Actor Kiccha Sudeep Bigg Boss Kannada 12 Episode: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಕಿಚ್ಚನ ಪಂಚಾಯಿತಿ, ಸೂಪರ್ ಸಂಡೇ ವಿಥ್ ಸುದೀಪ್ ಎಪಿಸೋಡ್‌ಗೆ ವೀಕ್ಷಕರು ಕಾಯುತ್ತಿರುತ್ತಾರೆ. ಈಗ ಈ ಎಪಿಸೋಡ್‌ನಲ್ಲಿ ಯಾವೆಲ್ಲ ವಿಷಯಗಳು ಚರ್ಚೆ ಆಗಬೇಕು?
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಕಿಚ್ಚನ ಪಂಚಾಯಿತಿಗೋಸ್ಕರ ವೀಕ್ಷಕರು ಕಾಯುತ್ತಿರುತ್ತಾರೆ. ಈ ವೀಕೆಂಡ್ ನನಗೆ ಕ್ಲಾಸ್ ಸಿಗತ್ತಾ? ಕಿಚ್ಚನ ಚಪ್ಪಾಳೆ ಸಿಗತ್ತಾ ಎಂದು ಸ್ಪರ್ಧಿಗಳು ಯೋಚನೆ ಮಾಡುತ್ತಿರುತ್ತಾರೆ. ವೀಕ್ಷಕರ ಪ್ರಕಾರ ಈ ವಾರ ಯಾವ ವಿಷಯದ ಬಗ್ಗೆ ಸುದೀಪ್ ಮಾತನಾಡಬೇಕು?
ಯಾವ ವಿಷಯಗಳನ್ನು ಮಾತನಾಡಬೇಕು?
- ಜಗಳ ಆಡುವಾಗ ಧ್ರುವಂತ್ ಅವರು ವಿಚಿತ್ರವಾಗಿ ಡ್ಯಾನ್ಸ್ ಮಾಡುತ್ತಾರೆ. ಜಾಹ್ನವಿ ಮುಂದೆ, ರಜತ್ ಮುಂದೆ ಕೂಡ ಡ್ಯಾನ್ಸ್ ಮಾಡಿದ್ದುಂಟು. ವಿಲನ್ ಟಾಸ್ಕ್‌ನಲ್ಲಿ ಗಿಲ್ಲಿ ನಟ ಮಾಡಿದಂತೆ ಇವರು ಮಿಮಿಕ್ರಿ ಮಾಡಿದ್ದರು.
- ಕಾವ್ಯ ಶೈವ ಅವ ಗಿಲ್ಲಿ ನಟನನ್ನು ನಾಮಿನೇಶನ್ ಮಾಡಿದ್ದು ಯಾಕೆ?
- ಸೂರಜ್ ಅವರ ಬಳಿ ರಜತ್ ಅವರು ನಿನ್ನ ಹಾಗೆ ನಾನು ರೊಮ್ಯಾನ್ಸ್ ಮಾಡುತ್ತಿರಲಿಲ್ಲ ಎಂದಿದ್ದರು.
- ಟಾಸ್ಕ್‌ಗಳ ಮಧ್ಯೆ ರಜತ್ ಅವರು ಅಸಭ್ಯ ಭಾಷೆ ಬಳಕೆ ಮಾಡುತ್ತಿದ್ದಾರೆ ಎಂದು ಅಶ್ವಿನಿ ಆರೋಪ
- ಶೂ ಒಳಗಡೆ, ಬಾತ್‌ರೂಮ್‌ನಲ್ಲಿ, ಟಾಯ್ಲೆಟ್‌ನಲ್ಲಿ ಧ್ರುವಂತ್ ಅವರು ಊಟ ಇಟ್ಟು ತಿಂತೀನಿ ಎಂದಿದ್ದು ನಿಜವೇ?
- ಕಾವ್ಯ ಶೈವ ಅವರು ಕಣ್ಣೀರು ಹಾಕಿದರು, ಪನೀರ್ ತಿನ್ನಲಿಲ್ಲ ಎಂದು ಗಿಲ್ಲಿ ನಟ ಬಿರಿಯಾನಿ ಮುಟ್ಟದೆ ಇರೋದು
- ಗಿಲ್ಲಿ ನಟ ಹೇಳಿದಂತೆ ಕಾವ್ಯ ಶೈವ ಏನೂ ಮಾಡಲಿಲ್ಲವಾ? ಪ್ರಿ ಪ್ರೊಡಕ್ಟ್? ಲಕ್‌ನಿಂದಲೇ ಇಲ್ಲಿಯವರೆಗೆ ಬಂದಿದ್ದಾರೆ?
- ರಜತ್ ಪ್ರಕಾರ ಧ್ರುವಂತ್ ಹೊರಗಡೆ ಹೇಗೆ?
- ಗಿಲ್ಲಿ ನಟ ಯಾಕೆ ಮನೆಯಲ್ಲಿ ಏನೂ ಕೆಲಸ ಮಾಡಲ್ಲ? ಗಿಲ್ಲಿ ಥರ ಬೇರೆಯವರು ಕೆಲಸ ಮಾಡಿಲ್ಲ ಅಂದ್ರೆ ಓಕೆನಾ?
- ಗಿಲ್ಲಿ ನಟನ ಹೇರ್ ಕಟ್ ಮಾಡಿದ್ರೆ ಚೆನ್ನಾಗಿರುತ್ತದೆ ಅಲ್ವಾ?
- ರಜತ್ ಹೇಳುವಂತೆ ಸೂರಜ್ ರಾಶಿಕಾ ಅವರು ರೊಮ್ಯಾಂಟಿಕ್ ವಿಷಯ ಮಾತಾಡಿದ್ರು. ಆ ವಿಡಿಯೋ ಪ್ಲೇ ಆಗಬೇಕು
- ರಜತ್ ಹೆಸರು ತೆಗೆಯದೆ ರೊಮ್ಯಾನ್ಸ್ ವಿಷಯ ಬಂದಾಗ ರಾಶಿಕಾ ನನ್ನ ಸುದ್ದಿಗೆ ಬರಬೇಡಿ ಅಂದ್ರು ಯಾಕೆ?
- ಮತ್ತೆ ಈಗ ಹಳೇ ಅಶ್ವಿನಿ ಎಂಟ್ರಿ ಆಗ್ತಿದೆ
- ಸ್ಪಂದನ ಕಾಲು ನೋವಿದ್ರೂ ಹೀಲ್ಸ್ ಹಾಕಿದ್ದು ಯಾಕೆ? ಸತ್ಯಾ ಸತ್ಯತೆ ಏನು?
- ರಕ್ಷಿತಾ ಶೆಟ್ಟಿ ಅವರು ಗಿಲ್ಲಿ ನಟನಿಗೆ ತುಂಬ ಇರಿಟೇಟ್ ಮಾಡ್ತಾರೆ
- ರಕ್ಷಿತಾ ಕ್ಯಾರೆಟ್ ಹಲ್ವಾವನ್ನು ಒಂದೇ ಸಲ ದೊಡ್ಡ ಸ್ಪೂನ್ ಅಲ್ಲಿ ತಿಂದಿದ್ದು ಮಾತ್ರ ಚರ್ಚೆ ಆಗಿದೆ.
- ರಾಶಿಕಾ ಈಗ ಸೂರಜ್ ಜೊತೆ ಇರೋದು ಬಿಟ್ಟು ಏನೂ ಮಾಡ್ತಿಲ್ಲ. ರಾಶಿಕಾ ಡಿಪಂಡೆಂಟ್.
- ಇತ್ತೀಚಿನ ದಿನಗಳಲ್ಲಿ ಧನುಷ್ ಗೌಡ ಕಾಣೆಯಾಗಿದ್ದಾರೆ
- ರಘು ಅವರು ಗಿಲ್ಲಿಗೆ ಚಪಾತಿ ಯಾಕೆ ಕೊಡಲಿಲ್ಲ? ಇದರ ಹಿಂದಿನ ಸತ್ಯ ಏನು?


