- Home
- Entertainment
- TV Talk
- Bigg Boss ರಾಶಿಕಾ ಶೆಟ್ಟಿ ಜೊತೆ ಸಂಬಂಧದ ಬಗ್ಗೆ ಓಪನ್ನಾಗಿ Suraj Singh ಮಾತು: ಮದ್ವೆ ಕುರಿತು ಹೇಳಿದ್ದೇನು?
Bigg Boss ರಾಶಿಕಾ ಶೆಟ್ಟಿ ಜೊತೆ ಸಂಬಂಧದ ಬಗ್ಗೆ ಓಪನ್ನಾಗಿ Suraj Singh ಮಾತು: ಮದ್ವೆ ಕುರಿತು ಹೇಳಿದ್ದೇನು?
ಬಿಗ್‌ಬಾಸ್ ಮನೆಯಲ್ಲಿ ಸೂರಜ್ ಸಿಂಗ್ ಮತ್ತು ರಾಶಿಕಾ ಶೆಟ್ಟಿ ನಡುವೆ ಪ್ರೀತಿ ಇದೆ ಎಂದು ಭಾವಿಸಲಾಗಿತ್ತು. ಎಲಿಮಿನೇಟ್ ಆಗಿ ಹೊರಬಂದ ನಂತರ ಸೂರಜ್, ತಮ್ಮಿಬ್ಬರ ನಡುವೆ ಇರುವ ಸಂಬಂಧದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಅವರು ಹೇಳಿದ್ದೇನೆ.

ಬಿಗ್ಬಾಸ್ನಲ್ಲಿ ಲವ್ಸ್ಟೋರಿ
ಬಿಗ್‌ಬಾಸ್ (Bigg Boss)ನಲ್ಲಿ ಗಲಾಟೆ, ಕಿತ್ತಾಟದ ರೀತಿಯಲ್ಲಿಯೇ ಒಂದಿಷ್ಟು ಮಂದಿ ಲವ್ ಮಾಡೋದು, ಕೆಲವೊಂದು ಷೋಗಳಲ್ಲಿ ಅದು ಗಡಿಯನ್ನು ಮೀರಿದ್ದರೂ, ಮಂಚದವರೆಗೂ ಈ ಲವ್ ಸ್ಟೋರಿ ಬಂದರೂ ಅದನ್ನು ಪ್ರಸಾರ ಮಾಡಿ ಟಿಆರ್ಪಿ ಏರಿಸಿಕೊಳ್ಳುವುದು, ವೀಕೆಂಡ್ನಲ್ಲಿ ಆ ಜೋಡಿಗೆ ಬೈದಂತೆ ಮಾಡುವುದು ಇದೆಲ್ಲವೂ ಮಾಮೂಲೇ. ಪ್ರತಿ ಸೀಸನ್ನಲ್ಲಿಯೂ ಒಂದೋ- ಎರಡೋ ಜೋಡಿ ಹೀಗೆ ಪ್ರೀತಿ, ಪ್ರೇಮದ ಹೆಸರಿನಲ್ಲಿ ಕಾಣಿಸಿಕೊಳ್ಳುವುದು ಬಿಗ್‌ಬಾಸ್ ಸ್ಪೆಷ್ಯಾಲಿಟಿ ಅನ್ನಿ.
ಕ್ಯೂಟೆಸ್ಟ್ ಜೋಡಿ
ಅದೇ ರೀತಿ ಈ ಬಾರಿಯ ಬಿಗ್‌ಬಾಸ್ ಕನ್ನಡದಲ್ಲಿ ಪ್ರೀತಿ ಪ್ರೇಮ ಎನ್ನೋದು ಬಂದರೆ ಕೇಳಿಬಂದ ಹೆಸರು ಸೂರಜ್ ಸಿಂಗ್ ಮತ್ತು ರಾಶಿಕಾ ಶೆಟ್ಟಿ (Bigg Boss Suraj Singh and Rashika Shetty). ಸೂರಜ್ ಅವರು ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ದಿನವೇ ಬಿಗ್‌ಬಾಸ್ ಮನೆಯಲ್ಲಿ ಕ್ಯೂಟೆಸ್ಟ್ ಲೇಡಿ ರಾಶಿಕಾ ಎಂದು ಹೇಳಿದ್ದರಿಂದ ಅಲ್ಲಿಂದಲೇ ಅವರಿಬ್ಬರ ಮೇಲೆ ವೀಕ್ಷಕರ ಕಣ್ಣು ನೆಟ್ಟಿತ್ತು.
