ಈ ಒಂದು ಕಾರ್ಡ್ ಇದ್ದರೆ OYO ರೂಮ್‌ಗೆ ಸಿಗಲ್ಲ ಎಂಟ್ರಿ! ಚೆಕ್ ಇನ್ ನಿಯಮಗಳು ಹೀಗಿವೆ
ಕಡಿಮೆ ಬೆಲೆಯಲ್ಲಿ ವಸತಿ ಸೌಲಭ್ಯ ನೀಡುವ OYO ರೂಮ್‌ಗಳನ್ನು ಬುಕ್ ಮಾಡಲು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಚೆಕ್-ಇನ್ ಸಮಯದಲ್ಲಿ ಆಧಾರ್, ಡ್ರೈವಿಂಗ್ ಲೈಸೆನ್ಸ್‌ನಂತಹ ಮಾನ್ಯ ಗುರುತಿನ ಚೀಟಿ ಕಡ್ಡಾಯವಾಗಿದೆ.

OYO ಸಂಸ್ಥೆ
ಪ್ರವಾಸಿಗರಿಗೆ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಸೇವೆಯನ್ನು ನೀಡುವ ಉದ್ದೇಶದಿಂದ Oyo ಸಂಸ್ಥೆ ದೇಶ-ವಿದೇಶಗಳಲ್ಲಿ ಹೋಟೆಲ್-ಲಾಡ್ಜ್ ಆರಂಭಿಸಲಾಗಿದೆ. ದೇಶದ ಪ್ರಮುಖ ನಗರಗಳಿಗೆಲ್ಲಾ ಓಯೋ ಕಾಲಿಟ್ಟಿದ್ದು, ತನ್ನ ಸೇವೆಗಳಿಂದಲೇ ಸದ್ದು ಮಾಡುತ್ತಿರುತ್ತದೆ.
ಹೆಚ್ಚು ಬೇಡಿಕೆ ಹೊಂದಿರುವ ಓಯೋ ರೂಮ್
ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಸೇವೆ ನೀಡುತ್ತಿರುವ OYO ರೂಮ್‌ಗಳಿಗೆ ಪ್ರವಾಸಿ ಸ್ಥಳಗಳಲ್ಲಿ ಹೆಚ್ಚು ಬೇಡಿಕೆಯನ್ನು ಹೊಂದಿವೆ. ತನ್ನದೇ ಆದ ನಿಯಮಗಳನ್ನು ಹೊಂದಿರುವ ಓಯೋ, ರೂಮ್ ಬುಕ್ ಮಾಡುವಾಗ ಕೆಲವೊಂದು ದಾಖಲೆಗಳನ್ನು ಪಡೆದುಕೊಳ್ಳುವುದಿಲ್ಲ.
ಕನಿಷ್ಠ 18 ವರ್ಷ
ಓಯೋ ರೂಮ್ ಬುಕ್ ಮಾಡುವ ಗ್ರಾಹಕರಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಚೆಕ್-ಇನ್ ಸಮಯದಲ್ಲಿ ಎಲ್ಲಾ ಗ್ರಾಹಕರು ಮಾನ್ಯವಾದ ಫೋಟೋ ಗುರುತಿನ ಚೀಟಿಯ ದಾಖಲೆಯನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಓಯೋ ತಾನು ಸ್ವೀಕರಿಸುವ ಮತ್ತು ಸ್ವೀಕರಿಸದ ದಾಖಲೆ ಯಾವುದು ಎಂಬುದರ ಬಗ್ಗೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ತಿಳಿಸಿದೆ.
ಮಾನ್ಯವಲ್ಲದ ಐಡಿ
ಆಧಾರ್ ಕಾರ್ಡ್, ಚಾಲನಾ ಪರವಾನಗಿ, ಮತದಾರರ ಗುರುತಿನ ಚೀಟಿ ಮತ್ತು ಪಾಸ್‌ಪೋರ್ಟ್ ದಾಖಲೆಗಳನ್ನು ಮಾತ್ರ ಓಯೋ ಸ್ವೀಕರಿಸುತ್ತದೆ. ಪ್ಯಾನ್ ಕಾರ್ಡ್‌ನ್ನು ಗುರುತಿನ ಚೀಟಿಯಾಗಿ ಓಯೋ ಪರಿಗಣಿಸಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಮಾನ್ಯವಲ್ಲದ ಐಡಿ ಇಲ್ಲದೇ ಗ್ರಾಹಕರು ರೂಮ್ ಪಡೆದುಕೊಳ್ಳಲು ಸಾಧ್ಯವಿಲ್ಲ.
ಇದನ್ನೂ ಓದಿ: ಓಯೋ ರೂಮ್ ಗೆ ಹೋಗಲು ನಕಲಿ ಆಧಾರ್ ಕಾರ್ಡ್ ಬೇಕಾ? ಬೆಂಗಳೂರಿನಲ್ಲಿ ಬಯಲಾಯ್ತು ಸೈಬರ್ ರಹಸ್ಯ!
ಚೆಕ್ ಇನ್
ಹೋಟೆಲ್ ತಲುಪಿದ ನಂತರ ಗ್ರಾಹಕರು ಚೆಕ್ ಇನ್ ಮಾಡುವಾಗ ಯಾವುದೇ ಸಮಸ್ಯೆಗಳನ್ನು ಎದುರಿಸಿದರೆ ಸ್ಥಳೀಯ ಓಯೋ ಸಿಬ್ಬಂದಿಯನ್ನು ಸಂಪರ್ಕಿಸಬಹುದು. ಓಯೋ ವಸತಿ ಸೌಲಭ್ಯ ನೀಡದಿದ್ರೆ ಪರಿಹಾರ ಅಥವಾ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಇನ್ನುಳಿದಂತೆ ಓಯೋ ಎಲ್ಲಾ ಕಾನೂನುಗಳು ಮತ್ತು ಮಾರ್ಗಸೂಚಿಗಳನ್ನು ಪಾಲನೆ ಮಾಡುತ್ತದೆ.
ಹೆಚ್ಚಿನ ಮಾಹಿತಿಗಾಗಿ ಓಯೋ ವೈಬ್‌ಸೈಟ್‌ಗೆ ಭೇಟಿ ನೀಡಿ.
ಇದನ್ನೂ ಓದಿ: ಓಯೋದಲ್ಲಿ ರೂಮ್ ಬುಕ್ ಮಾಡೋಕೆ ಹೈದರಾಬಾದ್ ನಂ.1, ಬೆಂಗಳೂರು ಕಡಿಮೆಯೇನಿಲ್ಲ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

