MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Bigg Boss ಮನೆಯಿಂದ ಜೀವಂತ ಬಂದ್ರೆ ಸಾಕಿತ್ತು: ಆಘಾತದಲ್ಲಿ ನಟ ಸುದರ್ಶನ್​- ಸಂಗೀತಾ ಭಟ್​ ಹೇಳಿದ್ದೇನು

Bigg Boss ಮನೆಯಿಂದ ಜೀವಂತ ಬಂದ್ರೆ ಸಾಕಿತ್ತು: ಆಘಾತದಲ್ಲಿ ನಟ ಸುದರ್ಶನ್​- ಸಂಗೀತಾ ಭಟ್​ ಹೇಳಿದ್ದೇನು

ಪ್ಯಾನಿಕ್ ಅಟ್ಯಾಕ್ ಮತ್ತು ಅನಾರೋಗ್ಯದ ಕಾರಣದಿಂದಾಗಿ ನಟಿ ಸಂಗೀತಾ ಭಟ್ ಬಿಗ್‌ಬಾಸ್ ಕನ್ನಡ ಸೀಸನ್ 13ರ ಮನೆಯಿಂದ ಹೊರಬಂದಿದ್ದಾರೆ. ಶೋಗಿಂತ ಜೀವನ ಮತ್ತು ಆರೋಗ್ಯವೇ ಮುಖ್ಯ ಎಂದು ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಪತಿ ಸುದರ್ಶನ್ ರಂಗಪ್ರಸಾದ್ ಕೂಡ ಆಕೆಯ ಆರೋಗ್ಯವೇ ಮುಖ್ಯ ಎಂದು ಭಾವುಕರಾಗಿದ್ದಾರೆ.

2 Min read
Author : Suchethana D
Published : Oct 13 2026, 01:07 PM IST
Share this Photo Gallery
  • FB
  • TW
  • Linkdin
  • Whatsapp
16
ಸಂಗೀತಾ ಭಟ್​ ಅನಾರೋಗ್ಯ
Image Credit : Instagram

ಸಂಗೀತಾ ಭಟ್​ ಅನಾರೋಗ್ಯ

ಅನಾರೋಗ್ಯದ ಕಾರಣದಿಂದಾಗಿ ಬಿಗ್‌ಬಾಸ್‌ ಕನ್ನಡ ಸೀಸನ್‌ 13ರ (Bigg Boss Kannada 13) ಮನೆಯಿಂದ ಸಂಗೀತಾ ಭಟ್‌ (Sangeetha Bhat) ಹೊರಬಂದಿದ್ದಾರೆ ಹಠಾತ್ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಂಗೀತಾ ಭಟ್ ನೇರವಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರ ಸಲಹೆ ಮೇರೆಗೆ ಅರ್ಧಕ್ಕೆ ನಿಲ್ಲಿಸಿ ಹೊರ ಬಂದಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಪ್ಯಾನಿಕ್​ ಅಟ್ಯಾಕ್​
Image Credit : Colors Kannada

ಪ್ಯಾನಿಕ್​ ಅಟ್ಯಾಕ್​

ಬಿಗ್ ಬಾಸ್‌ ಮನೆಗೆ ಹೋದಾಗ ಸಂಗೀತಾ ಅ ವರಿಗೆ ಪ್ಯಾನಿಕ್ ಅಟ್ಯಾಕ್ ಆಗುತ್ತಾ ಹೋಯಿತು. ಒಂದೆರಡು ವಾರಗಳ ಹಿಂದೆಯ ಸಂಗೀತಾ ಮಾನಸಿಕವಾಗಿ ಕುಗ್ಗಿ ಹೋಗಿದ್ದರಂತೆ. ಅದಾದ ನಂತರ ದೈಹಿಕವಾಗಿಯೂ ಸೋತು ಹೋಗಿದ್ದರು. ಅಷ್ಟರಲ್ಲಿಯೇ ಅವರು, ಬಿಗ್​ಬಾಸ್​ಗಿಂತ ಜೀವನವೇ ಮುಖ್ಯ ಎಂದುಕೊಂಡು ಹೊರಕ್ಕೆ ಬಂದಿದ್ದಾರೆ.

Related Articles

Related image1
Bhagyalakshmi ತಾಂಡವ್​ ರಿಯಲ್​ ಪತ್ನಿ ಸಂಗೀತಾ ಭಟ್​ ವಯಸ್ಸು ರಿವೀಲ್​; Bigg Bossನಲ್ಲಿ ಬಿಸಿಬಿಸಿ ಚರ್ಚೆ
Related image2
ಬಿಗ್‌ಬಾಸ್ ಮನೆಯಲ್ಲಿ ಆತಂಕ: ಸಂಗೀತಾ ಭಟ್ ಆರೋಗ್ಯದಲ್ಲಿ ತೀವ್ರ ಏರುಪೇರು, ಆಸ್ಪತ್ರೆಗೆ ಶಿಫ್ಟ್!
36
ಸಾಮಾನ್ಯ ಜನರ ಅನಿಸಿಕೆ
Image Credit : Instagram

ಸಾಮಾನ್ಯ ಜನರ ಅನಿಸಿಕೆ

ಬಿಗ್​ಬಾಸ್​ ಮನೆಗೆ ಹೋಗುವುದು ಎಂದರೆ ಲಕ್ಷಾಂತರ ಮಂದಿಯ ಕನಸು.ದೊಡ್ಡ ದೊಡ್ಡ ಸೆಲೆಬ್ರಿಟಿಗಳು, ತಮಗೆ ಬಿಗ್​ಬಾಸ್​ಗೆ ಕಾಲ್​ ಬಂದರೂ ಹೋಗದೇ ಇರಲು ಹಲವು ಕಾರಣ ಇದೆ. ಆದರೆ ಬಿಗ್​ಬಾಸ್​​ಗೆ ಹೋದರೆ ತಮ್ಮ ಜೀವನವೇ ಬದಲಾಗಿ ಹೋಗುತ್ತದೆ, ತಾವು ಸೆಲೆಬ್ರಿಟಿ ಆಗಿಬಿಡುತ್ತೇವೆ ಎನ್ನುವ ಕಲ್ಪನೆಯಲ್ಲಿ ಇರುವವರಿಗೆ ಬಿಗ್​ಬಾಸೇ ಸರ್ವಸ್ವ. ಆದ್ದರಿಂದ ಬಿಗ್​ಬಾಸ್​​ನಲ್ಲಿ ಸಿಕ್ಕ ಅವಕಾಶವನ್ನು ಹಲವರು ಏನೇ ಆದರೂ ಬಿಟ್ಟುಕೊಡುವುದಿಲ್ಲ. ಆದರೆ ಸಂಗೀತಾ ಅವರು ತಮಗೆ ಜೀವನವೇ ಮುಖ್ಯ ಎಂದು ಹೊರಕ್ಕೆ ಬಂದಿದ್ದಾರೆ.

46
ಪತಿಯ ರಿಯಾಕ್ಷನ್​
Image Credit : instagram

ಪತಿಯ ರಿಯಾಕ್ಷನ್​

ಹೀಗೆ ಏಕಾಏಕಿ ಬಂದಾಗ, ಪತಿ,ನಟ ಸುದರ್ಶನ್​ ರಂಗಪ್ರಸಾದ್​ (ಭಾಗ್ಯಲಕ್ಷ್ಮಿ ಸೀರಿಯಲ್​ ತಾಂಡವ್​) ರಿಯಾಕ್ಷನ್​ ಹೇಗಿತ್ತು ಎಂದು ಸಂಗೀತಾ ಅವರಿಗೆ ಕೇಳಿದಾಗ, ಅವರು ಲೈವ್​ನಲ್ಲಿ ನನಗೆ ಹೀಗೆ ಆದಾಗ ಅದನ್ನು ಸುದರ್ಶನ್​ ನೋಡಿರಲಿಲ್ಲ, ಶೂಟಿಂಗ್​ನಲ್ಲಿ ಇದ್ದರು. ಆದರೆ ಅವರಿಗೆ ಹಲವರು ಕಾಲ್​ ಮಾಡಿದಾಗಲೇ ವಿಷ್ಯ ತಿಳಿಯಿತು. ಅವರು ಶಾಕ್​ನಿಂದ ತತ್ತರಿಸಿ ಹೋದರು ಎಂದಿದ್ದಾರೆ.

56
ಜೀವಂತವಾಗಿ ಇದ್ರೆ ಸಾಕು
Image Credit : instagram

ಜೀವಂತವಾಗಿ ಇದ್ರೆ ಸಾಕು

ನಾನು ಬಿಗ್​ಬಾಸ್​​ ಮನೆಯಿಂದ ಜೀವಂತವಾಗಿ, ಹೆಲ್ತಿಯಾಗಿ ಬಂದರೆ ಸಾಕು ಎಂದು ಬೇಡಿಕೊಂಡರು. ನೀನು ಆರೋಗ್ಯದಿಂದ ಇದ್ದರೆ ಸಾಕು, ಬಿಗ್​ಬಾಸ್​​ಗೆ ಹೋಗಬೇಕೆಂದು ಇಲ್ಲ, ಅಲ್ಲಿಂದ ಏನೂ ಗಳಿಸದಿದ್ದರೂ, ಮುಂದುವರೆಯದಿದ್ದರೂ ಪರವಾಗಿಲ್ಲ. ಆರೋಗ್ಯವಾಗಿ, ಜೀವಂತವಾಗಿ ಇರಬೇಕು ಅಷ್ಟೇ ಎಂದು ಭಾವುಕರಾದರು ಎಂದು ಸಂಗೀತಾ ಹೇಳಿದ್ದಾರೆ. ಎಷ್ಟು ದಿನ ಇರ್ತೀವೋ ಅಷ್ಟು ದಿನ ಒಟ್ಟಿಗೇ ನೆಮ್ಮದಿಯಾಗಿ ಇರಬೇಕು ಅಷ್ಟೇ ಎಂದರು.

66
ಫೋನ್​ನಲ್ಲಿ ಮೆಸೇಜ್​
Image Credit : Others

ಫೋನ್​ನಲ್ಲಿ ಮೆಸೇಜ್​

ನಾನು ಮನೆಗೆ ಬಂದಾಗ, ನನ್ನ ಫೋನ್​ ಚೆಕ್​ ಮಾಡಿದ್ರೆ ಅವರು ದಿನವೂ ನನ್ನ ಫೋನ್​ಗೆ ಮೆಸೇಜ್​ ಕಳಿಸ್ತಾ ಇದ್ದರು. ಅಷ್ಟು ಮಿಸ್​ ಮಾಡಿಕೊಳ್ಳುತ್ತಿದ್ದರು. ಬಿಗ್​ಬಾಸ್​ ಮನೆಯಲ್ಲಿ ಊಟ ಮಾಡಿದ್ನಾ, ನಿದ್ದೆ ಮಾಡಿದ್ನಾ ಎಂದು ಸ್ಕ್ರೀನ್​ಷಾಟ್​ ತೆಗೆದು ಇಟ್ಟುಕೊಂಡಿದ್ರು. ಅವರು ತುಂಬಾನೇ ಮಿಸ್​ ಮಾಡಿಕೊಂಡಿದ್ರು. ನನಗೆ ಷೋಗಿಂದ ಲೈಫೇ ಮುಖ್ಯ ಎನ್ನಿಸಿತು ಎಂದಿದ್ದಾರೆ ಸಂಗೀತಾ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಟಿವಿ ಶೋ
ಮನರಂಜನಾ ಸುದ್ದಿ
ಬಿಗ್ ಬಾಸ್ ಕನ್ನಡ
ಸಂಗೀತ ಭಟ್
 

Latest Videos
Recommended Stories
Recommended image1
ಬಿಗ್‌ಬಾಸ್‌ನಿಂದ ಸಂಗೀತಾ ಭಟ್ ಹೊರಬರುತ್ತಿದ್ದಂತೆ ಈ ಸೀರಿಯಲ್‌ಗೆ ಖಳನಾಯಕನಾಗಿ ಎಂಟ್ರಿ ಕೊಟ್ಟ ಪತಿ ಸುದರ್ಶನ್‌!
Recommended image2
ಸಂಗೀತಾ ಭಟ್‌ಗೆ ಅಸಲಿಗೆ ಏನಾಗಿತ್ತು? ಬಿಗ್ ಬಾಸ್‌ನಿಂದ ಅರ್ಧಕ್ಕೆ ಹೊರಬಂದಿದ್ದೇಕೆ? ಕಾರಣ ರಿವೀಲ್ ಮಾಡಿದ ಸ್ಪರ್ಧಿ
Recommended image3
ಕನ್ನಡದ ಮತ್ತೊಬ್ಬ ನಟಿಗೆ ಡಿವೋರ್ಸ್; ಗಂಡನಲ್ಲ, ಅಭಿಮಾನಿಗಳಿಗೆ ಎಚ್ಚರಿಕೆ ಕೊಟ್ಟ ಐಶ್ವರ್ಯಾ ಪಿಸ್ಸೆ!
Related Stories
Recommended image1
Bhagyalakshmi ತಾಂಡವ್​ ರಿಯಲ್​ ಪತ್ನಿ ಸಂಗೀತಾ ಭಟ್​ ವಯಸ್ಸು ರಿವೀಲ್​; Bigg Bossನಲ್ಲಿ ಬಿಸಿಬಿಸಿ ಚರ್ಚೆ
Recommended image2
ಬಿಗ್‌ಬಾಸ್ ಮನೆಯಲ್ಲಿ ಆತಂಕ: ಸಂಗೀತಾ ಭಟ್ ಆರೋಗ್ಯದಲ್ಲಿ ತೀವ್ರ ಏರುಪೇರು, ಆಸ್ಪತ್ರೆಗೆ ಶಿಫ್ಟ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved