MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Bhagyalakshmi: ಕೊನೆಗೂ ಆದಿ-ಭಾಗ್ಯ ಮದ್ವೆ, ಮುಂದೆ ಕಾದಿದೆ ಮಾರಿಹಬ್ಬ- ತಾಳ್ಮೆಯಿಂದ ವರ್ತಿಸಲು ಮನವಿ

Bhagyalakshmi: ಕೊನೆಗೂ ಆದಿ-ಭಾಗ್ಯ ಮದ್ವೆ, ಮುಂದೆ ಕಾದಿದೆ ಮಾರಿಹಬ್ಬ- ತಾಳ್ಮೆಯಿಂದ ವರ್ತಿಸಲು ಮನವಿ

ಕಲರ್ಸ್ ಕನ್ನಡದ ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ, ಎಲ್ಲಾ ವಿರೋಧಗಳ ನಡುವೆ ಕೊನೆಗೂ ಆದಿ ಮತ್ತು ಭಾಗ್ಯಳ ಮದುವೆ ನಡೆದಿದೆ. ತಾಂಡವ್‌ನ ನಿಜಬಣ್ಣ ಬಯಲು ಮಾಡಿದ ಭಾಗ್ಯಳ ಮುಂದಿನ ಜೀವನ ಸುಖವಾಗಿರುವುದೇ ಅಥವಾ ಹೊಸ ಸವಾಲುಗಳು ಕಾದಿವೆಯೇ ಎಂಬ ಕುತೂಹಲ ವೀಕ್ಷಕರಲ್ಲಿದೆ.

2 Min read
Author : Suchethana D
Published : Apr 12 2026, 12:26 PM IST
Share this Photo Gallery
  • FB
  • TW
  • Linkdin
  • Whatsapp
16
ಕೊನೆಗೂ ಆದಿ ಭಾಗ್ಯ ಮದುವೆ
Image Credit : Ccolors Kannada Instagram

ಕೊನೆಗೂ ಆದಿ-ಭಾಗ್ಯ ಮದುವೆ

ಕಲರ್ಸ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಭಾಗ್ಯಲಕ್ಷ್ಮಿ ಸೀರಿಯಲ್​ (Bhagyalakshmi Serial) ವೀಕ್ಷಕರಿಗೆ ಕೊನೆಗೂ ಗುಡ್​ನ್ಯೂಸ್​​ ಸಿಕ್ಕಿದೆ. ಭಾಗ್ಯಳ ಜೊತೆ ಆದಿಯ ಮದುವೆಯಾಗಿದೆ. ಈ ಮದುವೆಗೆ ಅಮ್ಮ ಸುನಂದ ಮತ್ತು ಮಗಳು ತನ್ವಿಯ ಭಾರಿ ವಿರೋಧವಿತ್ತು. ಅವರ ಆಸೆಯಂತೆಯೇ ತಾಂಡವ್​ ಜೊತೆ ಹಸೆಮಣೆ ಏರಿದ್ದ ಭಾಗ್ಯ, ಎಲ್ಲರ ಎದುರೇ ಆತನ ಅಸಲಿ ಮುಖವಾಡವನ್ನು ಕಳಚಿದ್ದಾಳೆ.

26
ಗಂಡನೇ ಪರದೈವ!
Image Credit : Jio Hotstar

ಗಂಡನೇ ಪರದೈವ!

ಗಂಡ ಎಂಥವನಾದರೂ ಪರವಾಗಿಲ್ಲ, ಅವನ ಜೊತೆ ಸಹಿಸಿಕೊಂಡು ಹೋಗಬೇಕು, ಪ್ರಾಣ ತೆಗೆಯಲು ಗಂಡ ಮುಂದಾಗಲಿ, ಇನ್ನಿಲ್ಲದಂತೆ ಚಿತ್ರಹಿಂಸೆ ನೀಡಲಿ ಅವನೇ ಪರಮಾತ್ಮ, ಅವನೇ ಪರದೈವ, ಒಮ್ಮೆ ತಾಳಿ ಕಟ್ಟಿಸಿಕೊಂಡರೆ ಮುಗಿಯಿತು, ಹೆಣ್ಣಾದವಳು ಪ್ರತಿಕ್ಷಣ ನರಕ ಅನುಭವಿಸಿದರೂ ಅದು ಅವಳ ಹಣೆಬರಹ ಎಂದು ಹೇಳುವ ಎಷ್ಟೋ ಹೆಣ್ಣು ಹೆತ್ತವರ ಕುಟುಂಬದವರಿಗೆ ಸಾಕ್ಷಿಯಾಗಿ ನಿಂತವಳು ಭಾಗ್ಯಳ ಅಮ್ಮ ಸುನಂದಾ. ಆದರೆ, ಕೊನೆಗೂ ಅವಳು ತಲೆ ಬಾಗಿದ್ದಾಳೆ.

