ಹೆಸರು ಬದಲಿಸಿಕೊಂಡ 'ಅಂತರಪಟ' ನಟಿ ತನ್ವಿ: ದಿಢೀರ್ ಏಕೀ ನಿರ್ಧಾರ? ನಟಿ ಹೇಳಿದ್ದೇನು?
'ಅಂತರಪಟ' ಸೀರಿಯಲ್ ಮೂಲಕ ಖ್ಯಾತಿ ಪಡೆದ ನಟಿ ತನ್ವಿಯಾ ಬಾಲರಾಜ್ ತಮ್ಮ ಹೆಸರನ್ನು ರಾಧ್ಯಾ ರಾಜ್ ಎಂದು ಬದಲಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಷಯ ಹಂಚಿಕೊಂಡ ಅವರು, ವಿಶೇಷ ಕಾರಣಗಳಿಂದ ಈ ನಿರ್ಧಾರ ಕೈಗೊಂಡಿದ್ದು, ತಮ್ಮ ಹೊಸ ಪಯಣಕ್ಕೆ ಎಲ್ಲರ ಬೆಂಬಲ ಕೋರಿದ್ದಾರೆ.

ಅಂತರಪಟದಿಂದ ಹೃದಯ ಕದ್ದ ನಟಿ
ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿದ್ದ ಅಂತರಪಟ ಸೀರಿಯಲ್ನ ಆರಾಧನಾ ಮೂಲಕ ಕನ್ನಡಿಗರ ಮನಸ್ಸನ್ನು ಗೆದ್ದು ಬೀಗಿದವರು ನಟಿ ತನ್ವಿಯಾ ಬಾಲರಾಜ್. ಅವರನ್ನು ತನ್ವಿ ಬಾಲರಾಜ್ ಎಂದೇ ಹಲವರು ಕರೆಯುವುದು ಉಂಟು. ಈ ಸೀರಿಯಲ್ನಲ್ಲಿ ಸ್ವಾಭಿಮಾನಿ ಮಗಳ ಪಾತ್ರದಲ್ಲಿ ಕಾಣಿಸಿಕೊಂಡು ಎಲ್ಲರ ಹೃದಯ ಗೆದ್ದವರು ನಟಿ ತನ್ವಿಯಾ.
ಹೆಸರು ಬದಲಾವಣೆ
ಇದೀಗ ಅವರು, ತಮ್ಮ ಹೆಸರನ್ನೇ ಬದಲಿಸಿಕೊಂಡು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಇದೀಗ ಅವರು ತಮ್ಮ ಹೆಸರನ್ನು ರಾಧ್ಯಾ ರಾಜ್ ಎಂದು ಬದಲಿಸಿಕೊಂಡಿದ್ದು, ಈ ಬಗ್ಗೆ ಪೋಸ್ಟ್ ಹಾಕುವ ಮೂಲಕ ಇನ್ನು ಮುಂದೆ ತಮ್ಮನ್ನು ರಾಧ್ಯಾ ರಾಜ್ ಎಂಬ ಹೆಸರಿನಲ್ಲಿ ಕರೆಯುವಂತೆ ಕೋರಿಕೊಂಡಿದ್ದಾರೆ.
ನಟಿ ಹೇಳಿದ್ದೇನು?
ನನ್ನ ಪ್ರೀತಿಯ ಸ್ನೇಹಿತರೇ, ಕುಟುಂಬದವರೇ ಹಾಗೂ ನನ್ನ ಹಿತೈಷಿಗಳೇ.... ಕೃತಜ್ಞತೆ ತುಂಬಿದ ಹೃದಯದೊಂದಿಗೆ, ನನ್ನ ಜೀವನದ ಪಯಣದಲ್ಲಿ ಹೊಸ ಅಧ್ಯಾಯವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನನಗೆ ಅಪಾರ ಸಂತೋಷವಾಗಿದೆ. ಹೊಸ ಕನಸುಗಳು ಹಾಗೂ ಆಶಯಗಳೊಂದಿಗೆ ಮುಂದಕ್ಕೆ ಸಾಗುತ್ತಿರುವ ಈ ಸಂದರ್ಭದಲ್ಲಿ,ಕೆಲವು ವಿಶೇಷ ಕಾರಣಗಳಿಂದ ನಾನು ಹೊಸ ಹೆಸರನ್ನು ಸ್ವೀಕರಿಸುವ ನಿರ್ಧಾರ ಕೈಗೊಂಡಿದ್ದೇನೆ ಎಂದು ಪೋಸ್ಟ್ನಲ್ಲಿ ನಟಿ ತಿಳಿಸಿದ್ದಾರೆ.
ನನಗೆ ಪ್ರೇರಣೆ
ನಿಮ್ಮ ನಿರಂತರ ಬೆಂಬಲ ಮತ್ತು ಪ್ರೋತ್ಸಾಹ ಪ್ರತಿದಿನವೂ ನನಗೆ ಪ್ರೇರಣೆಯಾಗಿವೆ. ಈ ಸುಂದರ ಪಯಣವನ್ನು ನೊಮ್ಮೊಡನೆ ಜೊತೆಯಾಗಿಯೇ ಮುಂದುವರೆಸಲು ನಾನು ಎದುರು ನೋಡುತ್ತಿದ್ದೇನೆ. ಸ ಉಂದರವಾದ ಆರಂಭಗೊಂದಿಗೆ, ನಿಮ್ಮ ಪ್ರೀತಿಯ ರಾಧ್ಯಾ ರಾಜ್ ಎಂದು ನಟಿ ಹೇಳಿದ್ದಾರೆ.
ಹೊಸ ಪಯಣಕ್ಕೆ...
ಈ ಮೂಲಕ ಹೊಸ ಪಯಣಕ್ಕೆ ತಾವು ಮುನ್ನುಡಿ ಬರೆಯುತ್ತಿರುವುದಾಗಿ ಹೇಳಿದ್ದು, ಹೆಸರು ಕಾರಣದ ಬಗ್ಗೆ ಸ್ಪಷ್ಟ ಕಾರಣವನ್ನು ಅವರು ನೀಡಲಿಲ್ಲ.
ಬ್ಯಾಕ್ ಸ್ಟೇಜ್ ಡಾನ್ಸರ್
ಅಂದಹಾಗೆ, ತನ್ವಿಯಾ ಉರ್ಫ್ ರಾಧ್ಯಾ ರಾಜ್ ಅವರು ಇದೀಗ 'ಎನ್ನಾಲೋ ವೆಚ್ಚಿನ ಹೃದಯಂ' ಎಂಬ ತೆಲುಗು ಕಿರುತೆರೆ ಪ್ರೇಕ್ಷಕರಿಗೂ ಪರಿಚಯವಾಗುತ್ತಿದ್ದಾರೆ. ಈ ಬಗ್ಗೆಯೂ ಈಚೆಗೆ ಅವರು ತಿಳಿಸಿದ್ದರು. ಬ್ಯಾಕ್ ಸ್ಟೇಜ್ ಡಾನ್ಸರ್ ಆಗಿ ಪಯಣ ಆರಂಭಿಸಿರುವ ರಾಧ್ಯಾ, ಹಲವಾರು ರಿಯಾಲಿಟಿ ಶೋ ಗಳಲ್ಲಿ, ಅವಾರ್ಡ್ ಫಂಕ್ಷನ್ ಗಳಲ್ಲಿ ಕಾಣಿಸಿಕೊಂಡವರು. ಬಳಿಕ ಅವರಿಗೆ ಅಂತರಪಟ ಸೀರಿಯಲ್ನಲ್ಲಿ ಅವಕಾಶ ಸಿಕ್ಕಿತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

