ಒಂದು ರೂ. ಖರ್ಚು ಮಾಡ್ದೆ ವಿಮಾನದಲ್ಲಿ ಪ್ರಯಾಣಿಸ್ಬೋದು, ಇಲ್ಲಿದೆ ಸಿಂಪಲ್ ಟ್ರಿಕ್ಸ್
ವಿಮಾನಯಾನ ದರ ತುಂಬಾ ಕಡಿಮೆಯಿಲ್ಲದ ಕಾರಣ ಹೆಚ್ಚಿನವರು ಫ್ಲೈಟ್ ಹತ್ತುವುದು ಒಂದು ಕನಸು ಎಂಬಂತೆಯೇ ಅಂದುಕೊಳ್ಳುತ್ತಾರೆ. ಆದ್ರೆ 1 ಪೈಸೆ ಖರ್ಚಿಲ್ಲದೆ ವಿಮಾನದಲ್ಲಿ ಪ್ರಯಾಣಿಸಬಹುದು ಅನ್ನೋ ವಿಷ್ಯ ನಿಮಗೆ ಗೊತ್ತಿದ್ಯಾ? ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ದೂರ ಪ್ರಯಾಣಕ್ಕೆ ಶೀಘ್ರವಾಗಿ ತಲುಪಬೇಕು ಎಂದರೆ ಹೆಚ್ಚಿನವರು ವಿಮಾನಯಾನವನ್ನೇ ಆಯ್ದುಕೊಳ್ಳುತ್ತಾರೆ. ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ, ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಸಂಚರಿಸಬೇಕಾದವರು ಫ್ಲೈಟ್ ಟಿಕೆಟ್ ಬುಕ್ ಮಾಡುತ್ತಾರೆ. ಆದರೆ ವಿಮಾನ ಪ್ರಯಾಣ ಎಲ್ಲರ ಕೈಗೆಟುಕುವಂತಿಲ್ಲ. ಜನಸಾಮಾನ್ಯರಿಗಂತೂ ವಿಮಾನದಲ್ಲಿ ಸಂಚರಿಸುವುದು ಕನಸಿನ ಮಾತು.
ಕೆಲವೊಬ್ಬರು ಚಿಕ್ಕಂದಿನಲ್ಲೇ ವಿಮಾನ ಪ್ರಯಾಣ ಮಾಡಿರುತ್ತಾರೆ. ಇನ್ನು ಕೆಲವರು ಉದ್ಯೋಗ ಸಿಕ್ಕ ಬಳಿಕ ತಮ್ಮ ಸ್ಯಾಲರಿಯಲ್ಲಿ ವಿಮಾನ ಪ್ರಯಾಣ ಮಾಡುತ್ತಾರೆ. ವಿಮಾನಯಾನ ದರ ತುಂಬಾ ಕಡಿಮೆಯಿಲ್ಲದ ಕಾರಣ ಹೆಚ್ಚಿನವರು ಫ್ಲೈಟ್ ಹತ್ತುವುದು ಒಂದು ಕನಸು ಎಂಬಂತೆಯೇ ಅಂದುಕೊಳ್ಳುತ್ತಾರೆ. ಆದ್ರೆ 1 ಪೈಸೆ ಖರ್ಚಿಲ್ಲದೆ ವಿಮಾನದಲ್ಲಿ ಪ್ರಯಾಣಿಸಬಹುದು ಅನ್ನೋ ವಿಷ್ಯ ನಿಮಗೆ ಗೊತ್ತಿದ್ಯಾ? ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಬಹಳಷ್ಟು ವರ್ಷಗಳ ಹಿಂದೆ ವಿಮಾನ ಪ್ರಯಾಣ ಅನ್ನೋದು ಅತ್ಯಂತ ಹೆಚ್ಚು ದುಬಾರಿಯಾಗಿತ್ತು. ಟಿಕೆಟ್ ದರ ಹೆಚ್ಚಿದ್ದ ಕಾರಣ ಶ್ರೀಮಂತರು ಮಾತ್ರ ವಿಮಾನದಲ್ಲಿ ಸಂಚರಿಸಲು ಸಾಧ್ಯವಾಗುತ್ತಿತ್ತು. ಕೇವಲ ರಾಜಕಾರಣಿಗಳು, ಸೆಲೆಬ್ರಿಟಿಗಳು ಮಾತ್ರ ವಿಮಾನದಲ್ಲಿ ಸಂಚರಿಸುತ್ತಿದ್ದರು. ಆದ್ರೆ ಈಗ ಎಲ್ಲರೂ ಪ್ರಯಾಣಿಸಬಹುದಾದ ಬೆಲೆಗೆ ವಿಮಾನಗಳ ಟಿಕೆಟ್ ದರಗಳೂ ಇವೆ.
ಆದ್ರೆ ಇವತ್ತಿಗೂ ಹೆಚ್ಚಿರುವ ಟಿಕೆಟ್ ದರದಿಂದ ಅದೆಷ್ಟೋ ಮಂದಿ ವಿಮಾನ ಏರಲು ಸಾಧ್ಯವಾಗಿಲ್ಲ. ಆದ್ರೆ ಕೆಲವರು ಒಂದು ಪೈಸೆ ಖರ್ಚಿಲ್ಲದೇ ಬಳಿಸಿಕೊಂಡು ಉಚಿತವಾಗಿ ವಿಮಾನಗಳಲ್ಲಿ ಪ್ರಯಾಣಿಸುತ್ತಾರೆ. ಅದಕ್ಕಾಗಿ ಕೆಲವು ಸಿಂಪಲ್ ಟ್ರಿಕ್ಸ್ ಉಪಯೋಗಿಸಿದ್ರೆ ಸಾಕು. ಉಚಿತ ಪ್ರಯಾಣಕ್ಕಾಗಿ ನೀವು ಅನುಸರಿಸಬೇಕಾದ ಕೆಲವು ಮುಖ್ಯ ವಿಧಾನಗಳಿವೆ.
