- Home
- Entertainment
- TV Talk
- OMG! ಅಂತ್ಯಕ್ರಿಯೆಯಲ್ಲೂ Thalapathy Vijay ಜೊತೆಗೆ ಬಂದ ನಟಿ ತ್ರಿಶಾ; ಸಿಎಂ ಆದ್ಮೇಲೂ ಬಿಡಲಿಲ್ಲ!
OMG! ಅಂತ್ಯಕ್ರಿಯೆಯಲ್ಲೂ Thalapathy Vijay ಜೊತೆಗೆ ಬಂದ ನಟಿ ತ್ರಿಶಾ; ಸಿಎಂ ಆದ್ಮೇಲೂ ಬಿಡಲಿಲ್ಲ!
TVK CM Vijay Trisha Participate in Ajith s Mother Funeral: ನಟ ಅಜಿತ್ ಕುಮಾರ್ ತಾಯಿ ಮೋಹಿನಿ ಮಣಿ ನಿಧನರಾಗಿದ್ದಾರೆ. ದುಃಖದ ಸಮಯದಲ್ಲಿ ಅಜಿತ್‌ಗೆ ಸಾಂತ್ವನ ಹೇಳಲು ಮುಖ್ಯಮಂತ್ರಿ ಜೋಸೆಫ್ ವಿಜಯ್, ನಟಿ ತ್ರಿಶಾ ಜೊತೆ ಅವರ ಮನೆಗೆ ಭೇಟಿ ನೀಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ನಟ ಅಜಿತ್ ತಾಯಿ ಇನ್ನಿಲ್ಲ!
ತಮಿಳುನಾಡಿನ ಖ್ಯಾತ ನಟ ಅಜಿತ್ ಕುಮಾರ್ ಅವರ ತಾಯಿ ಮೋಹಿನಿ ಮಣಿ (85) ವಿಧಿವಶರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಜೋಸೆಫ್ ವಿಜಯ್, ನಟ ಅಜಿತ್ ಅವರ ಚೆನ್ನೈನ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದರು.
ಅಜಿತ್ ಮನೆಯಲ್ಲಿ ವಿಜಯ್
ಈ ವೇಳೆ ಸಿಎಂ ವಿಜಯ್ ಜೊತೆ ನಟಿ ಹಾಗೂ ಅಜಿತ್ ಅವರ ಸ್ನೇಹಿತೆ ತ್ರಿಷಾ ಕೂಡ ಇದ್ದರು. ತಾಯಿಯ ಸಾವಿನ ಸುದ್ದಿ ಕೇಳಿ ಯುಎಇಯಿಂದ ಸಂಜೆ ವೇಳೆಗೆ ಚೆನ್ನೈಗೆ ವಾಪಸಾಗಿದ್ದ ಅಜಿತ್, ಮನೆಯಿಂದ ಹೊರಬಂದು ಸಿಎಂ ವಿಜಯ್ ಅವರನ್ನು ಆತ್ಮೀಯವಾಗಿ ಅಪ್ಪಿಕೊಂಡು ಸ್ವಾಗತಿಸಿದರು.
ಆಸ್ಪತ್ರೆಯಲ್ಲಿ ನಿಧನ
ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅಜಿತ್ ತಾಯಿ ಮೋಹಿನಿ ಮಣಿ, ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಚೆನ್ನೈನ ಪಾಲವಾಕ್ಕಂನಲ್ಲಿರುವ ಅವರ ನಿವಾಸದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
3 ವರ್ಷದಲ್ಲಿ ಅಪ್ಪನೂ ಇಲ್ಲ, ಅಮ್ಮನೂ ಇಲ್ಲ
ಅಂದಹಾಗೆ, 2023ರ ಮಾರ್ಚ್ ತಿಂಗಳಿನಲ್ಲಿ ಅಜಿತ್ ಅವರ ತಂದೆ ಪಿ.ಎಸ್. ಮಣಿ ಕೂಡ ನಿಧನರಾಗಿದ್ದರು. ಅಜಿತ್ ತಾಯಿಯ ನಿಧನಕ್ಕೆ ತಮಿಳು ಚಿತ್ರರಂಗದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
ತ್ರಿಶಾಳಿಂದಲೇ ವಿಜಯ್ ಲೈಫ್‌ನಲ್ಲಿ ಡಿವೋರ್ಸ್
ವಿಜಯ್ ಮುಖ್ಯಮಂತ್ರಿಯಾದ ನಂತರ ಇವರಿಬ್ಬರು ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಹಿಂದೆಯೇ ತ್ರಿಶಾ ಹಾಗೂ ವಿಜಯ್‌ಗೆ ಸಂಬಂಧವಿದೆ ಎಂದು ಆರೋಪಿಸಿ ವಿಜಯ್ ಪತ್ನಿ ಸಂಗೀತಾ ಅವರು ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದರು. ಅದಾದ ಬಳಿಕ ಮದುವೆ ಕಾರ್ಯಕ್ರಮದಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿತ್ತು. ವಿಜಯ್ ಅವರ ಸಿಎಂ ಪ್ರಮಾಣ ವಚನಕ್ಕೆ ತ್ರಿಶಾ ಬಂದಿದ್ದರು. ಈಗ ಅವರು ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

