- Home
- Entertainment
- TV Talk
- Karna ವಿರುದ್ಧ ತಿರುಗಿ ಬಿದ್ದ ಜನರು: ಭಾವನೆಗಳ ಜೊತೆ ಆಡ್ತಿದ್ದೀರಾ? ಯಾವ ಖುಷಿಗೆ ಈ ನಗು? Too Much, Stop It!
Karna ವಿರುದ್ಧ ತಿರುಗಿ ಬಿದ್ದ ಜನರು: ಭಾವನೆಗಳ ಜೊತೆ ಆಡ್ತಿದ್ದೀರಾ? ಯಾವ ಖುಷಿಗೆ ಈ ನಗು? Too Much, Stop It!
'ಕರ್ಣ' ಸೀರಿಯಲ್‌ನಲ್ಲಿ ನಾಯಕ ಕರ್ಣನ ಪಾತ್ರದ ಇತ್ತೀಚಿನ ನಡೆಗೆ ಪ್ರೇಕ್ಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಧಿಯನ್ನು ನೋವಿನಲ್ಲಿಟ್ಟು ನಿತ್ಯಳ ಜೊತೆ ಕರ್ಣ ಸಂಭ್ರಮಿಸುವುದನ್ನು ಸಹಿಸದ ವೀಕ್ಷಕರು, ಇದು ಅತಿಯಾದ ಒಳ್ಳೆತನದ ಪ್ರದರ್ಶನ ಎಂದು ಕಿಡಿಕಾರುತ್ತಿದ್ದಾರೆ.

ಅತಿಯಾದ ಒಳ್ಳೆತನ
ಕರ್ಣ ಸೀರಿಯಲ್ (Karna Serial) ವೀಕ್ಷಕರ ಪೈಕಿ ಬಹುತೇಕ ಮಂದಿ ಮೊದಲಿನಿಂದಲೂ ಹೇಳಿಕೊಳ್ತಾ ಇರೋದು ಒಂದೇ ಮಾತು. ಅದು ಕರ್ಣನ ಕ್ಯಾರೆಕ್ಟರ್ ಅನ್ನು ಸ್ವಲ್ಪ ಅತಿಯಾಗಿ ತೋರಿಸ್ತಾ ಇದ್ದಾರೆ. ಇಷ್ಟು ಒಳ್ಳೆಯವರು ವಾಸ್ತವದಲ್ಲಿ ಇರಲು ಸಾಧ್ಯವಿಲ್ಲ ಎಂದು. ಆದರೆ, ಇದಾಗಲೇ ಕರ್ಣ ಪಾತ್ರಧಾರಿ ಕಿರಣ್ ರಾಜ್ ಅವರು, ಸುವರ್ಣ ಟಿವಿಯ ಜೊತೆಗಿನ ಸಂವಾದದಲ್ಲಿ ಈ ಬಗ್ಗೆಯೂ ಪ್ರಸ್ತಾಪ ಮಾಡಿದ್ದರು. ಒಬ್ಬೊಬ್ಬರಲ್ಲಿ ಒಂದೊಂದು ಅತಿರೇಕ ಇರುತ್ತೆ. ಕರ್ಣನಲ್ಲಿ ಎಲ್ಲ ಅತಿರೇಕವನ್ನೂ ತೋರಿಸಿದ್ದಾರೆ ಅಂದಿದ್ದರು.
