MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಮದುಮಗಳ ಲುಕ್​ನಲ್ಲಿ ಕಂಗೊಳಿಸಿದ Bhargavi LLB: ನಟಿ ರಾಧಾ ಭಗವತಿ ಕ್ಯೂಟ್​ ಫೋಟೋಗಳು ಇಲ್ಲಿವೆ

ಮದುಮಗಳ ಲುಕ್​ನಲ್ಲಿ ಕಂಗೊಳಿಸಿದ Bhargavi LLB: ನಟಿ ರಾಧಾ ಭಗವತಿ ಕ್ಯೂಟ್​ ಫೋಟೋಗಳು ಇಲ್ಲಿವೆ

‘ಅಮೃತಧಾರೆ’ಯ ಮಲ್ಲಿ ಹಾಗೂ ‘ಭಾರ್ಗವಿ ಎಲ್ಎಲ್​ಬಿ’ಯ ಭಾರ್ಗವಿಯಾಗಿ ಜನಪ್ರಿಯರಾಗಿರುವ ನಟಿ ರಾಧಾ ಭಗವತಿ, ಕಿರುತೆರೆ ಮಾತ್ರವಲ್ಲದೆ ಬೆಳ್ಳಿಪರದೆಗೂ ಕಾಲಿಟ್ಟಿದ್ದಾರೆ. ನಟನೆ, ಮಾಡೆಲಿಂಗ್ ಜೊತೆಗೆ ಹಿನ್ನೆಲೆ ಗಾಯಕಿ ಹಾಗೂ ಡಬ್ಬಿಂಗ್ ಕಲಾವಿದೆಯಾಗಿಯೂ ಗುರುತಿಸಿಕೊಂಡಿರುವ ಇವರು ಕಲಾವಿದರ ಕುಟುಂಬದಿಂದ ಬಂದವರು

2 Min read
Author : Suchethana D
Published : Nov 26 2025, 04:07 PM IST
Share this Photo Gallery
  • FB
  • TW
  • Linkdin
  • Whatsapp
17
ಭಾರ್ಗವಿಯಾಗಿ ಜನಪ್ರಿಯ
Image Credit : Instagram

ಭಾರ್ಗವಿಯಾಗಿ ಜನಪ್ರಿಯ

ಅಕ್ಕವ್ರೇ ಅಕ್ಕವ್ರೇ ಎಂದು ಅಮೃತಧಾರೆಯ ಭೂಮಿಕಾ ಹಿಂದೆ ಮುಂದೆ ಓಡಾಡ್ತಿದ್ದ ಮಲ್ಲಿ ಭಾರ್ಗವಿ ಎಲ್​ಎಲ್​ಬಿ ಆಗಿ ಕೆಲ ತಿಂಗಳುಗಳೇ ಕಳೆದಿವೆ. ಮಾವನ ವಿರುದ್ಧವೇ ಸಿಡಿದೆದ್ದು ಹೆಣ್ಣೊಬ್ಬಳಿಗೆ ನ್ಯಾಯ ಕೊಡಿಸುವ ಪಾತ್ರದಲ್ಲಿ, ಭಾರ್ಗವಿ ಆಗಿ ಎಲ್ಲರ ಮನಸ್ಸನ್ನು ಗೆಲ್ಲುತ್ತಿರುವವರು ನಟಿ ರಾಧಾ ಭಗವತಿ (Radha Bagavathi)

27
ವಿರುದ್ಧ ಕ್ಯಾರೆಕ್ಟರ್​ನಲ್ಲಿಯೂ ಸೈ
Image Credit : Instagram

ವಿರುದ್ಧ ಕ್ಯಾರೆಕ್ಟರ್​ನಲ್ಲಿಯೂ ಸೈ

ಅಲ್ಲಿ ಮಲ್ಲಿಯಾಗಿ, ಇಲ್ಲಿ ಭಾರ್ಗವಿಯಲ್ಲಿ ಎರಡೂ ವಿಭಿನ್ನ, ತದ್ವಿರುದ್ಧ ಕ್ಯಾರೆಕ್ಟರ್​ನಲ್ಲಿ ನಟಿಸಿ ಎರಡರಲ್ಲಿಯೂ ಸೈ ಎನ್ನಿಸಿಕೊಂಡಿರುವ ನಟಿ ರಾಧಾ ಭಗವತಿ, ಭಾರ್ಗವಿಯಾಗಿ ಹವಾ ಸೃಷ್ಟಿಸುತ್ತಿದ್ದಾರೆ. ಇದಾಗಲೇ ಇವರ ನಟನೆಯ ಅಪಾಯವಿದೆ ಎಚ್ಚರಿಕೆ ಸಿನಿಮಾ ಕೂಡ ರಿಲೀಸ್​ ಆಗಿದೆ.

