ಕಾಲಭೈರವನ ದರ್ಶನ ಪಡೆದು ಕಣ್ಣೀರಿಟ್ಟ ಕಾವ್ಯಾ ಗೌಡ… ಜೀವನ ಅತ್ಯಂತ ದೈವೀಕ ಕ್ಷಣ ಎಂದ ನಟಿ
ಕನ್ನಡ ಕಿರುತೆರೆ ನಟಿ ಕಾವ್ಯಾ ಗೌಡ ತಮ್ಮ ಪತಿ ಸೋಮಶೇಖರ್ ಜೊತೆ ಉಜ್ಜಯಿಸಿ ಕಾಳ ಭೈರವನ ದರ್ಶನ ಪಡೆದು ಬಂದಿದ್ದಾರೆ. ಆ ಸಂಭ್ರಮವನ್ನು ಸೋಶಿಯಲ್ ಮೀಡಿಯಾದಲ್ಲಿಸ್ ಶೇರ್ ಮಾಡಿದ್ದಾರೆ.

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಾದ ‘ರಾಧಾ ರಮಣ’, ‘ಗಾಂಧಾರಿ’ ಮೊದಲ ಸೀರಿಯುಲ್ ಗಳಲ್ಲಿ ಜನಿಸಿ ಜನಪ್ರಿಯತೆ ಪಡೆದ ನಟಿ ಕಾವ್ಯಾ ಗೌಡ ಮದುವೆಯಾದ ಮೇಲೆ ನಟನೆಯಿಂದ ದೂರವೇ ಉಳಿದಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಕಾವ್ಯಾ ಗೌಡ, ತಮ್ಮ ಕುಟುಂಬದ ಜೊತೆಗಿನ ಸುಂದರವಾದ ಫೋಟೊಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಅದರಲ್ಲೂ ಪತಿ ಸೋಮಶೇಖರ್ ಹಾಗೂ ಮಗಳು ಸಿಯಾ ಜೊತೆ ಕ್ವಾಲಿಟಿ ಟೈಮ್ ಕಳೆಯೋದರಲ್ಲಿ ನಟಿ ಬ್ಯುಸಿಯಾಗಿದ್ದಾರೆ.
ವರಮಹಾಲಕ್ಷ್ಮೀ ಹಬ್ಬದ ದಿನ ಜೋರಾಗಿಯೇ ಹಬ್ಬ ಮಾಡಿದ್ದ ಕಾವ್ಯಾ ಗೌಡ ಮನೆಗೆ ದರ್ಶನ್ ತೂಗುದೀಪ ಪತ್ನಿ ವಿಜಯಲಕ್ಷ್ಮೀ ಆಗಮಿಸಿದ್ದರು. ಇದಾದ ಬಳಿಕ ಅಕ್ಕನ ಫ್ಯಾಮಿಲಿ ಜೊತೆ ಇವರ ಫ್ಯಾಮಿಲಿ ವಿದೇಶದಲ್ಲಿ ಟೂರ್ ಮಾಡಿ ಬಂದಿತ್ತು.
ಇದೀಗ ಕಾವ್ಯಾ ಗೌಡ ತಮ್ಮ ಪತಿ ಸೋಮಶೇಖರ್ ಜೊತೆ ಉಜ್ಜಯಿನಿ ಕಾಳ ಭೈರವನ ದರ್ಶನ ಪಡೆದು ಬಂದಿರುವ ಕಾವ್ಯಾ ಗೌಡ, ಅಲ್ಲಿನ ಸುಂದರವಾದ ಫೋಟೊಗಳನ್ನು ಹಂಚಿಕೊಂಡು, ಭಗವಂತನನ್ನು ನೋಡಿ ಕಣ್ಣು ತುಂಬಿ ಬಂದು ಎಂದಿದ್ದಾರೆ.
ಕಾಲಭೈರವ ಕಾಲದ ಶಕ್ತಿ ಎಂದು ನಾನು ಅವನನ್ನು ಪೂರ್ಣ ಹೃದಯದಿಂದ ನಂಬುತ್ತೇನೆ. ಇಂದು, ಪದಗಳಿಗೆ ಮೀರಿದ ಏನೋ ಸಂಭವಿಸಿದೆ. ಅವನ ಸನ್ನಿಧಿಯಲ್ಲಿ ನಿಂತು, ನಾನು ದುಃಖದಿಂದಲ್ಲ, ಭಕ್ತಿಯಿಂದ ಕಣ್ಣೀರು ಸುರಿಸಿದೆ. ಈ ದಿನ ನನ್ನೊಂದಿಗೆ ಶಾಶ್ವತವಾಗಿ ಉಳಿಯುತ್ತದೆ., ಇದು ನನ್ನ ಜೀವನದ ಅತ್ಯಂತ ದೈವಿಕ ಕ್ಷಣ.ಕೃತಜ್ಞತೆ. ಧನ್ಯ. ಮೂಕ. ಎಂದು ಬರೆದುಕೊಂಡಿದ್ದಾರೆ.
ಕಾಲಭೈರವ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದ್ದು, ಮಧ್ಯಪ್ರದೇಶದ ಉಜ್ಜಯಿನಿಯಲ್ಲಿದೆ. ಇಲ್ಲಿ ಶಿವನನ್ನು ಕಾಲಭೈರವನ ರೂಪದಲ್ಲಿ ಪೂಜೆ ಮಾಡಲಾಗುತ್ತದೆ. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿ ಬಂದು ಪೂಜೆ ಸಲ್ಲಿಸುತ್ತಾರೆ.
ಕಾವ್ಯಾ ಗೌಡ ಕೂಡ ಮಗುವನ್ನು ಬಿಟ್ಟು ಪತಿ ಜೊತೆ ಕಾಲಭೈರವನ ದರ್ಶನ ಪಡೆದು ಬಂದಿದ್ದಾರೆ. ಜೊತೆಗೆ ಅಲ್ಲಿನ ನಡೆಸಿದ ಪೂಜೆ, ದೇವರ ದರ್ಶನದ ಫೋಟೊಗಳನ್ನು ಸಹ ನಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.