ಕರ್ಣನ ವಿರುದ್ಧ ಪ್ರೇಕ್ಷಕರು
ಅದೇನೇ ಇದ್ದರೂ ಇಲ್ಲಿಯವರೆಗೆ ಕರ್ಣ ಮತ್ತು ಆತನ ಒಳ್ಳೆಯತನವನ್ನು ಸಹಿಸಿಕೊಂಡು ಬರುತ್ತಿದ್ದ ವೀಕ್ಷಕರು ಇದೇ ಮೊದಲ ಬಾರಿಗೆ ಕರ್ಣನ ವಿರುದ್ಧ ತಿರುಗಿ ಬಿದ್ದಿದ್ದಾರೆ. This is too much, ಮದುವೆಯೇನು ಆಟ ಅಂದುಕೊಂಡ್ಯಾ? ನೀನು ಹೇಗೆ ಹೀಗಾಗಲು ಸಾಧ್ಯ? ಇಬ್ಬರನ್ನೂ ಒಟ್ಟಿಗೇ ಇಟ್ಟುಕೊಂಡು ಮಜಾ ನೋಡ್ತಿದ್ಯಾ? ನಿಧಿಯನ್ನೇಕೆ ಅಲ್ಲಿಯೇ ಇಟ್ಟುಕೊಂಡಿರುವೆ, ಅವಳು ಅಳುವುದನ್ನು ನೋಡಲು ಆಗ್ತಿಲ್ಲ... ಹೀಗೆ ಸೋಷಿಯಲ್ ಮೀಡಿಯಾದ ಪ್ರೊಮೋಗಳಲ್ಲಿ ಕರ್ಣನ ವಿರುದ್ಧ ವಿಪರೀತ ಎನ್ನುವಷ್ಟು ಕಮೆಂಟ್ಗಳ ಸುರಿಮಳೆಯಾಗುತ್ತಿದೆ.
ನುಂಗಲಾಗದ ತುತ್ತು
ತಾವು ನೋಡ್ತಿರೋದು ಸೀರಿಯಲ್ ಎನ್ನೋದನ್ನು ಮರೆತು ವೀಕ್ಷಕರು ಬಹುತೇಕರು ಅದನ್ನು ತಮ್ಮ ಸ್ವಂತದ್ದು ಎಂದುಕೊಳ್ಳುವುದು ಇದೆ. ಇಲ್ಲವೇ ಸೀರಿಯಲ್ ಎಂದು ತಿಳಿದಿದ್ದರೂ ತೀರಾ ವಾಸ್ತವಕ್ಕೆ ದೂರ ಎನ್ನಿಸುವುದನ್ನು ನೋಡಲು ಇಷ್ಟಪಡುವುದಿಲ್ಲ. ಇದೀಗ ಕರ್ಣ ಸೀರಿಯಲ್‌ನಲ್ಲಿ ನಿಧಿಯ ನೋವನ್ನು ಆಕೆಯ ಅಭಿಮಾನಿಗಳಿಗೆ ನೋಡಲು ಆಗ್ತಿಲ್ಲ. ಅವಳು ಅಲ್ಲಿ ಕಣ್ಣೀರು ಹಾಕುತ್ತಿದ್ದರೂ ಏನೂ ಆಗಲೇ ಇಲ್ಲ ಎನ್ನುವಂತೆ ಕರ್ಣ ರಿಯಾಕ್ಟ್ ಮಾಡ್ತಿರೋದು ಯಾಕೋ ವೀಕ್ಷಕರಿಗೆ ನುಂಗಲಾಗದ ತುತ್ತಾಗಿ ಪರಿಣಮಿಸಿದೆ.
ಚಿತ್ರಹಿಂಸೆ ಕೊಡಬೇಡಿ
ಇಲ್ಲಿಯವರೆಗೆ ಕರ್ಣ ಮತ್ತು ನಿಧಿಯನ್ನು ಒಟ್ಟಿಗೆ ಮಾಡಿ ಅಂತಿದ್ದ ಹಲವು ನೆಟ್ಟಿಗರು, ಈಗ ಕರ್ಣನ ಮದುವೆ ಹೇಗೋ ನಿತ್ಯಳ ಜೊತೆ ಆಗಿದೆ. ನಿಧಿಯನ್ನು ಮನೆಯಲ್ಲಿಯೇ ಇಟ್ಟುಕೊಂಡು ಚಿತ್ರಹಿಂಸೆ ಕೊಡಬೇಡಿ, ಅವಳ ಪಾಡಿಗೆ ಅವಳು ಬದುಕಲಿ. ಒಂದಿಷ್ಟು ದಿನ ನೋವು ಅನುಭವಿಸಿದರೂ ಕ್ರಮೇಣ ಅವಳ ಜೀವನ ಅವಳು ನೋಡಿಕೊಳ್ಳುವಂತೆ ಮಾಡಿ. ಇದ್ಯಾಕೋ ತುಂಬಾ ಅತಿಯಾಯಿತು ಎನ್ನುತ್ತಿದ್ದಾರೆ.
