ಸೌಂದರ್ಯಾಗೆ ಬಿಗ್ಬಾಸ್ ಮನೆಯಲ್ಲಿಯೇ ಕರ್ಮ ರಿಟರ್ನ್; ಶೆಟ್ಟಿ ಡಾನ್ಗೆ ಬಿಗ್ ಶಾಕ್
ಬಿಗ್ಬಾಸ್ ಮನೆಯಲ್ಲಿ ಆಸಿಯಾ ಫಿರ್ದೋಸ್ ಮತ್ತು ಸೌಂದರ್ಯಾ ಶೆಟ್ಟಿ ನಡುವಿನ ಜಗಳದ ಬಳಿಕ ಕುತೂಹಲಕಾರಿ ತಿರುವು ಸಿಕ್ಕಿದೆ. ಪುರುಷ ಸ್ಪರ್ಧಿಗಳ ಮತದಾನದ ಮೂಲಕ ಮನೆಯ ಯುವರಾಣಿಯ ಆಯ್ಕೆ ನಡೆದಿದ್ದು, ಸೌಂದರ್ಯಾಗೆ ಅನಿರೀಕ್ಷಿತ ಶಾಕ್ ಎದುರಾಗಿದೆ.

ಸೌಂದರ್ಯಾ ಶೆಟ್ಟಿಗೆ ಬಿಗ್ ಶಾಕ್
ಬಿಗ್ಬಾಸ್ ಮನೆಯಲ್ಲಿದ್ದ ಆಟ ಯಾವುದೇ ಕ್ಷಣದಲ್ಲಿ ಬದಲಾವಣೆಯಾಗುವ ಸಾಧ್ಯತೆಗಳಿರುತ್ತವೆ. ಈ ಒಂದು ವಿಷಯವನ್ನು ಅರಿತುಕೊಂಡ್ರೆ ಸ್ಪರ್ಧಿಗಳು ಫಿನಾಲೆ ವೇದಿಕೆಯನ್ನು ತಲುಪೋದು ಗ್ಯಾರಂಟಿ. ಇದೀಗ ಬಿಗ್ಬಾಸ್ ಮನೆಯಲ್ಲಿ ತಮ್ಮ ಮಾತುಗಳಿಂದಲೇ ಸದ್ದು ಮಾಡುತ್ತಿದ್ದ ಸೌಂದರ್ಯಾ ಶೆಟ್ಟಿಗೆ ಬಿಗ್ ಶಾಕ್ ಎದುರಾಗಿದೆ.
ಆಸಿಯಾ ಫಿರ್ದೋಸ್ ಮತ್ತು ಸೌಂದರ್ಯಾ ಶೆಟ್ಟಿ
ಶನಿವಾರ ಮತ್ತು ಭಾನುವಾರದ ಸಂಚಿಕೆ ಬಳಿಕ ಸ್ಪರ್ಧಿಗಳಿಗೆ ಆಸಿಯಾ ಫಿರ್ದೋಸ್ ಮತ್ತು ಸೌಂದರ್ಯಾ ಶೆಟ್ಟಿ ನಡುವಿನ ಜಗಳಕ್ಕೆ ಕಾರಣ ಏನು ಎಂಬುದರ ಬಗ್ಗೆ ಸ್ಪಷ್ಟತೆ ಸಿಕ್ಕಿತ್ತು. ಈಗಾಗಲೇ ನಾನು ನಂಬಿಕೆಗೆ ಅರ್ಹಳಲ್ಲ ಎಂದು ಹೇಳಿಕೊಂಡಿರುವ ಗಾನವಿ ಗೌಡ ಎಲ್ಲರಿಂದ ದೂರವಾಗಿ ಒಂಟಿಯಾಗಿದ್ದಾರೆ.
ವೀಕೆಂಡ್ ಸಂಚಿಕೆಯಲ್ಲಿ ಸ್ಪಷ್ಟತೆ
ಈ ಹಿಂದಿನ ವಾರದಲ್ಲಿ ಯಶಸ್ ತಮ್ಮನ್ನು ಬಲಹೀನ ಸ್ಪರ್ಧಿ ಎಂದು ಘೋಷಿಸಿ ಕ್ಯಾಪ್ಟನ್ಸಿ ಟಾಸ್ಕ್ನಿಂದ ಹೊರಗಿಟ್ಟಾಗ, ಮುಂದೆ ತಮಗೆ ಸಿಕ್ಕ ಅವಕಾಶದಲ್ಲಿ ಮಂಜು ಜೊತೆ ಆಸಿಯಾ ಮೈತ್ರಿ ಮಾಡಿಕೊಂಡಿದ್ದರು. ಈ ಮೈತ್ರಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಸೌಂದರ್ಯಾ ಶೆಟ್ಟಿ, ತಮ್ಮ ಪ್ರಖರವಾದ ಮಾತುಗಳಿಂದ ಆಸಿಯಾವರನ್ನು ಮಾನಸಿಕವಾಗಿ ಕುಂದಿಸುವ ಪ್ರಯತ್ನ ಮಾಡಿದ್ದರು. ಈ ವಿಚಾರ ಸ್ಪರ್ಧಿಗಳಿಗೆ ವೀಕೆಂಡ್ ಸಂಚಿಕೆಯಲ್ಲಿ ಸ್ಪಷ್ಟವಾಗಿತ್ತು.
ಮನೆಯ ಯುವರಾಣಿ
ಸದ್ಯ ಬಿಗ್ಬಾಸ್ ಮನೆಯಲ್ಲಿ ಸೌಂದರ್ಯಾ ಶೆಟ್ಟಿ, ಆಸಿಯಾ ಫಿರ್ದೋಸ್, ಗಾನವಿ ಗೌಡ ಮೂವರು ಮಹಿಳಾ ಸ್ಪರ್ಧಿಗಳಿದ್ದಾರೆ. ಈ ಮೂವರ ಪೈಕಿ ಯಾರು ಯುವರಾಣಿ ಆಗಲು ಅರ್ಹರು ಎಂಬುದನ್ನು ಪುರುಷ ಸದಸ್ಯರು ಆಯ್ಕೆ ಮಾಡುವ ಅವಕಾಶವನ್ನು ಬಿಗ್ಬಾಸ್ ನೀಡಿದ್ದಾರೆ.
ಆಸಿಯಾ ಮನೆಯ ಯುವರಾಣಿ
ಇಂದು ಬಿಡುಗಡೆಯಾಗಿರುವ ಪ್ರೋಮೋ ಪ್ರಕಾರ, ಆಸಿಯಾ ಬಿಗ್ಬಾಸ್ ಮನೆಯ ಯುವರಾಣಿಯಾಗಿದ್ದಾರೆ. ಆಸಿಯಾ ಅವರಿಗೆ 6 ಗ್ರೀನ್ ಮತ್ತು 1 ರೆಡ್ ಫ್ಲ್ಯಾಗ್ ಸಿಕ್ಕಿದೆ. ಗಾನವಿ ಗೌಡಗೆ 1 ಗ್ರೀನ್ ಮತ್ತು 6 ರೆಡ್ ಫ್ಲ್ಯಾಗ್ ಸಿಕ್ಕಿದ್ರೆ, ಸೌಂದರ್ಯಾ ಶೆಟ್ಟಿಗೆ ಏಳಕ್ಕೆ ಏಳು ಸಹ ರೆಡ್ ಫ್ಲ್ಯಾಗ್ ಸಿಕ್ಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.













