Marriage Obstacles: ವಯಸ್ಸು 30 ದಾಟಿದ ನಂತರವೂ ಮದುವೆಯೇ ಆಗಿಲ್ಲ ಎಂದು ನೀವು ಯೋಚನೆ ಮಾಡುತ್ತಿದ್ದೀರಾ? ಹಾಗಿದ್ರೆ ಇನ್ನು ಮುಂದೆ ಆ ಚಿಂತೆ ಬಿಡಿ. ಯಾಕಂದ್ರೆ ದೇಶದ ಈ ಪ್ರಮುಖ ದೇಗುಲಗಳಿಗೆ ಭೇಟಿ ನೀಡಿದರೆ ಸಾಕು, ನಿಮ್ಮ ವಿವಾಹ ಅಡೆತಡೆಗಳು ನಿವಾರಣೆಯಾಗಿ ಶೀಘ್ರದಲ್ಲಿ ವಿವಾಹವಾಗುತ್ತದೆ. 

ವಯಸ್ಸು 30 ದಾಟಿದ್ರೂ ಮದ್ವೆ ಆಗ್ತಿಲ್ವಾ?

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಮದುವೆ ವಿಳಂಬವಾಗಿ ತೊಂದರೆ ಅನುಭವಿಸುತ್ತಿದ್ದಾರೆ. ವೃತ್ತಿ ಮತ್ತು ವ್ಯವಹಾರಗಳನ್ನು ನಿರ್ಮಿಸುವಲ್ಲಿ ನಿರತರಾಗಿರುವ ಜನರು ಹೆಚ್ಚಾಗಿ 32 ನೇ ವಯಸ್ಸು ದಾಟಿದ್ರೂ ಕೂಡ ಮದುವೆ ಆಗಿರೋದಿಲ್ಲ. ಹಲವರಿಗೆ, ವೃತ್ತಿಜೀವನ ಕೈ ಹಿಡಿದಿರುವುದಿಲ್ಲ. ಕರಿಯರ್ ಸೆಟಲ್ ಆಗಿರುವುದಿಲ್ಲ. ಇನ್ನೂ ಕೆಲವರಿಗೆ ಹುಡುಗಿ ಸೆಟ್ ಆಗಿರುವುದಿಲ್ಲ. ಇನ್ನೂ ಕೆಲವರಿಗೆ ಜಾತಕ ದೋಷದಿಂದ , ಜಾತಕ ಹೊಂದಾಣಿಕೆ ಆಗದೇ ವಿವಾಹ ತಡವಾಗುತ್ತಿರುತ್ತದೆ. ಇದು ಮಾತ್ರವಲ್ಲದೇ ಗ್ರಹಗಳ ಕಾರಣ ಸೇರಿ ಹಲವಾರು ಕಾರಣಗಳಿಂದಾಗಿ ಮದುವೆಯಲ್ಲಿ ಪದೇ ಪದೇ ಅಡೆತಡೆಗಳು ಬರುತ್ತಲೇ ಇರುತ್ತವೆ. ಹಾಗಾಗಿ ವಯಸ್ಸು 30 ಕಳೆದ ನಂತರವೂ ಮದುವೆಯಾಗದೇ ಇದ್ದರೆ ಆತಂಕ ಉಂಟಾಗುವುದು ಸಹಜ. ನಿಮಗೂ ಕೂಡ ಅಂತಹ ಸಮಸ್ಯೆ ಕಾಣಿಸಿಕೊಂಡಿದ್ದರೆ, ಮದುವೆಯಾಗಲು ವಿಳಂಬವಾಗುತ್ತಿದ್ದರೆ, ನೀವು ಭಾರತದ ಈ ಪ್ರಸಿದ್ಧ ಹಾಗೂ ದೈವೀಕ ನೆಲೆಯುಳ್ಳ ದೇಗುಲಗಳಿಗೆ ಭೇಟಿ ನೀಡಿ. ಇಲ್ಲಿ ಭೇಟಿ ನೀಡಿ ಪೂಈಜೆ ಸಲ್ಲಿಸಿದ ತಕ್ಷಣ, ನಿಮ್ಮ ಸಮಸ್ಯೆಗಳು ನಿವಾರಣೆಯಾಗಿ ಶೀಘ್ರದಲ್ಲಿ ಮದುವೆಯಾಗುತ್ತದೆ.

Add Asianetnews Kannada as a Preferred SourcegooglePreferred

ಮಂಗಳಾದೇವಿ ದೇವಸ್ಥಾನ

ಮಂಗಳೂರಿನಲ್ಲಿರುವ ಪುರಾಣ ಪ್ರಸಿದ್ಧ ಮಂಗಳಾದೇವಿ ದೇವಸ್ಥಾನಕ್ಕೆ ತೆರಳಿ, ಅಲ್ಲಿ ಪೂಜೆ ಸಲ್ಲಿಸಿ, ತಾಯಿ ಬಳಿ ಬೇಡಿದರೆ ಸಾಕು, ಶೀಘ್ರದಲ್ಲಿ ವಿವಾಹಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗಿ, ಮದುವೆಯಾಗುತ್ತದೆ. ಜೊತೆಗೆ ದೇವಿಯ ಆಶೀರ್ವಾದ ಎಂದಿಗೂ ನಿಮ್ಮ ಮೇಲಿರುತ್ತದೆ.

ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ

ಶಿವನ ಪ್ರಸಿದ್ಧ ಜ್ಯೋತಿರ್ಲಿಂಗ ಹೊಂದಿರುವ ಈ ದೇಗುಲವು ವಿವಾಹಕ್ಕೆ ಸಂಬಂಧಿಸಿದ ವಿಳಂಬ ಮತ್ತು ಅಡೆತಡೆಗಳನ್ನು ನಿವಾರಿಸಲು ಹೆಸರುವಾಸಿಯಾಗಿದೆ. ಇಲ್ಲಿ ವಿಶೇಷ ಪೂಜೆ ಅಭಿಷೇಕ ಮಾಡುವುದರಿಂದ ಶೀಘ್ರದಲ್ಲಿ ಮದುವೆಯಾಗುತ್ತದೆ. ಇದಲ್ಲದೆ, ಇದು ಜಾತಕದಲ್ಲಿನ ಎಲ್ಲಾ ದೋಷಗಳನ್ನು ನಿವಾರಿಸುತ್ತದೆ. ಅಲ್ಲದೇ ಇಲ್ಲಿನ ದೇವರ ದರ್ಶನ ಮಾತ್ರದಿಂದ ಸಂಪತ್ತು ಸಮೃದ್ಧಿ ಹೆಚ್ಚಾಗುತ್ತದೆ ಎನ್ನುವ ನಂಬಿಕೆ ಇದೆ.

ಕಿಕ್ಕೇರಿ ಶ್ರೀ ಬ್ರಹ್ಮೇಶ್ವರ ದೇವಸ್ಥಾನ

ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿರುವ ಈ ಪ್ರಾಚೀನ ದೇವಸ್ಥಾನವು ತನ್ನ ವಾಸ್ತುಶಿಲ್ಪಕ್ಕೆ ಮಾತ್ರವಲ್ಲದೆ, ಸಮಸ್ಯೆ ಪರಿಹಾರ ಮಾಡಲು ಕೂಡ ಹೆಸರುವಾಸಿಯಾದ ಸ್ಥಳ. ಇಲ್ಲಿ ದೇವರಿಗೆ ವಿಶೇಷ ಅಭಿಷೇಕ ಮಾಡುವುದರಿಂದ ಮದುವೆಯಲ್ಲಿನ ಅಡೆತಡೆಗಳು ದೂರವಾಗಿ ಸುಂದರ ದಾಂಪತ್ಯ ಜೀವನ ನಿಮ್ಮದಾಗುತ್ತದೆ.

ಖಟು ಶ್ಯಾಮ್ ದೇವಾಲಯ

ರಾಜಸ್ಥಾನದಲ್ಲಿರುವ ಈ ದೇವಾಲಯವು ಭಕ್ತರ ಪ್ರತಿಯೊಂದು ಆಸೆಯನ್ನು ಈಡೇರಿಸುವುದಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ಪ್ರಾಮಾಣಿಕ ಹೃದಯದಿಂದ ಪ್ರಾರ್ಥನೆ ಸಲ್ಲಿಸುವುದರಿಂದ ಮದುವೆಗೆ ಅಡ್ಡಿಯಾಗಿರುವ ಎಲ್ಲಾ ಅಡೆತಡೆಗಳಿಗೆ ಪರಿಹಾರ ಸಿಗುತ್ತದೆ. ಇದಲ್ಲದೆ, ಈ ದೇವಾಲಯದಲ್ಲಿ ವಿಶೇಷ ಆಚರಣೆಗಳನ್ನು ಮಾಡುವುದರಿಂದ ಜಾತಕದಲ್ಲಿನ ಎಲ್ಲಾ ಜ್ಯೋತಿಷ್ಯ ಬಾಧೆಗಳು ನಿವಾರಣೆಯಾಗುತ್ತವೆ ಮತ್ತು ಬೇಗ ಮದುವೆಗೆ ದಾರಿ ಮಾಡಿಕೊಡುತ್ತದೆ.

ಕಾಮಾಕ್ಯ ದೇವಾಲಯ

ಅಸ್ಸಾಂನ ಗುವಾಹಟಿಯಲ್ಲಿರುವ ಈ ಶಕ್ತಿ ಪೀಠವು ಪ್ರೀತಿ ಮತ್ತು ವೈವಾಹಿಕ ಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸುವಲ್ಲಿ ಹೆಸರುವಾಸಿಯಾಗಿದೆ. ಇಲ್ಲಿ ಪೂಜೆ ಮಾಡುವುದರಿಂದ ಸಂಬಂಧಗಳಲ್ಲಿ ಸಾಮರಸ್ಯ ಬೆಳೆಯುತ್ತದೆ ಮತ್ತು ಶೀಘ್ರದಲ್ಲಿ ವಿವಾಹವಾಗುತ್ತದೆ. ನೀಲಾಚಲ್ ಬೆಟ್ಟದ ಮೇಲೆ ನೆಲೆಗೊಂಡಿರುವ ಇದು, 51 ಶಕ್ತಿ ಪೀಠಗಳಲ್ಲಿ ಅತ್ಯಂತ ಪ್ರಮುಖ ಮತ್ತು ನಿಗೂಢ ದೇವಾಲಯಗಳಲ್ಲಿ ಒಂದಾಗಿದೆ.

ಮಹಾಲಕ್ಷ್ಮಿ ಲೇಔಟ್ ಇಸ್ಕಾನ್ ದೇವಸ್ಥಾನ

ಬೆಂಗಳೂರಿನಲ್ಲಿರುವ ಈ ಸುಂದರವಾದ ರಾಧಾ ಕೃಷ್ಣ ದೇವಸ್ಥಾನವು ದರ್ಶನಕ್ಕಾಗಿ ಮಾತ್ರವಲ್ಲದೆ ಭಕ್ತರ ಕಷ್ಟಗಳನ್ನು ನಿವಾರಿಸುವುದಕ್ಕೂ ಹೆಸರುವಾಸಿಯಾಗಿದೆ. ಇಲ್ಲಿ ರಾಧಾ ಮತ್ತು ಕೃಷ್ಣನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸುವುದರಿಂದ ಪ್ರಣಯ ಸಂಬಂಧಗಳು ಸುಗಮವಾಗುತ್ತವೆ ಮತ್ತು ವೈವಾಹಿಕ ಕಲಹ ಪರಿಹಾರವಾಗುವುದು.