Bigg Boss Kannada Season 12: ಬಿಗ್‌ ಬಾಸ್‌ ಶೋನಲ್ಲಿ ಧನುಷ್‌ ಗೌಡ ಅವರು 6ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು ಹೊರಬಂದಿದ್ದಾರೆ. ಇದನ್ನು ನೋಡಿ ಅವರ ತಾಯಿ ಅಸಮಾಧಾನ ಹೊರಹಾಕಿದ್ದಾರೆ. 

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಟಾಪ್‌ 6 ಸ್ಥಾನಕ್ಕೆ ಫಸ್ಟ್‌ ಟಿಕೆಟ್‌ ಪಡೆದಿದ್ದ ಧನುಷ್‌ ಗೌಡ ಅವರು ಮನೆಯಿಂದ ಹೊರಗಡೆ ಬಂದಿದ್ದಾರೆ. ಹೌದು, ಟಾಪ್‌ 6 ಸ್ಥಾನಕ್ಕೆ ಖುಷಿಪಟ್ಟುಕೊಂಡು ಹೊರಬಂದಿದ್ದಾರೆ.

ಟಾಪ್‌ 6 ಸ್ಥಾನದಲ್ಲಿ ಇರೋರು ಯಾರು?

ಕಾವ್ಯ ಶೈವ, ರಘು, ಧನುಷ್‌ ಗೌಡ, ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ ಅವರು ಟಾಪ್‌ 6 ಸ್ಥಾನದಲ್ಲಿದ್ದರು. ಇವರಲ್ಲಿ ಧನುಷ್‌ ಗೌಡ ಔಟ್‌ ಆಗಿದ್ದಾರೆ. ಈಗಾಗಲೇ ಈ ಸೀಸನ್‌ನಿಂದ ಹೊರಬಂದಿರುವ ಬಹುತೇಕರು ಕಾವ್ಯ ಶೈವ ಹೊರಗಡೆ ಬರುತ್ತಾರೆ, ರಘು ಹೊರಗಡೆ ಬರುತ್ತಾರೆ ಎಂದಿದ್ದರು. ಆದರೆ ಧನುಷ್‌ ಔಟ್‌ ಆಗಿದ್ದಾರೆ.

ಧನುಷ್‌ ಗೌಡ ಹೊರಬಂದಿದ್ದು ನೋಡಿ ಕಾವ್ಯ ಶೈವ ಅತ್ತಿದ್ದಾರೆ, ಇನ್ನು ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ ಅವರು, “ಇದನ್ನು ನಿರೀಕ್ಷೆ ಮಾಡಿರಲಿಲ್ಲ, ಬೇಸರ ಆಯ್ತು” ಎಂದು ಹೇಳಿದ್ದಾರೆ.

ಇನ್ನೊಂದು ಕಡೆ ಧನುಷ್‌ ಗೌಡ ಅವರು ವೇದಿಕೆಗೆ ಬರುತ್ತಿದ್ದಂತೆ ಅವರ ತಾಯಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. “ಅಷ್ಟು ಕಷ್ಟಪಟ್ಟು ಚೆನ್ನಾಘಿ ಆಡಿದ್ರೂ, ನನ್ನ ಮಗ ಟಾಪ್‌ 6ಗೆ ಬಂದ” ಎಂದು ಅವರು ಅತ್ತಿದ್ದಾರೆ, ಇದರ ಜೊತೆಗೆ ಪತ್ನಿ ಕೂಡ ಅತ್ತಿದ್ದಾರೆ. ಧನುಷ್‌ ಅವರು “ಯಾಕೆ ಅಳುತ್ತೀಯಾ?” ಎಂದು ವೇದಿಕೆಯಿಂದ ಕೆಳಗಡೆ ಇಳಿದು, ತಾಯಿಗೆ ಸಮಾಧಾನ ಮಾಡಿದ್ದಾರೆ. ಧನುಷ್‌ ಗೌಡ ಅವರು ಟಾಪ್‌ 6 ಬಂದಿದ್ದಕ್ಕೆ, ಅಸಮಾಧಾನವನ್ನು ಹೊರಹಾಕಿದ್ದಾರೆ.

“ನಿಮ್ಮ ಕೈಯಲ್ಲಿ ಧನುಷ್‌ ಅವರ ಒಂದು ಕೈ ಇರಬೇಕಿತ್ತು ಎಂದು ಆಸೆಯಿಂದ ಬಂದಿದ್ದೆವು, ಬೇಸರ ಆಯ್ತು” ಎಂದು ಪತ್ನಿ ಸಂಜನಾ ಕೂಡ ಬೇಸರವನ್ನು ಹೊರಹಾಕಿದ್ದಾರೆ.