- Home
- Entertainment
- TV Talk
- Photos: ವಿದೇಶದಲ್ಲಿ ದುಬಾರಿ ಕಾರ್ ಖರೀದಿಸಿದ 'ಮನೆದೇವ್ರು' ಸೀರಿಯಲ್ ನಟಿ ಅರ್ಚನಾ ಲಕ್ಷ್ಮೀನರಸಿಂಹಸ್ವಾಮಿ
Photos: ವಿದೇಶದಲ್ಲಿ ದುಬಾರಿ ಕಾರ್ ಖರೀದಿಸಿದ 'ಮನೆದೇವ್ರು' ಸೀರಿಯಲ್ ನಟಿ ಅರ್ಚನಾ ಲಕ್ಷ್ಮೀನರಸಿಂಹಸ್ವಾಮಿ
ಮಧುಬಾಲ, ಮನೆದೇವ್ರು ಧಾರಾವಾಹಿ ನಟಿ ಅರ್ಚನಾ ಲಕ್ಷ್ಮೀನರಸಿಂಹಸ್ವಾಮಿ ಅವರು ವಿದೇಶದಲ್ಲಿ ದುಬಾರಿ ಕಾರ್‌ನ್ನು ಖರೀದಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಕನ್ನಡ ನಟಿ
ಮಧುಬಾಲ, ಮನೆದೇವ್ರು ಧಾರಾವಾಹಿ ಸೇರಿದಂತೆ ತಮಿಳು ಧಾರಾವಾಹಿಯಲ್ಲಿಯೂ ನಟಿಸಿದ್ದ ಅರ್ಚನಾ ಲಕ್ಷ್ಮೀನರಸಿಂಹಸ್ವಾಮಿ ಅವರು ಈಗ ಪತಿ ವಿಘ್ನೇಶ್ ಶರ್ಮಾ, ಮಗಳು ವಿಯಾರಾ ಜೊತೆ ವಿದೇಶದಲ್ಲಿದ್ದಾರೆ.
ಹೊಸ ಕಾರ್ ಖರೀದಿ
ಆಯುಧಪೂಜೆಯ ದಿನ ಅವರು ಮನೆಗೆ ಹೊಸ ಕಾರ್ ಖರೀದಿ ಮಾಡಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಅರೇಂಜ್ ಮ್ಯಾರೇಜ್
ಅರ್ಚನಾ ಲಕ್ಷ್ಮೀನರಸಿಂಹಸ್ವಾಮಿ ಅವರು ಅರೇಂಜ್ ಮ್ಯಾರೇಜ್ ಮಾಡಿಕೊಂಡಿದ್ದಾರೆ. ಬೆಂಗಳೂರು ಮೂಲದ ವಿಘ್ನೇಶ್ ಶರ್ಮಾ ಜೊತೆ ಅವರು ಮದುವೆಯಾದಮೇಲೆ ವಿದೇಶದಲ್ಲಿ ನೆಲೆಸಿದ್ದಾರೆ, ಅಲ್ಲಿ ಅವರು ಎಚ್‌ಆರ್ ಆಗಿಯೂ ಕೂಡ ಕೆಲಸ ಮಾಡಿದ್ದರು.
ಮಗಳು ವಿಯಾರಾ
ಅರ್ಚನಾ ಅವರು ವಿಯಾರಾ ಎನ್ನುವ ಪುಟಾಣಿಗೆ ಜನ್ಮ ನೀಡಿದ್ದು, ಈಗ ಮಗಳ ಜೊತೆ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ. ಎರಡು ವರ್ಷಕ್ಕೊಮ್ಮೆ ಅವರು ಬೆಂಗಳೂರಿಗೆ ಬರೋದುಂಟು.
Tesla Juniper
ಅರ್ಚನಾ ಅವರು Tesla Juniper ಎನ್ನುವ ಕಾರ್ ಖರೀದಿ ಮಾಡಿದ್ದಾರೆ. ಭಾರತದಲ್ಲಿ ಇದರ ಬೆಲೆ 60 ಲಕ್ಷ ರೂಪಾಯಿಗೂ ಮೀರಿದೆ. ಅರ್ಚನಾ ಕುಟುಂಬವು ಹೊಸ ಕಾರ್ ಖರೀದಿ ಮಾಡಿದ್ದಕ್ಕೆ ಅನೇಕರು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.