- Home
- Entertainment
- TV Talk
- Bigg Bossನ್ನ ವಿಶ್ವ ಮಟ್ಟದಲ್ಲಿ ಮಿಂಚಿಸೋ ತಾಕತ್ ನಂಗಿದೆ, ಸುದೀಪ್ ಕಂಡೆಮ್ ಮಾಡಿದ್ರು- ಡಾಗ್ ಸತೀಶ್ ಚಾಲೆಂಜ್ ಹಾಕಿದ್ದೇನು?
Bigg Bossನ್ನ ವಿಶ್ವ ಮಟ್ಟದಲ್ಲಿ ಮಿಂಚಿಸೋ ತಾಕತ್ ನಂಗಿದೆ, ಸುದೀಪ್ ಕಂಡೆಮ್ ಮಾಡಿದ್ರು- ಡಾಗ್ ಸತೀಶ್ ಚಾಲೆಂಜ್ ಹಾಕಿದ್ದೇನು?
ನೂರಾರು ಕೋಟಿ ಮೌಲ್ಯದ ನಾಯಿಗಳಿಂದ ಖ್ಯಾತರಾದ ಡಾಗ್ ಸತೀಶ್, ಬಿಗ್ ಬಾಸ್ ಮನೆಯಲ್ಲಿ ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ನಿರೂಪಕ ಸುದೀಪ್ ಅವರೊಂದಿಗಿನ ಸಂಭಾಷಣೆಯಲ್ಲಿ ತಮ್ಮನ್ನು ತುಳಿಯಲಾಗುತ್ತಿದೆ ಎಂದು ಆರೋಪಿಸಿದ ಅವರು, ತಮ್ಮ 100 ಕೋಟಿಯ ನಾಯಿಯ ಪ್ರೊಮೋ ಕತ್ತರಿಸಲಾಗಿದೆ ಎಂದು ಬೇಸರಿಸಿದ್ದಾರೆ

ನಾಯಿಗಳ ಒಡೆಯ ಡಾಗ್ ಸತೀಶ್
ನೂರಾರು ಕೋಟಿ ರೂಪಾಯಿಗಳ ನಾಯಿಗಳಿಂದ ಡಾಗ್ ಸತೀಶ್ ಎಂದೇ ಫೇಮಸ್ ಆಗಿರೋ ಸತೀಶ್ ಅವರು ಈಗ Bigg Boss ಸತೀಶ್ ಆಗಿರುವ ಕಾರಣದಿಂದ ಸಕತ್ ಡಿಮಾಂಡ್ ಕುದುರಿಸಿಕೊಂಡಿದ್ದಾರೆ. ತಮ್ಮನ್ನು ತಾವು ಹ್ಯಾಂಡ್ಸಮ್, ನನಗೆ ವಯಸ್ಸಾಗಲ್ಲ, ವಯಸ್ಸು ಕಡಿಮೆಯಾಗುತ್ತಾ ಹೋಗುತ್ತದೆ, ಈಗಲೂ ನನ್ನ ಸೌಂದರ್ಯ ನೋಡಿ ಹೆಣ್ಣುಮಕ್ಕಳು ಬೀಳುತ್ತಾರೆ ಎನ್ನುತ್ತಲೇ ಮಾತನಾಡುವ ಡಾಗ್ ಸತೀಶ್ ಅವರಿಗೆ ತಮ್ಮ ರೂಪ ಮತ್ತು ಘನತೆಯ ಮೇಲೆ ಅತಿ ಹೆಚ್ಚು ಪ್ರೀತಿ ಇದೆ.
ಕಹಿ ಅನುಭವ
ಇದೀಗ ಅವರು, ಬಿಗ್ಬಾಸ್ನಲ್ಲಿ ತಮಗಾಗಿರುವ ಒಂದು ಕಹಿ ಘಟನೆಯನ್ನು ಬಾಸ್ ಚಾನೆಲ್ನಲ್ಲಿ ಹೇಳಿಕೊಂಡಿದ್ದಾರೆ. ಅದು ವರ್ಲ್ಡ್ ನ್ಯೂಸ್ ಮಾಡ್ತಾ ಇದ್ದೆ ಎಂದೋರು ಮೂರನೇ ವಾರಕ್ಕೇ ಹೊರಕ್ಕೆ ಹೋಗ್ತಾ ಇದ್ದೀರಿ ಎಂದು ಕಂಡೆಮ್ ರೀತಿಯಲ್ಲಿ ಸುದೀಪ್ ಅವರು ನನಗೆ ಹೇಳಿದ್ರು. ಅದಕ್ಕೆ ನಾನು ಒಂದೇ ನೈಟ್ನಲ್ಲಿ ವರ್ಲ್ಡ್ ನ್ಯೂಸ್ ಮಾಡ್ತಾ ಇದ್ದೆ ಸರ್ ಎಂದು ಹೇಳಿದೆ. ಅದಕ್ಕೆ ಸುದೀಪ್ ಅವರು, ಹಾಗಿದ್ರೆ ನಮ್ಮ ಬಿಗ್ಬಾಸ್ ವೇಸ್ಟಾ, ನೀನೇನು ಕಿಲಾಡಿನಾ ಎನ್ನೋ ಅರ್ಥದಲ್ಲಿ ಕೇಳಿದ್ರು ಎಂದಿದ್ದಾರೆ.
ವಿಶ್ವ ಮಟ್ಟದಲ್ಲಿ...
ಬಿಗ್ಬಾಸ್ ತುಂಬಾ ದೊಡ್ಡ ವೇದಿಕೆ. ಒಂದು ನೈಟ್ನಲ್ಲಿ ವರ್ಲ್ಡ್ ಲೆವೆಲ್ನಲ್ಲಿ ತಗೊಂಡು ಹೋಗ್ತಾ ಇದ್ದೆ ನಾನು. ಅದು ನಿಮಗೂ ಒಳ್ಳೆಯದು, ನನಗೂ ಒಳ್ಳೆಯದು ಆಗುತ್ತಿತ್ತು ಎಂದೆ. ಆದರೆ ಇಲ್ಲಿ ತುಳಿಯುತ್ತಾರೆ, ಬೆಳೆಸಲು ಬಿಡುವುದಿಲ್ಲ ಎಂದು ಸುದೀಪ್ ಅವರಿಗೆ ಹೇಳಿದೆ ಎಂದೆ.
ಚಾಲೆಂಜ್ ಮಾಡಿದ್ದೇನೆ
ಇದಕ್ಕೇ ಚಾಲೆಂಜಿಂಗ್ ಆಗಿ ನವೆಂಬರ್ 5ನೇ ತಾರೀಖು, ಒಂದು ದೊಡ್ಡ ವೇದಿಕೆಯಲ್ಲಿ ಸಿಎಂ, ಡಿಸಿಎಂ ಮುಂದೆನೇ ಲಾಂಚ್ ಮಾಡುತ್ತಿದ್ದೇನೆ ಎಂದು ಅಲ್ಲಿಯೇ ಹೇಳಿದ್ದೇನೆ ಎಂದು ಸತೀಶ್ ಹೇಳಿದ್ದಾರೆ.
ಕಟ್ ಮಾಡಿಬಿಟ್ರು
ಅಲ್ಲಿ ಇದನ್ನು ಹೇಳಿದ್ದೇನೆ. ನನ್ನ ಮಾತನ್ನು ಕಟ್ ಮಾಡದೇ ಹಾಕಿದ್ದರೆ ಗೊತ್ತಾಗತ್ತೆ. ಆದರೆ ನನ್ನ ಮಾತನ್ನು ಕಟ್ ಮಾಡುತ್ತಾರೋ ಗೊತ್ತಿಲ್ಲ ಎಂದಿರುವ ಸತೀಶ್, ಬಿಗ್ಬಾಸ್ಗೆ ಎಂಟ್ರಿ ಕೊಡುವ ಸಮಯದಲ್ಲಿ ತೋರಿಸಿರುವ ಪ್ರೊಮೋದಲ್ಲಿ ಮಹತ್ವದ ವಿಷಯವನ್ನೇ ಕಟ್ ಮಾಡಿರುವುದಾಗಿ ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರೊಮೋನೇ ಹಾಕಿಲ್ಲ
ನಾನು, ಮಗ ಮತ್ತು ಹೊಸ ನಾಯಿಯದ್ದು ಪ್ರೊಮೋ ಶೂಟ್ನಲ್ಲಿ ವಿಡಿಯೋ ಆಗಿತ್ತು. ಪೋಸ್ಟರ್ ರೆಡಿ ಮಾಡಿದ್ದೆ. ಪ್ರೊಮೋ ಶೂಟ್ನಲ್ಲಿ ಬರುತ್ತಿದ್ದಂತೆಯೇ, ಬಿಗ್ಬಾಸ್ನಲ್ಲಿ ಕಾಲು ಇಡುತ್ತಿದ್ದಂತೆಯೇ ನ್ಯೂಸ್ ಚಾನೆಲ್ಗೆ ಕಳಿಸಿಬಿಡು ಎಂದು ಮಗನಿಗೆ ಹೇಳಿದ್ದೆ. ಜಗತ್ತಿನಾದ್ಯಂತ ಸುಮಾರು 300 ಚಾನೆಲ್ಗಳವರು ನನಗೆ ಗೊತ್ತಿದ್ದಾರೆ. ಗ್ರೂಪ್ನಲ್ಲಿ ಹಾಕು ಎಂದಿದ್ದೆ. 100 ಕೋಟಿಯ ನಾಯಿ ಅದಾಗಿತ್ತು. ಆದರೆ ಪ್ರೊಮೋದಲ್ಲಿ ಅದನ್ನು ತೋರಿಸಲೇ ಇಲ್ಲ ಎಂದಿದ್ದಾರೆ.