Related Articles

Related image1
ಇದೇನಿದು ಟ್ವಿಸ್ಟ್​? Amruthadhaare ಗೌತಮ್​-ಭೂಮಿಕಾ ಒಂದಾಗಿಬಿಟ್ರಾ? ಜಾಲಿಮೂಡ್​ನಲ್ಲಿ ಕ್ಯೂಟ್​ ಜೋಡಿ
Related image2
ಮುಂದಿನ ವಾರ Bigg Bossನಿಂದ ಹೊರಕ್ಕೆ ಬರುವವರು ಯಾರು? ಈಗ್ಲೇ ಹೆಸರು ಹೇಳಿದ Risha Gowda
37
ಮದುಮಗಳಾಗಿ ಮಿಂಚಿಂಗ್​
Image Credit : Instagram

ಮದುಮಗಳಾಗಿ ಮಿಂಚಿಂಗ್​

ಇದೀಗ ನಟಿ ಕ್ಯೂಟ್​ ಫೋಟೋಶೂಟ್​ ಮಾಡಿಕೊಂಡಿದ್ದಾರೆ. ಇದರಲ್ಲಿ ಮದುಮಗಳಾಗಿ ಮಿಂಚುತ್ತಿದ್ದಾರೆ. ಅಂದಹಾಗೆ ರಾಧಾ ಭಗವತಿ ಅವರು, ರಾಮ್​ಜಿ ನಿರ್ದೇಶನದ ‘ರಾಮಾಚಾರಿ’ ಧಾರಾವಾಹಿಯಲ್ಲಿ ಸಹೋದರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕಿರುತೆರೆಯಿಂದ ಕಳೆದ ವರ್ಷ ರಿಲೀಸ್​ ಆದ ವಸಂತಕಾಲದ ಹೂವುಗಳು ಚಿತ್ರದಲ್ಲಿ ಇವರು ಅಭಿನಯಿಸುವ ಮೂಲಕ ಬೆಳ್ಳಿಪರದೆಗೆ ಎಂಟ್ರಿ ಕೊಟ್ಟರು.

47
ಚಿತ್ರರಂಗದಲ್ಲಿ ಹೆಸರು
Image Credit : Instagram

ಚಿತ್ರರಂಗದಲ್ಲಿ ಹೆಸರು

ವಿಜಯಪುರದ ರಾಧಾ ಅವರು, ಈ ಚಿತ್ರದಲ್ಲಿ ಸುಮಾ ಹೆಸರಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದಾದ ಬಳಿಕ ಈಗ ಮತ್ತೆ ಕಿರುತೆರೆಗೆ ಪ್ರವೇಶ ಪಡೆದು ಅಮೃತಧಾರೆಯಲ್ಲಿ ನಟಿಸಿದರು. ಮಾಡೆಲ್ ಕೂಡ ಆಗಿರುವ ಇವರಿಗೆ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡುವ ಆಸೆ ಎಂದಿದ್ದಾರೆ. ಎಂಥ ಪಾತ್ರ ಕೊಟ್ಟರೂ ಸಲೀಸಾಗಿ ಮಾಡುವ ಇವರಿಗೆ ಉಜ್ವಲ ಭವಿಷ್ಯವಿದೆ ಎನ್ನುವುದು ಸಿನಿ ಪ್ರಿಯರ ಅಭಿಮತ.

57
ಹಲವು ಸಿನಿಮಾಗಳಲ್ಲಿಯೂ ನಟನೆ
Image Credit : Instagram

ಹಲವು ಸಿನಿಮಾಗಳಲ್ಲಿಯೂ ನಟನೆ

ಅಂದಹಾಗೆ, ರಾಧಾ ಅವರು ನಟಿ ರಾಧಾ ಭಗವತಿ ಅವರು ‘ಆ 90 ದಿನಗಳು’, ‘ವಸಂತ ಕಾಲದ ಹೂಗಳು’, ‘ಅಪಾಯವಿದೆ ಎಚ್ಚರಿಕೆ’ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ‘ಉಘೇ ಉಘೇ ಮಾದೇಶ್ವರ’ ಧಾರಾವಾಹಿಯಲ್ಲಿಯೂ ನಟಿಸಿದ್ದರು. ಇನ್ನು ‘ಬಾನಿಗೊಂದು ತಾರೆ’ ಮ್ಯೂಸಿಕ್ ವಿಡಿಯೋದಲ್ಲಿಯೂ ಅವರು ಕಾಣಿಸಿಕೊಂಡಿದ್ದಾರೆ. 