Related Articles

Related image1
ಇನ್ನೇನು ವರ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿಯೇ ಮದುಮಗಳಿಗೆ ಮಾಜಿ ಲವರ್​ ಗುಂಡೇಟು: ಭೀಕರ ವಿಡಿಯೋ ವೈರಲ್​
Related image2
ರಕ್ತ ಕುದಿಯುತ್ತಿದೆ, ಹೃದಯ ಮಿಡಿಯುತ್ತಿದೆ: ಬೀದಿ ನಾಯಿಗಳಿಗಾಗಿ ನಟಿ ರಮ್ಯಾ ಕಣ್ಣೀರು; ಆಗಿದ್ದೇನು?
36
ಸೀರಿಯಲ್​ ಮುಗಿದಿಲ್ಲ
Image Credit : Jio Hotstar

ಸೀರಿಯಲ್​ ಮುಗಿದಿಲ್ಲ

ಕೊನೆಗೂ ಬಹುತೇಕ ವೀಕ್ಷಕರ ಆಸೆಯಂತೆ ಭಾಗ್ಯ ಮತ್ತು ಆದಿಯ ಮದುವೆಯಾಗಿದೆ. ಹಾಗೆಂದು ಸೀರಿಯಲ್​ ಮುಗಿಯತ್ತಾ? ಇಲ್ಲಪ್ಪ, ಖಂಡಿತಾ ಇಲ್ಲ. ಇದಾಗಲೇ ಒಂದು ಸಾವಿರ ಸಂಚಿಕೆ ಪೂರೈಸಿರುವ ಸೀರಿಯಲ್​ ಇನ್ನೂ ಒಂದಿಷ್ಟು ಸಾವಿರ ಸಂಚಿಕೆ ನಡೆಸಿದರೂ ಆಶ್ಚರ್ಯ ಇಲ್ಲ ಎನ್ನುವ ಕಮೆಂಟ್ಸ್​ಗಳ ಸುರಿಮಳೆಯೇ ಆಗುತ್ತಿದೆ.

46
ಇನ್ನೊಂದಷ್ಟು ವರ್ಷ
Image Credit : Ccolors Kannada Instagram

ಇನ್ನೊಂದಷ್ಟು ವರ್ಷ

ಇದಾಗಲೇ ಸೀರಿಯಲ್ ಮುಗಿಯುತ್ತದೆ ಎಂದು ಸೋಷಿಯಲ್​ ಮೀಡಿಯಾದಲ್ಲಿ ಚರ್ಚೆಆದಾಗಲೇ ಭಾಗ್ಯ ಅರ್ಥಾತ್​ ಸುಷ್ಮಾ ಕೆ.ರಾವ್​ ಸ್ಪಷ್ಟನೆ ಕೊಟ್ಟು ಸೀರಿಯಲ್ ಮುಗಿದಿಲ್ಲ ಎಂದಿದ್ದರು. ಈಗಲೂ ಸೀರಿಯಲ್​ ಇನ್ನೂ ಒಂದಷ್ಟು ವರ್ಷ ನಡೆಯುತ್ತದೆ ಎಂದಿರೋ ಸೀರಿಯಲ್​ ಪ್ರೇಮಿಗಳು ಕಥೆಯನ್ನೂ ತಾವೇ ಬರೆದಿದ್ದಾರೆ.

