ಟಿವಿಯಲ್ಲಿ ಇದನ್ನ ತೋರಿಸ್ಲೇ ಇಲ್ಲ: ಧನುಷ್ಗೆ ಬಿಗ್ಬಾಸ್ ಕೊಟ್ರು ಖಡಕ್ ವಾರ್ನಿಂಗ್
ಕನ್ನಡ ಬಿಗ್ಬಾಸ್ ಮನೆಯಲ್ಲಿ ಕನ್ಫೆಷನ್ ರೂಮ್ ರಹಸ್ಯವನ್ನು ಬಾಯ್ಬಿಟ್ಟ ಧನುಷ್ಗೆ ಬಿಗ್ಬಾಸ್ ಕಡೆಯಿಂದ ಕಟ್ಟುನಿಟ್ಟಿನ ಎಚ್ಚರಿಕೆ ಸಿಕ್ಕಿದೆ. ಇದೇ ವೇಳೆ ಜೋಕರ್ ಕಾರ್ಡ್ ಬಳಸಿ ಧನುಷ್ ನಾಮಿನೇಷನ್ನಿಂದ ಬಚಾವ್ ಆಗಿದ್ದಾರೆ.

ಧನುಷ್ ಎಡವಟ್ಟು
ಕನ್ನಡ ಬಿಗ್ಬಾಸ್ 12ನೇ ವಾರಕ್ಕೆ ಕಾಲಿಟ್ಟಿದ್ದು, ಹೊಸ ಹೊಸ ಟಾಸ್ಕ್ಗಳ ಮೂಲಕ ಸ್ಪರ್ಧಿಗಳಲ್ಲಿ ಆಟದ ಹುಮ್ಮಸ್ಸು ಹೆಚ್ಚಾಗಿದೆ. ಮಂಗಳವಾರ ಸಂಚಿಕೆಯಲ್ಲಿ ಪ್ರಸಾರವಾದ ದೃಶ್ಯವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕನ್ಫೆಷನ್ ರೂಮ್ನಿಂದ ಬಂದು ಮಾಡಿಕೊಂಡ ಎಡವಟ್ಟಿನಿಂದ ಧನುಷ್ ಬಿಗ್ಬಾಸ್ನಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ.
ಗುಳ್ಳೆನರಿ ಕಲ್ಪನೆಯಲ್ಲಿ ಆಟ
ಹೌದು, ಮಂಗಳವಾರ ಸಂಚಿಕೆಯಲ್ಲಿ ಗುಳ್ಳೆನರಿ ಕಲ್ಪನೆ ತೆಗೆದುಕೊಂಡು ಬರಲಾಗಿತ್ತು. ಸ್ಪರ್ಧಿಗಳಿಗೆ ನೀವು ಯಾರಿಗೆ ನಂಬಿಕೆದ್ರೋಹ ಮಾಡುತ್ತೀರಿ ಎಂದಾಗ ಎಲ್ಲರೂ ತಮ್ಮ ವಿವೇಚನೆಯಲ್ಲಿ ಒಬ್ಬರ ಹೆಸರು ತೆಗೆದುಕೊಂಡಿದ್ದರು. ಈ ಒಂದು ಪ್ರಕ್ರಿಯೆ ಅತ್ಯಂತ ರಹಸ್ಯವಾಗಿ ಮತ್ತು ಬಿಗ್ಬಾಸ್ ಸಮ್ಮುಖದಲ್ಲಿ ನಡೆದಿತ್ತು. ಈ ಪ್ರಕ್ರಿಯೆ ಬಗ್ಗೆ ಯಾರೊಂದಿಗೂ ಚರ್ಚೆ ನಡೆಸದಂತೆ ಬಿಗ್ಬಾಸ್ ಆದೇಶಿಸಿದ್ದರು.
Fox in the house
ಈ ಪ್ರಕ್ರಿಯೆ ಮುಗಿಸಿ ಹೊರಬಂದ ಧನುಷ್, Fox in the house ಎಂದು ಹೇಳುತ್ತಾ ಹೊರಗಡೆ ಬಂದರು. ಧನುಷ್ ಪದೇ ಪದೇ ಹೇಳುತ್ತಿದ್ದ ಈ ಮಾತು ಕೆಂಪು ಸೋಫಾ ಮೇಲೆ ಕುಳಿತಿದ್ದ ಜಗದೀಶ್ ಮತ್ತು ಕಿರಣ್ ಶಾಸ್ತ್ರಿ ಕೇಳಿಸಿಕೊಳ್ಳುತ್ತಾರೆ. ಆ ತಕ್ಷಣವೇ ಧನುಷ್ ಅವರನ್ನ ಬಿಗ್ಬಾಸ್ ಕನ್ಪೆಷನ್ ರೂಮ್ಗೆ ಬರುವಂತೆ ಸೂಚನೆ ನೀಡುತ್ತಾರೆ.
ಕಟ್ಟಕಡೆಯ ಎಚ್ಚರಿಕೆ
ಧನುಷ್ ಒಳಗೆ ಬರುತ್ತಿದ್ದಂತೆ, ಇಲ್ಲಿ ನಡೆದ ಯಾವುದೇ ಮಾತು ಮತ್ತು ಯಾವುದೇ ವಿಷಯವನ್ನು ಯಾರ ಜೊತೆಯಲ್ಲಿಯೂ ಹಂಚಿಕೊಳ್ಳುವಂತಿಲ್ಲ ಹಾಗೂ ಪ್ರಸ್ತಾಪ ಮಾಡುವಂತಿಲ್ಲ ಎಂದು ಹೇಳಿದ್ದು ನಿಮಗೆ ಅರ್ಥ ಆಯ್ತೋ ಇಲ್ಲ ಎಂದು ಖಡಕ್ ಆಗಿ ಬಿಗ್ಬಾಸ್ ಪ್ರಶ್ನೆ ಮಾಡಿದ್ದಾರೆ. ಇದು ನಿಮಗೆ ನೀಡುತ್ತಿರುವ ಕಟ್ಟಕಡೆಯ ಎಚ್ಚರಿಕೆ ಎಂದು ಹೇಳಿ ಕಳುಹಿಸಿದ್ದಾರೆ.
ಜೋಕರ್ ಕಾರ್ಡ್
ಈ ವಾರದ ಮೊದಲ ಟಾಸ್ಕ್ ಗೆದ್ದ ಧನುಷ್ ಜೋಕರ್ ಕಾರ್ಡ್ ತಮ್ಮದಾಗಿಸಿಕೊಂಡಿದ್ದರು. ಈ ಜೋಕರ್ ಕಾರ್ಡ್ ಬಳಸಿ ವಾರದ ನಾಮಿನೇಷನ್ ಪ್ರಕ್ರಿಯೆಯಿಂದ ಸೇವ್ ಆಗಿದ್ದಾರೆ. ಈ ವಾರ ಮನೆಯಿಂದ ಹೊರಗೆ ಹೋಗಲು ಯಶಸ್, ಆಸಿಯಾ, ಸೌಂದರ್ಯ, ಕಿರಣ್ ಶಾಸ್ತ್ರಿ ಮತ್ತು ಜಗದೀಶ್ ನಾಮಿನೇಟ್ ಆಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.















