- Home
- Entertainment
- Sandalwood
- ಮಗಳು ಬಂದ್ಮೇಲೆ ಮನೆಯಲ್ಲಿ ಕಲರವ; ರುಕ್ಮಿಣಿಯ ಫಸ್ಟ್ ಫೋಟೋ ಶೇರ್ ಮಾಡಿದ Actress Bhavana Ramanna!
ಮಗಳು ಬಂದ್ಮೇಲೆ ಮನೆಯಲ್ಲಿ ಕಲರವ; ರುಕ್ಮಿಣಿಯ ಫಸ್ಟ್ ಫೋಟೋ ಶೇರ್ ಮಾಡಿದ Actress Bhavana Ramanna!
Bhavana Ramanna Daugher Rukmini: ಎರಡು ವಾರಗಳ ಹಿಂದೆ ಮಗುವಿಗೆ ಜನ್ಮ ಕೊಟ್ಟ ಭಾವನಾ ರಾಮಣ್ಣ ಈಗ ಮಗಳ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಮಗು ಮನೆಗೆ ಬಂದ ಬಳಿಕ ಆದ ಬದಲಾವಣೆಯನ್ನು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

ಭಾವನಾ ರಾಮಣ್ಣರ ಭಾವುಕ ಬರಹ
ದೊಡ್ಡ ಮನೆ, ಪುಟ್ಟ ಕುಟುಂಬ.. ನಾನು ಮತ್ತು ನನ್ನ ತಂದೆ, ಬೆಳಗ್ಗೆ ಎದ್ದು ಮನೆಯಂಗಳದಲ್ಲಿ ಕಾಫಿ ಹೀರುತ್ತಾ ಕೂತರೆ, ಇಲ್ಲಿ ಹಕ್ಕಿಗಳದ್ದೇ ನಾದ ನಿನಾದ.. ಕು ಕು ಮೈನಾ, ಕಿಚಿ ಪಿಚಿ ಗುಬ್ಬಚ್ಚಿ, ನಿತ್ಯವೂ ಬರೀ ಹಕ್ಕಿಗಳದ್ದೇ ಕಲರವ.. ಹಕ್ಕಿ ಪಿಕ್ಕಿಗಳ ಹಾಡು ಪಾಡು ಕೇಳುತ್ತಿದ್ದ ಮನೆಯಲ್ಲೀಗ, ಹೊಸದೊಂದು ಪುಟ್ಟ ಹಕ್ಕಿಯ ಸರಿಗಮ.. ಮನೆಯ ಗೂಡಲ್ಲಿ ಚುಯ್ ಚುಯ್ ಸದ್ದು ಮಾಡುತ್ತಿರುವ ಈ ಪುಟ್ಟ ಹಕ್ಕಿಗೆ ಏನೆಂದು ಹೆಸರಿಡುವುದು..? ನಮ್ಮನ್ನು ನಯವಾಗಿ ಬಂಧಿಸಿದ ಸುಂದರ ಬಲೆ, ಇದು ಹೊಸ ಪ್ರೀತಿಯ ಅಲೆ.. ವಿನೂತನ ವಿಸ್ಮಯ.
ಗೂಡಿಗೆ ಬಂದ ಹಕ್ಕಿ
ದೊಡ್ಡ ಮನೆ, ಪುಟ್ಟ ಕುಟುಂಬ… ಈಗ ನಮ್ಮ ಗೂಡಿಗೆ ಬಂದ ಹೊಸ ಪುಟ್ಟ ಹಕ್ಕಿಯ ಚುಯ್ ಚುಯ್ ನಾದ. ಹಕ್ಕಿಗಳ ಹಾಡಿಗೆ ಹೊಸ ಸರಿಗಮ ಸೇರಿಸಿದ ಈ ಪುಟ್ಟ ಜೀವ, ನಮ್ಮ ಬದುಕಿಗೆ ಹೊಸ ಪ್ರೀತಿಯ ಅಲೆ ತಂದುಕೊಟ್ಟಿದೆ. ಈ ವಿನೂತನ ವಿಸ್ಮಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ.
ಮದುವೆಯಾಗದೆ ತಾಯಿಯಾದ ನಟಿ
ಭಾವನಾ ರಾಮಣ್ಣ ಅವರು ಐವಿಎಫ್ ಮೂಲಕ ತಾಯಿಯಾಗಿದ್ದಾರೆ. ಮದುವೆಯಾಗದೆ ತಾಯಿಯಾಗಿದ್ದು, ಕನ್ನಡದಲ್ಲಿ ದೊಡ್ಡ ಚರ್ಚೆ ಆಗುವಂತೆ ಮಾಡಿತ್ತು. ಈ ಬಗ್ಗೆ ಭಾವನಾ ರಾಮಣ್ಣ ಅವರು ಸಾಕಷ್ಟು ಸಂದರ್ಶನಗಳಲ್ಲಿ ಮಾತನಾಡಿದ್ದಾರೆ.
ಭಾವನಾಗೆ 41 ವಯಸ್ಸು
ಭಾವನಾ ರಾಮಣ್ಣ ಅವರಿಗೆ ಈಗ 41 ವಯಸ್ಸು. ಅವಳಿ ಮಕ್ಕಳಾಗಿತ್ತು, ಇಬ್ಬರು ಹೆಣ್ಣು ಮಕ್ಕಳಲ್ಲಿ ಓರ್ವ ಮಗಳು ಹುಟ್ಟುವಾಗಲೇ ತೀರಿಕೊಂಡಿತ್ತು. ಹೀಗಾಗಿ ಬೇಸರವೂ ಇದೆ ಎಂದು ಭಾವನಾ ಹೇಳಿದ್ದರು.
ತೆರೆ ಮೇಲೆ ಕಾಣಿಸೋದು ಯಾವಾಗ?
ಮಗಳ ಆರೈಕೆಯಲ್ಲಿ ಬ್ಯುಸಿ ಆಗಿರುವ ಭಾವನಾ ಯಾವಾಗ ತೆರೆ ಮೇಲೆ ಮತ್ತೆ ಕಾಣಿಸಿಕೊಳ್ತಾರೆ ಎಂದು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಭಾವನಾ ಮನೆಗೆ ಪುಟ್ಟ ಕಂದನ ಆಗಮನವಾಗಿದೆ.