- Home
- Entertainment
- TV Talk
- ಅರ್ಹರು Bigg Boss ಗೆದ್ದಿಲ್ಲ, ಗಿಲ್ಲಿ ನಟನೂ ಗೆಲ್ಲಲ್ಲ: ಖ್ಯಾತ ಜ್ಯೋತಿಷಿ ಪ್ರಶಾಂತ್ ಕಿಣಿ ಭವಿಷ್ಯ!
ಅರ್ಹರು Bigg Boss ಗೆದ್ದಿಲ್ಲ, ಗಿಲ್ಲಿ ನಟನೂ ಗೆಲ್ಲಲ್ಲ: ಖ್ಯಾತ ಜ್ಯೋತಿಷಿ ಪ್ರಶಾಂತ್ ಕಿಣಿ ಭವಿಷ್ಯ!
Bigg Boss Kannada Season 12 Grand Finale: ಗಿಲ್ಲಿ ನಟ ಅವರು ಬಿಗ್ ಬಾಸ್ ಗೆಲ್ಲುತ್ತಾರಾ? ಇಲ್ಲವಾ ಎಂಬ ಪ್ರಶ್ನೆ ಇತ್ತು. ಈಗ ಖ್ಯಾತ ಜ್ಯೋತಿಷಿ ಪ್ರಶಾಂತ್ ಕಿಣಿ ಅವರು ಮತ್ತೆ ಗಿಲ್ಲಿ ಬಿಗ್ ಬಾಸ್ ಗೆಲ್ಲೋದಿಲ್ಲ ಎಂದು ಹೇಳಿದ್ದಾರೆ.

BBK 12
ಈ ಹಿಂದೆಯೇ ಗಿಲ್ಲಿ ನಟ ಅವರು ಬಿಗ್ ಬಾಸ್ ಗೆಲ್ಲೋದಿಲ್ಲ ಎಂದು ಪ್ರಶಾಂತ್ ಕಿಣಿ ಹೇಳಿದ್ದರು. ಅದರಂತೆ ಅವರಿಗೆ ಸಾಕಷ್ಟು ನೆಗೆಟಿವ್ ಕಾಮೆಂಟ್ಸ್ ಬಂದಿತ್ತು. ಈಗ ಮತ್ತೆ ಅದೇ ಮಾತನಾಡಿದ್ದಾರೆ.
ಪ್ರಶಾಂತ್ ಕಿಣಿ ಹೇಳಿದ್ದೇನು?
ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಗ್ರ್ಯಾಂಡ್ ಫಿನಾಲೆಗೆ ಒಂದು ದಿನ ಇದ್ದಾಗಲೇ ಮತ್ತೆ ಟ್ವೀಟ್ ಮಾಡಿರುವ ಪ್ರಶಾಂತ್ ಕಿಣಿ ಅವರು, “ಗಿಲ್ಲಿ ಬಿಗ್ ಬಾಸ್ ಗೆಲ್ಲಲ್ಲ” ಎಂದಿದ್ದಾರೆ.
ಗಿಲ್ಲಿ ನಟ ಗೆಲ್ಲೋದಿಲ್ಲ ಎಂದು ಭವಿಷ್ಯ ನುಡಿದೆ
“ಗಿಲ್ಲಿ ನಟ ಗೆಲ್ಲೋದಿಲ್ಲ ಎಂದು ಭವಿಷ್ಯ ನುಡಿದೆ ಎಂದಮಾತ್ರಕ್ಕೆ ನಾನು ಗಿಲ್ಲಿ ಬಗ್ಗೆ ದ್ವೇಷ ಇಟ್ಟುಕೊಂಡಿದ್ದೀನಿ ಎಂದು ಅರ್ಥ ಅಲ್ಲ. ಗಿಲ್ಲಿ ನಟ ನಿಜಕ್ಕೂ ಅತ್ಯಂತ ಅರ್ಹ ಸ್ಪರ್ಧಿ. ಈ ಹಿಂದೆ ಕೂಡ ಅನೇಕ ಅರ್ಹತೆ ಇರುವ ಸ್ಪರ್ಧಿಗಳು ಬಿಗ್ ಬಾಸ್ ಗೆದ್ದಿಲ್ಲ” ಎಂದು ಹೇಳಿದ್ದಾರೆ.
ಗಿಲ್ಲಿ ನಟ ಗೆಲ್ಲುತ್ತಾರಾ?
ಗಿಲ್ಲಿ ನಟ ಅವರು ಗೆಲ್ಲುತ್ತಾರಾ? ಇಲ್ಲವಾ ಎಂಬ ಪ್ರಶ್ನೆಗೆ ಇನ್ನು ಎರಡು ಗಂಟೆಗಳಲ್ಲಿ ಉತ್ತರ ಸಿಗಲಿದೆ.
ಯಾರು ವಿನ್ ಆಗ್ತಾರೆ?
ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ ಮಧ್ಯೆ ಸ್ಪರ್ಧೆ ಜೋರಿದೆ. ಹೀಗಾಗಿ ಇವರಲ್ಲಿ ಯಾರು ವಿನ್ ಆಗ್ತಾರೆ ಎಂದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