ನಾವು ಆನ್‌ಲೈನ್‌ನಲ್ಲಿ ಏನನ್ನಾದರೂ ಖರೀದಿಸಿದರೆ ಕೆಲವು ಬ್ರಾಂಡ್‌ಗಳು ನಮಗೆ ರಿವಾರ್ಡ್ ಪಾಯಿಂಟ್ಸ್ ನೀಡುವಂತೆಯೇ ಬಹುತೇಕ ಏರ್‌ಲೈನ್ಸ್ ಗಳು ರಿವಾರ್ಡ್ ಪಾಯಿಂಟ್ ಗಳನ್ನು ನೀಡುತ್ತವೆ. ಈ ರಿವಾರ್ಡ್ ಪಾಯಿಂಟ್‌ಗಳನ್ನು ಭಾರತದಲ್ಲಿ ಏರ್ ಮೈಲ್ಸ್ ಎಂದು ಕರೆಯಲಾಗುತ್ತದೆ. ಉಚಿತ ವಿಮಾನ ಟಿಕೆಟ್ ಪಡೆಯಲು ಈ ಪಾಯಿಂಟ್‌ಗಳನ್ನು ರಿಡೀಮ್ ಮಾಡಿಕೊಳ್ಳಬಹುದು.
ಈ ಪಾಯಿಂಟ್‌ಗಳಿಗೆ ಕರೆನ್ಸಿ ಮೌಲ್ಯವನ್ನು ಕೂಡ ನೀಡಲಾಗಿದೆ. ಆದ್ರೆ ಇದಕ್ಕೆ ಒಂದೊಂದು ಏರ್‌ಲೈನ್ಸ್ ನೀಡುವ ಮೌಲ್ಯ ವಿಭಿನ್ನವಾಗಿರುತ್ತದೆ. ಉದಾಹರಣೆಗೆ ಸ್ಪೈಸ್ ಜೆಟ್ ಪ್ರತಿ ರಿವಾರ್ಡ್ ಪಾಯಿಂಟ್‌ಗೆ 50 ಪೈಸೆ ಮೌಲ್ಯ ನೀಡುತ್ತದೆ. ನೀವು ಎರಡು ಸ್ಪೈಸ್ ಜೆಟ್ ಪಾಯಿಂಟ್‌ಗಳನ್ನು ಹೊಂದಿದ್ದರೆ ಅದು ಒಂದು ರೂಪಾಯಿ ಮೌಲ್ಯವನ್ನು ಪಡೆಯುತ್ತದೆ. ಹಾಗೆಯೇ 10 ಪಾಯಿಂಟ್‌ಗಳಿದ್ದರೇ 5 ರೂ. ಮೌಲ್ಯವನ್ನು ಪಡೆಯುತ್ತದೆ.
ಈ ಪಾಯಿಂಟ್‌ಗಳನ್ನು ಹಾಗೆಯೇ ಉಳಿಸಿಕೊಂಡು ರಿಡೀಮ್ ಮಾಡಬಹುದು. ಒಂದು ಪ್ರದೇಶಕ್ಕೆ ವಿಮಾನದಲ್ಲಿ ತೆರಳಲು 5 ಸಾವಿರ ರೂ. ಟಿಕೆಟ್ ಬೆಲೆಯಿದ್ದರೆ, ನೀವು 10,000 ಸ್ಪೈಸ್‌ಜೆಟ್ ರಿವಾರ್ಡ್ ಪಾಯಿಂಟ್‌ಗಳನ್ನು ಹೊಂದಿದ್ದರೆ ಸಾಕು ಪಾಯಿಂಟ್‌ಗಳನ್ನು ರಿಡೀಮ್ ಮಾಡಿಕೊಂಡು ವಿಮಾನದಲ್ಲಿ ಉಚಿತವಾಗಿ ಪ್ರಯಾಣಿಸಬಹುದು.
ಈ ಪಾಯಿಂಟ್‌ಗಳನ್ನು ಪಡೆಯಲು ಮೊದಲು ಏರ್‌ಲೈನ್‌ನ ಲಾಯಲ್ಟಿ ಪ್ರೋಗ್ರಾಂನೊಂದಿಗೆ ಖಾತೆಯನ್ನು ರಚಿಸಿಕೊಂಡಿರಬೇಕು. ಇದರ ನಂತರ, ನೀವು ಪ್ರತಿ ವಹಿವಾಟಿನ ಮೇಲೆ ರಿವಾರ್ಡ್ ಪಾಯಿಂಟ್‌ಗಳನ್ನು ಗಳಿಸಲು ಸಹ-ಬ್ರಾಂಡೆಡ್ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಬಹುದು. ಈ ಮೂಲಕ ಕೂಡ ನಮಗೆ ರಿವಾರ್ಡ್ ಪಾಯಿಂಟ್ಸ್ ಸಿಗುತ್ತವೆ.