- Home
- Entertainment
- TV Talk
- Amruthadhaare ರೋಚಕ ಟ್ವಿಸ್ಟ್: ಮಗ ಆಕಾಶ್ ಹೇಳಿದ ಆ ಒಂದು ಸತ್ಯಕ್ಕೆ ಕುಸಿದು ಹೋದ ಭೂಮಿಕಾ! ಬಡಿದ ಬರಸಿಡಿಲು
Amruthadhaare ರೋಚಕ ಟ್ವಿಸ್ಟ್: ಮಗ ಆಕಾಶ್ ಹೇಳಿದ ಆ ಒಂದು ಸತ್ಯಕ್ಕೆ ಕುಸಿದು ಹೋದ ಭೂಮಿಕಾ! ಬಡಿದ ಬರಸಿಡಿಲು
ಜೈದೇವನಿಂದ ತಪ್ಪಿಸಿಕೊಳ್ಳಲು ದೇಶ ಬಿಡಲು ನಿರ್ಧರಿಸಿದ ಭೂಮಿಕಾಗೆ, ಆಕಾಶ್ ಒಂದು ಸತ್ಯ ಹೇಳಿ ಶಾಕ್ ಕೊಟ್ಟಿದ್ದಾನೆ. ಅದನ್ನು ಅರಗಿಸಿಕೊಳ್ಳಲಾಗದೇ ಬರಸಿಡಿಲು ಬಡಿದಂತೆ ನಿಂತಿದ್ದಾಳೆ ಭೂಮಿಕಾ. ಆ ಸತ್ಯವೇನು?

ಟ್ವಿಸ್ಟ್ ಮೇಲೆ ಟ್ವಿಸ್ಟ್
ಅಮೃತಧಾರೆ (Amruthadhaare Serial) ಸದ್ಯ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆಯುತ್ತಿದೆ. ಜೈದೇವ ಆಕಾಶ್ನನ್ನು ಕಿಡ್ನ್ಯಾಪ್ಮಾಡಿಕೊಂಡು ಹೋಗಿದ್ದ. ಆಕಾಶ್ ಜೀವಕ್ಕೆ ಜೈದೇವನಿಂದ ಅಪಾಯ ಇರುವುದಾಗಿ ಮನಗಂಡ ಭೂಮಿಕಾ ದೇಶವನ್ನೇ ಬಿಟ್ಟುಹೋಗುವ ಪ್ಲ್ಯಾನ್ ಮಾಡಿದ್ದಾಳೆ.
ಜೈದೇವನ ಸತ್ಯ
ತಾನು ಇಲ್ಲಿಯೇ ಇದ್ದರೆ ಅಪ್ಪ ಗೌತಮ್ ಜೀವಕ್ಕೂ ಅಪಾಯ ಇದೆ ಎನ್ನುವುದನ್ನು ಮನಗಂಡಿರುವ ಆಕಾಶ್ ಕೂಡ ಮನೆ ಖಾಲಿ ಮಾಡಲು ಒಪ್ಪಿಗೆ ಸೂಚಿಸಿದ್ದಾನೆ. ಜೈದೇವನ ಈ ಸತ್ಯವನ್ನು ಗೌತಮ್ ಎದುರು ಯಾರೂ ಬಾಯಿ ಬಿಟ್ಟಿಲ್ಲ. ಆದರೆ ದಿಢೀರ್ ಎಂದು ಭೂಮಿಕಾ ಮಾಡಿರುವ ಈ ನಿರ್ಧಾರದಿಂದ ಗೌತಮ್ ಶಾಕ್ ಆಗಿದ್ದಾನೆ.
ಆಕಾಶ್ ಮತ್ತು ಮಿಂಚು
ಆಕಾಶ್ ಮತ್ತು ಮಿಂಚು ಕೂಡ ಒಬ್ಬರನ್ನೊಬ್ಬರು ಬಿಟ್ಟಿರಲು ಆಗದಿದ್ದರೂ ಭಾರವಾದ ಮನಸ್ಸಿನಿಂದ ವಿದಾಯ ಹೇಳಿದ್ದಾರೆ. ಮನೆ ಬಿಟ್ಟು ಹೋಗುವ ಸಂದರ್ಭದಲ್ಲಿ, ಎಲ್ಲರೂ ಒಟ್ಟಿಗೇ ಮಾಡಿಸಿರುವ ಫೋಟೋಶೂಟ್ ಆಲ್ಬಂ ಅನ್ನು ಆಕಾಶ್ ಗೌತಮ್ ಮನೆಯ ಎದುರು ಇಟ್ಟು ಹೋಗಿದ್ದಾನೆ.
ಆಕಾಶ್ ಹೇಳಿದ ಸತ್ಯ
ಭೂಮಿಕಾ, ಇದೇನು ಮಾಡಿದೆ ಎಂದು ಕೇಳಿದಾಗ ಆಕಾಶ್ ಹೇಳಿದ ಸತ್ಯದಿಂದ ಭೂಮಿಕಾ ಮಾತ್ರವಲ್ಲದೇ ಮಲ್ಲಿ ಕೂಡ ಶಾಕ್ ಆಗಿದ್ದಾರೆ.
ಸತ್ಯದ ಅನಾವರಣ
ಅಷ್ಟಕ್ಕೂ ಆಕಾಶ್, ನಿಮ್ಮ ಮತ್ತು ಪಪ್ಪನ ಫೋಟೋ ಇಟ್ಟುಬಂದೆ ಎಂದಿದ್ದಾನೆ. ಆಗ ಭೂಮಿಕಾ ಪಪ್ಪನಾ ಎಂದು ಪ್ರಶ್ನಿಸಿದಾಗ, ಆಕಾಶ್, ಹೌದು ಮಮ್ಮಿ ಗೌತಮ್ ಅವರು ನನ್ನ ಪಪ್ಪ ಎನ್ನುವುದು ನನಗೆ ಮೊದಲೇ ಗೊತ್ತಿತ್ತು ಎಂದಾಗ ಭೂಮಿಗೆ ಭೂಮಿ ಕುಸಿದ ಅನುಭವವಾಗಿದೆ.
ಮನೆಬಿಟ್ಟಳು ಭೂಮಿಕಾ
ಇಂಥ ರೋಚಕ ಟ್ವಿಸ್ಟ್ ನಡುವೆಯೇ ಮನೆಬಿಟ್ಟು ಹೊರಟು ನಿಂತಿದ್ದಾಳೆ ಭೂಮಿಕಾ. ಆದರೆ ಶಕುನಿ ಮಾಮಾನಿಂದಾಗಿ ಭೂಮಿಕಾ ಮಗಳು ಕೂಡ ಬದುಕಿರುವ ಸತ್ಯ ತಿಳಿದಿದ್ದರಿಂದ ಅವಳು ಮಿಂಚುನೇ ಎಂದುಕೊಂಡು ಭೂಮಿಕಾ ವಾಪಸ್ ಬಂದಿದ್ದಾಳೆ. ಮುಂದೇನು ಎನ್ನುವುದು ಸದ್ಯಕ್ಕಿರುವ ಕುತೂಹಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

