Amruthadhaare Serial: ಜಯದೇವ್‌ನನ್ನು ಬೀದಿಗೆ ತಂದ ದಿಯಾ ಬೇಬಿ; ಅಂಥ ದ್ವೇಷ ಏನಿತ್ತು?
ಅಮೃತಧಾರೆ ಧಾರಾವಾಹಿಯಲ್ಲಿ ಜಯದೇವ್ ಈಗ ಬೀದಿಗೆ ಬಂದಿದ್ದಾನೆ. ಇದನ್ನು ನೋಡಿ ವೀಕ್ಷಕರಿಗೆ ಸಖತ್ ಖುಷಿಯಾಗಿದೆ. ಒಂದು ತುತ್ತು ಅನ್ನಕ್ಕೂ ಕೂಡ ಜಯದೇವ್, ಪರದಾಡುವ ಸ್ಥಿತಿ ಬಂದಿದೆ. ದಿಯಾ ಮಾತ್ರ ತಪ್ಪು ಮಾಡಿದರೂ ಕೂಡ ಜನರು ಅವಳು ಮಾಡಿದ್ದೇ ಸರಿ ಎನ್ನುತ್ತಿದ್ದಾರೆ.

ಜಯದೇವ್ ಈಗ ದಿವಾಳಿ
ಹೌದು, ಜಯದೇವ್ ಆಸ್ತಿಯನ್ನು ದಿಯಾ ಕಿತ್ತುಕೊಂಡಿದ್ದಾಳೆ. ಅವನಿಗೆ ಗೊತ್ತಾಗದಂತೆ ನಿತ್ಯ ಜಯದೇವ್‌ಗೆ ಆಲ್ಕೋಹಾಲ್ ಕುಡಿಸಿ, ಮರಳು ಮಾಡುತ್ತಿದ್ದಳು. ನಶೆಯಲ್ಲಿ ತೇಲಿಸಿ, ಆಮೇಲೆ ಒಂದಿನ ಎಲ್ಲ ಹಣ, ಬಂಗಾರವನ್ನು ತಗೊಂಡು ಹಾಗಿದ್ದಾಳೆ. ಮನೆಯಲ್ಲಿ ಅಥವಾ ತನ್ನವರ ಬಳಿ ಕೂಡ ಮದುವೆ ಆಗಿದೆ ಎಂದು ಹೇಳಿಕೊಂಡಿಲ್ಲ, ಅಲ್ಲೂ ಸುಳ್ಳು ಹೇಳಿದ್ದಾಳೆ.
ದಿಯಾ ಎಷ್ಟು ಹೇಳಿದರೂ ಕೇಳಿಲ್ಲ
ದಿಯಾಗೆ ಜಯದೇವ್ ಕಂಡರೆ ಯಾಕೆ ಇಷ್ಟ ಇಲ್ಲ ಎನ್ನೋದು ಪ್ರಶ್ನೆ ಆಗಿದೆ. ಜಯದೇವ್ ಬೇಕು ಎಂದು ಅವಳು ಮದುವೆಯಾದಳು. ದಿಯಾ ತಂದೆಗೆ ಮಗಳು ಇಂಥ ಕೆಲಸ ಮಾಡೋದು ಇಷ್ಟ ಇರಲಿಲ್ಲ. ಗೌತಮ್ ದಿವಾನ್ ಕಂಪೆನಿಯಲ್ಲಿ ದಿಯಾ ತಂದೆ ಕೆಲಸ ಮಾಡುತ್ತಿದ್ದರು. ಯಾರು ಎಷ್ಟೇ ಬುದ್ಧಿ ಹೇಳಿದರೂ ಅವಳು ಕೇಳಲೇ ಇಲ್ಲ.
ಜಯದೇವ್‌ನಿಗೆ ಕಪಾಳಮೋಕ್ಷ
ಇನ್ನೊಂದು ಕಡೆ ದಿಯಾ ಮದುವೆಯಾದಮೇಲೆ ಬದಲಾದಳೋ ಅಥವಾ ಆಗ ಅವಳ ಅಸಲಿ ಮುಖ ತೋರಿಸಿದಳೋ ಏನೋ! ನಿತ್ಯವೂ ಅವಳು ಜಯದೇವ್, ಶಕುಂತಲಾ ವಿರುದ್ಧ ಕತ್ತಿ ಮಸಿಯುತ್ತಿದ್ದಳು. ದಿಯಾ ಮನೆ ಬಿಟ್ಟು ತನ್ನ ಮನೆಗೆ ಹೋಗಿದ್ದಾಳೆ. ಈಗ ಬೇರೆ ಮನೆಗೆ ಹೋಗಿರೋ ಅವಳು ಜಯದೇವ್‌ನಿಗೆ ಕಪಾಳ ಮೋಕ್ಷ ಮಾಡಿ ಆ ಮನೆಯಿಂದಲೂ ಹೊರಹಾಕಿದ್ದಳೆ.
ದಿಯಾಗೆ ಯಾಕೆ ದ್ವೇಷ?
ನಾನು ಹೆಂಡ್ತಿಯಾದರೂ ಕೂಡ ನನಗೆ ಆ ಸ್ಥಾನ ಕೊಟ್ಟಿಲ್ಲ, ನಾನು ಮೂಲೆಗುಂಪಾಗಿದ್ದೆ, ನನ್ನನ್ನು ಹೆಂಡ್ತಿ ಅಥವಾ ಸೊಸೆ ಎಂದು ಸ್ವೀಕಾರ ಮಾಡಿಲ್ಲ ಎಂದು ಅವಳು ಜಯದೇವ್‌ಗೆ ಬೈಯ್ದಿದ್ದಾಳೆ. ದಿಯಾ ಮೋಸ ಮಾಡಿದ್ದಕ್ಕೆ ವೀಕ್ಷಕರು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

