- Home
- Entertainment
- TV Talk
- ಗಿಲ್ಲಿ ಹೆಸರು ಹೇಳುತ್ತಲೇ ಕಣ್ಣೀರು: ಅಯ್ಯೋ ನಾನು ಅದಕ್ಕೆ ಅತ್ತಿಲ್ಲಾರಿ ಎಂದು ಸುಳ್ಳು ಹೇಳಿದ್ರಾ ರಕ್ಷಿತಾ ಶೆಟ್ಟಿ
ಗಿಲ್ಲಿ ಹೆಸರು ಹೇಳುತ್ತಲೇ ಕಣ್ಣೀರು: ಅಯ್ಯೋ ನಾನು ಅದಕ್ಕೆ ಅತ್ತಿಲ್ಲಾರಿ ಎಂದು ಸುಳ್ಳು ಹೇಳಿದ್ರಾ ರಕ್ಷಿತಾ ಶೆಟ್ಟಿ
ಬಿಗ್ಬಾಸ್ 12 ಖ್ಯಾತಿಯ ರಕ್ಷಿತಾ ಶೆಟ್ಟಿ, 'ಕ್ವಾಟ್ಲೆ ಕಿಚನ್-2' ಶೂಟಿಂಗ್ ವೇಳೆ ಗಿಲ್ಲಿ ನಟನನ್ನು ನೆನೆದು ಕಣ್ಣೀರು ಹಾಕಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ತಾವು ಅತ್ತಿದ್ದು ವೈಯಕ್ತಿಕ ಕಾರಣ ಮತ್ತು ಶೂಟಿಂಗ್ ಒತ್ತಡದಿಂದ, ಗಿಲ್ಲಿ ನೆನಪಿಸಿಕೊಂಡು ಅಲ್ಲ ಎಂದು ರಕ್ಷಿತಾ ಸ್ಪಷ್ಟನೆ ನೀಡಿದ್ದಾರೆ

ಗಿಲ್ಲಿಯಂಥ ಗಂಡ ಬೇಕು
ಬಿಗ್ಬಾಸ್ 12 (Bigg Boss 12)ರಲ್ಲಿ ತುಂಬಾ ಸೌಂಡ್ ಮಾಡಿದವರಲ್ಲಿ ಗಿಲ್ಲಿ ನಟನ ಜೊತೆ ರಕ್ಷಿತಾ ಶೆಟ್ಟಿ ಕೂಡ ಒಬ್ಬರು. ರನ್ನರ್ ಅಪ್ ಆಗುವವರೆಗಿನ ರಕ್ಷಿತಾ ಶೆಟ್ಟಿ ಪಯಣ ತುಂಬಾ ಕುತೂಹಲವಾಗಿತ್ತು. ಒಂದು ಹಂತದಲ್ಲಿ ರಕ್ಷಿತಾ ಗಿಲ್ಲಿ ನಟನ ಮೇಲೆ ತುಸು ಹೆಚ್ಚಿಗೆ ಎನ್ನಿಸುವಷ್ಟು ಪೊಸೆಸಿವ್ ಆಗಿದ್ದಾರೆ ಎಂದು ಎನ್ನಿಸಿದ್ದೂ ಉಂಟು. ತಮಗೆ ಗಿಲ್ಲಿಯಂಥ ಗಂಡ ಬೇಕು ಎಂದು ಹೇಳುವ ಮೂಲಕ ಇದಕ್ಕೆ ಇನ್ನಷ್ಟು ಪುಷ್ಟಿ ನೀಡಿದ್ದರು.
ರಕ್ಷಿತಾ ಶೆಟ್ಟಿಗೂ ಸಕತ್ ಡಿಮಾಂಡ್
ಆದರೆ ಬಿಗ್ಬಾಸ್ ಮುಗಿದ ಮೇಲೆ ಬಿಗ್ಬಾಸ್ ಮನೆಯೊಳಗಿನ ವಿಷ್ಯಗಳು ಅಲ್ಲಿಗೇ ತಣ್ಣಗಾದರೂ ಕೆಲವೊಂದು ಬಿಗ್ಬಾಸ್ ಮನೆಯ ಹೊರಕ್ಕೂ ಮುಂದುವರೆಯುವುದು ಇದೆ. ಇದೀಗ ರಕ್ಷಿತಾ ಶೆಟ್ಟಿಗೂ ಸಕತ್ ಡಿಮಾಂಡ್ ಬರುತ್ತಿದ್ದು, ಕ್ವಾಟ್ಲೆ ಕಿಚನ್-2 ನಲ್ಲಿ ಕಾಣಿಸಿಕೊಂಡು ಸಕತ್ ಎಂಟರ್ಟೈನ್ ಮಾಡುತ್ತಿದ್ದಾರೆ.
ಗಿಲ್ಲಿ ನಟನ ನೆನೆದು ಕಣ್ಣೀರು?
ಆದರೆ ಈ ಶೂಟಿಂಗ್ ಸೆಟ್‌ನಲ್ಲಿ ರಕ್ಷಿತಾ ಶೆಟ್ಟಿ ಬಿಗ್ಬಾಸ್ ಗಿಲ್ಲಿ ನಟನ ಹೆಸರು ಹೇಳುತ್ತಲೇ ಕಣ್ಣೀರಾಗಿದ್ದರು. ತುಂಬಾಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದರು. ಆದರೆ ಇದನ್ನು ಕೆಲವರು ಅಪಾರ್ಥ ಮಾಡಿಕೊಂಡಿದ್ದರೆ, ಮತ್ತೆ ಕೆಲವರು ರಕ್ಷಿತಾ ನಿಜಕ್ಕೂ ಗಿಲ್ಲಿ ನಟನನ್ನು ಮಿಸ್ ಮಾಡಿಕೊಳ್ತಿದ್ದಾರೆ ಎಂದವರು ಇದ್ದಾರೆ.
ರಕ್ಷಿತಾ ಸಮಜಾಯಿಷಿ
ಈ ಬಗ್ಗೆ ಖುದ್ದು ರಕ್ಷಿತಾ ಶೆಟ್ಟಿ ಸಂದರ್ಶನದಲ್ಲಿ ಸಮಜಾಯಿಷಿ ಕೊಟ್ಟರು. ನೀವು ಅಂದುಕೊಂಡ ಹಾಗೇನೂ ಇಲ್ಲ. ನಿಮಗೆ ಗೊತ್ತಲ್ವಾ, ನಾನು ಚಿಕ್ಕ ಚಿಕ್ಕ ವಿಷಯಕ್ಕೆ ತುಂಬಾ ಎಮೋಷನಲ್ ಆಗ್ತೇನೆ. ನನಗೆ ಸೆಟ್‌ನಲ್ಲಿ ಸ್ವಲ್ಪ ಮೂಡ್ ಆಫ್ ಆಗಿತ್ತು. ಯಾರಾದರೂ ಏನಾದರೂ ಹೇಳಿದ್ರೆ, ನಾನು ಕಣ್ಣೀರಿಡ್ತಿದ್ದೆ. ಅಷ್ಟು ದುಃಖದಲ್ಲಿದ್ದೆ ನಾನು. ಅದು ನನ್ನ ಪರ್ಸನಲ್, ಅದು ಬೇರೆನೇ ವಿಷಯ. ಗಿಲ್ಲಿನ ಮಿಸ್ ಮಾಡಿಕೊಂಡು, ನೆನಪಿಸಿಕೊಂಡು ನಾನು ಅತ್ತಿಲ್ಲ ಎಂದರು.
ಏನಂದ್ರು ರಕ್ಷಿತಾ?
ಕ್ವಾಟ್ಲೆ ಕಿಚನ್ ಶೂಟಿಂಗ್‌ನಲ್ಲಿ ಇಡೀ ದಿನ ನಿಂತುಕೊಂಡಿರ್ತೇವೆ. ಅದೇ ಸುಸ್ತು, ಪ್ರೆಶರ್‌ನಲ್ಲಿದ್ದೆ ನಾನು. ಬಿಗ್ ಬಾಸ್ ಬಗ್ಗೆ ಕೇಳಿದಾಗ ನನಗೆ ಸ್ವಲ್ಪ ಎಮೋಷನಲ್ ಆಯ್ತು. ಅದಕ್ಕೆ ನಾನು ಅತ್ತೆ. ಬಿಟ್ರೆ ಬೇರೇ ಏನೂ ಇಲ್ಲ ಎಂದು ರಕ್ಷಿತಾ ಶೆಟ್ಟಿ ಹೇಳಿಕೊಂಡಿದ್ದಾರೆ.
ಫ್ಯಾನ್ಸ್ ಹೇಳಿದ್ದೇ ಬೇರೆ
ಆದರೆ ಇದನ್ನು ಅವರ ಫ್ಯಾನ್ಸ್ ಒಪ್ಪುತ್ತಿಲ್ಲ. ನಿಜಕ್ಕೂ ಗಿಲ್ಲಿ ನಟನನ್ನು ನೆನಪಿಸಿಕೊಂಡು ರಕ್ಷಿತಾ ಅತ್ತಿದ್ದು ಎನ್ನುತ್ತಿದ್ದಾರೆ. ಗಿಲ್ಲಿ ನಟನಿಗೆ ಯಾವಾಗಾದ್ರೂ ಕಾಲ್ಮಾಡಿದ್ರಾ, ಬರ್ತ್ಡೇಗೆ ವಿಷ್ ಮಾಡಿದ್ರಾ ಎಂದಾಗ, ರಕ್ಷಿತಾ ಇಲ್ಲ, ಅವರು ಬಿಜಿ ಇರೋದ್ದರಿಂದ ಮಾಡಿಲ್ಲ. ಆಮೇಲೆ ಮಾಡ್ತೇನೆ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

