- Home
- Entertainment
- TV Talk
- ನೀನಿಲ್ಲದೇ ನಾನು imagine ಮಾಡೋಕೂ ಆಗಲ್ಲ… ಅಮ್ಮನ ಹುಟ್ಟುಹಬ್ಬಕ್ಕೆ ಭವ್ಯಾ ಗೌಡ ಹೃದಯಸ್ಪರ್ಶಿ ಪತ್ರ
ನೀನಿಲ್ಲದೇ ನಾನು imagine ಮಾಡೋಕೂ ಆಗಲ್ಲ… ಅಮ್ಮನ ಹುಟ್ಟುಹಬ್ಬಕ್ಕೆ ಭವ್ಯಾ ಗೌಡ ಹೃದಯಸ್ಪರ್ಶಿ ಪತ್ರ
ಕನ್ನಡ ಕಿರುತೆರೆ ನಟಿ, ಕರ್ಣನ ಸುಂದರಿ ಭವ್ಯಾ ಗೌಡ ಅವರ ತಾಯಿ ಮಂಜುಳ ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಅಮ್ಮನ ಹುಟ್ಟುಹಬ್ಬಕ್ಕೆ ಮುದ್ದು ಮಗಳು ಭವ್ಯಾ ಫೋಟೊಗಳ ಜೊತೆಗೆ ಭಾವನಾತ್ಮಕ ಪತ್ರ ಬರೆದು ಅಮ್ಮನಿಗೆ ವಿಶೇಷವಾಗಿ ವಿಶ್ ಮಾಡಿದ್ದಾರೆ.

ಭವ್ಯಾ ಗೌಡ
ಕನ್ನಡ ಕಿರುತೆರೆ ನಟಿ, ಕರ್ಣ ಸೀರಿಯಲ್ ಮೂಲಕ ಮನ ಗೆದ್ದ ಮುದ್ದು ಹುಡುಗಿ ನಿಧಿ ಆಲಿಯಾಸ್ ಭವ್ಯಾ ಗೌಡ ಅವರ ತಾಯಿಯ ಹುಟ್ಟುಹಬ್ಬ ಇತ್ತೀಚೆಗೆ ನಡೆದಿದ್ದು, ಅಮ್ಮನ ಸ್ಪೆಷಲ್ ದಿನಕ್ಕಾಗಿ ಮಗಳು ಭವ್ಯಾ ಅಮ್ಮನ ಜೊತೆಗಿನ ಫೋಟೊ ಹಂಚಿಕೊಂಡು, ತಮ್ಮ ಪ್ರೀತಿಯನ್ನು ಕೂಡ ಹಂಚಿಕೊಂಡಿದ್ದಾರೆ.
ಅಮ್ಮನ ಹುಟ್ಟುಹಬ್ಬಕ್ಕೆ ಸ್ಪೆಷಲ್ ವಿಶ್
ಭವ್ಯಾ ಗೌಡ ತಮ್ಮ ಅಮ್ಮ ಮಂಜುಳ ಹುಟ್ಟುಹಬ್ಬಕ್ಕೆ ಭಾವನಾತ್ಮಕ ಪತ್ರ ಬರೆದು ವಿಶ್ ಮಾಡಿದ್ದು, ಇದರ ಜೊತೆಗೆ ಜೊತೆ ಅಮ್ಮನ ಜೊತೆಗಿನ ಸುಂದರ ಫೋಟೊಗಳನ್ನು, ಅಪ್ಪ-ಅಮ್ಮನ ಫೋಟೊ, ಅಕ್ಕ ತಂಗಿಯರ ಜೊತೆ ಅಮ್ಮ, ಅಮ್ಮನನ್ನು ಅಪ್ಪಿಕೊಂಡ ಭವ್ಯಾ ಗೌಡ ಫೋಟೊಗಳನ್ನು ನಟಿ ಶೇರ್ ಮಾಡಿದ್ದಾರೆ.
