- Home
- Entertainment
- TV Talk
- Amruthadhaare Serial ರೋಚಕ ಟ್ವಿಸ್ಟ್: ಭೂಮಿಕಾ ಸಾವು? ಅವಳ ಅವತಾರದಲ್ಲಿ ಮನೆ ಸೇರಿದಳಾ ದೀಪಿಕಾ
Amruthadhaare Serial ರೋಚಕ ಟ್ವಿಸ್ಟ್: ಭೂಮಿಕಾ ಸಾವು? ಅವಳ ಅವತಾರದಲ್ಲಿ ಮನೆ ಸೇರಿದಳಾ ದೀಪಿಕಾ
ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವ್ ಭೂಮಿಕಾಳನ್ನು ಪ್ರಪಾತಕ್ಕೆ ತಳ್ಳಿ ಅವಳ ಅವಳಿ ಸಹೋದರಿ ದೀಪಿಕಾಳನ್ನು ಮನೆಗೆ ತರುವ ಪ್ಲ್ಯಾನ್ ಮಾಡಿದ್ದಾನೆ. ಆದರೆ, ಭೂಮಿಕಾಳಂತೆಯೇ ಮನೆಗೆ ಮರಳಿದವಳು ಯಾರು ಎಂಬ ಕುತೂಹಲ ಮೂಡಿದೆ. ಇದು ನಿಜವಾದ ಭೂಮಿಕಾನಾ ಅಥವಾ ದೀಪಿಕಾನಾ ಎಂಬುದು ಮುಂದಿನ ಸಂಚಿಕೆಗಳಲ್ಲಿ ತಿಳಿಯಬೇಕಿದೆ.

ಅಮೃತಧಾರೆ ರೋಚಕ ಟ್ವಿಸ್ಟ್
ಅಮೃತಧಾರೆ ಸೀರಿಯಲ್ (Amruthadhaare Serial)ನಲ್ಲಿ ಇದೀಗ ರೋಚಕ ಟ್ವಿಸ್ಟ್ ಸಿಕ್ಕಿದೆ. ಭೂಮಿಕಾಳ ಅವಳಿ ಸಹೋದರಿ ದೀಪಿಕಾ ಜೈದೇವ ಮತ್ತು ಶಕುಂತಲಾ ಕಣ್ಣಿಗೆ ಬಿದ್ದಿದ್ದು, ಭೂಮಿಕಾ ಜಾಗದಲ್ಲಿ ಅವಳನ್ನು ಕರೆಸುವ ಪ್ಲ್ಯಾನ್ ಮಾಡಿದ್ದ ಜೈದೇವ.
ಸತ್ತಳಾ ಭೂಮಿಕಾ?
ಇದೇ ಕಾರಣಕ್ಕೆ ಭೂಮಿಕಾಳ ಅಪಘಾತ ಮಾಡಿಸಿ ಆಕೆಯನ್ನು ಪ್ರಪಾತಕ್ಕೆ ತಳ್ಳಿದ್ದಾನೆ. ಬಳಿಕ ದೀಪಿಕಾ ಬಳಿ ಎಲ್ಲಾ ವಿಷಯವನ್ನೂ ಹೇಳಿ, ಭೂಮಿಕಾ ರೋಲ್ ಮಾಡುವಂತೆ ಜೈದೇವ ಕೇಳಿದ್ದಾನೆ.
ದೀಪಿಕಾ ಎಂಟ್ರಿ?
ಆದರೆ, ಆಕೆ ಹೆದರಿ ಓಡಿ ಹೋದಂತೆ ತೋರಿಸಲಾಗಿದೆ. ಅಲ್ಲಿಗೆ ಭೂಮಿಕಾ ಎಂಟ್ರಿಕೊಟ್ಟಿದ್ದು, ನನ್ನನ್ನು ಸಾಯಿಸಲು ನೋಡ್ತೀರಾ, ನೀವು ಎಷ್ಟೇ ಪ್ರಯತ್ನ ಪಟ್ಟರೂ ನನ್ನನ್ನು ಸಾಯಿಸುವುದು ಸಾಧ್ಯವಿಲ್ಲ ಎಂದಾಗ, ಜೈದೇವ ಮತ್ತು ಶಕುಂತಲಾ ಶಾಕ್ ಆಗಿದ್ದಾರೆ.
ಈಕೆ ಪಕ್ಕಾ ದೀಪಿಕಾ
ಆದರೆ ಅಸಲಿಗೆ ಈಕೆ ಭೂಮಿಕಾ ಅಲ್ಲ ದೀಪಿಕಾ ಅನ್ನೋದು ಬಹುತೇಕರ ಅಭಿಪ್ರಾಯ. ಜೈದೇವನಿಗೇ ಚಕಮ್ ಕೊಟ್ಟ ದೀಪಿಕಾ, ಭೂಮಿಕಾ ಅವತಾರದಲ್ಲಿ ಮನೆ ಪ್ರವೇಶ ಮಾಡಿದ್ದಾಳೆ ಎನ್ನುವುದರಲ್ಲಿ ಸಂದೇಹವಿಲ್ಲ!
ಯಾರೀಕೆ?
ಈಕೆ ದೀಪಿಕಾನೋ, ಭೂಮಿಕಾನೋ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಭೂಮಿಕಾ ಪ್ರಪಾತದಲ್ಲಿ ಬಿದ್ದ ಸಾವನ್ನಪ್ಪಿದಳಾ, ಅಥವಾ ಆಕೆ ಬದುಕಿ ಬರ್ತಾಳಾ ಎನ್ನುವುದೂ ಕೂಡ ತಿಳಿಯಬೇಕಿದೆ. ಭೂಮಿಕಾ ಸಾಯಲ್ಲ, ಆಕೆ ಬದುಕಿ ಬರುತ್ತಾಳೆ, ಅದಕ್ಕೆ ಇನ್ನೊಂದಿಷ್ಟು ವರ್ಷಗಳು ಬೇಕಾಗಬಹುದು. ಅಲ್ಲಿಯವರೆಗೆ ದೀಪಿಕಾ ತನ್ನ ಆಟ ಶುರು ಮಾಡಿಕೊಂಡಿರುತ್ತಾಳೆ ಎನ್ನಲಾಗುತ್ತಿದೆ.
ಹಾಸ್ಯಾಸ್ಪದ
ಒಂದು ವೇಳೆ ಈಕೆ ದೀಪಿಕಾನೇ ಆಗಿದ್ದರೂ, ಎಲ್ಲೋ ಇರುವ ದೀಪಿಕಾ, ಭೂಮಿಕಾಳ ರೀತಿಯೇ ಮಾಡುತ್ತಿರುವುದು ಮಾತ್ರ ಹಾಸ್ಯಾಸ್ಪದ ಎನ್ನಿಸಿದರೂ ಇದನ್ನು ಸೀರಿಯಲ್ ಎನ್ನುವ ಆ್ಯಂಗಲ್ನಲ್ಲಿ ನೋಡಿ ಮನರಂಜನೆ ಪಟ್ಟುಕೊಳ್ಳಿ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