ಯಾವ ಖುಷಿಗೆ ಈ ನಗು?
ನಿಜವಾಗಿಯೂ ಕರ್ಣನಿಗೆ ನೋವಾಗಿದೆಯೇ ಎನ್ನುವುದೇ ಡೌಟು ಎಂದು ಮತ್ತೆ ಕೆಲವರು ಗರಂ ಆಗಿದ್ದಾರೆ. ಖುಷಿಯಾಗಿರುವಂತೆ ಆ್ಯಕ್ಟ್ ಮಾಡಿದ್ರೂ ನೋವಿನ ಛಾಯೆ ಮುಖದಲ್ಲಿ ಇಲ್ಲವೇ ಇಲ್ಲ. ಅತ್ತ ನಿಧಿ ಮತ್ತು ಇತ್ತ ನಿತ್ಯ ಇಬ್ಬರನ್ನೂ ಆತ ಮೆಂಟೇನ್ ಮಾಡುವ ಅಗತ್ಯವಿಲ್ಲ. ನಿಧಿ ಅವಳ ಜೀವನದಲ್ಲಿ ಮುಂದುವರೆಯಲು ಬಿಡಿ ಎನ್ನುತ್ತಿದ್ದಾರೆ.
ಕಾರಣ ತಿಳಿಯಬಹುದೆ?
vibexmuse ಎನ್ನುವ ನೆಟ್ಟಿಗರು, ದಯವಿಟ್ಟು ಕರ್ಣನ ಈ ಸಂತೋಷ ಮತ್ತು ಸಂಭ್ರಮದ ಹಿಂದಿನ ಕಾರಣವನ್ನು ನಾವು ತಿಳಿದುಕೊಳ್ಳಬಹುದೇ ಎಂದು ಪ್ರಶ್ನಿಸಿದ್ದಾರೆ. ಈ ನಗು ನಕಲಿ ಮದುವೆಗಾಗಿಯೇ? ನಿತ್ಯಾಳ ಗರ್ಭಧಾರಣೆಗಾಗಿಯೇ? ನಿಧಿಯ ಹೃದಯವನ್ನು ಚೂರು ಚೂರು ಮಾಡಿದ್ದಕ್ಕಾಗಿಯೇ ಅಥವಾ ಕರ್ಣ ತನ್ನ ನಿಜವಾದ ಪ್ರೀತಿಯನ್ನು ಕಳೆದುಕೊಳ್ಳುವುದಕ್ಕಾಗಿಯೇ ಎನ್ನುವುದು ಅರ್ಥವಾಗುತ್ತಿಲ್ಲ ಎಂದಿದ್ದಾರೆ.
ಉರಿ ಹೊತ್ತಿದೆ...
ನಿಧಿಯ ಜಗತ್ತು ಗಂಭೀರವಾಗಿ ಉರಿಯುತ್ತಿರುವಾಗ ನಿತ್ಯಾಳೊಂದಿಗೆ "ಸಂತೋಷದ ದಾಂಪತ್ಯ" ಜೀವನವನ್ನು ತೋರಿಸುವುದು ಎಂದರೆ ಏನರ್ಥ? ಈ ಎಲ್ಲಾ ಗೊಂದಲಗಳಲ್ಲಿ, ಕರ್ಣ ಹೇಗೆ ಸಂತೋಷವಾಗಿರಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.