MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Bhagyalakshmi Serial: ಮೊಂಡು ಹಠದಿಂದ ಮುಗ್ಧ ಹೆಣ್ಣು ಕಷ್ಟದಲ್ಲೇ ಕೈತೊಳೆಯೋ ಹಾಗೆ ಮಾಡಿದ ಕುಸುಮಾ!

Bhagyalakshmi Serial: ಮೊಂಡು ಹಠದಿಂದ ಮುಗ್ಧ ಹೆಣ್ಣು ಕಷ್ಟದಲ್ಲೇ ಕೈತೊಳೆಯೋ ಹಾಗೆ ಮಾಡಿದ ಕುಸುಮಾ!

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ 2 ಮದುವೆಗಳಿಂದ ಭಾರೀ ಸೌಂಡ್‌ ಮಾಡ್ತಿದೆ. ತಾಂಡವ್‌ 2 ನೇ ಮದುವೆಯಾದರೆ, ಭಾಗ್ಯ ಕೂಡ 2 ನೇ ಮದುವೆ ಆಗಿದ್ದಾಳೆ. ಈ ಧಾರಾವಾಹಿಯ 2 ಮದುವೆ ಬಗ್ಗೆ ಕೆಲವರಿಗೆ ಬೇಸರ ಆದರೆ, ಇನ್ನೂ ಕೆಲವರಿಗೆ ಭಾಗ್ಯಳಿಗೆ ಒಳ್ಳೆಯ ಜೀವನ ಸಿಕ್ಕಿತು ಎಂಬ ಖುಷಿ ಸಿಕ್ಕಿದೆ.  

1 Min read
Author : Padmashree Bhat
Published : Apr 27 2026, 06:30 AM IST
Share this Photo Gallery
  • FB
  • TW
  • Linkdin
  • Whatsapp
15
ಒಲ್ಲದ ಮನಸ್ಸಿನ ಮದುವೆ
Image Credit : instagram and jiohotstar

ಒಲ್ಲದ ಮನಸ್ಸಿನ ಮದುವೆ

ತಾಂಡವ್ ಒಳ್ಳೆಯ ಕೆಲಸ ಹೊಂದಿರೋ, ಮಾಡರ್ನ್ ಹುಡುಗ. ಇಷ್ಟು ವರ್ಷಗಳ ಕಾಲ ತಾಯಿ ಹೇಳಿದಂತೆ ಕೇಳಿದ್ದ ಅವನಿಗೆ, ಮದುವೆ ಕೂಡ ಇಷ್ಟದಂತೆ ಆಗಿರಲಿಲ್ಲ. ಆದರೆ ಭಾಗ್ಯ ಮಾತ್ರ ಓದಿಲ್ಲವಾದರೂ ಕೂಡ ಸಂಸ್ಕಾರವಂತ, ಮುಗ್ಧತೆ ಹೊಂದಿದ್ದಳು. ಗಂಡ ಹೇಳಿದಂತೆ ಕೇಳುವ ಅವಳು ಒಂದು ಹಂತದವರೆಗೆ ಎಲ್ಲ ಕಷ್ಟವನ್ನು ಅನುಭವಿಸ್ತಾಳೆ. ಆಮೇಲೆ ಅವಳು ಗಂಡನ ವಿರುದ್ಧ ಮಾತನಾಡ್ತಾಳೆ.

25
ಮಕ್ಕಳು ಎಂದರೆ ಇಷ್ಟ
Image Credit : instagram and jiohotstar

ಮಕ್ಕಳು ಎಂದರೆ ಇಷ್ಟ

ತಾಂಡವ್‌ಗೆ ಭಾಗ್ಯ ಇಷ್ಟ ಇಲ್ಲ, ಆದರೆ ಮಕ್ಕಳು ಎಂದರೆ ಇಷ್ಟ. ನಾನು ಹಾಳಾದರೂ ಪರವಾಗಿಲ್ಲ, ಭಾಗ್ಯ ಮಾತ್ರ ಚೆನ್ನಾಗಿರಬಾರದು ಎಂದು ಅವನು ಪ್ಲ್ಯಾನ್‌ ಹಾಕಿದ್ದನು. ಇವನು ಮಾಡಿದ ಮೋಸಕ್ಕೆ ಈಗ ಜೈಲಿನಲ್ಲಿ ಊಟ ಮಾಡ್ತಿದ್ದಾನೆ.