56
ಕರ್ನಾಟಕವೇ ಖುಷಿ ಪಡೋ ಸುದ್ದಿ
Image Credit : Ccolors Kannada Instagram

ಕರ್ನಾಟಕವೇ ಖುಷಿ ಪಡೋ ಸುದ್ದಿ

ಹಲವು ವೀಕ್ಷಕರು ಇದಕ್ಕೆ ಖುಷಿಯಿಂದ ಕಮೆಂಟ್​ ಹಾಕಿದ್ದರೆ, ಮತ್ತೆ ಕೆಲವರು, ಇಡೀ ಕರ್ನಾಟಕಕ್ಕೆ ಖುಷಿ ಪಡುವ ಸುದ್ದಿ ಇದು, ಆದಿ ಭಾಗ್ಯ ಮದುವೆ ಆಯ್ತು ಎಂದಿದ್ದಾರೆ. ಮತ್ತೆ ಕೆಲವರು ಇದು ಅತ್ಯಂತ ಕೆಟ್ಟ ಕಥೆ ಎಂದಿದ್ದರೆ, ಹಲವರು ಈ ಕಮೆಂಟ್​ ಮಾಡಿದವರಿಗೆ ಉಗಿಯುತ್ತಿದ್ದಾರೆ. ನಿಮ್ಮಂಥ ಮನಸ್ಥಿತಿಯಿಂದಲೇ ಹೆಣ್ಣುಮಕ್ಕಳು ಆ*ತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾರೆ. ಗಂಡು ಏನು ಮಾಡಿದ್ರೂ ಮಾತನಾಡದವರು, ಹೆಣ್ಣು ಇನ್ನೊಂದು ಮದುವೆಯಾದರೆ ತಪ್ಪು ಎನ್ನೋದು ಎಂಥ ನೀಚ ಮನಸ್ಥಿತಿ ಎನ್ನುತ್ತಿದ್ದಾರೆ.

66
ಸಲೀಸಾಗಿ ಭಾಗ್ಯಳನ್ನು ಬಿಟ್​ಬಿಡ್ತಾರಾ?
Image Credit : Jio hotstar

ಸಲೀಸಾಗಿ ಭಾಗ್ಯಳನ್ನು ಬಿಟ್​ಬಿಡ್ತಾರಾ?

