ಬೆಡ್ ಮೇಲೆ ಬೋಲ್ಡ್ ಅವತಾರ, ಸ್ವಿಮ್ ಸೂಟಿನಲ್ಲಿ ಚೈತ್ರಾ ಆಚಾರ್
Chaitra Achar swimsuit : ಸ್ಯಾಂಡಲ್ವುಡ್ ನಟಿ ಹಾಗೂ ಗಾಯಕಿ ಚೈತ್ರಾ ಆಚಾರ್ ಮತ್ತೊಮ್ಮೆ ಹುಡುಗ್ರ ಹಾರ್ಟ್ ಬೀಟ್ ಹೆಚ್ಚು ಮಾಡಿದ್ದಾರೆ. ಬೆಡ್ ಮೇಲೆ ಅವರ ಬೋಲ್ಡ್ ಅವತಾರ ನೋಡಿ ಫ್ಯಾನ್ಸ್ ಕಳೆದುಹೋಗಿದ್ದಾರೆ.

ಚೈತ್ರಾ ಆಚಾರ್ ಬೋಲ್ಡ್ ಲುಕ್
ಸ್ಯಾಂಡಲ್ ವುಡ್ ನಟಿ ಹಾಗೂ ಗಾಯಕಿ ಚೈತ್ರಾ ಆಚಾರ್ ಆಗಾಗ ಬೋಲ್ಡ್ ಲುಕ್ ನಲ್ಲಿ ಮಿಂಚುತ್ತಿರುತ್ತಾರೆ. ಈಗ ಮತ್ತೊಮ್ಮೆ ಚೈತ್ರಾ ಹಾಟ್ ಫೋಟೋಕ್ಕೆ ಫೋಸ್ ನೀಡಿದ್ದಾರೆ. ಚೈತ್ರಾ ಸೋಶಿಯಲ್ ಮೀಡಿಯಾದಲ್ಲಿ ಒಂದಿಷ್ಟು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.
ಸ್ವಿಮ್ ಸೂಟ್ ನಲ್ಲಿ ಚೈತ್ರಾ
ಚೈತ್ರಾ ಕಪ್ಪು ಬಣ್ಣದ ಸಿಮ್ ಸೂಟ್ ನಲ್ಲಿ ಫೋಟೋಕ್ಕೆ ಫೋಸ್ ನೀಡಿದ್ದಾರೆ. ಮೇಕಪ್ ಮಾಡಿಸಿಕೊಳ್ಳೋದ್ರಿಂದ ಹಿಡಿದು ಬೆಡ್ ಮೇಲೆ ಮಲಗುವವರೆಗೆ ನಾನಾ ಫೋಟೋಗಳನ್ನು ಅವರ ಇನ್ಸ್ಟಾ ಖಾತೆಯಲ್ಲಿ ನೋಡ್ಬಹುದು.
ಕಲ್ಪನೆಗೆ ನಿಯಂತ್ರಣ ಅಗತ್ಯ
ಕಲ್ಪನೆಯು ನಿಯಂತ್ರಣ ತೆಗೆದುಕೊಳ್ಳುತ್ತದೆ ಎಂಬ ಶೀರ್ಷಿಕೆಯಡಿಯಲ್ಲಿ ಚೈತ್ರಾ ಆಚಾರ್ 10 ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿದ ಫ್ಯಾನ್ಸ್ ಬೆಂಕಿ ಎಮೋಜಿ ಕಮೆಂಟ್ ಮಾಡಿದ್ದಾರೆ. ನಿಮ್ಮ ಸೌಂದರ್ಯ ಮತ್ತು ಹಾಟ್ನೆಸ್ ಹ್ಯಾಂಡಲ್ ಮಾಡಲು ಸಾಧ್ಯವಿಲ್ಲ, ಹಾಟ್ ಅಂತೆಲ್ಲ ಬಳಕೆದಾರರು ಕಮೆಂಟ್ ಮಾಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಚೈತ್ರಾ ಆಕ್ಟಿವ್
ಸೋಶಿಯಲ್ ಮೀಡಿಯಾದಲ್ಲಿ ಚೈತ್ರಾ ಸಖತ್ ಆಕ್ಟಿವ್ ಆಗಿದ್ದಾರೆ. ತಮ್ಮ ಸಿನಿಮಾ ಸೇರಿದಂತೆ ಒಂದಿಷ್ಟು ಫೋಟೋಶೂಟ್ ಹಾಗೂ ಹಾಡಿನ ವಿಡಿಯೋಗಳನ್ನು ಪೋಸ್ಟ್ ಮಾಡ್ತಿರುತ್ತಾರೆ. ಬಳಕೆದಾರರು ಕೇಳುವ ಪ್ರಶ್ನೆಗಳಿಗೂ ಚೈತ್ರಾ ಆಗಾಗ ಉತ್ತರ ನೀಡ್ತಿರುತ್ತಾರೆ.
ಚೈತ್ರಾ ಆಚಾರ್ ವೃತ್ತಿ
ಕಾಲೇಜಿನಲ್ಲಿರುವಾಗ್ಲೇ ವೆಬ್ ಸಿರೀಸ್ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ಚೈತ್ರಾ 10ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 2019ರಲ್ಲಿ ತೆರೆಕಂಡ ಮಹಿರಾ ಮೂಲಕ ಕನ್ನಡ ಜನತೆಗೆ ಪರಿಚಯವಾದ ಚೈತ್ರಾ ಹೆಚ್ಚು ಸುದ್ದಿ ಮಾಡಿದ್ದು ರಕ್ಷಿತ್ ಶೆಟ್ಟಿ ಅಭಿನಯದ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿಯಲ್ಲಿ.
ಬೇರೆ ಭಾಷೆಯಲ್ಲೂ ಚೈತ್ರಾ ಚಿರಪರಿಚಿತ
ಕನ್ನಡ ಸಿನಿಮಾಗಳಲ್ಲಿ ಮಾತ್ರವಲ್ಲ ಚೈತ್ರಾ ತೆಲುಗು, ತಮಿಳು ಚಿತ್ರಗಳಲ್ಲೂ ಬ್ಯುಸಿಯಿದ್ದಾರೆ. 2025ರಲ್ಲಿ ಚೈತ್ರಾ ಅಭಿನಯದ 3ಬಿಎಚ್ ಕೆ ಸಿನಿಮಾ ತೆರೆಗೆ ಬಂದಿದೆ. ಸಿನಿಮಾದಲ್ಲಿ ಚೈತ್ರಾ ಆಕ್ಟಿಂಗ್ ಅಭಿಮಾನಿಗಳಿಗೆ ಇಷ್ಟವಾಗಿದೆ. ಇದಲ್ದೆ ಚೈತ್ರಾ, ವೃತ್ತ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದಾರೆ. ನಟ ಶಶಿಕುಮಾರ್ ಜೊತೆ ತಮಿಳು ಚಿತ್ರ ಮೈ ಲಾರ್ಡ್ನಲ್ಲಿ ನಟಿಸಿದ್ದಾರೆ.
ಚೈತ್ರಾ ಕೈನಲ್ಲಿದೆ ಸಾಕಷ್ಟು ಚಿತ್ರ
ಅಭಿನಯದ ಮೂಲಕವೇ ಅಭಿಮಾನಿಗಳಿಗೆ ಹತ್ತಿರವಾಗಿರುವ ಚೈತ್ರಾ ಸದ್ಯ ಬ್ಯುಸಿ ನಟಿ. ಒಂದಾದ್ಮೇಲೆ ಒಂದು ಶೂಟಿಂಗ್ ನಲ್ಲಿ ಚೈತ್ರಾ ಬ್ಯುಸಿ ಇದ್ದಾರೆ. ಸದ್ಯ ಉತ್ತರಕಾಂಡ ಶೂಟಿಂಗ್ ನಡೆಯುತ್ತಿದೆ. ಇದಲ್ಲದೆ ನನ್ನ ಪ್ರಭು, ಸ್ಟ್ರಾಬೆರಿ, ಮಾರ್ನಮಿ ಹಾಗೂ ಎದ್ದೇಳು ಮಂಜುನಾಥ್ 2 ಸಿನಿಮಾಗಳಲ್ಲಿ ಚೈತ್ರಾ ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಹಾಡುಗಾರ್ತಿ ಚೈತ್ರಾ
ಮಲ್ಟಿಟ್ಯಾಲೆಂಟೆಡ್ ನಟಿ ಚೈತ್ರಾ ಆಚಾರ್. ಬರೀ ನಟನೆ ಒಂದೇ ಅಲ್ಲ ಹಾಡಿನಲ್ಲೂ ಮುಂದಿದ್ದಾರೆ. ಅನೇಕ ಸಿನಿಮಾಗಳಿಗೆ ಹಿನ್ನೆಲೆ ಗಾಯಕಿಯಾಗಿ ಚೈತ್ರಾ ಕೆಲ್ಸ ಮಾಡಿದ್ದಲ್ಲದೆ ಸಾಕಷ್ಟು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಗ್ಲಾಮರ್ ಹುಡುಗಿ ಚೈತ್ರಾ
ಯಂಗ್ ಹಾಗೂ ಟ್ಯಾಲೆಂಟೆಡ್ ನಟಿ ಚೈತ್ರಾ ಆಚಾರ್ ಬಿಂದಾಸ್ ನಟಿ. ಸ್ವಿಮ್ ಸೂಟ್ ನಿಂದ ಸೀರೆಯವರೆಗೆ ಎಲ್ಲ ಅವತಾರದಲ್ಲೂ ಮಿಂಚುವ ಚೈತ್ರಾ, ಹಾಟ್ ಲುಕ್ ಗೆ ಪ್ರಸಿದ್ಧಿಪಡೆದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

