- Home
- Entertainment
- TV Talk
- Bigg Boss ಡಾಗ್ ಸತೀಶ್ರನ್ನು ಸುಸ್ತು ಮಾಡಿದ ಗಿಲ್ಲಿ ನಟ ಫ್ಯಾನ್ಸ್: ಹೀಗೆಲ್ಲಾ ಹೇಳೋದು ಬೇಕಿತ್ತಾ?
Bigg Boss ಡಾಗ್ ಸತೀಶ್ರನ್ನು ಸುಸ್ತು ಮಾಡಿದ ಗಿಲ್ಲಿ ನಟ ಫ್ಯಾನ್ಸ್: ಹೀಗೆಲ್ಲಾ ಹೇಳೋದು ಬೇಕಿತ್ತಾ?
ಬಿಗ್ ಬಾಸ್ ಖ್ಯಾತಿಯ ಡಾಗ್ ಸತೀಶ್, ಸಹ ಸ್ಪರ್ಧಿ ಗಿಲ್ಲಿ ನಟನ ವಿರುದ್ಧ ಮಾತನಾಡಿದ್ದಕ್ಕೆ ಅವರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಗಿಲ್ಲಿ ನಟನ ಅಭಿಮಾನಿಗಳು ಅವರ ಕಾರಿನ ಮೇಲೆ 'ಗಿಲ್ಲಿ ನಟ ವಿನ್ನರ್' ಎಂದು ಬರೆದು, ಘೋಷಣೆ ಕೂಗಿ ಸೇಡು ತೀರಿಸಿಕೊಂಡಿದ್ದಾರೆ.

ಸಿಕ್ಕಾಪಟ್ಟೆ ಫೇಮಸ್
ಬಿಗ್ಬಾಸ್ನಿಂದ (Bigg Boss Kannada) ಬಂದ ಮೇಲೆ ಡಾಗ್ ಸತೀಶ್ ಅವರು ಸಿಕ್ಕಾಪಟ್ಟೆ ಫೇಮಸ್ ಆಗುತ್ತಿದ್ದಾರೆ. ಮಾತೆದ್ದಿದರೆ ಕೋಟಿಯಲ್ಲಿಯೇ ಮಾತನಾಡುವ ಡಾಗ್ ಸತೀಶ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮೂಲಕ ಸದ್ದು ಮಾಡುತ್ತಿದ್ದಾರೆ. ಇವರನ್ನು ಹಾಗೂ ಇವರು 100 ಕೋಟಿಯ ನಾಯಿ ಎಂದು ಹೇಳುವ ನಾಯಿಯನ್ನು ಮುಂದಿಟ್ಟುಕೊಂಡು, ಲಕ್ಷ ಲಕ್ಷ ಬೆಲೆಬಾಳುವ ಷರ್ಟ್ ಧರಿಸುತ್ತೇನೆ ಎನ್ನುವ ಮಾತನ್ನು ಕೂಡ ಮುಂದಿಟ್ಟುಕೊಂಡು ಅದೆಷ್ಟೋ ಮಂದಿ ಮೀಮ್ಸ್ ಮಾಡುವುದು ಮಾಮೂಲಾಗಿಬಿಟ್ಟಿದೆ.
ಸದ್ದು ಮಾಡ್ತಿರೋ ಡಾಗ್ ಸತೀಶ್
ತಮ್ಮ ಕೈಗೆ ಬಿಗ್ಬಾಸ್ ಕೊಟ್ಟರೆ ವರ್ಲ್ಡ್ ಫೇಮಸ್ ಮಾಡಬಲ್ಲೆ ಎನ್ನುತ್ತಲೇ ಮಾತು ಆರಂಭಿಸುವ ಡಾಗ್ ಸತೀಶ್, ಇದೀಗ ತಮ್ಮಮಗನನ್ನು ವಿಶ್ವದ ನಂಬರ್ 2 ಹೀರೋ ಮಾಡಲು ಹೊರಟಿದ್ದಾರೆ. ಈಚೆಗೆ ಬರಿಗೈನಲ್ಲಿ ಟಾಯ್ಲೆಟ್ ತೊಳೆದು ಸುದ್ದಿ ಮಾಡಿದ್ದರು. ಹೀಗೆ ಒಂದಿಲ್ಲೊಂದು ಕಾರಣಗಳಿಂದ ಸದ್ದು ಮಾಡ್ತಿದ್ದಾರೆ ಡಾಗ್ ಸತೀಶ್.
