- Home
- Entertainment
- TV Talk
- ಬಿಗ್ ಬಾಸ್ ಖ್ಯಾತಿಯ ನಟಿ ಮನೆ ಕಳ್ಳತನ; ಅಕ್ಕನ ಮದುವೆಗೆ ಕೂಡಿಟ್ಟಿದ್ದ ಹಣವನ್ನೆಲ್ಲಾ ದೋಚಿದ ಕಳ್ಳರು!
ಬಿಗ್ ಬಾಸ್ ಖ್ಯಾತಿಯ ನಟಿ ಮನೆ ಕಳ್ಳತನ; ಅಕ್ಕನ ಮದುವೆಗೆ ಕೂಡಿಟ್ಟಿದ್ದ ಹಣವನ್ನೆಲ್ಲಾ ದೋಚಿದ ಕಳ್ಳರು!
ಬಿಗ್ ಬಾಸ್ ಖ್ಯಾತಿಯ ನಟಿಯ ಮನೆಯಲ್ಲಿ ದೊಡ್ಡ ಮಟ್ಟದ ಕಳ್ಳತನವಾಗಿದ್ದು, ಬೆಲೆಬಾಳುವ ವಸ್ತುಗಳು ಮತ್ತು ಹಣ ಕಾಣೆಯಾಗಿದೆ. ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಗ್ ಬಾಸ್ ಖ್ಯಾತಿಯ ನಟಿಯ ಮನೆಯಲ್ಲಿ ದೊಡ್ಡ ಮಟ್ಟದ ಕಳ್ಳತನವಾಗಿದೆ. ಈ ಘಟನೆಯಿಂದ ಬೆಚ್ಚಿಬಿದ್ದಿರುವ ನಟಿ ತಮ್ಮ ಮನೆಯ ಗೇಟ್ ಹಾಗೂ ಬಾಗಿಲುಗಳನ್ನು ಮುರಿದು ಕಳ್ಳತನ ಮಾಡಲಾಗಿದೆ ಎಂದು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ವಿಚಾರವನ್ನು ಹಂಚಿಕೊಂಡಿದ್ದಾರೆ.
ಹಿಂದಿ 'ಬಿಗ್ ಬಾಸ್ 11'ರಲ್ಲಿ ಕಾಣಿಸಿಕೊಂಡಿದ್ದ ಬಂದಗಿ ಕಾಲ್ರಾ (Bandgee Kallra) ಈಗ ಸುದ್ದಿಯಲ್ಲಿದ್ದಾರೆ. ಅವರ ಮನೆಯಲ್ಲಿ ದೊಡ್ಡ ಕಳ್ಳತನವಾಗಿದೆ. ಈ ವಿಷಯವನ್ನು ಬಂದಗಿ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿ ಹಂಚಿಕೊಳ್ಳುವ ಮೂಲಕ ತಿಳಿಸಿದ್ದಾರೆ. ಅಲ್ಲದೆ, ಪೊಲೀಸ್ ವ್ಯವಸ್ಥೆಯ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿದ್ದಾರೆ. ಏಕೆಂದರೆ ಮನೆ ಕಳ್ಳತನವಾಗಿ ದೂರು ದಾಖಲಿಸಿ 30 ಗಂಟೆಗಳು ಕಳೆದ ನಂತರವೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಏನಿದು ಪ್ರಕರಣ?
ಬಿಗ್ ಬಾಸ್ ಖ್ಯಾತಿಯ ನಟಿ ಬಂದಗಿ ಕಾಲ್ರಾ ಅವರು, 'ನಾನು ನಿನ್ನೆ ಮನೆಗೆ ಬಂದಾಗ, ಮನೆಯಲ್ಲಿ ಕಳ್ಳತನವಾಗಿರುವುದು ಕಂಡುಬಂದಿದೆ. ಮನೆಯೆಲ್ಲಾ ಚೆಲ್ಲಾಪಿಲ್ಲಿಯಾಗಿತ್ತು. ಬೆಲೆಬಾಳುವ ವಸ್ತುಗಳು ಮತ್ತು ಹಣ ಕಾಣೆಯಾಗಿದೆ, ಈ ಹಣವನ್ನು ನನ್ನ ತಂಗಿಯ ಮದುವೆಗೆ ಇಡಲಾಗಿತ್ತು. ಮನೆಯಲ್ಲಿ ಸಾಕಷ್ಟು ಹಣ ನಗದು ರೂಪದಲ್ಲಿತ್ತು. ಮನೆಯಿಂದ ಎಸ್‌ಡಿ ಕಾರ್ಡ್ ಇದ್ದ ಕ್ಯಾಮೆರಾ ಕಳುವಾಗಿದೆ. ಮನೆಯ ಎರಡೂ ಬಾಗಿಲುಗಳು ಮುರಿದಿವೆ. ಯಾರಿಗೂ ಏನೂ ತಿಳಿದಿಲ್ಲ’ ಎಂದು ಬರೆದುಕೊಂಡು ಪೋಸ್ಟ್ ಮಾಡಿಕೊಂಡಿದ್ದಾರೆ.
ಇದರ ಜೊತೆಗೆ ಪೊಲೀಸ್ ಆಡಳಿತವನ್ನು ತರಾಟೆಗೆ ತೆಗೆದುಕೊಂಡ ಅವರು, 'ನಮ್ಮ ವ್ಯವಸ್ಥೆ ಎಷ್ಟು ಕೆಟ್ಟದಾಗಿದೆ ಎಂದರೆ, ಜನರು ಕ್ರಮ ಕೈಗೊಳ್ಳುವ ಬದಲು ಮಜಾ ಮಾಡುತ್ತಿದ್ದಾರೆ. ನಾನು ಶೀಘ್ರದಲ್ಲೇ ವಿಡಿಯೋ ಮಾಡಿ ಎಲ್ಲವನ್ನೂ ಹೇಳುತ್ತೇನೆ' ಎಂದಿದ್ದಾರೆ.
ಪೊಲೀಸರಿಂದ ಸಹಾಯ ಸಿಕ್ಕಿಲ್ಲ:
ಮತ್ತೊಂದು ಪೋಸ್ಟ್ ಹಂಚಿಕೊಂಡಿರುವ ನಟಿ, ‘ನಾನು ಇಷ್ಟೊಂದು ಅಸಹಾಯಕಳಾಗಿದ್ದೇನೆ ಎಂದು ಯಾವತ್ತೂ ಭಾವಿಸಿರಲಿಲ್ಲ. ಈ ವ್ಯವಸ್ಥೆಯಿಂದ ನಾನು ತುಂಬಾ ನಿರಾಶೆಗೊಂಡಿದ್ದೇನೆ. ಹೀಗಾಗುತ್ತದೆ ಎಂದು ಕೆಲವರಿಂದ ನನಗೆ ತಿಳಿದಿತ್ತು, ಆದರೆ ಈಗ ನಾನು ಅದನ್ನು ಎದುರಿಸುತ್ತಿದ್ದೇನೆ. ಇದರ ನಂತರವೂ ಜನರು, ನೀವು ಭಾರತದಿಂದ ಹೊರಗೆ ಏಕೆ ಹೋಗಬೇಕಿತ್ತು ಎಂದು ಕೇಳುತ್ತಾರೆ. ಕಳ್ಳತನದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ಸುಮಾರು 30 ಗಂಟೆಗಳಾಗಿವೆ, ಆದರೆ ಏನೂ ಕ್ರಮವಾಗಿಲ್ಲ' ಎಂದು ಬರೆದು ಪೋಸ್ಟ್ ಹಂಚಿಕೊಂಡಿದ್ದಾರೆ.
ಬಂದಗಿ ಕಾಲ್ರಾ ಅವರು ಸಾಫ್ಟ್‌ವೇರ್ ಎಂಜಿನಿಯರ್ ಜೊತೆಗೆ ಮಾಡೆಲ್ ಮತ್ತು ಸೋಶಿಯಲ್ ಇನ್ಫ್ಲುಯೆನ್ಸರ್ ಕೂಡ ಆಗಿದ್ದಾರೆ. 2017ರಲ್ಲಿ ಹಿಂದ ಭಾಷೆಯ ಬಿಗ್ ಬಾಸ್ 11ರಲ್ಲಿ ಬಂದ ನಂತರ ಅವರು ಹೆಚ್ಚು ಜನಪ್ರಿಯರಾದರು. ಅವರು ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಫ್ಯಾಷನ್ ಮತ್ತು ಲೈಫ್‌ಸ್ಟೈಲ್ ವಿಷಯಕ್ಕೆ ಹೆಸರುವಾಸಿಯಾಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಈ ನಟಿಗೆ ಬರೋಬ್ಬರಿ 1.1 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್‌ಗಳಿದ್ದಾರೆ.