- Home
- Entertainment
- TV Talk
- ಬಿಗ್ ಬಾಸ್ ವಿನ್ನರ್, 5 ಜನ ರನ್ನರ್ ಪಟ್ಟಿ ರಿವೀಲ್; ಗಿಲ್ಲಿ ನಟನ ಬ್ಯಾನರ್‌ಗೆ ಹಾಲಿನ ಅಭಿಷೇಕ ಮಾಡಿ ಸಂಭ್ರಮ!
ಬಿಗ್ ಬಾಸ್ ವಿನ್ನರ್, 5 ಜನ ರನ್ನರ್ ಪಟ್ಟಿ ರಿವೀಲ್; ಗಿಲ್ಲಿ ನಟನ ಬ್ಯಾನರ್‌ಗೆ ಹಾಲಿನ ಅಭಿಷೇಕ ಮಾಡಿ ಸಂಭ್ರಮ!
ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಫಿನಾಲೆಗೂ ಮುನ್ನವೇ, ಗಿಲ್ಲಿ ನಟ ಅವರೇ ವಿಜೇತರು ಎಂದು ಅಭಿಮಾನಿಗಳು ಬಿಡದಿಯ ಜಾಲಿವುಡ್ ಸ್ಟುಡಿಯೋ ಬಳಿ ಸಂಭ್ರಮಾಚರಣೆ ಆರಂಭಿಸಿದ್ದಾರೆ. ಗಿಲ್ಲಿ ನಟರ ಬ್ಯಾನರ್‌ಗಳಿಗೆ ಹಾಲಿನ ಅಭಿಷೇಕ ಮಾಡಿ, ವಿಜಯೋತ್ಸವ ಆಚರಿಸಲಾಗುತ್ತಿದ್ದುದ್ದಾರೆ.

ಬೆಂಗಳೂರು (ಜ.18): ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಫಿನಾಲೆ ಕ್ಷಣಗಣನೆ ಆರಂಭವಾಗಿದ್ದು, ಬಿಡದಿಯ ಜಾಲಿವುಡ್ ಸ್ಟುಡಿಯೋ ಆವರಣದಲ್ಲಿ ಅಭಿಮಾನಿಗಳ ಸಂಭ್ರಮ ಮಿತಿಮೀರಿದೆ. ಬಿಗ್ ಬಾಸ್ ವಿನ್ನರ್ ಯಾರೆಂಬುದು ಬಹಿರಂಗವಾಗಿದೆ, ಗಿಲ್ಲಿ ನಟ ಅವರೇ ವಿಜೇತರು ಎಂದು ಅವರ ಅಭಿಮಾನಿಗಳು ಬ್ಯಾನರ್‌ಗಳಿಗೆ ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸುತ್ತಿದ್ದಾರೆ.
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ 12ರ ವಿಜೇತ ಯಾರು ಎನ್ನುವ ಕುತೂಹಲಕ್ಕೆ ಕ್ಷಣಗಣನೆ ಶುರುವಾಗಿದೆ. ಬಿಡದಿಯ ಜಾಲಿವುಡ್ ಸ್ಟುಡಿಯೋದಲ್ಲಿರುವ ಬಿಗ್ ಬಾಸ್ ಮನೆಯ ಮುಂದೆ ಇದೀಗ ಸಾವಿರಾರು ಸಂಖ್ಯೆಯಲ್ಲಿ ಜನಸಾಗರವೇ ಹರಿದುಬಂದಿದ್ದು, ತಮ್ಮ ನೆಚ್ಚಿನ ಸ್ಪರ್ಧಿಗಳ ಪರವಾಗಿ ಜೈಕಾರ ಕೂಗುತ್ತಾ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಬಿಗ್ ಬಾಸ್ ಟ್ರೋಫಿ ಯಾರ ಪಾಲಾಗಲಿದೆ ಎಂಬುದು ಈವರೆಗೆ ಅಧಿಕೃತವಾಗಿ ಬಹಿರಂಗವಾಗಿಲ್ಲ.
ಆದರೂ, ಸಾಮಾಜಿಕ ಜಾಲತಾಣದ ಟ್ರೆಂಡ್ ಹಾಗೂ ಅಭಿಮಾನಿಗಳ ಅಬ್ಬರ ನೋಡಿದರೆ 'ಗಿಲ್ಲಿ ನಟ ಅವರೇ ವಿನ್ನರ್' ಎಂದು ಅವರ ಬೆಂಬಲಿಗರು ಈಗಲೇ ಸಂಭ್ರಮಾಚರಣೆ ಆರಂಭಿಸಿದ್ದಾರೆ. ಸ್ಟುಡಿಯೋ ಮುಂಭಾಗದಲ್ಲಿ ಗಿಲ್ಲಿ ನಟನ ಬ್ಯಾನರ್‌ಗಳಿಗೆ ಹಾಲಿನ ಅಭಿಷೇಕ ಮಾಡಿ, ಹೂವಿನ ಹಾರ ಹಾಕಿ ಹರ್ಷೋದ್ಗಾರ ಮಾಡಲಾಗುತ್ತಿದೆ. ಗಿಲ್ಲಿಯ ಫೇಮಸ್ ಡೈಲಾಗ್‌ಗಳನ್ನು ಹೇಳುತ್ತಾ ಅಭಿಮಾನಿಗಳು ಕುಣಿದು ಕುಪ್ಪಳಿಸುತ್ತಿದ್ದಾರೆ.
ಈವರೆಗಿನ ಮಾಹಿತಿ ಹಾಗೂ ಮೂಲಗಳ ಪ್ರಕಾರ, ಬಿಗ್ ಬಾಸ್ ಮನೆಯ ಅಗ್ರ ಆರು ಸ್ಪರ್ಧಿಗಳ ಶ್ರೇಯಾಂಕದ ಬಗ್ಗೆ ಕೆಲವು ಮಾಹಿತಿಗಳು ಲಭ್ಯವಾಗುತ್ತಿವೆ. ಮ್ಯೂಟೆಂಟ್ ರಘು ಅವರು 6ನೇ ಸ್ಥಾನವನ್ನು ಪಡೆದಿದ್ದಾರೆ ಎನ್ನಲಾಗುತ್ತಿದೆ. ಇನ್ನುಳಿದಂತೆ 5ನೇ ಸ್ಥಾನಕ್ಕೆ ಧನುಷ್ ಗೌಡ, 4ನೇ ಸ್ಥಾನಕ್ಕೆ ರಕ್ಷಿತಾ ಶೆಟ್ಟಿ ಹಾಗೂ 3ನೇ ಸ್ಥಾನವನ್ನು ಕಾವ್ಯಾ ಶೈವ ಅವರು ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಅಂತಿಮವಾಗಿ ವಿನ್ನರ್ ಮತ್ತು ರನ್ನರ್ ಸ್ಥಾನಕ್ಕಾಗಿ ಗಿಲ್ಲಿ ನಟ ಹಾಗೂ ಅಶ್ವಿನಿ ಗೌಡ ನಡುವೆ ಪೈಪೋಟಿ ಇದ್ದು, ಗಿಲ್ಲಿ ನಟ ವಿನ್ನರ್ ಆಗಲಿದ್ದಾರೆ ಮತ್ತು ಅಶ್ವಿನಿ ಗೌಡ ರನ್ನರ್ ಅಪ್ ಆಗಲಿದ್ದಾರೆ ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ. ಆದರೆ ಇದು ಅಧಿಕೃತ ಮಾಹಿತಿಯಲ್ಲ.
ಬೆಳಿಗ್ಗೆಯಿಂದಲೇ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಜನರು ಜಾಲಿವುಡ್ ಸ್ಟುಡಿಯೋ ಮುಂದೆ ಜಮಾಯಿಸಿದ್ದಾರೆ. ಸಿಕ್ಕ ಸಿಕ್ಕ ಜಾಗಗಳಲ್ಲೆಲ್ಲಾ ಕಟೌಟ್ ಮತ್ತು ಬ್ಯಾನರ್‌ಗಳನ್ನು ಕಟ್ಟಲಾಗುತ್ತಿದೆ. 'ಗಿಲ್ಲಿ ನಟ ಅವರೇ ಗೆಲುವು ಸಾಧಿಸಲಿದ್ದಾರೆ, ಅವರು ಎಷ್ಟು ಗಂಟೆಗೆ ಹೊರಗೆ ಬಂದರೂ ನಾವು ಅವರನ್ನು ಮಾತನಾಡಿಸಿಯೇ ಊರಿಗೆ ಹೋಗುತ್ತೇವೆ' ಎಂದು ಅಭಿಮಾನಿಗಳು ಹಠ ಹಿಡಿದಿದ್ದಾರೆ. ಜನಸಂದಣಿಯನ್ನು ನಿಯಂತ್ರಿಸಲು ಸ್ಟುಡಿಯೋ ಸುತ್ತಲೂ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದ್ದು, ಗೇಟಿನ ಮುಂದೆ ಸರ್ಪಗಾವಲು ನಿರ್ಮಿಸಲಾಗಿದೆ.
ಕೇವಲ ಗಿಲ್ಲಿ ಮಾತ್ರವಲ್ಲದೆ ಅಶ್ವಿನಿ ಗೌಡ, ರಘು ಹಾಗೂ ಕಾವ್ಯಾ ಅವರ ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ಸ್ಪರ್ಧಿಗಳ ಪರ ಘೋಷಣೆ ಕೂಗುತ್ತಿರುವುದು ಫಿನಾಲೆಯ ರಂಗನ್ನು ಮತ್ತಷ್ಟು ಹೆಚ್ಚಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

