- Home
- Entertainment
- TV Talk
- ಕರ್ಣನಿಗೆ ಜೊತೆಯಾದ್ರೂ, Dhanush-Bhavya Gowda ಜೋಡಿ ಬೆಸ್ಟ್ ಅಂತಿದ್ದಾರಲ್ಲ ನೆಟ್ಟಿಗರು
ಕರ್ಣನಿಗೆ ಜೊತೆಯಾದ್ರೂ, Dhanush-Bhavya Gowda ಜೋಡಿ ಬೆಸ್ಟ್ ಅಂತಿದ್ದಾರಲ್ಲ ನೆಟ್ಟಿಗರು
ಗೀತಾ ಸೀರಿಯಲ್ ಮೂಲಕ ಕಿರುತೆರೆಗೆ ಕಾಲಿಟ್ಟು, ಬಿಗ್ ಬಾಸ್ ಮೂಲಕ ಜನಪ್ರಿಯತೆ ಪಡೆದು, ಇದೀಗ ಕರ್ಣ ಧಾರಾವಾಹಿಯಲ್ಲಿ ಕರ್ಣನಿಗೆ ಜೋಡಿಯಾಗಿರುವ ನಿಧಿ ಆಲಿಯಾಸ್ ಭವ್ಯಾ ಗೌಡ ಅವರು ಮತ್ತು ಧನುಷ್ ಗೌಡ ಬೆಸ್ಟ್ ಜೋಡಿ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

ಭವ್ಯಾ ಗೌಡ
ಗೀತಾ ಧಾರಾವಾಹಿಯಲ್ಲಿ ಹೂ ಮಾರುವ ಹುಡುಗಿ ಗೀತಾ ಆಗಿ ಕನ್ನಡ ಕಿರುತೆರೆಗೆ ಕಾಲಿಟ್ಟು ಜನಪ್ರಿಯತೆ ಪಡೆದ ನಟಿ ಭವ್ಯಾ ಗೌಡ, ಬಳಿಕ ಅವರಿಗೆ ಮತ್ತಷ್ಟು ಜನಪ್ರಿಯತೆ ತಂದು ಕೊಟ್ಟದ್ದು ಬಿಗ್ ಬಾಸ್ ಸೀಸನ್ 11. ಇದೀಗ ಜನ ಮತ್ತೆ ಭವ್ಯಾ ಮತ್ತು ಧನುಷ್ ಗೌಡ ಮೇಡ್ ಫಾರ್ ಈಚ್ ಅದರ್ ಎನ್ನುತ್ತಿದ್ದಾರೆ.
ಧನುಷ್ ಗೌಡ ಜೊತೆ ಹೋಲಿಕೆ
ಸದ್ಯ ಭವ್ಯಾ ಗೌಡ ನಿಧಿಯಾಗಿ ಕರ್ಣನಿಗೆ ಜೋಡಿಯಾಗಿದ್ದರೂ ಸಹ, ಜನ ಧನುಷ್ ಗೌಡ ಜೊತೆ ಹೋಲಿಕೆ ಮಾಡಿ, ಇವರಿಬ್ಬರು ಬೆಸ್ಟ್ ಜೋಡಿ ಎನ್ನುತ್ತಿದ್ದಾರೆ. ಅದಕ್ಕೆ ಕಾರಣ ಬಿಗ್ ಬಾಸ್. ದೊಡ್ಮನೆಯಲ್ಲಿ ಇಬ್ಬರು ಮಾಡಿರುವ ಸಾಧನೆ ಕೂಡ ಒಂದೇ ರೀತಿಯಾಗಿದೆ.
ಗೀತಾ ಧಾರಾವಾಹಿ
ಗೀತಾ ಧಾರಾವಾಹಿಯಲ್ಲಿ ಭವ್ಯ ಗೌಡ ಮತ್ತು ಧನುಷ್ ಗೌಡ ನಾಯಕ- ನಾಯಕಿಯಾಗಿ ನಟಿಸಿದ್ದರು. ಇಬ್ಬರ ಜೋಡಿ ತುಂಬಾನೆ ಜನಪ್ರಿಯತೆ ಪಡೆದಿತ್ತು. ಇಬ್ಬರು ಮದುವೆಯಾಗುತ್ತಾರೆ ಎನ್ನುವ ಗಾಳಿ ಸುದ್ದಿಯೂ ಇತ್ತು, ಆದರೆ ಧನುಷ್ ಗೌಡ ಹಸೆಮಣೆಗೆ ಏರುವ ಮೂಲಕ ಗಾಳಿ ಸುದ್ದಿಗೆ ಫುಲ್ ಸ್ಟಾಪ್ ಹಾಕಿದ್ದರು. ಕರ್ಣ ಸೀರಿಯಲ್ ಬಳಿಕ ನಿಧಿ ಕರ್ಣ ಜೋಡಿಯನ್ನು ಜನ ಇಷ್ಟಪಡುತ್ತಿದ್ದಾರೆ. ಆದರೆ ಈಗ ಬಿಗ್ ಬಾಸ್ ನಿಂದಾಗಿ ಧನುಷ್ ಮತ್ತು ಭವ್ಯಾಗೆ ಹೋಲಿಕೆ ಮಾಡಲಾಗುತ್ತಿದೆ.
ಮೂರು ಬಾರಿ ಕ್ಯಾಪ್ಟನ್
ಧನುಷ್ ಮತ್ತು ಭವ್ಯಾ ಇಬ್ಬರು ಕೂಡ ಬಿಗ್ ಬಾಸ್ ಮನೆಯಲ್ಲಿ ಮೂರು ಬಾರಿ ಕ್ಯಾಪ್ಟನ್ ಆಗಿದ್ದರು. ಬೇರೆ ಯಾರೂ ಕೂಡ ಒಂದೇ ಸೀಸನ್ ನಲ್ಲಿ ಮೂರು ಬಾರಿ ಕ್ಯಾಪ್ಟನ್ ಆಗುವ ಅಧಿಕಾರವನ್ನು ಪಡೆದಿರಲಿಲ್ಲ.
ಟಾಸ್ಕ್ ಕಿಂಗ್ ಮತ್ತು ಕ್ವೀನ್
ಬಿಗ್ ಬಾಸ್ ಸೀಸನ್ 11ರಲ್ಲಿ ಭವ್ಯಾ ಗೌಡ ಟಾಸ್ಕ್ ಕ್ವೀನ್ ಆಗಿದ್ದರು. ಈ ಸೀಸನ್ ನಲ್ಲಿ ಧನುಷ್ ಗೌಡ ಟಾಸ್ಕ್ ಮಾಸ್ಟರ್ ಆಗಿದ್ದಾರೆ. ಯಾವುದೇ ಟಾಸ್ಕ್ ಕೊಟ್ಟರೂ ಸಹ ಅದನ್ನು ಛಲದಿಂದ ಆಡಿ, ಇತರ ಸ್ಪರ್ಧಿಗಳಿಗೆ ಸವಾಲು ಎಸೆದು ಗೆದ್ದು ತೋರಿಸುತ್ತಿದ್ದರು.
ಕಿಚ್ಚನ ಚಪ್ಪಾಳೆ -ಉತ್ತಮ
ಈ ಜೋಡಿಗಳಿಗೆ ಅವರ ಸೀಸನ್ ನಲ್ಲಿ ಕಿಚ್ಚನ ಚಪ್ಪಾಳೆ ಸಿಕ್ಕಿತ್ತು ಜೊತೆಗೆ ಉಳಿದ ಸ್ಪರ್ಧಿಗಳಿಂದ ಉತ್ತಮ ಎನ್ನುವ ಹೊಗಳಿಕೆಯೂ ಸಿಕ್ಕಿತ್ತು. ಹಾಗಾಗಿ ಇಬ್ಬರಲ್ಲೂ ಎಲ್ಲಾ ವಿಷಯದಲ್ಲೂ ಸಾಮ್ಯತೆ ಕಂಡು ಬರುತ್ತಿದೆ.
ಇಬ್ಬರು ಕೂಡ 5ನೇ ರನ್ನರ್ ಅಪ್
ಬಿಗ್ ಬಾಸ್ ಪೂರ್ತಿಯಾಗಿ ಅದ್ಭುತವಾಗಿ ಟಾಸ್ಕ್ ಆಡಿಕೊಂಡು ಬಂದಿದ್ದ ಭವ್ಯಾ ಮತ್ತು ಧನುಷ್ ಗೌಡ ಇಬ್ಬರು ಬಿಗ್ ಬಾಸ್ ಟೈಟಲ್ ಕಾರ್ಡ್ ಗೆಲ್ಲುವ ಭರವಸೆ ಹೊಂದಿದ್ದರು. ಆದರೆ ಇಬ್ಬರೂ ಕೂಡ ಟಾಪ್ 6ಗೆ ತೆರಳಿದ್ದು, ಕೊನೆ ಹಂತದಲ್ಲಿ 5ನೇ ರನ್ನರ್ ಅಪ್ ಆಗಿ ಮನೆಯಿಂದ ಹೊರ ಬಂದಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

