- Home
- Entertainment
- TV Talk
- Annayya Serial: ಆಸ್ತಿ ತನ್ನ ಹೆಸರಿಗೆ ಬಂದಿದ್ದೇ ತಡ… ಜಿಮ್ ಸೀನಾನನ್ನೆ ಮನೆಯಿಂದ ಹೊರ ಹಾಕಿದ ಗುಂಡಮ್ಮ
Annayya Serial: ಆಸ್ತಿ ತನ್ನ ಹೆಸರಿಗೆ ಬಂದಿದ್ದೇ ತಡ… ಜಿಮ್ ಸೀನಾನನ್ನೆ ಮನೆಯಿಂದ ಹೊರ ಹಾಕಿದ ಗುಂಡಮ್ಮ
Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಇದೀಗ ಭಾರಿ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಇಲ್ಲಿವರೆಗೂ ಗಂಡನಿಂದ ನೊಂದ ರಶ್ಮಿ, ಇದೀಗ ಮಾವ ಆಸ್ತಿಯನ್ನು ತನ್ನ ಹೆಸರಿಗೆ ಬರೆದುಕೊಡುತ್ತಿದ್ದಂತೆ, ಗಂಡನ ಎದುರು ತಿರುಗಿ ಬಿದ್ದಿದ್ದು, ಜಿಮ್ ಸೀನಾನನ್ನೇ ಗುಂಡಮ್ಮ ಮನೆಯಿಂದ ಹೊರ ಹಾಕಿದ್ದಾಳೆ.

ಅಣ್ಣಯ್ಯ ಸೀರಿಯಲ್
ಇಲ್ಲಿವರೆಗೆ ಅಣ್ಣಯ್ಯ ಧಾರಾವಾಹಿಯಲ್ಲಿ ರಶ್ಮಿಯ ಕಣ್ಣೀರಿನ ಕಥೆಯೇ ಪ್ರಸಾರವಾಗುತ್ತಿತ್ತು. ಒಂದು ಕಡೆ ಜಿಮ್ ಸೀನಾನಿಂದ ಮೋಸ, ಪಿಂಕಿ ಜೊತೆ ಕಳ್ಳಾಟ, ಮನೆಯಲ್ಲಿ ಅತ್ತೆಯಿಂದಲೂ ಕಾಟ. ಇನ್ನೊಂದೆಡೆ ಶಿವಣ್ಣನಿಗೂ ತಂಗಿಯ ಸಂಕಷ್ಟದ ಅರಿವಾಗಿದೆ. ಆದರೆ ಇಲ್ಲಿವರೆಗೆ ಅಳುತ್ತಿದ್ದ ರಶ್ಮಿ ಲೈಫಲ್ಲಿ ಇದೀಗ ಟ್ವಿಸ್ಟ್ ಬಂದಿದೆ.
ಆಸ್ತಿಯನ್ನೆಲ್ಲಾ ಸೊಸೆ ಹೆಸರಿಗೆ ಬರೆದ ಮಾದಪ್ಪ
ಸೊಸೆ ಮೇಲೆ ದರ್ಪ ತೋರಿಸುತ್ತಿರುವ ಮಗ ಸೀನಾ ಹಾಗೂ ಹೆಂಡತಿಗೆ ಬುದ್ದಿ ಕಲಿಸಲು ಹಾಗೂ ಸೊಸೆಗೆ ಬೆಂಬ ನೀಡುವ ಸಲುವಾಗಿ ತನ್ನ ಎಲ್ಲಾ ಜಮೀನು, ಆಸ್ತಿಯನ್ನೆಲ್ಲಾ ಸೊಸೆ ರಶ್ಮಿ ಹೆಸರಿಗೆ ಬರೆದಿದ್ದಾನೆ ಮಾದಪ್ಪ. ಇನ್ನು ಇರುವುದು ಅಸಲಿ ಕಥೆ. ಈ ಟ್ವಿಸ್ಟ್ ಗಾಗಿಯೇ ವೀಕ್ಷಕರು ಇಲ್ಲಿವರೆಗೂ ಕಾಯುತ್ತಿದ್ದರು.
ಮಾದಪ್ಪಣ್ಣನ ಮನೆಯಲ್ಲಿ ಸತ್ಯನಾರಾಯಣ ಪೂಜೆ
ಮಾದಪ್ಪಣ್ಣ ತಮ್ಮ ಮನೆಯಲ್ಲಿ ಅದ್ಧೂರಿಯಾಗಿ ಸತ್ಯನಾರಾಯಣ ಪೂಜೆ ಮಾಡುತ್ತಿದ್ದಾರೆ. ಅದಕ್ಕಾಗಿ ರಶ್ಮಿ ಮನೆಯಿಂದ ಶಿವಣ್ಣ ಸೇರಿ ಎಲ್ಲರೂ ಬಂದಿರುವಾಗ,ಮಾದಪ್ಪ ತನ್ನ ಸೊಸೆಗೆ ಆಸ್ತಿ ಪತ್ರವನ್ನು ಹಸ್ತಾಂತರಿಸಿದ್ದಾನೆ. ಇದನ್ನ ನೋಡಿ ಜಿಮ್ ಸೀನಾ ಅಪ್ಪನ ವಿರುದ್ಧ ಕಿಡಿ ಕಾರಿದ್ದಾನೆ. ಅಷ್ಟೇ ಅಲ್ಲದೇ ಅಪ್ಪನ ಮೇಲೆ ಕೈ ಮಾಡಿದ್ದಾನೆ.
ಮಾವನ ಮೇಲೆ ಕೈ ಮಾಡಿದ ಗಂಡನ್ನ ಸುಮ್ನೆ ಬಿಡ್ತಾಳ?
ಆಸ್ತಿಯನ್ನು ಯಾರ್ಯಾರದೋ ಹೆಸರಿಗೆ ಯಾಕೆ ಬರೆಯೋದು ಎನ್ನುತ್ತಾ, ಮಾದಪ್ಪಣ್ಣನ ಮೇಲೆ ಜಿಮ್ ಸೀನಾ ಕೈ ಮಾಡುತ್ತಾನೆ. ಇದನ್ನು ನೋಡಿ ಸಿಟ್ಟಿಗೇಳುವ ರಶ್ಮಿ, ನನ್ನ ಮಾವನ ಮೇಲೆ ಕೈ ಮಾಡೋಕೆ ನೀನು ಯಾರು ಎಂದು ಕೇಳುತ್ತಾಳೆ. ಇದನ್ನು ಕೇಳೋದಕ್ಕೆ ನೀನ್ಯಾರು ಎಂದು ಸೀನಾ ಕೇಳಿದ್ರೆ, ನಾನು ಈ ಮನೆಯ ಯಜಮಾನಿ ಎನ್ನುತ್ತಾಳೆ ರಶ್ಮಿ.
ರೆಬಲ್ ಆದ್ಲು ರಶ್ಮಿ
ಇಲ್ಲಿವರೆಗೆ ತನ್ನ ಮೇಲೆ ಏನೇ ದೌರ್ಜನ್ಯ ಆದರೂ ಸುಮ್ಮನೆ ನೋಡುತ್ತಾ ಕುಳಿತಿರುತ್ತಿದ್ದ ರಶ್ಮಿ ಇದೀಗ, ಮಾವನ ಮೇಲೆ ಸೀನಾ ಕೈ ಎತ್ತಿದ್ದೆ ತಡ ಸಿಟ್ಟಿಗೆದ್ದು., ಗಂಡನ ಕೊರಳಪಟ್ಟಿ ಹಿಡಿದು ಆತನನ್ನೇ ಹೊರಗೆ ನೂಕಿದ್ದಾಳೆ. ಈ ರೋಚಕ ತಿರುವಿನಲ್ಲಿ ಮುಂದೆ ಏನಾಗಬಹುದು ಎನ್ನುವ ಕುತೂಹಲ ಮಾತ್ರ ಎಲ್ಲರಿಗೂ ಇದ್ದೆ ಇದೆ.
ಆಸ್ತಿ ಇಲ್ಲದ ಜಿಮ್ ಸೀನಾನ ಒಪ್ಪಿಕೊಳ್ತಾಳ ಪಿಂಕಿ
ಇನ್ನೊಂದು ಕಡೆ ಪಿಂಕಿ ಸೀನಾನನ್ನು ಪ್ರೀತಿಸುತ್ತಿರುವುದೇ ಆತನ ಬಳಿ ಇರುವಂತಹ ಆಸ್ತಿಗಾಗಿ. ಹಾಗಾಗಿ ಒಂದು ವೇಳೆ ಜಿಮ್ ಸೀನಾ ಖಾಲಿ ಕೈಯಲ್ಲಿ ಪಿಂಕಿ ಬಳಿ ಹೋಗಿ, ಮದುವೆಯಾಗಲು ಹೇಳಿದ್ರೆ ಪಿಂಕಿ ಒಪ್ಕೋಳ್ತಾಳ? ಖಂಡಿತಾ ಇಲ್ಲ. ಹಾಗಿದ್ರೆ ಸದ್ಯದಲ್ಲೇ ಸೀನಾಗೆ ಪಿಂಕಿಯ ನಿಜ ಮುಖದ ಅನಾವರಣ ಆಗಲಿದೆ. ಆವಾಗ ಮತ್ತೊಂದು ಟ್ವಿಸ್ಟ್ ನೋಡಲು ವೀಕ್ಷಕರು ಕಾಯಬೇಕು ಅಷ್ಟೇ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

