- Home
- Entertainment
- TV Talk
- Bigg Boss 11 Contestant: ಚೈತ್ರಾ ಕುಂದಾಪುರ ಲೈಫ್‌ನಲ್ಲಿ ಅವಧೂತ ವಿನಯ್ ಗುರೂಜಿ ಹೇಳಿದ್ದ ಭವಿಷ್ಯ ನಡೆದೇ ಹೋಯ್ತು!
Bigg Boss 11 Contestant: ಚೈತ್ರಾ ಕುಂದಾಪುರ ಲೈಫ್‌ನಲ್ಲಿ ಅವಧೂತ ವಿನಯ್ ಗುರೂಜಿ ಹೇಳಿದ್ದ ಭವಿಷ್ಯ ನಡೆದೇ ಹೋಯ್ತು!
ಬಿಗ್ ಬಾಸ್ ಕನ್ನಡ ಸೀಸನ್ 11 ಶೋ ಮೂಲಕ ಕನ್ನಡ ಕಿರುತೆರೆ ಪ್ರಿಯರಿಗೆ ಹತ್ತಿರ ಆಗಿರೋ ಚೈತ್ರಾ ಕುಂದಾಪುರ ಈಗ ಶ್ರೀಕಾಂತ್ ಕಶ್ಯಪ್ ಅವರನ್ನು ಮದುವೆ ಆಗಿದ್ದಾರೆ.

ಇವರಿಬ್ಬರು ಮೂಲತಃ ಉಡುಪಿಯವರೇ. ಚೈತ್ರಾ ಕುಂದಾಪುರ, ಶ್ರೀಕಾಂತ್ ಅವರು ಒಂದೇ ಕಾಲೇಜಿನಲ್ಲಿ ಓದಿದವರು, ಒಂದೇ ವಾಹಿನಿಯಲ್ಲಿ ಕೆಲಸ ಮಾಡಿದವರು.
ಚೈತ್ರಾ ಕುಂದಾಪುರ ಒಂದಷ್ಟು ವಿವಾದ, ಆರೋಪ ಹೊತ್ತಿಕೊಂಡು ಜೈಲಿನಲ್ಲಿದ್ದಾಗಲೂ ಕೂಡ ಶ್ರೀಕಾಂತ್ ದೂರ ಆಗಿರಲಿಲ್ಲ. ಜೈಲಿಗೆ ಬಂದು ನಾನು ಅಡುಗೆ ಮಾಡ್ತೀನಿ, ಡ್ರೈವಿಂಗ್ ಬರತ್ತೆ, ಪೂಜೆ ಮಾಡ್ತೀನಿ, ಎಲ್ಲೇ ಹೋದರೂ ಬದುಕಬಲ್ಲೆ, ನಿನ್ನನ್ನು ಚೆನ್ನಾಗಿ ನೋಡಿಕೊಳ್ಳಬಲ್ಲೆ ಎಂದು ಚೈತ್ರಾಗೆ ಶ್ರೀಕಾಂತ್ ಮಾತು ಕೊಟ್ಟಿದ್ದರಂತೆ.
ಚೈತ್ರಾ ಕುಂದಾಪುರ ಹಾಗೂ ಶ್ರೀಕಾಂತ್ ಕಶ್ಯಪ್ ಅವರ ಜಾತಕ ನೋಡಿದವರು, ಚೈತ್ರಾಗೆ ಮದುವೆ ಲೇಟ್ ಆಗಲೂಬಹುದು, ಆದರೆ ಈ ವರ್ಷ ಶ್ರೀಕಾಂತ್ ಮದುವೆ ಆಗಲಿದೆ ಎಂದು ಹೇಳಿದ್ದರಂತೆ. ಆ ಮಾತು ನಿಜವಾಗಿದೆ.
ಚೈತ್ರಾ ಕುಂದಾಪುರ ಅವರನ್ನು ಮದುವೆಯಾದರೆ, ಶ್ರೀಕಾಂತ್ ಕಶ್ಯಪ್ ಆಧ್ಯಾತ್ಮಿಕ ಜರ್ನಿಗೆ ಹತ್ತಿರ ಆಗುತ್ತಾರೆ ಎಂದು ಕೂಡ ಹೇಳಿದ್ದರಂತೆ.
ಚೈತ್ರಾ ಕುಂದಾಪುರ ಹಾಗೂ ಶ್ರೀಕಾಂತ್ ಕಶ್ಯಪ್ ಅವರಿಗೆ ವಾಹಿನಿಯಲ್ಲಿ ಕೆಲಸ ಮಾಡುವಾಗ ಮದುವೆ ಆಗುವ ಯೋಚನೆಯೇ ಇರಲಿಲ್ಲ. ಒಮ್ಮೆ ಚೈತ್ರಾ ನೋಡಿ ಅವಧೂತ ವಿನಯ್ ಗುರೂಜಿ ಅವರು ಮದುವೆ ಯಾವಾಗ ಎಂದು ಪ್ರಶ್ನೆ ಮಾಡಿದ್ದರಂತೆ.
ನಿನ್ನ ಜೊತೆ ಕೊನೇವರೆಗೂ ಇರೋದು ಶ್ರೀಕಾಂತ್ ಮಾತ್ರ ಎಂದು ಗುರೂಜಿ ಹೇಳಿದ್ದರಂತೆ. ಈ ಮಾತನ್ನು ಚೈತ್ರಾ ಕುಂದಾಪುರ ಅವರು ನ್ಯೂಸೋ ನ್ಯೂಸು ಯುಟ್ಯೂಬ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಅಂದಹಾಗೆ ಚೈತ್ರಾ ಕುಂದಾಪುರ, ಶ್ರೀಕಾಂತ್ ಪರಸ್ಪರ ಮಗಾ ಅಂತಲೇ ಕರೆದುಕೊಳ್ಳುತ್ತಾರಂತೆ.