- Home
- Entertainment
- TV Talk
- Bhagyalakshmi Serial: ಕೊನೆಗೂ ದಿಗ್ಭ್ರಮೆ ಆಗುವಂತ ಘಟನೆ ನಡೀತು; ವೀಕ್ಷಕರಿಗೆ ಹೇಳಲಾರದಷ್ಟು ಬೇಸರ!
Bhagyalakshmi Serial: ಕೊನೆಗೂ ದಿಗ್ಭ್ರಮೆ ಆಗುವಂತ ಘಟನೆ ನಡೀತು; ವೀಕ್ಷಕರಿಗೆ ಹೇಳಲಾರದಷ್ಟು ಬೇಸರ!
Bhagyalakshmi Kannada Serial Episode: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಕೊನೆಗೂ ಅದ್ಭುತವೊಂದು ನಡೆದಿದೆ. ಹೌದು, ಇಷ್ಟು ವರ್ಷಗಳ ಕಾಲ ತಾನು ಮಾಡಿದ್ದು ತಪ್ಪು, ಶ್ರೇಷ್ಠ ಸರಿಯಿಲ್ಲ ಎಂದು ತಾಂಡವ್‌ಗೆ ಅರ್ಥ ಆಗಿದೆ, ಆದರೆ ಕಾಲ ಮಿಂಚಿ ಹೋಗಿದೆ.

ತಾಂಡವ್‌ಗೆ ಅರಿವಾಗಿದೆ
ತನ್ನೆಲ್ಲ ಕಷ್ಟಗಳು, ಅವಮಾನಗಳಿಗೆ ಶ್ರೇಷ್ಠ ಕಾರಣ ಎಂದು ತಾಂಡವ್‌ಗೆ ಅರಿವಾಗಿದೆ. ಇನ್ನು ತಾನು ಜೈಲಿನಲ್ಲಿದ್ದಾಗ ಮಗಳು ತನ್ವಿ ಹೇಳಿದ್ದಕ್ಕೆ, ಆದೀಶ್ವರ್ ಕಾಮತ್ ಬಿಡಿಸಿದ್ದಾನೆ, ಜಾಮೀನು ಕೊಟ್ಟಿದ್ದಾನೆ ಎನ್ನೋದು ಅವನಿಗೆ ಗೊತ್ತಾಗಿದೆ.
ತಾಂಡವ್‌ಗೆ ತಪ್ಪು ಅರಿವಾಯ್ತು
ತನ್ನ ಮಕ್ಕಳನ್ನು ಕಂಡರೆ ಶ್ರೇಷ್ಠಗೆ ಇಷ್ಟ ಆಗೋದಿಲ್ಲ ಎನ್ನೋದು ತಾಂಡವ್‌ಗೆ ಗೊತ್ತಾಗಿದೆ. ಹೀಗಾಗಿ ಅವನು ಶ್ರೇಷ್ಠಳಿಗೆ ಬೈದು, ಮನೆ ಬಿಟ್ಟು ಹೋಗಿದ್ದಾನೆ. ತಾಂಡವ್‌ಗೆ ಬುದ್ಧಿ ಕಲಿಸಬೇಕು, ಅವನು ಯಾವಾಗಲೂ ತಾನು ಹೇಳಿದಂತೆ ಕೇಳಬೇಕು ಎನ್ನೋದು ಶ್ರೇಷ್ಠ ಕುತಂತ್ರವಾಗಿತ್ತು. ಈಗ ತಾಂಡವ್‌ಗೆ ಅವನ ತಪ್ಪು ಅರಿವಾಗಿದೆ.
