- Home
- Entertainment
- TV Talk
- Bhagyalakshmi Serial ಮುಗೀತು, ಆದರೆ ಅದೊಂದು ದೊಡ್ಡ ಪ್ರಶ್ನೆ ಮಾತ್ರ ಹಾಗೆಯೇ ಉಳಿತು; ಏನದು?
Bhagyalakshmi Serial ಮುಗೀತು, ಆದರೆ ಅದೊಂದು ದೊಡ್ಡ ಪ್ರಶ್ನೆ ಮಾತ್ರ ಹಾಗೆಯೇ ಉಳಿತು; ಏನದು?
Bhagyalakshmi Kannada Serial Episode Update: ಭಾಗ್ಯಲಕ್ಷ್ಮೀ ಧಾರಾವಾಹಿ ಮುಕ್ತಾಯವಾಗಿದೆ. 1159 ಎಪಿಸೋಡ್‌ಗೆ ಈ ಸೀರಿಯಲ್ ಅಂತ್ಯವಾಗಿದೆ. ನಾಲ್ಕು ವರ್ಷಗಳ ಹಿಂದೆ ಈ ಸೀರಿಯಲ್ ಆರಂಭ ಆಗಿತ್ತು. ಒಂದೇ ಒಂದು ಪ್ರಶ್ನೆಯೊಂದು ಹಾಗೆ ಉಳಿದಿದೆ. ಹಾಗಾದರೆ ಏನದು?

ಭಾಗ್ಯ-ಆದಿ ಮುಂದೆ ಸವಾಲುಗಳು
ಭಾಗ್ಯ ಹಾಗೂ ಆದೀಶ್ವರ್ ಕಾಮತ್ ಮದುವೆಯಾಗಿದ್ದಾರೆ. ಸಾಕಷ್ಟು ಸವಾಲುಗಳನ್ನು ಎದುರಿಸಿ ಈ ಜೋಡಿ ಮದುವೆ ಆಗಿತ್ತು. ಭಾಗ್ಯಗೆ ಈಗಾಗಲೇ ಇಬ್ಬರು ಮಕ್ಕಳಿದ್ದು, ಅವರ ಮುಂದೆ ಮದುವೆ ಆಗೋದು, ಆ ಮಕ್ಕಳು ಒಪ್ಪಿಕೊಳ್ಳೋದು ಸುಲಭ ಇರಲಿಲ್ಲ.
ಕನ್ನಿಕಾ ಮದುವೆ ವಿಷಯ
ಕನ್ನಿಕಾ ಒಂದು ಹುಡುಗನನ್ನು ಪ್ರೀತಿ ಮಾಡಿದ್ದಳು. ಆದರೆ ಆ ಹುಡುಗ ವೈಭವ್‌ಗೆ ಕನ್ನಿಕಾ ಮೇಲೆ ದುಡ್ಡಿನ ಆಸೆ ಕೂಡ ಇತ್ತು. ವೈಭವ್ ಕುಟುಂಬದ ಹಿಂದಿನ ಉದ್ದೇಶ ಏನು ಎಂದು ಆದಿ, ಭಾಗ್ಯ ರಿವೀಲ್ ಮಾಡಿದ್ದಾರೆ. ಆದ್ರೆ ವೈಭವ್ ಕೂಡ ಕನ್ನಿಕಾರನ್ನು ಬಿಟ್ಟುಕೊಡದೆ ಲವ್ ಮಾಡ್ತಿರೋದು ಸತ್ಯ ಎಂದು ಹೇಳಿದ್ದಾನೆ. ಕನ್ನಿಕಾ ಸತ್ಯ ಯಾವುದು ಎಂದು ಅರ್ಥ ಆಗಿದೆ, ಅವಳು ಭಾಗ್ಯಗೆ ಕ್ಷಮೆ ಕೇಳಿದ್ದಾಳೆ. ಅಲ್ಲಿಗೆ ಕನ್ನಿಕಾ ಸಮಸ್ಯೆ ಬಗೆಹರಿದಿದೆ.
ಆದೀಶ್ವರ್ ಅತ್ತೆ ಸಮಸ್ಯೆ
ಆದೀಶ್ವರ್ ಅತ್ತೆ ಮೀನಾಕ್ಷಿಗೆ ಭಾಗ್ಯಳನ್ನು ಕಂಡರೆ ಆಗುತ್ತಿರಲಿಲ್ಲ. ಈಗ ಅತ್ತೆಗೆ ಎಲ್ಲ ಅರಿವಾಗಿದೆ. ಈಗ ಅವಳೇ ಕುಸುಮಾ-ಧರ್ಮರಾಜ್‌ನನ್ನು ಮನೆಗೆ ಕರೆದುಕೊಂಡು ಬಂದಿದ್ದಾಳೆ. ನಮ್ಮತ್ತೆ ಮಾವ ತುಂಬ ಕಷ್ಟಪಡುತ್ತಿದ್ದಾರೆ ಎಂದು ಭಾಗ್ಯ ಮನಸ್ಸಿನಲ್ಲಿ ಬೇಸರ ಮಾಡಿಕೊಂಡಿದ್ದಳು. ಈಗ ಕುಸುಮಾ, ಧರ್ಮರಾಜ್ ಕೂಡ ಆದಿ ಮನೆಗೆ ಬಂದು, ಅಲ್ಲಿಯೇ ಇರುತ್ತಾರೆ.
ತನ್ವಿ ಬದಲಾದಳು
ಅಪ್ಪ ಎರಡನೇ ಮದುವೆ ಆದಾಗ ಕ್ಷಮಿಸಿದ್ದ ತನ್ವಿ ಈಗ ತಾಯಿ ಎರಡನೇ ಮದುವೆ ಆದಾಗ ಒಪ್ಪಿರಲಿಲ್ಲ. ಹೀಗಾಗಿ ಅವಳು ತಾಯಿಯಿಂದ ದೂರ ಇದ್ದಳು. ಈಗ ಅವಳು ಕೂಡ ತಾಯಿಯನ್ನು ಒಪ್ಪಿಕೊಂಡಿದ್ದಾಳೆ, ಆದಿಯನ್ನು ಅಪ್ಪಾ ಎಂದು ಕರೆದಿದ್ದಾಳೆ. ಇದು ಎಲ್ಲರಿಗೂ ಖುಷಿ ಕೊಟ್ಟಿದೆ.
ತಾಂಡವ್ ಕಥೆ ಏನು?
ಇಡೀ ಕುಟುಂಬ ಒಂದಾಗಿದೆ, ಅಷ್ಟೇ ಅಲ್ಲದೆ ಶ್ರೇಷ್ಠ ಮಾಡಿದ ತಪ್ಪುಗಳನ್ನು ಕ್ಷಮಿಸಿ, ಅವಳನ್ನು ಕೂಡ ತನ್ನ ಕುಟುಂಬದಲ್ಲಿ ಒಬ್ಬಳು ಎಂದು ಹೇಳಿದ್ದಾರೆ. ಆದರೆ ಜೈಲಿನಲ್ಲಿರುವ ತಾಂಡವ್ ಬಗ್ಗೆ ಏನೂ ಮಾಹಿತಿ ಇಲ್ಲ, ತಾಂಡವ್ ಜೈಲಿಗೆ ಹೋದ ಬಳಿಕ ಅವನು ಎಲ್ಲಿಯೂ ಕಾಣಿಸಿಲ್ಲ. ಒಟ್ಟಿನಲ್ಲಿ ತಾಂಡವ್ ಜೀವನಪೂರ್ತಿ ಅಲ್ಲಿಯೇ ಇರುತ್ತಾನಾ? ಅಥವಾ ಮತ್ತೆ ಹೊರಗಡೆ ಬರುತ್ತಾನಾ ಎಂಬ ಬಗ್ಗೆ ಮಾತ್ರ ಉತ್ತರ ಸಿಕ್ಕಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

