ಕೊನೆಗೂ ಅಭಿಮಾನಿಗಳ ಒತ್ತಾಯದ ಮೇಲೆ ಬ್ಯಾಗ್‌ನಲ್ಲಿರುವ ರಹಸ್ಯ ಬಿಚ್ಚಿಟ್ಟ ನಟಿ ಕಾವ್ಯಾ ಗೌಡ. 

ಕಿರುತೆರೆ ಜನಪ್ರಿಯ ನಟಿ ಕಾವ್ಯಾ ಗೌಡ (Kavya Gowda) ದಾಂಪತ್ಯ ಜೀವನಕ್ಕೆ ಕಾಲಿಡುವ ಮುನ್ನವೇ ಗ್ಲಾಮರ್ ಲೋಕಕ್ಕೆ ಗುಡ್ ಬೈ ಹೇಳಿದ್ದರು. ಆಭರಣ ವಿನ್ಯಾಸ (Jewellary Design) ತರಬೇತಿಯಲ್ಲಿ ಬ್ಯುಸಿಯಾಗಿರುವ ಈ ಚೆಲುವೆ ಕೆಲವು ದಿನಗಳ ಹಿಂದೆ ಯುಟ್ಯೂಬ್‌ (Youtube) ಲೋಕಕ್ಕೆ ಕಾಲಿಟ್ಟರು. ಮೊದಲು ಮೊಬೈಲ್‌ನಲ್ಲಿ ಏನಿದೆ ಎಂಬುದನ್ನು ರಿವೀಲ್ ಮಾಡಿದ ನಟಿ ಈಗ ತಮ್ಮ ಬ್ಯಾಗಲ್ಲಿ ಏನಿದೆ ಹೇಳಿ ಎಂದು ಹಲವರು ಕಾಮೆಂಟ್ ಮಾಡಿದ್ದರು. ಈಗ ಆ ವಿಡಿಯೋವನ್ನು ಕೂಡ ಹಂಚಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ (Social Media) ಕಾವ್ಯಾ ಗೌಡ ಅಪ್ಲೋಡ್ ಮಾಡುವ ಪ್ರತಿ ಫೋಟೋದಲ್ಲೂ ವಿಭಿನ್ನವಾದ ಬ್ಯಾಗ್‌ಗಳು ಇರುತ್ತವೆ. ಇವೆಲ್ಲಾ ಅಂದಾಜು 1 ಲಕ್ಷ ರೂಪಾಯಿಗೂ ಹೆಚ್ಚು ಬೆಲೆ ಇರುವ ಬ್ಯಾಗ್‌ಗಳು. 'ನಾನು ಏನೇ ಶೂಟಿಂಗ್ ಮಾಡಿದರೂ ಅಥವಾ ಜಾಹೀರಾತುಗಳಲ್ಲಿ (Advertising) ಕಾಣಿಸಿಕೊಂಡರೂ ಆ ಹಣದಲ್ಲಿ ಮೊದಲು ಖರೀದಿ ಮಾಡುವುದು ಬ್ಯಾಗ್‌ಗಳನ್ನು. ಈಗ ಕೈಯಲ್ಲಿ ಇರುವುದು Gucci ಬ್ಯಾಗ್. ದೊಡ್ಡ ಬ್ಯಾಗ್. ಆದರೆ ಮಾತ್ರ ಜಾಸ್ತಿ ವಸ್ತು ಇಟ್ಟುಕೊಳ್ಳಬಹುದು. ಸಣ್ಣ ಬ್ಯಾಗ್ ಪಾರ್ಟಿಗೆ ಮಾತ್ರ ಸರಿ ಹೋಗುತ್ತದೆ' ಎಂದು ಕಾವ್ಯಾ ವಿಡಿಯೋ ಶುರು ಮಾಡಿದ್ದಾರೆ. 

ಬುಕ್ (Book): ನನ್ನ ಆಸೆಗಳು ನನ್ನ ದಿನಚರಿಗಳನ್ನು ನಾನು ಈ ಬುಕ್‌ನಲ್ಲಿ ಬರೆಯುತ್ತೇನೆ. ಲೈಫ್‌ ಫ್ರಮ್ ಲೈಫ್‌ ಬುಕ್‌ (Life From Life Book). ಕೆಲವು ದಿನಗಳ ಹಿಂದೆ ಖರೀದಿ ಮಾಡಿರುವ ಕಥೆ ಪುಸ್ತಕ. ದೇವರ ಬಗ್ಗೆ ಈಗ ಓದಲು ಶುರು ಮಾಡಿದ್ದೀನಿ.

ಪರ್ಸ್‌ (Purse): ಪರ್ಸಲ್ಲಿ ಎಷ್ಟು ಹಣ ಇದೆ ಅಂತ ಕೇಳಬೇಡಿ. ಕಾರ್ಡ್‌ಗಳು ಇಟ್ಟಿರುವೆ. ನಾನು ನಂಬಿರುವ ದೇವರು ಸಾಯಿ ರಾಮ್ (Sai Ram) ಫೋಟೋ ಇದೆ. ಎಲ್ಲೇ ಹೋದರೂ ಈ ಫೋಟೋ ಇರಬೇಕು.ನನ್ನ ಅಕ್ಕನ ಜೊತೆ ತೆಗೆದುಕೊಂಡಿರುವ ಮೂರು ವರ್ಷದ ಹಿಂದಿರುವ ಫೋಟೋ ಇದೆ. ಇನ್ನೊಂದು ವಿಶೇಷ ಏನೆಂದರೆ, ನನ್ನ ಪರ್ಸಲ್ಲಿ ನಾನು ಬೆಳ್ಳಿ ನಾಣ್ಯ (Silver coin) ಇಟ್ಟೀದ್ದೀನಿ. ಇದು ನಮ್ಮ ಪರ್ಸಲ್ಲಿ ಇದ್ರೆ ತುಂಬಾ ಜಾಸ್ತಿ ಹಣ ಬರುತ್ತೆ ಅಂತ. ಇದು 10 ವರ್ಷಗಳಿಂದ ನನ್ನ ಹತ್ತರಿವೇ ಇದೆ, ಎಂದಿದ್ದಾರೆ.

ಸನ್‌ಗ್ಲಾಸ್‌ (Sunglass): ಈಗ ಬ್ಯಾಗಲ್ಲಿ ಒಂದು ಗ್ಲಾಸ್ ಇದೆ ಆದರೆ ನಾನು ಪ್ರಯಾಣ ಮಾಡುವಾಗ ತುಂಬಾ ಕ್ಯಾರಿ ಮಾಡ್ತೀನಿ. ಡಿಫರೆಂಟ್ ಆಗಿದ್ದರೆ ನನಗೆ ತುಂಬಾ ಇಷ್ಟ ಆಗುತ್ತೆ.

ಫೋನ್‌ ಮತ್ತು ಪವರ್ ಬ್ಯಾಂಕ್ ಇದೆ. ಜಾಸ್ತಿ ಫೋನ್ ಬಳಸುವೆ. 

ಗ್ಲೋ ಮಿಸ್ಟ್‌: ನಾನು ಜಾಸ್ತಿ ಗ್ಲೋ ಆಗಬೇಕು ಅಂದ್ರೆ ಈ ಮಿಸ್ಟ್‌ ಬಳಸಬೇಕು. ನನ್ನ ಕ್ರೀಮ್‌ ಕೂಡ ಇದೆ. ಇದೆಲ್ಲಾ ಹೇಗೆ ಬಳಸಬೇಕು ಎಂದು ಮತ್ತೊಂದು ವಿಡಿಯೋದಲ್ಲಿ ಹೇಳಿಕೊಡುವೆ. 

ಹ್ಯಾಂಡ್ ಸ್ಯಾನಿಟೈಜರ್ ಮತ್ತು ಮಾಸ್ಕ್ ಇದ್ದೇ ಇರುತ್ತವೆ.

ಗಂಡ ಮನೆಯಲ್ಲಿದ್ರೂ ಮಿಸ್‌ಕಾಲ್ ಕೊಡ್ತೀನಿ ಎಂದ ಕಿರುತೆರೆ ನಟಿ Kavya Gowda

ಮುಖದ ಮೇಕಪ್ ತೆಗೆಯಬೇಕು ಅಂದ್ರೆ ವೆಟ್‌ ಪೇಪರ್ ಬೇಕು. ಅದನ್ನೂ ತಪ್ಪದೇ ಇಟ್ಟುಕೊಳ್ಳುತ್ತೇನೆ. ಹಾಗೆಯೇ ನಾನು ಉಗುರು ಬಣ್ಣ ತುಂಬಾನೇ ಮಾಡಿಸುವೆ. ಅದಿಕ್ಕೆ ನೇರ್‌ ರಿಮೂವರ್ ಇದೆ. ಕೆಲವೊಮ್ಮೆ ತಿನ್ನಬೇಕಿದ್ದರೆ ಉಗುರು ಅರಿಶಿಣ ಆಗುತ್ತದೆ.

ಪರ್ಫ್ಯೂಮ್ (Perfume): ಹೆಚ್ಚಿಗೆ ಪರ್ಫ್ಯೂಮ್ ಬಳಸುವುದಿಲ್ಲ ಆದರೆ ಎಲ್ಲೇ ಹೊರಗಡೆ ಹೋದರೂ ನಾವು ಚೆನ್ನಾಗಿ ಸ್ಮೆಲ್ ಆಗಬೇಕು ಅದಿಕ್ಕೆ ಒಂದು ಇಟ್ಟುಕೊಂಡಿರುವೆ. 

ಬಿಂದಿ: ನನಗೆ ಬಿಂದಿ ತುಂಬಾನೇ ಇಷ್ಟ. ಎಲ್ಲಾ ಬ್ಯಾಗಲ್ಲೂ ಒಂದು ಇಟ್ಟುಕೊಂಡಿರುವೆ. ಎಷ್ಟೊಂದು ಜನ ಹೇಳುತ್ತಾರೆ ನಾನು ಸಂಪ್ರದಾಯ ಉಡುಗೆಯಲ್ಲಿ ಚೆನ್ನಾಗಿ ಕಾಣಿಸುತ್ತೀನಿ ಎಂದು.

ಹೀಗೆ ಬ್ಯಾಗಲ್ಲಿ ಒಂದೊಂದೆ ಸೀಕ್ರೆಟ್ ರಿವೀಲ್ ಮಾಡಿದ್ದಾರೆ ಕಾವ್ಯಾ ಗೌಡ. ವಿಡಿಯೋ ಅಪ್ಲೋಡ್ ಆದ ಕೆಲವೇ ಗಂಟೆಗಳಲ್ಲಿ ಟ್ರೆಂಡಿಂಗ್ ಲಿಸ್ಟ್‌ ಸೇರಿಕೊಂಡಿದೆ.