Related Articles

Related image1
Bhagyalakshmi: ಕೊನೆಗೂ ಆದಿ-ಭಾಗ್ಯ ಮದ್ವೆ, ಮುಂದೆ ಕಾದಿದೆ ಮಾರಿಹಬ್ಬ- ತಾಳ್ಮೆಯಿಂದ ವರ್ತಿಸಲು ಮನವಿ
Related image2
ಲವ್‌ ಮಾಡಿದ್ದೆ, ಆದ್ರೆ ಅದೆಲ್ಲಾ ಈಗ ಹೇಳಲ್ಲ ಎನ್ನುತ್ತಲೇ 'ಭಾಗ್ಯ'ಳ ಗುಟ್ಟು ಬಿಚ್ಚಿಟ್ಟ ಸಿದ್ದರಾಮಯ್ಯ
35
ಭಾಗ್ಯ-ತಾಂಡವ್‌ ದೂರ ಆದರು
Image Credit : instagram and jiohotstar

ಭಾಗ್ಯ-ತಾಂಡವ್‌ ದೂರ ಆದರು

ಈಗ ಭಾಗ್ಯ ತಾಂಡವ್‌ ದೂರ ಆಗಿದ್ದಾರೆ. ಇವರಿಬ್ಬರಿಗೂ ಬೇರೆ ಮದುವೆ ಆಗಿದೆ. ಭಾಗ್ಯ ಮದುವೆಯನ್ನು ಸಮಾಜ ಒಪ್ಪೋದಿಲ್ಲ, ಇನ್ನು ಗಂಡನ ಮನೆಯಲ್ಲಿ ಬದುಕೋದು ಕೂಡ ಸುಲಭ ಇಲ್ಲ. ಅಂದಹಾಗೆ ತನ್ನ ತಾಯಿ ಎರಡನೇ ಮದುವೆ ಆಗಿರೋದು ತನ್ವಿಗೆ ಇಷ್ಟವೇ ಆಗ್ತಿಲ್ಲ.

45
ಕುಸುಮಾಳಿಂದ ಹಾಳಾಯ್ತು
Image Credit : instagram and jiohotstar

ಕುಸುಮಾಳಿಂದ ಹಾಳಾಯ್ತು

ತಂದೆ-ತಾಯಿಗೆ ತನ್ನ ಇಷ್ಟವನ್ನು ಅರ್ಥ ಮಾಡಿಸದೆ ತಾಂಡವ್‌ ಮದುವೆ ಆಗಿದ್ದನು. ಮಗನ ಇಷ್ಟವನ್ನು ಕೇಳದೆ ಮದುವೆ ಮಾಡಿದ್ದು ನಮ್ಮ ತಪ್ಪು ಎಂದು ಕುಸುಮಾ-ಧರ್ಮರಾಜ್‌ಗೆ ಅರ್ಥವೇ ಆಗಿಲ್ಲ. ಇದರಲ್ಲಿ ತಾಂಡವ್‌ ತಪ್ಪು ಎಷ್ಟಿದೆಯೋ ಅಷ್ಟೇ ಭಾಗ್ಯ ತಪ್ಪು ಕೂಡ ಇದೆ. ಅಪ್ಪ-ಅಮ್ಮನ ದೂರ ಆದಾಗ, ಇದರ ಪರಿಣಾಮ ಆ ಮಕ್ಕಳ ಜೀವನದ ಮೇಲೂ ಆಗುತ್ತದೆ. ಒಟ್ಟಿನಲ್ಲಿ ಭಾಗ್ಯ ಜೀವನ ಹಾಳಾಯ್ತು. ಈಗ ಮತ್ತೆ ಅವಳು ಬದುಕು ಕಟ್ಟಿಕೊಳ್ಳಬೇಕಿದೆ.