ಭಾವನಾತ್ಮಕ ಪತ್ರ ಬರೆದ ಭವ್ಯಾ ಗೌಡ
ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಭವ್ಯಾ ಗೌಡ ಅಮ್ಮನಿಗೆ ಭಾವನಾತ್ಮಕ ಪತ್ರವನ್ನು ಸಹ ಬರೆದು, ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಅಮ್ಮಾ… ನೀನು ಮಾತಿನಲ್ಲಿ ಹೇಳೋ ಪ್ರೀತಿ ಮಾತ್ರ ಅಲ್ಲ… ಪ್ರತಿಯೊಂದು ಸಣ್ಣ ಸಣ್ಣ ಕೆಲಸದಲ್ಲಿ ಕಾಣಿಸೋ ಪ್ರೀತಿ. ನಾನು ಕೇಳೋದಕ್ಕೂ ಮುಂಚೆ ನನಗೆ ಬೇಕಾದ್ದನ್ನು ಗಮನಿಸುವೆ… ಅದೇ ನಿನ್ನ ವಿಶೇಷ.
ನೀನಿಲ್ಲದೇ ನಾನು ಯೋಚನೆ ಮಾಡೋದಕ್ಕೂ ಸಾಧ್ಯ ಇಲ್ಲ
ಎಲ್ಲರಿಗೂ ಅವರವರ life ಇರುತ್ತೆ, ಆದರೆ ನನ್ನ life ಅಂದ್ರೆ ನೀನೇ ಅಮ್ಮಾ. ನಾನು strong ಆಗಿ ಇರೋಕೆ, ನಗ್ತಾ ಇರೋಕೆ, ಮುಂದೆ ಹೋಗೋಕೆ — ನೀನೇ ಕಾರಣ. ನೀನು ಹಿಂಬದಿಯಲ್ಲಿ ನಿಂತಿದ್ರೆ ನನಗೆ ಯಾವ ಭಯವೂ ಇರೋದಿಲ್ಲ. ನಿನ್ನ love ತುಂಬಾ simple ಆಗಿರುತ್ತೆ… but ಅದಕ್ಕಿಂತ pure ಆಗಿರುವುದು ಯಾವುದೂ ಇಲ್ಲ. ಕೆಲವೊಮ್ಮೆ ನಾನು ಹೇಳಲ್ಲ, ಆದರೆ ನಿನ್ನಿಲ್ಲದೆ ನಾನು imagine ಮಾಡೋಕೂ ಆಗಲ್ಲ.
Happy Birthday ಅಮ್ಮಾ
Happy Birthday ಅಮ್ಮಾ, ನೀನು ಹೀಗೆ ಸದಾ ನಗ್ತಾ, happy ಆಗಿ ಇರೋದು ನನಗೆ ಸಾಕು… Love you always ಎಂದು ಭವ್ಯಾ ಗೌಡ ಭಾವನಾತ್ಮಕವಾಗಿ ಬರೆದಿದ್ದು, ಆ ಮೂಲಕ ಅಮ್ಮನಿಗೆ ತಮ್ಮ ಜೀವನದಲ್ಲಿ ಸ್ಥಾನ ಏನು? ತನ್ನ ನಿಜವಾಗಿ ಶಕ್ತಿ, ಬೆನ್ನೆಲುಬು ಯಾರು ಎನ್ನುವುದನ್ನು ಬರೆದುಕೊಂಡಿದ್ದಾರೆ.
ಭವ್ಯಾ ಗೌಡ ಜರ್ನಿ
ಭವ್ಯಾ ಗೌಡ ಕಲರ್ಸ್ ಕನ್ನಡ ವಾಹಿನಿ 'ಗೀತಾ' ಧಾರಾವಾಹಿ ಮೂಲಕ ನಟನೆಗೆ ಎಂಟ್ರಿ ಕೊಟ್ಟು ಮೊದಲ ಸೀರಿಯಲ್ ನಲ್ಲೇ ಜನಪ್ರಿಯತೆ ಪಡೆದರು. 'ಗೀತಾ' ಸೀರಿಯಲ್ ಮುಗಿಯುತ್ತಿದ್ದ ಹಾಗೆ 'ಬಿಗ್ ಬಾಸ್ ಕನ್ನಡ 11' ರಲ್ಲಿ ಸ್ಪರ್ಧಿಸಿದ್ದರು. ಬಿಗ್ ಬಾಸ್ ನಿಂದ ಹೊರ ಬಂದ ತಕ್ಷಣ ಜೀ ಕನ್ನಡದ ವಾಹಿನಿಯ ‘ಕರ್ಣ’ ಧಾರಾವಾಹಿಯಲ್ಲಿ ನಟಿಸುವ ಅವಕಾಶವನ್ನು ಪಡೆದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

