- Home
- Entertainment
- TV Talk
- ಕಷ್ಟಪಡೋರು ನೀವು, ನಾವು ಪೇಂಟಿಂಗ್ನಲ್ಲಿ ಬಣ್ಣಗಳಷ್ಟೇ: Amruthadhaare ನಟಿ ಛಾಯಾ ಸಿಂಗ್
ಕಷ್ಟಪಡೋರು ನೀವು, ನಾವು ಪೇಂಟಿಂಗ್ನಲ್ಲಿ ಬಣ್ಣಗಳಷ್ಟೇ: Amruthadhaare ನಟಿ ಛಾಯಾ ಸಿಂಗ್
'ಅಮೃತಧಾರೆ' ಖ್ಯಾತಿಯ ನಟಿ ಛಾಯಾ ಸಿಂಗ್ 'ಜೋಡಿ ನಂಬರ್ 1' ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿದ್ದಾರೆ. ಈ ವೇಳೆ ಸ್ಪರ್ಧಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, 'ನಿಜವಾಗಿಯೂ ಕಷ್ಟಪಡುವುದು ನೀವು, ನಾವಲ್ಲ' ಎಂದು ಹೇಳಿರುವ ಮಾತುಗಳು ವೈರಲ್ ಆಗಿವೆ.

ಜೋಡಿ ನಂಬರ್ 1 ನಲ್ಲಿ ಛಾಯಾ ಸಿಂಗ್
ಅಮೃತಧಾರೆ ಸೀರಿಯಲ್ (Amruthadhaare Serial) ಭೂಮಿಕಾ ಉರ್ಫ್ ನಟಿ ಛಾಯಾ ಸಿಂಗ್ ಅವರು ಸದ್ಯ ಜೀ ಕನ್ನಡದ ಜೋಡಿ ನಂಬರ್ 1 ರಿಯಾಲಿಟಿ ಷೋನಲ್ಲಿ ತೀರ್ಪುಗಾರರಾಗಿ ಆಗಮಿಸಿದ್ದಾರೆ.
ಸ್ಪರ್ಧಿಗಳನ್ನು ಹುರಿದುಂಬಿಸಲು ಮಾತು
ಸ್ಪರ್ಧಿಗಳನ್ನು ಹುರಿದುಂಬಿಸಲು ಅವರು ಆಡಿರುವ ಮಾತುಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ನಾವು ಪೇಂಟಿಂಗ್ನಲ್ಲಿ ಬಣ್ಣಗಳಷ್ಟೇ
ಕಷ್ಟಪಡೋರು ನೀವು, ನಾವು ಪೇಂಟಿಂಗ್ನಲ್ಲಿ ಬಣ್ಣಗಳಷ್ಟೇ. ನಾವೇನು ಮಾಡ್ತೀವಿ, ದಿನ ಪೂರ್ತಿ ಈ ಸೀಟ್ನಲ್ಲಿ ಕುಳಿತುಕೊಂಡು ಇರ್ತೇವೆ. ಬೇಕಾದಾಗ ಎಲ್ಲಾ ಸಿಗುತ್ತೆ. ನೀವು ಕಷ್ಟಪಡ್ತಾ ಇರೋರು ಎಂದಿದ್ದಾರೆ.
ನಾವು ಹೈಲೈಟ್ ಆಗ್ತೇವೆ
ನಾವು ಈ ಜಾಗದಲ್ಲಿ ಇರೋದಕ್ಕೆ ಹೈಲೈಟ್ ಆಗ್ತಾಇದ್ದೇವೆ ಅಷ್ಟೇ. ನನ್ನ ಅಮ್ಮ ಕೂಡ ಅಯ್ಯೋ ಬೆಳಿಗ್ಗೆಯಿಂದ ಸಂಜೆಯವರೆಗೆ ಜೋಡಿ ನಂಬರ್ 1ನಲ್ಲಿ ಕೆಲಸ ಮಾಡಿ ಬಂದು ಸುಸ್ತಾಗಿದ್ಯಾ ಅಂತಾರೆ. ಆದರೆ ನಿಜಕ್ಕೂ ಕಷ್ಟ ಪಡೋದು ನಾವಲ್ಲ ಎಂದಿದ್ದಾರೆ.
ಸ್ಪರ್ಧಿಗಳಿಂದಾಗಿಯೇ ನಾವು ಇರೋದು
ಸ್ಪರ್ಧಿಗಳಿಂದಾಗಿಯೇ ನಾವು ಇರೋದು, ನೀವೇ ಎಲ್ಲರಿಗೂ ಮುಖ್ಯ. ನಾವಲ್ಲ. ನಿಮ್ಮ ಸಾಧನೆನೇ ಮುಖ್ಯ ಎಂದು ನಟಿ ಛಾಯಾ ಸಿಂಗ್ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

