- Home
- Entertainment
- TV Talk
- ಭಾಗ್ಯಲಕ್ಷ್ಮೀ ಧಾರಾವಾಹಿ ತನ್ಮಯ್‌ಗೆ ಒಲಿದ 'ಅದೃಷ್ಟಲಕ್ಷ್ಮೀ'; ಶೋಮ್ಯಾನ್ ಕಣ್ಣಿಗೆ ಬಿದ್ದ ನಿಹಾರ್ ಗೌಡ
ಭಾಗ್ಯಲಕ್ಷ್ಮೀ ಧಾರಾವಾಹಿ ತನ್ಮಯ್‌ಗೆ ಒಲಿದ 'ಅದೃಷ್ಟಲಕ್ಷ್ಮೀ'; ಶೋಮ್ಯಾನ್ ಕಣ್ಣಿಗೆ ಬಿದ್ದ ನಿಹಾರ್ ಗೌಡ
Bhagyalakshmi Kannada Serial Episode Update: 'ಭಾಗ್ಯಲಕ್ಷ್ಮೀ' ಧಾರಾವಾಹಿಯಲ್ಲಿ ಪಟ ಪಟ ಅಂತ ಮಾತನಾಡುತ್ತ, ಸದಾ ತಾಯಿಗೆ ಸಪೋರ್ಟ್ ಮಾಡುತ್ತ ತನ್ಮಯ್ ಪಾತ್ರ ಈಗಾಗಲೇ ಪ್ರೇಕ್ಷಕರ ಮನಸ್ಸು ಗೆದ್ದಿದ್ದಾರೆ. ಈ ಪಾತ್ರದಲ್ಲಿ ನಿಹಾರ್ ಗೌಡ ನಟಿಸುತ್ತಿದ್ದಾರೆ. ಇನ್ನೊಂದು ಅವಕಾಶ ಸಿಕ್ಕಿದೆ.

ದೊಡ್ಡ ಬಜೆಟ್‌ನ ಸಿನಿಮಾದಲ್ಲಿ ನಿಹಾರ್ ಗೌಡ
ಈಗ ನಿಹಾರ್ ಗೌಡ ಅವರು ಸಿನಿಮಾಕ್ಕೆ ಕಾಲಿಟ್ಟಿದ್ದಾರೆ. ನಿರ್ದೇಶಕ ಪ್ರೇಮ್ ಅವರ ಬಹುನಿರೀಕ್ಷಿತ 'ಕೆಡಿ' ಸಿನಿಮಾದಲ್ಲಿ ನಿಹಾರ್ ಗೌಡ ನಟಿಸಿದ್ದಾರೆ. ಹೌದು, ದೊಡ್ಡ ಬಜೆಟ್‌ನ ಸಿನಿಮಾದಲ್ಲಿ ನಿಹಾರ್ ಗೌಡ ಭಾಗಿ ಆಗಿದ್ದಾರೆ.
ಪ್ರೇಮ್ ಸಿನಿಮಾದಲ್ಲಿ ನಿಹಾರ್ ಗೌಡ
ಜೋಗಿ ಪ್ರೇಮ್ ನಿರ್ದೇಶನದಲ್ಲಿ ನಿಹಾರ್ ಗೌಡ ನಟಿಸಿದ್ದಾರೆ. ಯಾವಾಗಲೂಈ ಸ್ಟಾರ್ ನಟರನ್ನೇ ಡಿಫರೆಂಟ್ ಆಗಿ ತೋರಿಸುವ ಜೋಗಿ ಪ್ರೇಮ್, ಈಗ ಭಾಗ್ಯಲಕ್ಷ್ಮೀ ಧಾರಾವಾಹಿಯ ಬಾಲನಟ ನಿಹಾರ್ ಗೌಡರ ಪ್ರತಿಭೆಯನ್ನು ಗುರುತಿಸಿ ತಮ್ಮ ಸಿನಿಮಾದಲ್ಲಿ ಅವಕಾಶ ನೀಡಿದ್ದಾರೆ.
ಕಿರುತೆರೆಯಲ್ಲಿ ಪರಿಚಿತ ಬಾಲನಟ
ಧ್ರುವ ಸರ್ಜಾ ಅವರ ಬಾಲ್ಯದ ಪಾತ್ರದಲ್ಲಿ ನಿಹಾರ್ ಗೌಡ ಮುದ್ದಾಗಿ ನಟಿಸಿದ್ದಾರೆ. ಕಿರುತೆರೆ ವೀಕ್ಷಕರಿಗೆ ನಿಹಾರ್ ಗೌಡ ಪರಿಚಿತರಾಗಿದ್ದಾರೆ. ಈಗ ಅವರು ಸಿನಿಮಾಕ್ಕೂ ಕೂಡ ಕಾಲಿಟ್ಟಿದ್ದಾರೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್
'ಕೆಡಿ' ಕೇವಲ ಕನ್ನಡಕ್ಕೆ ಸೀಮಿತವಾಗದೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತಿರುವುದರಿಂದ, ನಿಹಾರ್ ನಟನೆ ಈಗ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುವ ಸಾಧ್ಯತೆಯಿದೆ.
ಸಿನಿಮಾ ಅವಕಾಶ ಬರುತ್ತೆ
'ಭಾಗ್ಯಲಕ್ಷ್ಮೀ' ಧಾರಾವಾಹಿಯಲ್ಲಿ ತನ್ಮಯ್ ಪಾತ್ರದಿಂದ ಗಮನಸೆಳೆದ ನಿಹಾರ್ ಗೌಡಗೆ ಈಗ ಸಿನಿಮಾ ಅವಕಾಶಗಳು ಹುಡುಕಿಕೊಂಡು ಬರುತ್ತಿರೋದು ಖುಷಿಯ ವಿಷಯ.
ಜೋಗಿ ಪ್ರೇಮ್ ನಿರ್ದೇಶನದಲ್ಲಿ ನಿಹಾರ್ ಗೌಡ
ಕೆಡಿ ಸಿನಿಮಾ ಶೂಟಿಂಗ್ ವೇಳೆ ಜೋಗಿ ಪ್ರೇಮ್ ಜೊತೆಗೆ ನಿಹಾರ್ ಗೌಡ ಫೋಟೋ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

