- Home
- Entertainment
- Sandalwood
- ತನಿಷಾ ಕುಪ್ಪಂಡ ಜೊತೆ ಡೀಪ್ ರೊಮ್ಯಾನ್ಸ್ ಮಾಡೋಕಾಗದೆ ಓಡಿ ಹೋಗಿದ್ದೆ: Bigg Boss ಕಿಶನ್ ಬಿಳಗಲಿ!
ತನಿಷಾ ಕುಪ್ಪಂಡ ಜೊತೆ ಡೀಪ್ ರೊಮ್ಯಾನ್ಸ್ ಮಾಡೋಕಾಗದೆ ಓಡಿ ಹೋಗಿದ್ದೆ: Bigg Boss ಕಿಶನ್ ಬಿಳಗಲಿ!
ಬಿಗ್ ಬಾಸ್ ಖ್ಯಾತಿಯ ಕಿಶನ್ ಬಿಳಗಲಿ ಹಾಗೂ ತನಿಷಾ ಕುಪ್ಪಂಡ ಅವರು ʼಪೆನ್‌ಡ್ರೈವ್ʼ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಬಗ್ಗೆ ಇವರಿಬ್ಬರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.

ಈ ಸಿನಿಮಾದಲ್ಲಿ ತನಿಷಾ ಕುಪ್ಪಂಡ, ಕಿಶನ್ ಬಿಳಗಲಿ, ಕನಸಿನ ರಾಣಿ ಮಾಲಾಶ್ರೀ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ. ಆರ್ ಎಚ್ ಎಂಟರ್ ಪ್ರೈಸಸ್, ಶ್ರೀತಿರುಮಲ ಸಿನಿ ಎಂಟರ್ಟೈನ್ಮೆಂಟ್ ಅರ್ಪಿಸುವ, ಎನ್ ಹನುಮಂತರಾಜು, ಲಯನ್ ಎಸ್ ವೆಂಕಟೇಶ್ ನಿರ್ಮಾಣದ, ಸೆಬಾಸ್ಟಿನ್ ಡೇವಿಡ್ ನಿರ್ದೇಶನದ ಸಿನಿಮಾ ಇದಾಗಿದೆ.
ʼಪೆನ್ ಡ್ರೈವ್ʼ ಸಿನಿಮಾದ ಟೀಸರ್ ಇತ್ತೀಚೆಗೆ ಬಿಡುಗಡೆಯಾಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ ಸಾ.ರಾ.ಗೋವಿಂದು ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ವಾಣಿಜ್ಯ ಮಂಡಳಿ ಕಾರ್ಯದರ್ಶಿ ಪ್ರವೀಣ್ ಕುಮಾರ್, ಜೆ ವೆಂಕಟೇಶ್ ಮುಂತಾದ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ʼಪೆನ್ ಡ್ರೈವ್ʼ ಇದೊಂದು ಕಾಲ್ಪನಿಕ ಕಥಾಹಂದರ ಹೊಂದಿರುವ ಸಿನಿಮಾ. ಒಂದೇ ಹಂತದಲ್ಲಿ ಚಿತ್ರೀಕರಣ ಮುಕ್ತಾಯವಾಗಿದೆ. ಈ ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ. ಸದ್ಯದಲ್ಲೇ ಬಿಡುಗಡೆ ಮಾಡುವ ಸಿದ್ದತೆಯೂ ನಡೆಯುತ್ತಿದೆ.
“ನಾನು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರ ಮಾಡಿದ್ದೇನೆ. ಒಂದು ಹಾಡಿನಲ್ಲೂ ಅಭಿನಯಿಸಿದ್ದೇನೆ . ನಿರ್ದೇಶಕರು ಒಳ್ಳೆಯ ಕಥೆ ಮಾಡಿದ್ದಾರೆ” ಎಂದರು ನಟಿ ತನಿಷಾ ಕುಪ್ಪಂಡ.
"ಬಿಗ್ ಬಾಸ್ ನಂತರ ನಾನು ಧಾರಾವಾಹಿಯಲ್ಲಿ ನಟಿಸಿದ್ದೆ. ನನ್ನ ಅಭಿನಯದ ಮೊದಲ ಚಿತ್ರ ಇದು. ಇದು ನನಗೆ ವಿಶೇಷವಾದ ಗಳಿಗೆ. ಮೊದಲನೇ ಸಿನಿಮಾದಲ್ಲಿ ತನಿಷಾ ಅವರ ಜೊತೆ ರೊಮ್ಯಾನ್ಸ್ ಮಾಡ್ತೀನಿ ಅಂತ ಅಂದುಕೊಂಡಿರಲಿಲ್ಲ. ಇದರ ಜೊತೆಗೆ ಇಬ್ಬರು ನಟಿಯರ ಜೊತೆ ರೊಮ್ಯಾನ್ಸ್ ಇತ್ತು. ಈ ಸಿನಿಮಾ ಮಾಡುವಾಗ ನನ್ನ ಕಾಲು ಮುರಿದು ಹೋಗಿತ್ತು. ರೊಮ್ಯಾನ್ಸ್ ಮಾಡುವಾಗ ಟಿವಿಯಲ್ಲಿ ಹೇಗೆ ಕಾಣತ್ತೆ ಎಂದು ಭಯ ಆಗಿತ್ತು. ತನಿಷಾ ಅವರು ಕಂಫರ್ಟ್ ಮಾಡಿದರು. ತನಿಷಾ ಕುಪ್ಪಂಡ ಅವರು ನನಗಿಂತ ದೊಡ್ಡವರು. ಡೀಪ್ ರೊಮ್ಯಾಂಟಿಕ್ ದೃಶ್ಯ ಮಾಡಲಾಗದೆ ಓಡಿ ಹೋಗಿದ್ದೆ" ಎಂದು ನಟ ಕಿಶನ್ ಹೇಳಿದರು.
“ಕಿಶನ್ ಅವರು ಸೆಕೆಂಡ್ ಟೇಕ್ ತೆಗೆದುಕೊಳ್ಳದೆ ಒಂದೇ ಟೇಕ್‌ನಲ್ಲಿ ರೊಮ್ಯಾಂಟಿಕ್ ದೃಶ್ಯ ಮಾಡಿದ್ದಾರೆ. ಈ ಕಂಟೆಂಟ್ ತುಂಬ ಇಂಟರೆಸ್ಟಿಂಗ್ ಆಗಿದೆ. ಒಂದು ಹಾಡಿನಲ್ಲಿ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿದೆ. ನನ್ನ ಕ್ಯಾರೆಕ್ಟರ್ ತುಂಬ ಸ್ಟ್ರಾಂಗ್ ಆಗಿದೆ” ಎಂದು ತನಿಷಾ ಕುಪ್ಪಂಡ ಅವರು ಹೇಳಿದ್ದಾರೆ.