55
ಎಲ್ಲ ಸರಿ ಹೋಗುತ್ತಾ?
Image Credit : instagram and jiohotstar

ಎಲ್ಲ ಸರಿ ಹೋಗುತ್ತಾ?

ಕುಸುಮಾ ಮುಂದಾಳತ್ವ ಒಹಿಸಿ, ಈಗ ಭಾಗ್ಯಳಿಗೆ ಇನ್ನೊಂದು ಮದುವೆ ಮಾಡಿಸಿದ್ದಾಳೆ. ಆದರೆ ಅವಳ ಮೊಮ್ಮಕ್ಕಳು ಕೂಡ ಈ ಮದುವೆಯನ್ನು ಒಪ್ಪಬೇಕು, ಎಲ್ಲರೂ ಈ ಮದುವೆಯನ್ನು ಒಪ್ಪಬೇಕು. ಒಂದೇ ಬಾರಿಗೆ ಎಲ್ಲವೂ ಸರಿ ಹೋಗೋದಿಲ್ಲ. ಹೀಗಾಗಿ ಭಾಗ್ಯಗೆ ಮತ್ತೆ ಕಷ್ಟ ಬರಬಹುದು. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಭಾಗ್ಯಲಕ್ಷ್ಮಿ ಧಾರಾವಾಹಿ
ಕಲರ್ಸ್ ಕನ್ನಡ
ಕನ್ನಡ ಧಾರಾವಾಹಿ

Latest Videos
Recommended Stories
Recommended image1
ಗಂಡನ ಮನೆಯಲ್ಲಿ ವಿಚಿತ್ರ ಪ್ರಾಣಿ ಕಂಡು ಬೆಚ್ಚಿಬಿದ್ದ ನಟಿ ವೈಷ್ಣವಿ ಗೌಡ! ವಿಡಿಯೋ ಹಂಚಿಕೊಂಡ ಮೂಗುತಿ ಸುಂದರಿ
Recommended image2
Bhagyalakshmi: ಮತ್ತೊಂದು ಮದ್ವೆಯಾದ ಅಮ್ಮನ ಕಂಡ್ರೆ ಗುರ್​ ಎನ್ನೋ ತನ್ವಿ, ಇಲ್ನೋಡಿ ಭರ್ಜರಿ ಸ್ಟೆಪ್​
Recommended image3
ತಪ್ಪು ಅಂತ ಗೊತ್ತಿದ್ರೂ ಖಾಸಗಿ ವಿಡಿಯೋ ಯಾಕೆ ಮಾಡಿದ್ರು? ಹೇಗೆ ಲೀಕ್‌ ಆಯ್ತು? ಸತ್ಯ ಬಿಚ್ಚಿಟ್ಟ Sonu Gowda
Related Stories
Recommended image1
Bhagyalakshmi: ಕೊನೆಗೂ ಆದಿ-ಭಾಗ್ಯ ಮದ್ವೆ, ಮುಂದೆ ಕಾದಿದೆ ಮಾರಿಹಬ್ಬ- ತಾಳ್ಮೆಯಿಂದ ವರ್ತಿಸಲು ಮನವಿ
Recommended image2
ಲವ್‌ ಮಾಡಿದ್ದೆ, ಆದ್ರೆ ಅದೆಲ್ಲಾ ಈಗ ಹೇಳಲ್ಲ ಎನ್ನುತ್ತಲೇ 'ಭಾಗ್ಯ'ಳ ಗುಟ್ಟು ಬಿಚ್ಚಿಟ್ಟ ಸಿದ್ದರಾಮಯ್ಯ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved