- Home
- Entertainment
- TV Talk
- ಮೊದಲ ಸಿನಿಮಾಕ್ಕೆ ಒಂದು ಕೋಟಿ ರೂ. ಸಂಭಾವನೆ ಪಡೆದ್ರಾ ಗಿಲ್ಲಿ ನಟ? ಅವರೇ ಹೇಳಿದ್ದೇನು ಕೇಳಿ
ಮೊದಲ ಸಿನಿಮಾಕ್ಕೆ ಒಂದು ಕೋಟಿ ರೂ. ಸಂಭಾವನೆ ಪಡೆದ್ರಾ ಗಿಲ್ಲಿ ನಟ? ಅವರೇ ಹೇಳಿದ್ದೇನು ಕೇಳಿ
ಬಿಗ್ ಬಾಸ್ ಸೀಸನ್ 12ರ ವಿಜೇತ ಗಿಲ್ಲಿ ನಟನ ಚೊಚ್ಚಲ ಸಿನಿಮಾಕ್ಕೆ ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ಬಂಡವಾಳ ಹೂಡುತ್ತಿದೆ. ಪ್ಯಾನ್ ಇಂಡಿಯಾ ನಟಿ ಶ್ರೀಲೀಲಾ ನಾಯಕಿಯಾಗಿ ನಟಿಸುತ್ತಿದ್ದು, ಗಿಲ್ಲಿ ನಟನಿಗೆ ಒಂದು ಕೋಟಿ ಸಂಭಾವನೆ ಸಿಗುವ ಸುದ್ದಿ ಹರಿದಾಡುತ್ತಿದೆ.

ಗಿಲ್ಲಿ ನಟನ ಕನಸು ನನಸು
ಬಿಗ್ ಬಾಸ್ ಸೀಸನ್ 12ರ (Bigg Boss 12 Winner) ಗಿಲ್ಲಿ ನಟ ತಮ್ಮ ಆಸೆಯನ್ನು ಕೊನೆಗೂ ಈಡೇರಿಸಿಕೊಳ್ಳುವ ಕಾಲ ಸನ್ನಿಹಿತವಾಗಿದೆ. ತಾವು ಬೆಂಗಳೂರಿಗೆ ಬಂದಿದ್ದ ಕನಸು ನಟನಾಗುವುದು ಎಂದು ಹೇಳಿದ್ದ ಗಿಲ್ಲಿ ನಟನ ಸಿನಿಮಾ ಮುಹೂರ್ತ ಇಂದು ಅರ್ಥಾತ್ ಜೂನ್ 21ರಂದು ಅವರ ಜನ್ಮದಿನದಂದು ಈಡೇರಿಸಲಾಗುತ್ತಿದೆ. ಅವರ ಸಿನಿಮಾಕ್ಕೆ ಇಂದು ಮುಹೂರ್ತ ಫಿಕ್ಸ್ ಮಾಡಲಾಗಿತ್ತು.
ಶ್ರೀಲೀಲಾ ನಾಯಕಿ
ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಪ್ರೊಡಕ್ಷನ್ ಸಂಸ್ಥೆಯಾದ ಹಾಗೂ ವಿವಿಧ ಭಾಷೆಗಳಲ್ಲಿ ನೂರಾರು ಕೋಟಿ ಬಜೆಟ್ ಹಾಕಿ ಸಿನಿಮಾ ನಿರ್ಮಾಣ ಮಾಡುವ ಕೆವಿಎನ್ ಪ್ರೊಡಕ್ಷನ್ ಗಿಲ್ಲಿ ನಟನೆಯ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಪ್ಯಾನ್ ಇಂಡಿಯಾ ನಟಿ ಶ್ರೀಲೀಲಾ ಅವರನ್ನು ಹೀರೋಯಿನ್ ಆಗಿ ಸೆಲೆಕ್ಟ್ ಮಾಡಲಾಗಿದೆ.
ಒಂದು ಕೋಟಿ ರೂ.ಸಂಭಾವನೆ
ಇದರ ಬೆನ್ನಲ್ಲೇ ಗಿಲ್ಲಿ ನಟ ಈ ಸಿನಿಮಾಕ್ಕೆ ಒಂದು ಕೋಟಿ ರೂಪಾಯಿ ಸಂಭಾವನೆ ಪಡೆಯಲಿದ್ದಾರೆ ಎನ್ನುವ ಸುದ್ದಿ ಸದ್ದು ಮಾಡಿತ್ತು. ಅದರ ಬಗ್ಗೆ ಇದೀಗ ಗಿಲ್ಲಿ ನಟ ಮಾತನಾಡಿದ್ದಾರೆ. ನೀವು ಒಂದು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿರುವುದು ನಿಜನಾ ಎನ್ನುವ ಪ್ರಶ್ನೆ ಮಾಡಲಾಗಿದೆ.
ಗಿಲ್ಲಿ ನಟ ಹೇಳಿದ್ದೇನು?
ಅದಕ್ಕೆ ಗಿಲ್ಲಿ ನಟ, ಆ ಬಗ್ಗೆ ಮಾತನಾಡಿದ್ದೇವೆಯಷ್ಟೇ. ಇನ್ನೂ ಫೈನಲ್ ಆಗಿಲ್ಲ ಎನ್ನುವ ಮೂಲಕ ಒಂದು ಕೋಟಿ ರೂಪಾಯಿ ಸಂಭಾವನೆ ಬಹುತೇಕ ಖಚಿತವಾಗಿದೆ. ಬಿಗ್ಬಾಸ್ನಲ್ಲಿ 50 ಲಕ್ಷ ರೂಪಾಯಿ ಗೆದ್ದ ಬಳಿಕ (ತೆರಿಗೆ ಕಳೆದು ಸಿಕ್ಕಿದ್ದು 35 ಲಕ್ಷ ರೂ) ಈಗ ಒಂದು ಕೋಟಿಗೆ ಏರಿದ್ದಾರೆ ಗಿಲ್ಲಿ ನಟ.
ಗಿಲ್ಲಿ-ನಿರ್ದೇಶಕರ ಸಂಭಾಷಣೆ
ಮೊನ್ನೆ ತಮ್ಮ ಸಿನಿಮಾದ ಬಗ್ಗೆ ಹೇಳುವಾಗ, ಗಿಲ್ಲಿ ನಟ ಮತ್ತು ನಿರ್ದೇಶಕರ ನಡುವೆ ಸಂಭಾಷಣೆ ನಡೆದಿತ್ತು. ಆಗ ನಿರ್ದೇಶಕರು ನಾವು ಪ್ಯಾನ್ ಇಂಡಿಯಾ ಸಿನಿಮಾ ಮಾಡೋಣ ಎಂದು ಹೇಳಿದ್ದರು. ಆಗ ಗಿಲ್ಲಿ ನಟ ಪ್ಯಾನ್ ಇಂಡಿಯಾ ಸಿನಿಮಾ ಬೇಡ, ಪ್ಯಾನ್ ಕರ್ನಾಟಕ ಸಿನಿಮಾ ಮಾಡೋಣ 4 ಭಾಷೆಗಳಲ್ಲಿ ಎಂದು ಗಿಲ್ಲಿ ನಟ ನಿರ್ದೆಶಕರಿಗೆ ಸಲಹೆ ನೀಡುತ್ತಾರೆ. ಆಗ ಕರ್ನಾಟಕದಲ್ಲಿ ಯಾವ ನಾಲ್ಕು ಭಾಷೆಗಳಿವೆ ಎಂದು ಕೇಳಿದಾಗ ಮಂಡ್ಯ, ಮಂಗಳೂರು, ಬೆಂಗಳೂರು ಮತ್ತು ಉತ್ತರ ಕರ್ನಾಟಕ ಭಾಷೆಗಳನ್ನು ಹೇಳುತ್ತಾರೆ.
ಶೂಟಿಂಗ್ ಎಲ್ಲಿ
ಶೂಟಿಂಗ್ ಎಲ್ಲಿ ಎಂದು ಕೇಳಿದಾಗ ನಿರ್ದೇಶಕರು, ರಾಮನಗರ, ಚನ್ನಪಟ್ಟಣದಲ್ಲಿ ಸಿನಿಮಾ ಶೂಟಿಂಗ್ ಮಾಡೋಣ ಎಂದು ಹೇಳುತ್ತಾರೆ. ಆಗ ಗಿಲ್ಲಿನಟ ಫಾರಿನ್‌ಗೆ ಹೋಗೋಣ ಎನ್ನುತ್ತಾರೆ. ಡೈರೆಕ್ಟರ್ ಅವರು ಬೇರೆ ದೇಶದವರಿಗೆ ನಮ್ಮ ದೇಶ ಫಾರಿನ್ ಆಗುತ್ತಲ್ವಾ ಸರ್, ಇಲ್ಲಿಯೇ ಶೂಟಿಂಗ್ ಮಾಡೋಣ ಎಂದು ಗಿಲ್ಲಿ ಹೇಳಿದ ಪಾಯಿಂಟ್ ಅನ್ನು ವಾಪಸ್ ಹೇಳಿ ಟಾಂಗ್ ಕೊಡ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

