ್ಪರ್ಧಿಗಳಿಗೆ ಅತ್ಯವಶ್ಯಕವಾಗಿದೆ. ಇದೀಗ ಬಿಗ್‌ಬಾಸ್ ನೀಡಿದ ರೋಚಕ ಟ್ವಿಸ್ಟ್‌ನಿಂದ ಗಿಲ್ಲಿ ಜೊತೆ ಅಶ್ವಿನಿ ಗೌಡ ಕ್ಯಾಪ್ಟನ್ಸಿ ಟಾಸ್ಕ್ ಆಡಲಿದ್ದಾರೆ. ಹಾಗಾದ್ರೆ ಬಿಗ್‌ಬಾಸ್ ನೀಡಿದ ಟ್ವಿಸ್ಟ್ ಏನು? ಗಿಲ್ಲಿ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿ ಅಶ್ವಿನಿ ಗೌಡ ಹೆಸರು ಹೇಳಿದ್ಯಾಕೆ?
ಅಶ್ವಿನಿ ಗೌಡ ಹೆಸರು ಹೇಳಿದ್ಯಾಕೆ?
ಕ್ಯಾಪ್ಟನ್ ಆಗಿರುವ ಗಿಲ್ಲಿ ನಟ ಅವರನ್ನು ಮನೆಯ ರಾಜನನ್ನಾಗಿ ಆಯ್ಕೆ ಮಾಡಲಾಗಿತ್ತು. ರಾಜನಾಗಿರುವ ಗಿಲ್ಲಿ ನಟ, ಮನೆಯಲ್ಲಿರುವ ಅಸಮರ್ಥ ಮಹಿಳಾ ಸ್ಪರ್ಧಿಯನ್ನು ರಾಣಿಯನ್ನಾಗಿ ಮಾಡಿಕೊಳ್ಳಬೇಕು ಎಂದು ಬಿಗ್‌ಬಾಸ್ ಸೂಚಿಸಿದ್ದರು. ಈ ಹಿಂದೆ ಅಶ್ವಿನಿ ಗೌಡ ಅವರನ್ನು ಉದ್ದೇಶಿಸಿ ಗಿಲ್ಲಿ ಹೇಳಿದ ಪದಗಳನ್ನೇ ಬಿಗ್‌ಬಾಸ್ ಬಳಸಿದ್ದರು. ಹಾಗಾಗಿ ತನ್ನ ಮಾತಿಗೆ ಬದ್ಧವಾಗುವ ಕಾರಣದಿಂದ ಅಶ್ವಿನಿ ಗೌಡ ಅವರನ್ನು ರಾಣಿಯನ್ನಾಗಿ ಆಯ್ಕೆ ಮಾಡಿಕೊಂಡರು.
ಇದನ್ನೂ ಓದಿ: BBK 12: ಏಯ್, ಬೆನ್ನುಮೂಳೆ ಇಲ್ಲದವನೇ ಅಖಾಡಕ್ಕೆ ಬಾರೋ: ತೊಡೆ ತಟ್ಟಿ ಸವಾಲೆಸೆದ ಅಶ್ವಿನಿ ಗೌಡ
ರಕ್ಷಿತಾ ಶೆಟ್ಟಿ ತಮಾಷೆ
ಈ ಪ್ರಕ್ರಿಯೆ ಬಳಿಕ ಕ್ಯಾಪ್ಟನ್ ಗಿಲ್ಲಿಯ ಫ್ಯೂಚರ್ ನನಗೆ ಕಾಣಿಸುತ್ತಿದೆ ಎಂದು ರಕ್ಷಿತಾ ಶೆಟ್ಟಿ ತಮಾಷೆ ಮಾಡುತ್ತಾರೆ. ಇನ್ನು ಧ್ರುವಂತ್ ಸಹ ಗಿಲ್ಲಿ ನಟ ಅವರ ಕಾಲೆಳೆಯುವ ಪ್ರಯತ್ನ ಮಾಡುತ್ತಾರೆ. ಅವಕಾಶಗಳು ಸುಮ್ಮನೇ ಸಿಗಲ್ಲ, ಇದನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಅಶ್ವಿನಿ ಗೌಡರಿಗೆ ಶುಭಾಶಯ ತಿಳಿಸುತ್ತಾರೆ. ಮತ್ತೊಂದೆಡೆ ಆಟಕ್ಕೆ ಮತ್ತೊಂದು ಆಯಮ ಸಿಕ್ಕಿದ್ದಕ್ಕೆ ರಾಶಿಕಾ ಅಚ್ಚರಿಯಿಂದ ಸಂತೋಷ ವ್ಯಕ್ತಪಡಿಸುತ್ತಾರೆ. ಇತ್ತ ಕಾವ್ಯಾ ಏನು ಮಾತನಾಡದೇ ಮೌನದಿಂದಲೇ ಬೇಸರ ಹೊರ ಹಾಕಿದಂತೆ ಕಾಣಿಸಿದೆ.
ಇದನ್ನೂ ಓದಿ: BBK 12: ಸೀಸನ್ 12ರ ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆ ಯಾವಾಗ? ಇಲ್ಲಿದೆ ನೋಡಿ ಮಾಹಿತಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

