- Home
- Entertainment
- TV Talk
- ಹೊಟ್ಟೆಪಾಡಿಗೆ ಕೆಲಸ ಮಾಡೋ ನನ್ನಂಥವ್ರು ಏನ್ ಮಾಡಬೇಕು? ಅಶೋಕ್ ಹೇಳಿಕೆಗೆ ಭಾಗ್ಯಲಕ್ಷ್ಮೀ ಧಾರಾವಾಹಿ ನಟಿ ತಿರುಗೇಟು
ಹೊಟ್ಟೆಪಾಡಿಗೆ ಕೆಲಸ ಮಾಡೋ ನನ್ನಂಥವ್ರು ಏನ್ ಮಾಡಬೇಕು? ಅಶೋಕ್ ಹೇಳಿಕೆಗೆ ಭಾಗ್ಯಲಕ್ಷ್ಮೀ ಧಾರಾವಾಹಿ ನಟಿ ತಿರುಗೇಟು
ಕರ್ಣ ಧಾರಾವಾಹಿ ನಟ ಅಶೋಕ್ ಅವರು “ನನಗೆ ಸೀರಿಯಲ್‌ನಲ್ಲಿ ನಟಿಸಲು ಇಷ್ಟವಿಲ್ಲ. ಬೆಳಿಗ್ಗೆಯಿಂದ ರಾತ್ರಿಯವರೆಗೆ ಅವರು ಹೇಳಿದಂತೆ ನಟಿಸಿ, ಡೈಲಾಗ್ ಹೇಳಬೇಕು, ಅದು ಗುಲಾಮಗಿರಿಯಂತೆ ಕಾಣುತ್ತದೆ ಎಂದಿದ್ದರು. ಇದನ್ನು ಭಾಗ್ಯಲಕ್ಷ್ಮೀ ಧಾರಾವಾಹಿ ನಟಿ ಸುನಿತಾ ಶೆಟ್ಟಿ ಅವರು ವಿರೋಧ ಮಾಡಿದ್ದಾರೆ.

ಎಲ್ಲ ಬದಲಾಗಿದೆ
“ಒಬ್ಬ ಹಿರಿಯ ಕಲಾವಿದರು ನನಗೆ ಗುಲಾಮನಾಗಿ ಇರಲು ಸಾಧ್ಯವಿಲ್ಲ, ಅದಕ್ಕೆ ನಾನು ಧಾರಾವಾಹಿಗಳಲ್ಲಿ ಪಾತ್ರ ಮಾಡುತ್ತಿಲ್ಲ ಅಂತ ಒಂದು ಇಂಟರ್ವ್ಯೂ ಅಲ್ಲಿ ತಮ್ಮ ಹೇಳಿಕೆಯನ್ನು ಕೊಟ್ಟಿದ್ದಾರೆ. ಇದರಲ್ಲಿ ಯಾವ ತಪ್ಪು ಇಲ್ಲ ಏಕೆಂದರೆ ಈಗಿನ ಕಾಲದಲ್ಲಿ ಎಲ್ಲವೂ ಬದಲಾಗಿದೆ” ಎಂದು ನಟಿ ಸುನಿತಾ ಶೆಟ್ಟಿ ಹೇಳಿದ್ದಾರೆ.
ಮನೆಯಲ್ಲಿ ಕೂತ್ಕೊಳ್ಳಿ ಅಂತಾರೆ
ಲೈಫ್ ಅಲ್ಲಿ ಸೆಟಲ್ ಆದವರು ನಾನು ಕೆಲಸ ಮಾಡುವುದಿಲ್ಲ, ಗುಲಾಮ ಆಗಿರುವುದಿಲ್ಲ ಅಂತ ಹೇಳಿದರೆ ನಡೆಯುತ್ತದೆ. ಆದರೆ ನನ್ನಂತಹ ಹೊಟ್ಟೆಪಾಡಿಗೆ ಕೆಲಸ ಮಾಡುವ ಕಲಾವಿದರಿಗೆ ಹಾಗೆ ಹೇಳಲು ಬರುವುದಿಲ್ಲ ಏಕೆಂದರೆ ನಾವು ಹಾಗೆ ಹೇಳಿದರೆ ವಾಹಿನಿಯವರು ಆಯ್ತು ಮನೇಲಿ ಕೂತುಕೊಳ್ಳಿ ಅಂದರೆ, ನನ್ನಂತಹ ಕಲಾವಿದರ ಜೀವನ ನಡೆಯುವುದು ಹೇಗೆ? ಎಂದು ಸುನಿತಾ ಶೆಟ್ಟಿ ಹೇಳಿದ್ದಾರೆ.
ನಾವು ಬದಲಾಗಬೇಕು
“ಬದಲಾದ ಕಾಲಕ್ಕೆ ಅನುಗುಣವಾಗಿ ನಾವು ಚಿಕ್ಕಪುಟ್ಟ ಕಲಾವಿದರು ಹೊಟ್ಟೆಪಾಡಿಗೆ ದುಡಿಯುತ್ತಿರುವವರು ಸ್ವಲ್ಪ ಆದರೂ ಬದಲಾಗಬೇಕಾಗುತ್ತದೆ. ಇದು ನನ್ನ ರಂಗಭೂಮಿ, ಸಿನಿ ಹಾಗೂ ಧಾರಾವಾಹಿಯಲ್ಲಿ 30 ವರ್ಷಗಳ ಅನುಭವದಿಂದ ಹೇಳುತ್ತಿರುವ ನನ್ನ ಅನಿಸಿಕೆ. ನಾನೂ ಸ್ವಾಭಿಮಾನಿ, ಮುಂಗೋಪಿ ಆದರೆ ಕೆಲವೊಮ್ಮೆ ಅದು ನಮ್ಮ ಹಸಿವನ್ನು ನೀಗಿಸುವುದಿಲ್ಲ, ಕಾಲಾಯ ತಸ್ಮೈ ನಮಃ ಎಂದು ಸುನಿತಾ ಶೆಟ್ಟಿ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

