- Home
- Entertainment
- Sandalwood
- 'ಅಮೃತವರ್ಷಿಣಿ' ರಜಿನಿ ವಿರುದ್ಧ ಗಂಭೀರ ಆರೋಪ: ನಿರ್ದೇಶಕರಿಂದ ಫಿಲಂ ಚೇಂಬರ್‌ಗೆ ದೂರು
'ಅಮೃತವರ್ಷಿಣಿ' ರಜಿನಿ ವಿರುದ್ಧ ಗಂಭೀರ ಆರೋಪ: ನಿರ್ದೇಶಕರಿಂದ ಫಿಲಂ ಚೇಂಬರ್‌ಗೆ ದೂರು
'ಅಸುರನ ಕೈಯಲ್ಲಿ ಪಾರಿಜಾತ' ಚಿತ್ರದ ಪ್ರಚಾರಕ್ಕೆ ಬಾರದೆ, ಹೆಚ್ಚುವರಿ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಆರೋಪಿಸಿ ನಟಿ ರಜಿನಿ ವಿರುದ್ಧ ನಿರ್ಮಾಪಕರು ಫಿಲಂ ಚೇಂಬರ್‌ಗೆ ದೂರು ನೀಡಿದ್ದಾರೆ. ಸಿನಿಮಾ ಇದೇ ತಿಂಗಳು 22 ರಂದು ಬಿಡುಗಡೆಯಾಗಲಿದ್ದು, ನಟಿ ಕರೆ ಸ್ವೀಕರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

ನಟಿ ರಜಿನಿ ವಿರುದ್ಧ ಆರೋಪ
ಒಂದೆಡೆ ಹಣ ಕೊಡದೆ ತೊಂದರೆ ಕೊಡುತ್ತಿರುವುದಾಗಿ ದೂರಿ ನಿರ್ಮಾಪಕನ ವಿರುದ್ಧ ‘ವಸುದೇವ ಕುಟುಂಬ’ ಧಾರಾವಾಹಿಯ ತಾರೆಯರು ಗಂಭೀರ ಆರೋಪ ಮಾಡಿ ದೂರು ನೀಡಿ ಬಹುದೊಡ್ಡ ಸದ್ದು ಮಾಡಿದ್ದರೆ, ಅದೇ ಇನ್ನೊಂದೆಡೆ, ಹಣ ಪಡೆದು ಪ್ರಚಾರಕ್ಕೆ ಬಾರದೆ ಸತಾಯಿಸುತ್ತಿರುವುದಾಗಿ ದೂರಿ ನಟಿ ರಜಿನಿ ವಿರುದ್ಧ ದೂರು ದಾಖಲಾಗಿದೆ.
ಫಿಲಂ ಚೇಂಬರ್‌ಗೆ ದೂರು
ಸದ್ಯ ರಿಯಾಲಿಟಿ ಷೋನಲ್ಲಿ ಬಿಜಿಯಾಗಿರುವ, ಈಚೆಗಷ್ಟೇ ಮದುವೆಯಾಗಿರುವ ‘ಅಮೃತವರ್ಷಿಣಿ’ ಸೀರಿಯಲ್ ನಟಿ ರಜಿನಿ ವಿರುದ್ಧ ಸಿನಿಮಾದ ನಿರ್ದೇಶಕ ಮತ್ತು ನಿರ್ಮಾಪಕರುಗಳು ಫಿಲಂ ಚೇಂಬರ್‌ಗೆ ದೂರು ನೀಡಿದ್ದಾರೆ. ಸಿನಿಮಾನಲ್ಲಿ ನಟಿಸಿ ಅವರು ಪ್ರಚಾರಕ್ಕೆ ಬರುತ್ತಿಲ್ಲ ಎನ್ನುವುದು ನಟಿಯ ವಿರುದ್ಧ ಇರುವ ಆರೋಪ.
ಅಷ್ಟಕ್ಕೂ ಆಗಿದ್ದೇನು?
ಅಷ್ಟಕ್ಕೂ ನಟಿ ರಜಿನಿ ನಟಿಸಿರುವುದು, ಕಾರ್ತಿಕ್ ಎಂಬುವರು ಮೀಕ್ಷಾ ಬ್ಯಾನರ್ ಅಡಿ ನಿರ್ಮಾಣ ಮಾಡುತ್ತಿರುವ ‘ಅಸುರನ ಕೈಯಲ್ಲಿ ಪಾರಿಜಾತ’ ಹೆಸರಿನ ಸಿನಿಮಾದಲ್ಲಿ. ಈ ಸಿನಿಮಾದಲ್ಲಿ ರಜಿನಿ ಅವರು ನಾಯಕಿಯಾಗಿ ನಟಿಸಿದ್ದಾರೆ. ಮಾಡಿದ್ದಾರೆ. ಸಿನಿಮಾ ಇದೇ ತಿಂಗಳು ಬಿಡುಗಡೆ ಆಗಲಿದ್ದು, ಸಿನಿಮಾದ ಪ್ರಚಾರಕ್ಕೆ ನಟಿ ಬರುತ್ತಿಲ್ಲ ಎಂದು ದೂರಲಾಗಿದೆ.
22ರಂದು ಸಿನಿಮಾ ಬಿಡುಗಡೆ
ಈ ಚಿತ್ರವನ್ನು ವಿಘ್ನೇಶ್ ನಿರ್ದೇಶಿಸಿದ್ದಾರೆ. ಇದೇ 22ರಂದು ಸಿನಿಮಾ ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ, ಪ್ರಮೋಷನ್ ಮಾಡುವುದು ಅಗತ್ಯವಾಗಿದೆ. ಆದರೆ ನಟಿ ಪ್ರಚಾರಕ್ಕೆ ಬರುತ್ತಿಲ್ಲ ಎನ್ನುವುದು ಆರೋಪ. ಚಿತ್ರತಂಡದ ಫೋನ್ ಕರೆಗಳನ್ನು ರಜಿನಿ ಸ್ವೀಕರಿಸುತ್ತಿಲ್ಲ ಮತ್ತು ನಿರ್ದೇಶಕರ ನಂಬರ್ ಅನ್ನ ಬ್ಲಾಕ್ ಮಾಡಿದ್ದಾರೆ ಎಂದು ವಿಘ್ನೇಶ್ ಆಕ್ರೋಶ ಹೊರಹಾಕಿದ್ದಾರೆ.
ಸಬೂಬು ಹೇಳುವ ನಟಿ
ಸಿನಿಮಾದ ಪ್ರಚಾರಕ್ಕೆ ಬರುವಂತೆ ನಟಿಯನ್ನು ಕರೆದರೆ ಹೆಚ್ಚುವರಿ ಹಣ ಕೇಳುತ್ತಿದ್ದಾರೆ ಎಂದು ನಿರ್ದೇಶಕ ವಿಘ್ನೇಶ್ ಹೇಳಿದ್ದಾರೆ. ಟ್ರೈಲರ್ ರಿಲೀಸ್ಗೆ ಕರೆದರೆ ಅಂದು ಬರ್ತ್ ಡೇ ಇದೆ ಬರಲ್ಲ ಎಂದರು. ಪ್ರಚಾರಕ್ಕೆ ಕರೆದರೆ ಸೀರಿಯಲ್ ಶೂಟಿಂಗ್ನಲ್ಲಿ ಬ್ಯುಸಿ ಇದ್ದೀನಿ ಎಂದರು. ನಮ್ಮ ಮೊಬೈಲ್ ನಂಬರ್ ಅನ್ನು ಬ್ಲಾಕ್ ಮಾಡಿದ್ದು, ಫೋನ್ ರಿಸೀವ್ ಮಾಡುತ್ತಿಲ್ಲ ಎಂದಿದ್ದಾರೆ.
ಹಣದ ಬೇಡಿಕೆ
ರಜಿನಿ ಅವರು ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡ ಸಂಭಾವನೆಯನ್ನ ಪಡೆದಿದ್ದಾರೆ. ಆದರೆ, ಪ್ರಚಾರದ ವಿಚಾರ ಬಂದಾಗ, ಹತ್ತಾರು ಸಬೂಬುಗಳನ್ನ ನೀಡುತ್ತಿದ್ದಾರೆ. ಸಿನಿಮಾದದ ಪ್ರಚಾರಕ್ಕಾಗಿ ಬರಲು ನಟಿ ರಜಿನಿ ಅವರು ಹೆಚ್ಚುವರಿ ಹಣದ ಬೇಡಿಕೆ ಇಟ್ಟಿದ್ದಾರೆ. ಸಿನಿಮಾ ರೀಲ್ಸ್‌ಗಳನ್ನ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳಲು ಕೇಳಿದಾಗಲೂ, ಅದಕ್ಕೆ ಪ್ರತ್ಯೇಕ ಹಣ ನೀಡುವಂತೆ ಕೇಳುತ್ತಿದ್ದಾರೆ ಎನ್ನಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