ಸೂರಜ್ ಸಿಂಗ್-ರಾಶಿಕಾ ಜೋಡಿ
ಕೆಲವೊಂದು ಸಂದರ್ಭಗಳಲ್ಲಿ ರಾಶಿಕಾ ಶೆಟ್ಟಿ ಅವರೇ ಒಂದು ಹೆಜ್ಜೆ ಮುಂದೆ ಹೋದವರಂತೆ ಸೂರಜ್ ಬಳಿ ಹೋಗುವುದು, ಅವರಿಬ್ಬರ ಸ್ನೇಹ ಎಲ್ಲವೂ ಚರ್ಚೆಯ ವಿಷಯವೇ ಆಗಿತ್ತು. ಇದು ಸಾಮಾನ್ಯವಾಗಿದ್ದರೂ, ವೀಕ್ಷಕರು ಇವರಿಬ್ಬರ ಜೋಡಿಯನ್ನು ಇನ್ನೂ ಒಂದು ಹಂತಕ್ಕೆ ಕೊಂಡೊಯ್ದಿದ್ದರು. ಇವರಿಬ್ಬರೂ ಸಂಬಂಧದಲ್ಲಿ ಇದ್ದಾರೆ ಎಂದೇ ಹೇಳಲಾಗಿತ್ತು.
ಬಾಂಡಿಂಗ್ ಚೆನ್ನಾಗಿತ್ತು
ಇದೀಗ ಸೂರಜ್ ಸಿಂಗ್ ಎಲಿಮಿನೇಟ್ ಆಗಿ ಹೊರಕ್ಕೆ ಬಂದಾಗ ಈ ಬಗ್ಗೆ ಮಾತನಾಡಿದ್ದಾರೆ. ನಮ್ಮಿಬ್ಬರ ಬಾಂಡಿಂಗ್ ಚೆನ್ನಾಗಿತ್ತು ಅಷ್ಟೇ. ಪ್ರೀತಿ-ಪ್ರೇಮ ಅಂತೇನೂ ಇಲ್ಲ. ನಾವಿಬ್ಬರೂ ಒಳ್ಳೆಯ ಸ್ನೇಹಿತರು ಅಷ್ಟೇ ಎಂದಿದ್ದಾರೆ.
ಮದುವೆಯ ಬಗ್ಗೆ
ವೀಕ್ಷಕರು ನಮ್ಮಿಬ್ಬರ ಜೋಡಿಯ ಬಗ್ಗೆ ಏನೇನೋ ಮಾತನಾಡುತ್ತಿದ್ದಾರೆ. ನಾನು ಹೊರಬಂದಾಗ ರಾಶಿಕಾ ಕೂಡ ತುಂಬಾ ಅತ್ತಿದ್ದಕ್ಕೆ ಹೀಗೆ ಅಂದುಕೊಂಡಿದ್ದಾರೆ.ನಾವಿಬ್ಬರೂ ಮದುವೆಯಾಗುತ್ತೇವೆ ಎನ್ನುವುದೆಲ್ಲಾ ಸುಳ್ಳು. ನನಗೆ ಮದುವೆ, ಗಿದುವೆ ಎನ್ನೋದೆಲ್ಲಾ ಬಹು ದೂರದ ಮಾತು. ಅಂಥ ವಿಷಯದ ಬಗ್ಗೆ ನಾನು ವಿಚಾರ ಕೂಡ ಮಾಡಿಲ್ಲ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