ಹೊಗಳಿಕೊಳ್ಳುವಲ್ಲಿ ಫೇಮಸ್
ಇಂತಿಪ್ಪ ಡಾಗ್ ಸತೀಶ್ (Bigg Boss Dog Satish) ಬಿಗ್ಬಾಸ್ ಮನೆಯ ಬಹುತೇಕ ಸ್ಪರ್ಧಿಗಳ ವಿರುದ್ಧವೇ ಮಾತನಾಡಿದ್ದಾರೆ. ಯಾರನ್ನೂ ಬಿಟ್ಟಿಲ್ಲ. ಅದರಲ್ಲಿಯೂ ಬಿಗ್ಬಾಸ್ ವಿನ್ನರ್ ಎಂದೇ ಸೋಷಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿರೋ ಗಿಲ್ಲಿ ನಟನ ವಿರುದ್ಧವೂ ಸಾಕಷ್ಟು ಮಾತನಾಡುತ್ತಿದ್ದಾರೆ. ಒಂದು ಹಂತದಲ್ಲಿ ಬಟ್ಟೆ ಕಳ್ಳತನದ ಆರೋಪವನ್ನೂ ಬಿಗ್ಬಾಸ್ ಸ್ಪರ್ಧಿ ವಿರುದ್ಧ ಹೊರಿಸಿದ್ದಾರೆ ಸತೀಶ್.
ಕೆರಳಿದ ಅಭಿಮಾನಿಗಳು
ಇದು ಗಿಲ್ಲಿ ನಟ (Bigg Boss Gilli Nata) ಅಭಿಮಾನಿಗಳನ್ನು ಕೆರಳಿಸಿದೆ. ಡಾಗ್ ಸತೀಶ್ ಅವರು ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ಅವರು ಹೋಗಿದ್ದ ಕಾರಿನ ಮೇಲೆ ಗಿಲ್ಲಿನಟನ ಫ್ಯಾನ್ಸ್ ಗಿಲ್ಲಿ ನಟ ವಿನ್ನರ್ ಎಂದು ಬರೆದು ಬರೆದು ಹಾಕಿದ್ದಾರೆ.
ಫ್ಯಾನ್ಸ್ ಸೇಡು
ಮಾತ್ರವಲ್ಲದೇ ಸತೀಶ್ ಹೊರಕ್ಕೆ ಬರುತ್ತಿದ್ದಂತೆಯೇ ಅವರ ವಿರುದ್ಧ ಸೇಡು ತೀರಿಸಿಕೊಳ್ಳಲು ಕಾಯ್ತಿದ್ದ ಗಿಲ್ಲಿ ಫ್ಯಾನ್ಸ್, ಜೋರಾಗಿ ಗಿಲ್ಲಿ ಗಿಲ್ಲಿ, ವಿನ್ನರ್ ಗಿಲ್ಲಿ, ಬಿಗ್ಬಾಸ್ ಗಿಲ್ಲಿ ಎಂದೆಲ್ಲಾ ಘೋಷಣೆ ಕೂಗುವ ಮೂಲಕ ಡಾಗ್ ಸತೀಶ್ ಅವರನ್ನು ಇರಿಟೇಟ್ ಮಾಡಿ ಸೇಡು ತೀರಿಸಿಕೊಂಡಿದ್ದಾರೆ.
ಬೇಕಿತ್ತಾ ಇವೆಲ್ಲಾ?
ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇವೆಲ್ಲಾ ಬೇಕಿತ್ತಾ ಎಂದು ಡಾಗ್ ಸತೀಶ್ ಅವರನ್ನು ಪ್ರಶ್ನಿಸಲಾಗುತ್ತಿದೆ. ತಾವು ಅಪ್ರತಿಮ ಸುಂದರ ಹಾಗೇ ಹೀಗೆ ಹೊಗಳಿಕೊಳ್ಳುವುದನ್ನು ಬೇಕಿದ್ದರೆ ಮುಂದುವರೆಸಿ, ನಿಮ್ಮ ಕೋಟಿ ಕೋಟಿ ಮಾತನ್ನು ಬೇಕಿದ್ರೆ ಹೇಳಿಕೊಳ್ಳುತ್ತಾ ಸಾಗಿ. ಆದರೆ, ಬೇರೆಯವರ ತಂಟೆಗೆ ಯಾಕೆ ಹೋಗ್ತೀರಿ ಎಂದು ಪ್ರಶ್ನಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