ಭಾಗ್ಯ ಬಳಿ ಕ್ಷಮೆ ಕೇಳಿದನು
ನನಗೆ ಏನೇ ಆದರೂ ಕೂಡ ಅಪ್ಪ-ಅಮ್ಮ, ಭಾಗ್ಯ ತಲೆ ಕೆಡಿಸಿಕೊಳ್ಳೋದಿಲ್ಲ, ಮಗಳು ತನ್ವಿ ಮಾತ್ರ ನನ್ನ ಜೊತೆಗೆ ಇರುತ್ತಾಳೆ. ನಾನು ಎಲ್ಲರಿಗೂ ನೋವು ಕೊಟ್ಟಿದ್ದೇನೆ ಎಂದು ತಾಂಡವ್‌ಗೆ ಅರಿವಾಗಿದೆ, ಈಗ ಅವನು ಭಾಗ್ಯ ಬಳಿ ಕ್ಷಮೆ ಕೇಳಿದ್ದಾನೆ.
ಭಾಗ್ಯ ಯಾರನ್ನು ಒಪ್ಪಿಕೊಳ್ತಾಳೆ?
ಆದೀಶ್ವರ್ ಕಾಮತ್‌ಗೆ ಭಾಗ್ಯ ಮೇಲೆ ಲವ್ ಆಗಿದೆ. ಮದುವೆ ಆದರೆ ಅದು ಭಾಗ್ಯಳನ್ನೇ ಎಂದು ಅವನು ಹೇಳಿದ್ದಾನೆ. ಹೀಗಾಗಿ ಆದೀಶ್ವರ್ ಕಾಮತ್ ಪ್ರೀತಿಯನ್ನು ಭಾಗ್ಯ ಒಪ್ಪಿಕೊಳ್ತಾಳಾ? ಇಲ್ಲವಾ? ಎಂಬ ಪ್ರಶ್ನೆ ಎದ್ದಿದೆ. ಸ್ನೇಹಿತನಾಗಿ ಭಾಗ್ಯ, ಅವನನ್ನು ಒಪ್ಪಿಕೊಳ್ಳಬಹುದು, ಆದರೆ ಪ್ರಿಯತಮನಾಗಿ ಡೌಟ್ ಇದೆ.
ಸೀರಿಯಲ್ ಮುಗಿತಿದ್ಯಾ?
ಆಕಾಶ ತಲೆ ಕೆಳಗಾದರೂ ತಾಂಡವ್ ಬದಲಾಗೋದಿಲ್ಲ ಎಂದುಕೊಳ್ಳಲಾಗಿತ್ತು. ಆದರೆ ಈಗ ತಾಂಡವ್, ಭಾಗ್ಯ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾನೆ. ಸೀರಿಯಲ್ ಮುಗಿಯೋ ಕಾರಣಕ್ಕೆ ಈ ರೀತಿ ಮಾಡಲಾಗುತ್ತಿದ್ಯಾ ಎಂಬ ಪ್ರಶ್ನೆಯೂ ಎದ್ದಿದೆ.
ವೀಕ್ಷಕರು ಏನು ಹೇಳುತ್ತಿದ್ದಾರೆ?
- ತಾಂಡವ್ ಒಳ್ಳೆಯವನಾದರೂ ಕೂಡ ನಂಬಬೇಡಿ
- 16 ವರ್ಷದ ಮಕ್ಕಳು ಅಂದ್ರೆ ,16 ವರ್ಷದ ಜೀವನ ನಡೆಸಿ ನೀನು ನಂಗೆ ಇಷ್ಟ ಇಲ್ಲ ಅಂತ 16 ವರ್ಷದ ಸಂಸಾರಕ್ಕೆ ಎಳ್ಳು ನೀರು ಬಿಟ್ಟು ಬೇರೆಯವರನ್ನು ಹೆಂಡತಿಯಾಗಿ ಮಾಡಿಕೊಂಡು, ನಿನ್ನ ಸ್ಥಾನವನ್ನು ಬೇರೆಯವರಿಗೆ ಕೊಟ್ಟವನು.... ಅದೇ ಕೆಲಸವನ್ನು ಹೆಣ್ಣು ಮಾಡಿದ್ರೆ ಒಪ್ಪಿಕೊಳ್ಳುತ್ತಿದ್ದನಾ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