67
'ಅಪಾಯವಿದೆ ಎಚ್ಚರಿಕೆ'
Image Credit : Instagram

'ಅಪಾಯವಿದೆ ಎಚ್ಚರಿಕೆ'

ಅಭಿಜಿತ್ ತೀರ್ಥಹಳ್ಳಿ ನಿರ್ದೇಶನದ 'ಅಪಾಯವಿದೆ ಎಚ್ಚರಿಕೆ' ಸಿನಿಮಾದಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ಎಸ್. ನಾರಾಯಣ್ ನಿರ್ದೇಶನದ 'ಒಂದ್ಸಲ ಮೀಟ್ ಮಾಡೋಣ' ಸಿನಿಮಾದಲ್ಲಿ ನಾಯಕನ ತಂಗಿಯಾಗಿ ನಟಿಸುತ್ತಿದ್ದಾರೆ. ಸದ್ಯ ಒಂದಾದ ಮೇಲೆ ಒಂದರಂತೆ ಅವಕಾಶಗಳನ್ನು ಪಡೆಯುತ್ತಿದ್ದಾರೆ.

77
ಕಲಾವಿದರ ಕುಟುಂಬ
Image Credit : Instagram

ಕಲಾವಿದರ ಕುಟುಂಬ

ರಾಧಾ ಅವರ ಕುಟುಂಬದವೇ ಕಲಾವಿದರ ಕುಟುಂಬ. ಇವರ ಅಜ್ಜ ರಂಗಭೂಮಿ ಕಲಾವಿದರು. ಇದರ ಜೊತೆಗೆ ಸವರು ಹರಿಕಥೆ ದಾಸರೂ ಕೂಡಾ ಆಗಿದ್ದರು. ರಾಧಾ ಅವರ ತಾಯಿಯೂ ಜನಪದ ಗೀತೆಗಳಿಗೆ ದನಿಯಾದವರು. ಮನೆಯಲ್ಲಿ ಕಲೆಯ ವಾತಾವರಣವಿದ್ದ ಕಾರಣದಿಂದಲೋ ಏನೋ ರಾಧಾ ಭಗವತಿ ಅವರಿಗೆ ನಟನೆಯತ್ತ ಎಳೆ ವಯಸ್ಸಿನಲ್ಲಿಯೇ ಆಸಕ್ತಿ ಮೂಡಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಮನರಂಜನಾ ಸುದ್ದಿ
ಟಿವಿ ಶೋ
ಕಲರ್ಸ್ ಕನ್ನಡ
ಕನ್ನಡ ಧಾರಾವಾಹಿ
ಅಮೃತಧಾರೆ
ಜೀ ಕನ್ನಡ

Latest Videos
Recommended Stories
Recommended image1
ಗಂಡನ ಜೊತೆಗಿನ ಕೋಳಿ ಜಗಳದಿಂದಲೇ ಕನ್ನಡಿಗರ ಮನ ಗೆದ್ದ ‘Nandagokula’ದ ಅಮ್ಮು… ಯಾರೀಕೆ?
Recommended image2
Karna Serial ನಟ ಕಿರಣ್​ ರಾಜ್ ​ಬಂಪರ್​ ಆಫರ್​: ಸುಲಭದ ರೆಸಿಪಿ ಹೇಳಿ ಸರ್​ಪ್ರೈಸ್​ ಪಡೆಯಿರಿ- ಡಿಟೇಲ್ಸ್​ ಇಲ್ಲಿದೆ
Recommended image3
ಪ್ಯಾನ್‌ ಇಂಡಿಯಾ ನಟಿಯಾದ್ರೂ ಸ್ನೇಹ ಮರೆತಿಲ್ಲ; ಕನ್ನಡ ಸೀರಿಯಲ್‌ ನಟಿಯನ್ನು ಫಾಲೋ ಮಾಡ್ತಿರೋ Rashmika Mandanna
Related Stories
Recommended image1
ಇದೇನಿದು ಟ್ವಿಸ್ಟ್​? Amruthadhaare ಗೌತಮ್​-ಭೂಮಿಕಾ ಒಂದಾಗಿಬಿಟ್ರಾ? ಜಾಲಿಮೂಡ್​ನಲ್ಲಿ ಕ್ಯೂಟ್​ ಜೋಡಿ
Recommended image2
ಮುಂದಿನ ವಾರ Bigg Bossನಿಂದ ಹೊರಕ್ಕೆ ಬರುವವರು ಯಾರು? ಈಗ್ಲೇ ಹೆಸರು ಹೇಳಿದ Risha Gowda
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved