- Home
- Entertainment
- TV Talk
- BBK 12: ಮುಖವಾಡ ಹೊರಬಂತು; ಏನೇ ಆದ್ರೂ ರಾಶಿಕಾ ಶೆಟ್ಟಿ ಜೊತೆ ನಿಲ್ತೀನಿ ಎಂದಿದ್ದ ಸೂರಜ್ ತಿರುಗಿಬಿದ್ರು!
BBK 12: ಮುಖವಾಡ ಹೊರಬಂತು; ಏನೇ ಆದ್ರೂ ರಾಶಿಕಾ ಶೆಟ್ಟಿ ಜೊತೆ ನಿಲ್ತೀನಿ ಎಂದಿದ್ದ ಸೂರಜ್ ತಿರುಗಿಬಿದ್ರು!
Bigg Boss Kannada Season 12: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಸೂರಜ್ ದೊಡ್ಮನೆಗೆ ಬಂದು 1 ವಾರ ಆಗಿತ್ತು. ಆ ವಾರ ರಾಶಿಕಾ ಶೆಟ್ಟಿ ಎಲಿಮಿನೇಶನ್ ಆದರು ಎಂದು ಹೇಳಲಾಯ್ತು, ಆಮೇಲೆ ಫ್ರಾಂಕ್ ಎಂದರು. ಇವರಿಬ್ಬರು ಕೆಲ ನಿಮಿಷಗಳ ಕಾಲ ಲಾಂಗ್ ಹಗ್ ಮಾಡಿದ್ದರು. ಇದು ಭಾರೀ ಟ್ರೋಲ್ ಆಯ್ತು.

ರಾಶಿಕಾ ಶೆಟ್ಟಿ ಟ್ರೋಲ್ ಆಗಿದ್ದೇ ಜಾಸ್ತಿ
ಅದಾದ ಬಳಿಕ ರಾಶಿಕಾ ಶೆಟ್ಟಿ ಹಾಗೂ ಸೂರಜ್ ಒಟ್ಟಿಗೆ ಇರೋದರ ಬಗ್ಗೆ ಇಡೀ ಮನೆ ಚರ್ಚೆ ಮಾಡಿತು. ಕಿಚ್ಚ ಸುದೀಪ್ ಕೂಡ ವಾರ್ನಿಂಗ್ ಕೊಟ್ಟರೂ ಕೂಡ, ಸೂರಜ್ ಎಚ್ಚೆತ್ತುಕೊಳ್ಳಲಿಲ್ಲ. ಜಗಳದ ವಿಚಾರಕ್ಕೋ ಟಾಸ್ಕ್ ವಿಚಾರಕ್ಕೋ ರಾಶಿಕಾ ಶೆಟ್ಟಿ ಟ್ರೋಲ್ ಆಗಿದ್ದೇ ಜಾಸ್ತಿ. ಆದರೆ ಸೂರಜ್ ಮೇಲಿದ್ದ ನಿರೀಕ್ಷೆ ಸುಳ್ಳಾಯ್ತು.
ರಾಶಿಕಾ ಶೆಟ್ಟಿ, ಸೂರಜ್ ಜೊತೆ ಕ್ಲೋಸ್
ಆರಂಭದಲ್ಲಿ ಅಭಿಷೇಕ್ ಶ್ರೀಕಾಂತ್ ಜೊತೆ ಜಾಸ್ತಿ ಮಾತನಾಡುತ್ತ, ಅವರ ಜೊತೆ ಡ್ಯಾನ್ಸ್ ಮಾಡುತ್ತಿದ್ದ ರಾಶಿಕಾ ಶೆಟ್ಟಿ ಅವರು ಸೂರಜ್ ಜೊತೆ ಕ್ಲೋಸ್ ಆದರು. ಅಭಿಷೇಕ್ ಅವರ ಜೊತೆ ರಾಶಿಕಾ ಆಮೇಲೆ ತುಂಬ ಕಡಿಮೆ ಮಾತನಾಡಿದರು. ಇದನ್ನು ಇಡೀ ಮನೆ ಗಮನಿಸಿತ್ತು. ಇದೇ ವಿಚಾರದ ಬಗ್ಗೆ ಕೆಲವರು ಧ್ವನಿ ಎತ್ತಿ ಮಾತನಾಡಿದ್ದುಂಟು.
ರಾಶಿಕಾ ಶೆಟ್ಟಿ ಕ್ಯಾಪ್ಟನ್
ಈಗ ರಾಶಿಕಾ ಶೆಟ್ಟಿ ಕ್ಯಾಪ್ಟನ್ ಆಗಿದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಸೂರಜ್ ಕೂಡ ಇದ್ದರು. ಚೈತ್ರಾ ಕುಂದಾಪುರ ಸರಿಯಾಗಿ ಉಸ್ತುವಾರಿ ಮಾಡಲಿಲ್ಲ, ಅದಿಕ್ಕೆ ರಾಶಿಕಾ ಕ್ಯಾಪ್ಟನ್ ಆದರು ಎಂದು ಸೂರಜ್, ಅಶ್ವಿನಿ ಗೌಡ ಹೇಳಿದ್ದರು. ಇನ್ನು ರಜತ್‌ರನ್ನು ಹೇಟ್ ಮಾಡುತ್ತಿದ್ದ ರಾಶಿಕಾ, ಕಳೆದ ಮೂರು ದಿನಗಳಿಂದ ಅವರ ಜೊತೆಯೇ ಇದ್ದಾರೆ. ಇದು ಕೂಡ ಸೂರಜ್‌ಗೆ ಆಶ್ಚರ್ಯ ತಂದಿದೆ. ಸೂರಜ್ ಹುಡುಗಿ ಜೊತೆ ರೊಮ್ಯಾನ್ಸ್ ಮಾಡುತ್ತಿದ್ದ ಎಂದಿದ್ದ ರಜತ್ ಜೊತೆ ರಾಶಿಕಾ ಹೇಗೆ ಆರಾಮಾಗಿದ್ದಾಳೆ ಎನ್ನೋದು ಸೂರಜ್ ಪ್ರಶ್ನೆ.
ರಾಶಿಕಾ ಶೆಟ್ಟಿ, ಸೂರಜ್ ಸಿಂಗ್ ಜಗಳ
ಈಗ ವಾಹಿನಿಯೊಂದು ಹೊಸ ಪ್ರೋಮೋ ರಿಲೀಸ್ ಮಾಡಿದೆ. ಅದರಲ್ಲಿ ಸೂರಜ್ ಹಾಗೂ ರಾಶಿಕಾ ಶೆಟ್ಟಿ ನಡುವೆ ಜಗಳ ಆಗಿದೆ. “ನಾನು ಕ್ಯಾಪ್ಟನ್ ಆಗಿದ್ದು ನಿನಗೆ ಇಷ್ಟ ಆಗಲಿಲ್ಲ ಅಂತ ಹೇಳಿದೆ. ಎಲ್ಲರ ಮುಖವಾಡ ಈಗ ಹೊರಗಡೆ ಬರುತ್ತಿದೆ” ಎಂದು ರಾಶಿಕಾ ಶೆಟ್ಟಿ ಹೇಳಿದ್ದಾರೆ. ಆಗ ಸೂರಜ್ ಅವರು, ರಾಶಿಕಾ ಶೆಟ್ಟಿ ಕ್ಯಾಪ್ಟನ್ ಆಗಿದ್ದು ಇಷ್ಟ ಆಗಲಿಲ್ಲ ಅಂದೆ, ವಿನ್ ಆದ್ಮೇಲೆ ಯಾಕೆ ಕಂಗ್ರಾಜ್ಯುಲೇಶನ್ ಎಂದೆ, ಯಾಕೆ” ಎಂದು ಪ್ರಶ್ನೆ ಮಾಡಿದ್ದಾರೆ.
ನಾನು ಇದ್ದಾಗ ಇನ್ನೊಂದು ಥರ
“ರಾಶಿಕಾ ಶೆಟ್ಟಿ ಕ್ಯಾಪ್ಟನ್ ಆಗಿದ್ದು ಇಷ್ಟ ಆಗಲಿಲ್ಲ ಎಂದೆ. ಕ್ಯಾಪ್ಟನ್ ಆದವರಿಗೆ ಸ್ವಂತ ಬುದ್ಧಿ ಬೇಕು, ಹಿಂದೆ ಒಬ್ಬರು ಇದ್ದಾಗ ಒಂಥರ, ಈಗ ನಾನು ಇದ್ದಾಗ ಇನ್ನೊಂದು ಥರ ಮಾಡಬಾರದು, ಎಲ್ಲವೂ ಕಾಣುತ್ತಿದೆ, ನಾವೇನು ಕುರುಡರಲ್ಲ” ಎಂದು ಸೂರಜ್ ಹೇಳಿದ್ದಾರೆ. ಆಮೇಲೆ ಸೂರಜ್ ಬಟ್ಟೆಗಳನ್ನೆಲ್ಲ ತಗೊಂಡು ರಾಶಿಕಾ ಅವರು ಸ್ವಿಮ್ಮಿಂಗ್ ಪೂಲ್‌ಗೆ ಬಿಸಾಕಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