ಅದರೆ ಭಾಗ್ಯಳನ್ನು ಇಷ್ಟು ಸಲೀಸಾಗಿ ಬಿಟ್ಟುಬಿಡ್ತಾರಾ ನಿರ್ದೇಶಕರು ಎನ್ನೋದು ಈಗಿರುವ ಪ್ರಶ್ನೆ. ಅದಕ್ಕಾಗಿ ನೆಟ್ಟಿಗರೊಬ್ಬರು ತಾವೇ ಮುಂದಿನ ಸ್ಟೋರಿ ಬರೆದುಬಿಟ್ಟಿದ್ದಾರೆ. ರುದ್ರೇಶ್​ ಸಿಎನ್​ ಎನ್ನುವವರು ಫೇಸ್​ಬುಕ್​ನ ಪ್ರೊಮೋದಲ್ಲಿ ಕಮೆಂಟ್​ ಮಾಡಿದ್ದಾರೆ. ಅವರು, ಅಭಿಮಾನಿಗಳೆಲ್ಲ ಶಾಂತ ರೀತಿಯಿಂದ ವರ್ತಿಸಬೇಕು... ಭಾಗ್ಯ ಇವತ್ತು ಮದುವೆಯಾಗಿದ್ದಾಳೆ ಇನ್ನ ಅವರ ಮನೆಗೆ ಹೋಗಬೇಕು ಅಲ್ಲಿ ಆದಿ ಅತ್ತೆ ಮತ್ತೆ ತಂಗಿ ಜೊತೆ ಹೆಣಗಬೇಕು ಆಮೇಲೆ ಆದಿಗೂ ಭಾಗ್ಯ ಮಧ್ಯೆ ಮಿಸ್ ಅಂಡರ್​ಸ್ಟ್ಯಾಂಡಿಗ್​ ಆಗಬೇಕು, ತದನಂತರ ಭಾಗ್ಯ ಮನಸ್ಸಿನಲ್ಲಿ ಮದುವೆ ವಯಸ್ಸಿಗೆ ಬಂದಿರೋ ಮಗಳಿದ್ರೂ... ಎರಡನೇ ಮದುವೆ ಯಾಕೆ ಆಗಬೇಕಾಗಿತ್ತು ಅಂತ ದೇವಸ್ಥಾನಕ್ಕೆ ಹೋಗಿ ಅಳಬೇಕು... ಈ ಮಧ್ಯೆ ಮಗಳಿಗೆ ಮದುವೆಯಾಗಿ ಹೊಸದಾಗಿ ಬರುವ ಅಳಿಯ ನಿಮ್ಮಮ್ಮ ಎರಡನೇ ಮದುವೆ ಆಗಿದೆ ಯಾಕೆ ಅಂತ ಕೇಳಬೇಕು..... ಸೊಸೆ ಭಾಗ್ಯನ ಸೊಸೆ ಅತ್ತೆ ನೀವು ಎರಡು ಮದುವೆ ಆಗಿದ್ದು.. ಯಾಕೆ ಅಂತ ಕೇಳಬೇಕು.. ಇದೆಲ್ಲ ಮುಂದಿನ ದಿನಮಾನಗಳಲ್ಲಿ ಇರುವುದರಿಂದ ಇಷ್ಟಕ್ಕೆ ಶುಭಂ... ಹೇಳಿಲ್ಲ ಅದರಿಂದ ಯಾರು ಗಲಾಟೆ ಮಾಡ್ಕೊಳ್ಳಬೇಡಿ ಭಾಗ್ಯಗೆ ಮೊಮ್ಮಕ್ಕಳು ಆಗೋವರೆಗೂ ಧಾರಾವಾಹಿ ಮುಗಿಯಲ್ಲ ಹೆದರಬೇಡಿ ಎಂದಿದ್ದು, ಇದಕ್ಕೆ ಹಲವರು ಹೌದುದು ಎನ್ನುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಭಾಗ್ಯಲಕ್ಷ್ಮಿ ಧಾರಾವಾಹಿ
ಕಲರ್ಸ್ ಕನ್ನಡ
ಟಿವಿ ಶೋ
ಮನರಂಜನಾ ಸುದ್ದಿ
ಸಂಬಂಧಗಳು
ಮದುವೆ

Latest Videos
Recommended Stories
Recommended image1
'ಲೈಫ್ ವಿತೌಟ್ ವೈಫ್' ಕ್ಲಾರಿಟಿ ಕೊಟ್ಟ 'ರಾಪರ್ ಕಿಂಗ್'.. ಮತ್ತೆ ಮದುವೆಗೆ ರೆಡಿನಾ ಚಂದನ್ ಶೆಟ್ಟಿ? ಹುಡ್ಗಿ ಯಾರು?
Recommended image2
ಸ್ಮೋಕಿಂಗ್​ ಸ್ಟೈಲ್​ನಲ್ಲಿ ಹುಟ್ಟುಹಬ್ಬದ ದೀಪ ಹಚ್ಚಿದ Bigg Boss ಹಂಸಾ ನಾರಾಯಣಸ್ವಾಮಿ- Video viral
Recommended image3
Karna Serial ರಿಯಾ ಪಿಯುಸಿಯಲ್ಲಿ ಶೇ.97 ಅಂಕ ಪಡೆದದ್ದು ಹೇಗೆ? ಓದಿನ ಗುಟ್ಟು ರಿವೀಲ್​ ಮಾಡಿದ ನಟಿ
Related Stories
Recommended image1
ಇನ್ನೇನು ವರ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿಯೇ ಮದುಮಗಳಿಗೆ ಮಾಜಿ ಲವರ್​ ಗುಂಡೇಟು: ಭೀಕರ ವಿಡಿಯೋ ವೈರಲ್​
Recommended image2
ರಕ್ತ ಕುದಿಯುತ್ತಿದೆ, ಹೃದಯ ಮಿಡಿಯುತ್ತಿದೆ: ಬೀದಿ ನಾಯಿಗಳಿಗಾಗಿ ನಟಿ ರಮ್ಯಾ ಕಣ್ಣೀರು; ಆಗಿದ್ದೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved