- Home
- Entertainment
- TV Talk
- Bigg Boss ಗಿಲ್ಲಿಗೆ ಶುಕ್ರದೆಸೆ: ಸಿನಿಮಾ ಅಪ್ಡೇಟ್ ಬೆನ್ನಲ್ಲೇ ಒಲಿದು ಬಂದ ಇನ್ನೊಂದು ಪ್ರಶಸ್ತಿ
Bigg Boss ಗಿಲ್ಲಿಗೆ ಶುಕ್ರದೆಸೆ: ಸಿನಿಮಾ ಅಪ್ಡೇಟ್ ಬೆನ್ನಲ್ಲೇ ಒಲಿದು ಬಂದ ಇನ್ನೊಂದು ಪ್ರಶಸ್ತಿ
ಬಿಗ್ ಬಾಸ್ ಸೀಸನ್ 12ರ ವಿಜೇತ ಗಿಲ್ಲಿ ನಟ ಅವರಿಗೆ ಕೆವಿಎನ್ ಪ್ರೊಡಕ್ಷನ್ ನಿರ್ಮಾಣದ ಸಿನಿಮಾದಲ್ಲಿ ನಾಯಕನಾಗಿ ನಟಿಸುವ ಅವಕಾಶ ಸಿಕ್ಕಿದೆ. ಇದರ ಜೊತೆಗೆ, ಅವರಿಗೆ 'ಚಿತ್ತಾರಾ ಅವಾರ್ಡ್ಸ್'ನಲ್ಲಿ 'ಎಂಟರ್‌ಟೇನ್‌ಮೆಂಟ್ ಆಫ್ ದಿ ಇಯರ್' ಪ್ರಶಸ್ತಿಯೂ ಲಭಿಸಿದ್ದು, ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

ನಟನಾಗಿ ಅವಕಾಶ
ಬಿಗ್ ಬಾಸ್ ಸೀಸನ್ 12ರ ವಿಜೇತ ಹಾಸ್ಯನಟ ನಟರಾಜ್ ಅಲಿಯಾಸ್ ಗಿಲ್ಲಿ ನಟ ಅವರು ಇದೀಗ ತಾವು ಬೆಂಗಳೂರಿಗೆ ಬಂದಿದ್ದ ಕನಸನ್ನು ಈಡೇರಿಸಿಕೊಳ್ಳಲು ಮುಂದಾಗಿದ್ದಾರೆ. ಸಿನಿಮಾದಲ್ಲಿ ನಾಯಕ ನಟನಾಗಿ ಅವಕಾಶ ಸಿಕ್ಕಿದ್ದು, ಇದೇ ಜೂ.21ರಂದು ಗಿಲ್ಲಿ ಟವರ ಜನ್ಮದಿನದಂದೇ ಸಿನಿಮಾ ಮುಹೂರ್ತ ಇಟ್ಟುಕೊಳ್ಳಲಾಗಿದೆ.
ಕೆವಿಎನ್ ಪ್ರೊಡಕ್ಷನ್ನಲ್ಲಿ ನಟನೆ
ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಪ್ರೊಡಕ್ಷನ್ ಸಂಸ್ಥೆಯಾದ ಹಾಗೂ ವಿವಿಧ ಭಾಷೆಗಳಲ್ಲಿ ನೂರಾರು ಕೋಟಿ ಬಜೆಟ್ ಹಾಕಿ ಸಿನಿಮಾ ನಿರ್ಮಾಣ ಮಾಡುವ ಕೆವಿಎನ್ ಪ್ರೊಡಕ್ಷನ್ ಗಿಲ್ಲಿ ನಟನೆಯ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಗಿಲ್ಲಿ ನಟ ಸಿನಿಮಾಗೆ ನಾಯಕನಾಗಿ ಆಯ್ಕೆಯಾಗಿದ್ದು, ಸದ್ಯಕ್ಕೆ ಪ್ಯಾನ್ ಇಂಡಿಯಾ ನಟಿ ಶ್ರೀಲೀಲಾ ಅವರನ್ನು ಹೀರೋಯಿನ್ ಆಗಿ ಸೆಲೆಕ್ಟ್ ಮಾಡಲಾಗಿದೆ.
ಈಗ ಮತ್ತೊಂದು ಅವಾರ್ಡ್
ಇದರ ಬೆನ್ನಲ್ಲೇ ಗಿಲ್ಲಿ ನಟ (Bigg Boss Gilli Nata)ನಿಗೆ ಈಗ ಇನ್ನೊಂದು ಪ್ರಶಸ್ತಿ ಒಲಿದು ಬಂದಿದೆ. ಅದು ಚಿತ್ತಾರಾ ಅವಾರ್ಡ್ಸ್. ಗಿಲ್ಲಿನಟ ಅವರಿಗೆ ಎಂಟರ್ಟೇನರ್ ಆಫ್ ದಿ ಇಯರ್ ಅವಾರ್ಡ್ ಸಿಕ್ಕಿದೆ.
ವಿಟಿ ಹಾಕಿ ಎಂದ ಗಿಲ್ಲಿ
ಅಲ್ಲಿಯೂ ಗಿಲ್ಲಿ ಹಾಸ್ಯ ಮರೆತಿಲ್ಲ. ನನ್ನ ವಿಟಿಯನ್ನೇ ಹಾಕಿಲ್ಲ ಎಂದು ಆ್ಯಂಕರ್ ಅಕುಲ್ ಅವರನ್ನು ಕೇಳಿದ್ದಾರೆ. ಆಗ ಅಕುಲ್ ಅವರು, ನೀವೇ ಬಂದ ಮೇಲೆ ವಿಟಿ ಯಾಕೆ? ನಿಮ್ಮ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ ಎಂದಾಗ ನಾಚಿಕೊಂಡಿದ್ದಾರೆ ಗಿಲ್ಲಿ.
ರಿಷಬ್ ಶೆಟ್ಟಿ ಬಳಿ ಅವಕಾಶ
ಅಷ್ಟಕ್ಕೂ ಗಿಲ್ಲಿನಟ ಇದಾಗಲೇ ವೇದಿಕೆ ಮೇಲೆ ರಿಷಬ್ ಶೆಟ್ಟಿ ಅವರಿಗೆ ಸಿನಿಮಾದಲ್ಲಿ ಅವಕಾಶ ಕೇಳಿಯೂ ಸಕತ್ ಸೌಂಡ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಗಿಲ್ಲಿ ನಟನಿಗೆ ಒಂದರ ಮೇಲೊಂದರಂತೆ ಅವಕಾಶಗಳು ಸಿಗುತ್ತಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

